Site icon Vistara News

Artificial Intelligence: ಇಟ್ಟು ಮರೆತು ಹೋದ ವಸ್ತುಗಳನ್ನು ಹುಡುಕಲು ‘ಕೃತಕ ಜ್ಞಾಪಕ ಶಕ್ತಿ’ ಅಭಿವೃದ್ಧಿ!

Artificial Intelligence: Reseachers developed 'artificial memory' to find forgotten things!

ನವದೆಹಲಿ: ಇಟ್ಟಿರುವ ಸಾಮಾನು ಟೈಮ್‌ಗೆ ಸರಿಯಾಗಿ ಕೈಗೆ ಸಿಗುವುದಿಲ್ಲ ಎಂದು ಮನೆಯಲ್ಲಿ ಆಗಾಗ ಹಿರಿಯರು ಮಾತನಾಡಿಕೊಳ್ಳವುದನ್ನು ಕೇಳಿದ್ದೇವೆ. ಇನ್ನು ಆ ಚಿಂತೆ ಇಲ್ಲ ಬಿಡಿ. ಯಾಕೆಂದರೆ, ಸಂಶೋಧಕರು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಬಾಟ್‌ಗಳು, ವಿಶೇಷವಾಗಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ, ಔಷಧಗಳು, ಕನ್ನಡಕ, ಫೋನ್‌ಗಳು ಮತ್ತಿತರ ವಸ್ತುಗಳನ್ನು ಹುಡುಕಿಕೊಡಲು ನೆರವು ನೀಡಲಿವೆ.

ಕೆನಡಾದ ಯುನಿರ್ವಸಿಟಿ ಆಫ್ ವಾಟರ್ಲೂ ಸಂಸೋಧನಾ ವಿದ್ಯಾರ್ಥಿ ಅಲಿ ಅಯೂಬ್ ಅವರು ಈ ಬಗ್ಗ ಮಾಹಿತಿ ನೀಡಿದ್ದು, ದೀರ್ಘಾವಧಿಯಲ್ಲಿ ಈ ತಂತ್ರಜ್ಞಾನ ಪರಿಣಾಮವು ಸಾಕಷ್ಟು ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಿದ್ದಾರೆ. ಬಳಕೆದಾರರ ಕೇವಲ ರೋಬಾಟ್‌‌ವನ್ನು ಸಂಗಾತಿಯಂತೆ ಬಳಸುವುದು ಮಾತ್ರವಲ್ಲದೇ, ಅದನ್ನು ಇನ್ನಷ್ಟು ವೈಯಕ್ತಿಕರಿಸಿ, ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬಹುದಾಗಿದೆ. ಇದರಿಂದ ಸಾಕಷ್ಟು ಹೊಸ ಸಾಧ್ಯತೆಗಳು ಲಭ್ಯವಾಗಲಿವೆ ಎದು ಅಯೂಬ್ ಅವರು ಹೇಳಿದರು.

ಮೆರೆವು ಕಾಯಿಲೆಯು, ಮೆದುಳಿನ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗೊಂದಲ, ನೆನಪು ನಷ್ಟ ಮತ್ತು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಈ ಸ್ಥಿತಿಯನ್ನು ಹೊಂದಿರುವ ಅನೇಕ ಜನರು ದಿನನಿತ್ಯದ ವಸ್ತುಗಳ ಸ್ಥಳವನ್ನು ಪದೇ ಪದೇ ಮರೆತುಬಿಡುತ್ತಾರೆ. ಇದು ಅವರ ಜೀವನದ ಗುಣಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಆರೈಕೆ ಮಾಡುವವರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಈ ಹೊರೆಯನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವು ನೆರವು ಒದಗಿಸಲಿದೆ.

ಇಂಥ ಸಂದರ್ಭಗಳಲ್ಲಿ ನೆರವು ಒದಗಿಸುವುದಕ್ಕಾ ರೂಪಿಸಲಾಗಿರುವ ಈ ಕಂಪ್ಯಾನಿಯನ್ ರೋಬಾಟ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿವೆ. ಅಲ್ಲದೇ ಹೊಸ ದಿಕ್ಕನ್ನು ತೋರಿಸಲಿವೆ ಎಂಬುದು ಸಂಶೋಧಕರ ಖಚಿತ ಅಭಿಪ್ರಾಯವಾಗಿದೆ. ಅಲ್ಲದೇ, ಕೃತಕ ಬುದ್ದಿಮತ್ತೆಯನ್ನು ಬಳಸಿಕೊಂಡು, ಹೊಸ ಕೃತಕ ಜ್ಞಾಪಕ ಶಕ್ತಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗ್ರಹಿಸಲಾದ ವೀಡಿಯೊ ಮೂಲಕ ಅದರ ಕ್ಯಾಮರಾ ವೀಕ್ಷಣೆಯಲ್ಲಿ ನಿರ್ದಿಷ್ಟ ವಸ್ತುಗಳ ಮೆಮೊರಿ ಲಾಗ್ ಅನ್ನು ಪತ್ತೆಹಚ್ಚಲು, ಟ್ರ್ಯಾಕ್ ಮಾಡಲು ಮತ್ತು ಇರಿಸಿಕೊಳ್ಳಲು ರೋಬೋಟ್ ಅನ್ನು ಪ್ರೋಗ್ರಾಂ ಮಾಡಲು ತಂಡವು ಆಬ್ಜೆಕ್ಟ್-ಡಿಟೆಕ್ಷನ್ ಅಲ್ಗಾರಿದಮ್ ಬಳಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Indian Military: ಭಾರತೀಯ ಸೇನೆಗೆ ಕೃತಕ ಬುದ್ಧಿಮತ್ತೆ ನೆರವು, ಎಲ್ಲೆಲ್ಲಿ ಬಳಕೆ?

ಸಂಶೋಧಕರು ಗ್ರಾಫಿಕಲ್ ಇಂಟರ್ಫೇಸ್ ಅಭಿವೃದ್ಧಿಪಡಿಸಿದರು. ಆ ಮೂಲಕ ಬಳಕೆದಾರರು ಟ್ರ್ಯಾಕ್ ಮಾಡಲು ಬಯಸುವ ವಸ್ತುಗಳನ್ನು ಆಯ್ಕೆ ಮಾಡಲು ಮತ್ತು ವಸ್ತುಗಳ ಹೆಸರನ್ನು ಟೈಪ್ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಸರ್ಚ್ ಆಪ್ಷನ್ ಕೊಟ್ಟರೆ ರೋಬಾಡ್ ನಿರ್ದಿಷ್ಟ ವಸ್ತುವನ್ನು ಯಾವಾಗ ಮತ್ತು ಕೊನೆಯದಾಗಿ ಎಲ್ಲಿ ಗಮನಿಸಿದೆ ಎಂಬುದನ್ನು ಸೂಚಿಸುತ್ತದೆ. ಆಗ ಇಟ್ಟು ಮರೆತು ಹೋದ ವಸ್ತುಗಳನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಂತ್ರಜ್ಞಾನದ ಇನ್ನಷ್ಟು ಕುತೂಹಲಕಾರಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version