Site icon Vistara News

Meta: ಭಾರತದಲ್ಲಿ ಫೇಸ್‌ಬುಕ್, ಇನ್‌ಸ್ಟಾದಿಂದ 2.8 ಕೋಟಿ ಕಂಟೆಂಟ್ ಡಿಲಿಟ್! ಏನು ಕಾರಣ?

2.8 crore content deleted from Facebook and Instagram in India, Says Meta

ನವದೆಹಲಿ: 2021ರ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಅನುಸಾರವಾಗಿ ಫೆಬ್ರವರಿ ತಿಂಗಳಿನಲ್ಲಿ ಭಾರತದಲ್ಲಿ ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಂ (Instagram) ವೇದಿಕೆಯಲ್ಲಿ ಒಟ್ಟು 2.8 ಕೋಟಿ ಕಂಟೆಂಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ಮೆಟಾ (Meta) ಹೇಳಿದೆ. ಫೇಸ್‌ಬುಕ್‌ನ 13 ಮತ್ತು ಇನ್‌ಸ್ಟಾಗ್ರಾಂನ 12 ನೀತಿಗಳಿಗೆ ಅನುಗುಣವಾಗಿ ಕಂಟೆಂಟ್ ತೆಗೆದು ಹಾಕಲಾಗಿದೆ ಎಂದು ಟೆಕ್ ದೈತ್ಯ ಕಂಪನಿ ಹೇಳಿಕೊಂಡಿದೆ.

ಫೆಬ್ರವರಿ 1ರಿಂದ 28ರವರೆಗೆ 13 ನೀತಿಗಳಿಗೆ ಸಂಬಂಧಿಸಿದ ಸುಮಾರು 24.8 ಮಿಲಿಯನ್ ಫೇಸ್‌ಬುಕ್ ಕಂಟೆಂಟ್ ಹಾಗೂ 12 ನೀತಿಗಳಲ್ಲಿ 3.3 ಮಿಲಿಯನ್ ಇನ್‌ಸ್ಟಾಗ್ರಾಂ ಕಂಟೆಂಟ್‌ ರದ್ದು ಮಾಡಲಾಗಿದೆ ಎಂದು ಮೆಟಾ ಹೇಳಿದೆ. ನಿರ್ದಿಷ್ಟ ಉಲ್ಲಂಘನೆಗಳಿಗಾಗಿ ವಿಷಯವನ್ನು ವರದಿ ಮಾಡಲು ಪೂರ್ವ-ಸ್ಥಾಪಿತ ಚಾನಲ್‌ಗಳು, ಅವರು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಬಹುದಾದ ಸ್ವಯಂ-ಪರಿಹಾರ ಹರಿವುಗಳು, ಖಾತೆ ಹ್ಯಾಕ್ ಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಒಳಗೊಂಡಿವೆ ಎಂದು ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಐಟಿ ಹೊಸ ನಿಯಮಗಳ ಪ್ರಕಾರ, ಪ್ರತಿ ತಿಂಗಳು ಸೋಷಿಯಲ್ ಮೀಡಿಯಾ ಕಂಪನಿಗಳು ತಮ್ಮ ವರದಿಗಳನ್ನು ಬಹಿರಂಗಪಡಿಸಬೇಕಾಗುತ್ತದೆ.

ಫೆಬ್ರವರಿ ತಿಂಗಳಲ್ಲಿ ಭಾರತೀಯ ದೂರು ಆಲಿಕೆ ವ್ಯವಸ್ಥೆಯ ಮೂಲಕ ಮೆಟಾ ಒಟ್ಟು 1,647 ರಿಪೋರ್ಟ್ಸ್ ಪಡೆದುಕೊಂಡಿತ್ತು. ಈ ಎಲ್ಲ ದೂರುಗಳಿಗೆ ಮೆಟಾ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಈ ಒಟ್ಟು ದೂರುಗಳ ಪೈಕಿ 585 ಪ್ರಕರಣಗಳಲ್ಲಿ ಬಳಕೆದಾರರಿಗೆ ಟೂಲ್ ನೀಡಿ, ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಮೆಟಾ ತಿಳಿಸಿದೆ.

ಇದನ್ನೂ ಓದಿ: Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…

ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 1,062 ವರದಿಗಳಲ್ಲಿ, ಮೆಟಾ ತನ್ನ ನೀತಿಗಳ ಪ್ರಕಾರ ವಿಷಯವನ್ನು ಪರಿಶೀಲಿಸಿದೆ ಮತ್ತು ಒಟ್ಟು 379 ವರದಿಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 683 ವರದಿಗಳನ್ನು ಪರಿಶೀಲಿಸಲಾಗಿದೆ. ಆದರೆ ಹರಾಜು ಮಾಡಲಾಗಿಲ್ಲ ಎಂದು ಮೆಟಾ ಮಾಹಿತಿ ನೀಡಿದೆ. 50 ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಷಿಯಲ್ ಮೀಡಿಯಾ ವೇದಿಕೆಗಳು ಪ್ರತಿ ತಿಂಗಳು ದೂರು ನಿವಾರಣಾ ವರದಿಯನ್ನು ಪ್ರಕಟಿಸಬೇಕಾಗುತ್ತದೆ.

Exit mobile version