ನವ ದೆಹಲಿ: ಸೂಪರ್ ಬೈಕ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಇಟಲಿ ಮೂಲದ ಕಂಪನಿ ಡುಕಾಟಿ, ತನ್ನ ಸ್ಪೋರ್ಟ್ಸ್ ಆವೃತ್ತಿಯ ಬೈಕ್ Streetfighter V4 SP ಅನ್ನು ಸೋಮವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ಟ್ರೀಟ್‌ಫೈಟರ್ ಆವೃತ್ತಿಯ ಅತ್ಯಂತ ಜನಪ್ರಿಯ ಮಾಡೆಲ್ ಇದಾಗಿದ್ದು, ಇಟಲಿಯ ಬೊರ್ಗೊ ಪನಿಗಲೆ ಘಟಕದಲ್ಲಿ ತಯಾರಾಗಿದೆ. ಇದು ಸ್ಟ್ರೀಟ್‌ಫೈಟರ್ ವಿ೪ ಎಸ್ ಬೈಕ್ ಸುಧಾರಿತ ಆವೃತ್ತಿಯಾಗಿದ್ದು, ಭಾರತದಲ್ಲಿ ಇದರ ಆರಂಭಿಕ ಬೆಲೆ ೩೪.೯೯ ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ. ಭಾರತದ ಎಲ್ಲ ಡುಕಾಟಿ ಶೋ ರೂಮ್‌ಗಳಲ್ಲಿ ಈ ಬೈಕ್ ಲಭ್ಯ ಎಂದು ಕಂಪನಿ ಘೋಷಿಸಿದೆ.
೧೧೦೩ ಸಿಸಿ ಸಾಮರ್ಥ್ಯದ ಎಂಜಿನ್ ಅನ್ನು ಈ ಬೈಕ್‌ಗೆ ಬಳಸಲಾಗಿದ್ದು, ೯೫೦೦ ಆರ್‌ಪಿಎಮ್‌ನಲ್ಲಿ ೨೦೮ ಬಿಎಚ್‌ಪಿ ಪವರ್ ಹಾಗೂ ೧೨೩ ಎನ್‌ಎಂ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಎಸ್‌ಟಿಎಮ್ ಇವಿಒ ಎಸ್‌ಬಿಕೆ ಡ್ರೈ ಕ್ಲಚ್ ಈ ಬೈಕ್‌ನಲ್ಲಿದೆ. ಈ ಸುಧಾರಿತ ಕ್ಲಚ್ ಒತ್ತಾಯದ ಗೇರ್ ಶಿಫ್ಟ್ ಸಮಯದಲ್ಲೂ ಉತ್ತಮವಾಗಿ ಸ್ಪಂದಿಸಬಲ್ಲದು. ಹೀಗಾಗಿ ಬೈಕ್ ರ‍್ಯಾಲಿ ಸಂದರ್ಭದಲ್ಲಿ ಸವಾರರಿಗೆ ಏಕಾಏಕಿ ವೇಗ ವರ್ಧನೆಗೆ ನೆರವಾಗುತ್ತದೆ.
ಅತಿ ವೇಗದಲ್ಲಿ ಸಾಗುವ ವೇಳೆ ಪರಿಣಾಮಕಾರಿ ಬ್ರೇಕಿಂಗ್‌ಗಾಗಿ e Brembo Stylema R® ಬ್ರೇಕ್ ಕ್ಲಿಪ್ಪರ್‌ಗಳನ್ನು ಬಳಸಲಾಗಿದೆ. ಕಾರ್ಬನ್ ಫೈಬರ್, ಮೆಗ್ನೇಶಿಯಮ್ ಲೋಹಗಳಿಂದ ಬೈಕ್ ನಿರ್ಮಿಸಲಾಗಿದ್ದು ರೇಸ್ ಬ್ಯಾಲೆನ್ಸ್ ಹಾಗೂ ಹ್ಯಾಂಡ್ಲಿಂಗ್ ಸುಲಭ ಎಂದು
ಎಬಿಎಸ್ ಕಾರ್ನರಿಂಗ್, ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ಡುಕಾಟಿ ಸ್ಲೈಡ್ ಕಂಟ್ರೋಲ್, ಡುಕಾಟಿ ವೀಲೀ ಕಂಟ್ರೋಲ್, ಡುಕಾಟಿ ಪವರ್ ಲಾಂಚ್, ಡುಕಾಟಿ ಕ್ವಿಕ್ ಶಿಫ್ಟ್, ಎಂಜಿನ್ ಬ್ರೇಕ್ ಕಂಟ್ರೋಲ್, ಡುಕಾಟಿ ಎಲೆಕ್ಟ್ರಾನಿಕ್ ಸಸ್ಪೆನ್ಷನ್‌ಗಳು ಬೈಕ್‌ನ ವಿಶೇಷತೆಗಳಾಗಿವೆ.
ಇದನ್ನೂ ಓದಿ: ಮಾರುಕಟ್ಟೆಗೆ ಇಳಿದ Urban Cruiser Hyryder ಕಾರು