ಬೆಂಗಳೂರು: ಬೆಂಗಳೂರು ಏರ್ ಪೋರ್ಟ್‌ನಲ್ಲಿ ಪ್ರಯಾಣಿಕರಿಗೆ ಸಹಕರಿಸಲು 10 ರೊಬೊಟ್‌ಗಳನ್ನು ಅಳವಡಿಸಲಾಗಿದೆ.
ಈ ರೊಬೊಟ್‌ಗಳು ಪ್ರಯಾಣಿಕರಿಗೆ ಅವರ ಬೋರ್ಡಿಂಗ್ ಗೇಟ್, ಶಾಪಿಂಗ್ ಏರಿಯಾ, ಬ್ಯಾಗೇಜ್ ಕ್ಲೇಮ್ ಮಾಡಿಕೊಳ್ಳುವ ಜಾಗ, ಕುಡಿಯುವ ನೀರಿನ ಸೌಲಭ್ಯ, ವಾಶ್ ರೂಮ್ ಇತ್ಯಾದಿ ಮಾಹಿತಿಗಳನ್ನು ನೀಡಲಿವೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಈ ರೊಬೊಟ್‌ಗಳ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಈ ರೊಬೊಟ್‌ಗಳು ತಮಗೆ ನಿಯೋಜಿಸಿದ ಸ್ಥಳಗಳ ಮಾಹಿತಿ ಮಾತ್ರ ನೀಡುತ್ತವೆ, ಇಡೀ ನಿಲ್ದಾಣದ ವಿವರ ಅವುಗಳಿಗೆ ಗೊತ್ತಿರುವುದಿಲ್ಲ.
ರೊಬೊಟ್‌ಗಳನ್ನು ಟೆಮಿ ಎಂದು ಕರೆಯಲಾಗಿದ್ದು, ಸ್ಕೈ ಎಂಬ ಮತ್ತೊಂದು ಹೆಸರೂ ಇದೆ. ಇವುಗಳ ಹಿಂದಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸುಧಾರಿಸಿದ ಬಳಿಕ ಮತ್ತಷ್ಟು ರೊಬೊಟ್ ಗಳನ್ನು ಅಳವಡಿಸಲಾಗುವುದು ಎಂದು ಟರ್ಮಿನಲ್ ನಿರ್ವಹಣೆಯ ಮುಖ್ಯಸ್ಥ ಸದಾನಂದ್ ಕೋಟ್ಯಾನ್ ತಿಳಿಸಿದ್ದಾರೆ.