ನವ ದೆಹಲಿ: ಬಹು ನಿರೀಕ್ಷಿತ BMW G 310 RR ಬೈಕ್ ಶುಕ್ರವಾರ ಭಾರತದ ಮಾರುಕಟ್ಟೆಗೆ ಇಳಿದಿದ್ದು, ಹಲವು ಹೊಸತನಗಳೊಂದಿಗೆ ಭಾರತೀಯ ಬೈಕ್ ಪ್ರೇಮಿಗಳ ಮನ ಸೆಳೆಯಲು ಮುಂದಾಗಿದೆ.
ಎರಡು ವೇರಿಯೆಂಟ್‌ನಲ್ಲಿ ಬೈಕ್ ಲಭ್ಯವಿದ್ದು, ಆರ್‌ಆರ್ ಸ್ಪೋರ್ಟ್ಸ್‌ಗೆ ಎಕ್ಸ್ ಶೋ ರೂಮ್ ಬೆಲೆ ೨.೮೫ ಲಕ್ಷ ರೂಪಾಯಿಗಳಾದರೆ, ಆರ್‌ಆರ್ ಸ್ಟೈಲ್ ಸ್ಪೋರ್ಟ್ಸ್‌ಗೆ ೨.೯೯ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಬಿಎಂಡಬ್ಲ್ಯು ಮೋಟರಾಡ್ ತಿಳಿಸಿದೆ.
ಕಪ್ಪು ಹಾಗೂ ಬಿಳಿ ಸೇರಿ ಎರಡು ಬಣ್ಣಗಳಲ್ಲಿ ಬೈಕ್ ಬಿಡುಗಡೆಯಾಗಿದ್ದು, ಬುಕಿಂಗ್ ಆರಂಭಗೊಂಡಿದೆ. ಶೂನ್ಯ ಡೌನ್‌ಪೇಮೆಂಟ್ ಮಾಡಿ ಬೈಕ್ ಖರೀದಿ ಮಾಡುವ ಹಾಗೂ ೩೯೯೯ ರೂಪಾಯಿ ಇಎಂಐ ಆಧಾರದಲ್ಲಿ ಬೈಕ್ ಖರೀದಿಗೆ ಆಯ್ಕೆ ನೀಡಲಾಗಿದೆ.
BMW G 310 RR ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಇಳಿಸಲು ಟಿವಿಎಸ್ ಜತೆ ಬಿಎಂಡಬ್ಲ್ಯು ಮೋಟರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಸೇಲ್ ಹಾಗೂ ಸರ್ವಿಸ್ ಅನ್ನು ಟಿವಿಎಸ್ ನಿರ್ವಹಿಸಲಿದೆ.
ನಾಲ್ಕು ರೈಡ್ ಮೋಡ್
೨೦೨೨ BMW G 310 RR ಬೈಕ್‌ನಲ್ಲಿ ಟ್ರ್ಯಾಕ್, ಅರ್ಬನ್, ರೇನ್ ಹಾಗೂ ಸ್ಪೋರ್ಟ್ಸ್ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿವೆ. ೫ ಇಂಚಿನ ಸ್ಮಾರ್ಟ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರೈಡ್ ಬೈ ವೈರ್ ಥ್ರಾಟಲ್ ಹಾಗೂ ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ನೀಡಲಾಗಿದೆ.
ಹೊಸ ಬೈಕ್‌ನ ವಿನ್ಯಾಸ ಟಿವಿಎಸ್ ಅಪಾಚೆ ಆರ್‌ಅರ್ ೩೧೦ ರೀತಿಯಲ್ಲಿದೆ. ಟ್ವಿನ್ ಪ್ರಾಜೆಕ್ಟರ್ ಹೆಡ್‌ಲೈಟ್, ಸ್ಲೀಕ್ ಡಿಸೈನ್, ಎಲ್‌ಇಡಿ ಟೈಲ್ ಲ್ಯಾಂಪ್, ಟರ್ನ್ ಬೈ ಟರ್ನ್ ನಾವಿಗೇಷನ್ ವ್ಯವಸ್ಥೆಯಿದೆ.
ಮುಂಬದಿಯಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಸಸ್ಪೆನ್ಷನ್ ಬಳಸಲಾಗಿದ್ದು, ಹಿಂಬದಿಯಲ್ಲಿ ಟಿವಿಎಸ್ ಅಪಾಚೆಯ ಆರ್‌ಆರ್ ೩೧೦ ಬೈಕ್‌ನ ಮೊನೊಶಾಕ್ಸ್ ಸಸ್ಪೆನ್ಷನ್ ಇದೆ.
ಎಂಜಿನ್ ಸಾಮರ್ಥ್ಯ
ನೂತನ ಬೈಕ್‌ನಲ್ಲಿ ೩೧೩ ಸಿಸಿ ಲಿಕ್ವಿಡ್ ಕೂಲ್ಡ್, ಎಂಜಿನ್ ಇದೆ. ಸಿಂಗಲ್ ಸಿಲಿಂಡರ್‌ನ ಎಂಜಿನ್‌ಗೆ ಫ್ಯೂಯಲ್ ಇಂಜೆಕ್ಟರ್ ಅಳವಡಿಸಲಾಗಿದೆ. ಇದು ಕೂಡ ಟಿವಿಎಸ್ ಅಪಾಚೆ ಆರ್‌ಆರ್ ೩೧೦ ಬೈಕ್‌ನ ಎಂಜಿನ್ ಆಗಿದೆ. ಈ ಬೈಕ್ ೯೫೦೦ ಆರ್‌ಪಿಎಮ್‌ನಲ್ಲಿ ೩೩.೫ ಬಿಎಚ್‌ಪಿ ಪವರ್ ಹಾಗೂ ೭೫೦೦ ಆರ್‌ಪಿಎಮ್‌ನಲ್ಲಿ ೨೭.೩ ಎನ್‌ಎಮ್ ಟಾರ್ಕ್ಯೂ ಸೃಷ್ಟಿಸುತ್ತದೆ. ಇದರಲ್ಲಿ ೬ ಸ್ಪೀಡ್‌ನ ಗೇರ್ ಬಾಕ್ಸ್ ಇದೆ.
ಈ ಬೈಕ್‌ನ ಆರಂಭಿ ಆವೃತ್ತಿಯು ಟಿವಿಎಸ್ ಅಪಾಚೆಗಿಂತ ೨೦ ಸಾವಿರ ರೂಪಾಯಿ ದುಬಾರಿ. ಟಿವಿಎಸ್ ಅಪಾಚೆ ಆರ್‌ಆರ್ ೩೧೦, ಕವಾಸಕಿ ನಿಂಜಾ ೩೦೦, ಕೆಟಿಎಮ್ ಆರ್‌ಸಿ೩೯೦ ಭಾರತೀಯ ಮಾರುಕಟ್ಟೆಯಲ್ಲಿ ಇದಕ್ಕಿರುವ ಪ್ರತಿಸ್ಪರ್ಧಿಗಳು.
ಇದನ್ನೂ ಓದಿ | ಮಹೀಂದ್ರಾದ ಎಲೆಕ್ಟ್ರಿಕ್ XUV400 ಬಿಡುಗಡೆ ಯಾವಾಗ?