Site icon Vistara News

Android Auto : ಕಾರಿನಲ್ಲಿ ಆಂಡ್ರಾಯ್ಡ್ ಆಟೊ ನಿರ್ವಹಣೆಗೂ ಬರಲಿದೆ ಕೃತಕ ಬುದ್ಧಿಮತ್ತೆ

android auto

ಹೊಸ ಮಾಡೆಲ್​​​ನ ವಾಹನಗಳಲ್ಲಿ ಇನ್ಫೋಟೈನ್​ಸಿಸ್ಟಮ್​ಗಳು ತುಂಬಾ ಚೆನ್ನಾಗಿರುತ್ತವೆ. ಅವುಗಳಲ್ಲಿ ಹಲವಾರು ಫೀಚರ್​ಗಳು ಸೇರಿಕೊಂಡಿರುತ್ತವೆ. ಇಂಥ ಫೀಚರ್​ಗಳು ಚಾಲಕರ ಗಮನವನ್ನು ರಸ್ತೆಯಿಂದ ಹೊರಕ್ಕೆ ಹೋಗುವಂತೆ ಮಾಡುತ್ತದೆ. ಈ ಸಮಸ್ಯೆ ಪರಿಹಾರಕ್ಕಾಗಿ ಆಂಡ್ರಾಯ್ಡ್ ಆಟೋಗೆ (Android Auto) ಕೃತಕ ಬುದ್ಧಿಮತ್ತೆಯನ್ನು (ಎಐ) ತರುವುದಾಗಿ ಗೂಗಲ್ ಘೋಷಿಸಿದೆ. ಹೊಸ ಕಾರ್ಯಕ್ಷಮತೆಯನ್ನು ಈ ವರ್ಷದ ಕೊನೆಯಲ್ಲಿ ಹೊರತರುವ ನಿರೀಕ್ಷೆಯಿದೆ, ಕಂಪನಿಯ ಪ್ರಕಟಣೆಯು ಚಾಲಕರಿಗೆ ಉಂಟಾಗುವ ಗೊಂದಲಗಳನ್ನು ಕಡಿಮೆ ಮಾಡಲು ನಿರ್ದಿಷ್ಟ ಒತ್ತು ನೀಡುತ್ತದೆ.

ಸೇರ್ಪಡೆಗಳಲ್ಲಿ ಮುಖ್ಯವಾದುದು ದೊಡ್ಡ ಮೆಸೇಜ್​ಗಳು ಅಥವಾ ಚಾಟ್ ಗಳನ್ನು ಸಂಕ್ಷಿಪ್ತಗೊಳಿಸುವ ಸಾಮರ್ಥ್ಯ (ಆದ್ದರಿಂದ ಕಾರು ಚಲಾಯಿಸುವ ವೇಳೆ ಸಣ್ಣ ಆವೃತ್ತಿಯನ್ನು ಕೇಳಬಹುದು) ನಂತರ ಪ್ರತಿಕ್ರಿಯೆಗಳನ್ನು ಪಡೆಯುವುದು ಕೂಡ ಸಾಧ್ಯವಿದೆ. ಉದಾಹರಣೆಗೆ, ನೀವು ಚಾಲನೆ ಮಾಡುವಾಗ ಸ್ನೇಹಿತರು ನಿಮಗೆ ವಾಟ್ಸಾಪ್ ಮಾಡಿ ಎಷ್ಟು ಹೊತ್ತು ಆಗುತ್ತದೆ ಎಂದು ಕೇಳಿದರೆ. ಅದು ನಿಮ್ಮ ಗೂಗಲ್ ನಕ್ಷೆಗಳ ಮಾರ್ಗದ ಆಧಾರದ ಮೇಲೆ ಅವರಿಗೆ ಮಾಹಿತಿ ನೀಡುವಂತೆ ನಿಮಗೆ ಸಲಹೆ ನೀಡುತ್ತದೆ.

ಇದನ್ನೂ ಓದಿ : Tata Altroz EV : ರಸ್ತೆಗಿಳಿಯಲಿದೆ ಟಾಟಾ ಕಂಪನಿಯ ಇನ್ನೊಂದು ಬಲಿಷ್ಠ ಇವಿ ಕಾರು

ಗೂಗಲ್ ನಕ್ಷೆಗಳಲ್ಲಿ ಆ ಸ್ಥಳವನ್ನು ಬರೆಯದೇ ಒಂದೇ ಒಂದು ಟ್ಯಾಪ್ ಮೂಲಕ ಕೊಟ್ಟ ಸ್ಥಳಗಳಿಗೆ ತ್ವರಿತವಾಗಿ ನ್ಯಾವಿಗೇಟ್ ಮಾಡಲು ನೆರವು ನೀಡುತ್ತದೆ ಎಂದು ಕಂಪನಿಯ ಹೇಳಿದೆ. ಆಂಡ್ರಾಯ್ಡ್ ಆಟೋ ನಿಮ್ಮ ಫೋನ್​​ನ ವಿನ್ಯಾಸವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸಲಿದೆ ಎಂದು ಗೂಗಲ್ ಹೇಳಿದೆ. ಐಕಾನ್ ಶೈಲಿ ಮತ್ತು ವಾಲ್​ಪೇಪರ್​ ಅನ್ನು ನಿಮ್ಮ ಕಾರಿನ ಡ್ಯಾಶ್ಬೋರ್ಡ್ ಡಿಸ್​ಪ್ಲೇಗೆ ಕೊಂಡೊಯ್ಯವ ಕೆಲಸವನ್ನೂ ಮಾಡುತ್ತದೆ.

ಆಪಲ್ ಕಾರ್​ ಪ್ಲೇಯಂತೆ, ಗೂಗಲ್ ನ ಆಂಡ್ರಾಯ್ಡ್ ಆಟೊ ಪ್ಲೇ ಚಾಲಕರಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಇದು ಅವರಿಗೆ ಗೂಗಲ್ ಸೇವೆಗಳಿಗೆ ಪ್ರವೇಶವನ್ನು ಸುಲಭವಾಗಿ ನೀಡುತ್ತದೆ. ಗೂಗಲ್ ಮ್ಯಾಪ್ಸ್ ನಂತಹ ಅಪ್ಲಿಕೇಶನ್ ಬಳಸುವುದಕ್ಕೂ ಅನುಕೂಲಗಳಾಗಿವೆ. ಆದರೆ ಗೂಗಲ್ ಅಸಿಸ್ಟೆಂಟ್ ವಾಯ್ಸ್ ಕಂಪ್ಯಾನಿಯನ್ ಪ್ಯಾಕೇಜ್ ನ ಸ್ಮಾರ್ಟ್ ಭಾಗಗಳಲ್ಲಿ ಒಂದಾಗಿದೆ.

Exit mobile version