ನವ ದೆಹಲಿ: ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್ಪೊದಲ್ಲಿ (Auto Expo 2023) ನಾನಾ ಕಂಪನಿಗಳು ತಮ್ಮ ಭವಿಷ್ಯದ ಕಾರುಗಳನ್ನು ಪ್ರದರ್ಶಿಸಿದವು. ಅವುಗಳಲ್ಲಿ ವಿನ್ಯಾಸದ ಮೂಲಕ ಗಮನ ಸೆಳೆದಿರುವುದು ಟಾಟಾ ಮೋಟಾರ್ಸ್ನ ಕರ್ವ್ (Tara Curvv). ವಿನ್ಯಾಸ ಹಾಗೂ ಗಟ್ಟಿಮುಟ್ಟಾದ ನಿರ್ಮಾಣದ ಮೂಲಕವೇ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಹಕ್ಕು ಸ್ಥಾಪಿಸುತ್ತಿರುವ ಟಾಟಾ, ಕರ್ವ್ ಮೂಲಕವೂ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಯೋಜನೆ ಹಾಕಿಕೊಂಡಿದೆ.
ಕರ್ವ್ನಲ್ಲಿ ಐಸಿಇ (ಇಂಟರ್ನಲ್ ಕಂಬಷನ್ ಎಂಜಿನ್) ಹಾಗೂ ಇವಿ ಆವೃತ್ತಿಯೂ ಇರಲಿದೆ. ಎರಡನೇ ಪೀಳಿಗೆಯ ಇವಿ ಕಾರುಗಳ ವಿನ್ಯಾಸ ಹೊಂದಿರುವ ಈ ಕಾರು, ಒಂದು ಬಾರಿ ಬ್ಯಾಟರಿ ಚಾರ್ಜ್ ಮಾಡಿದರೆ 450 ಕಿಲೋ ಮೀಟರ್ ದೂರ ಕ್ರಮಿಸಬಲ್ಲುದು ಎಂದು ಕಂಪನಿ ಹೇಳಿದೆ.
ಡೈನಾಮಿಕ್ ಹಾಗೂ ಮಾಡರ್ನ್ ಎಸ್ಯುವಿ ಕಾನ್ಸೆಪ್ಟ್ ವಿನ್ಯಾಸವನ್ನು ಹೊಂದಿದೆ. ಕಂಪನಿಯ ಪ್ರಕಾರ ಇದು ವಿಭಿನ್ನ ವಿನ್ಯಾಸದೊಂದಿಗೆ ಜನಪ್ರಿಯಗೊಳ್ಳಲಿರುವ ಕಾರು.
ಕಾರಿನಲ್ಲಿ ಸ್ಪೋರ್ಟಿ ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಇರಲಿದ್ದು, ಅದರಲ್ಲಿ ಸಾಫ್ಟ್ ಟಚ್ ಬಟನ್ಗಳಿರಲಿವೆ. ಫ್ಲೋಟಿಂಗ್ ಐಲ್ಯಾಂಡ್ ಡಿಜಿಟಲ್ ಡಿಜಿಟಲ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್, ಸೆಂಟರ್ ಟಾಪ್ ಡ್ಯಾಶ್ಬೋರ್ಡ್ ಕಾರಿನ ಒಳ ಆವರಣದ ಸೌಂದರ್ಯ ವೃದ್ಧಿಸಿದೆ. ಈ ಕಾರಿನಲ್ಲಿ ಪ್ರಯಾಣಿಕರು ಹಾಗೂ ಲಗೇಜ್ಗೆ ಸಾಕಷ್ಟು ಜಾಗ ಒದಗಿಸುವುದೇ ಕಂಪನಿಯ ಉದ್ದೇಶವಾಗಿದೆ.
ಇದನ್ನೂ ಓದಿ | Auto Expo 2023 | ಮಾರುತಿ ಸುಜುಕಿಯ ಇವಿಎಕ್ಸ್ ಎಸ್ಯುವಿ ಕಾನ್ಸೆಪ್ಟ್ ಕಾರು ಅನಾವರಣ, 2025ಕ್ಕೆಮಾರಾಟ ಅರಂಭ