ನವ ದೆಹಲಿ : ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಬ್ರಾಂಡ್ ಹಾಗೂ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಕಾರು ಮಾರುತಿ ಆಲ್ಟೊ ಕೆ೧೦ನ ಹೊಸ ಮಾಡೆಲ್ (2022 Maruti Alto K10) ಗುರುವಾರ ಭಾರತದ ಮಾರುಕಟ್ಟೆಗೆ ಇಳಿಯಿತು. ನವ ದೆಹಲಿಯಲ್ಲಿ ಈ ಕಾರಿನ ಆರಂಭಿಕ ಬೆಲೆ ೩.೯೯ ಲಕ್ಷ ರೂಪಾಯಿ (ಎಕ್ಸ್‌ಶೋ ರೂಮ್) ಹಾಗೂ ಒಂದು ಲೀಟರ್ ಪೆಟ್ರೋಲ್‌ಗೆ ಗರಿಷ್ಠ ೨೪.೯೦ ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಸ್ಟಾಂಡರ್ಡ್, ಎಲ್‌ಎಕ್ಸ್‌ಐ, ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ (ಆಪ್ಷನಲ್) ಎಂಬ ನಾಲ್ಕು ಆಯ್ಕೆಯಲ್ಲಿ ಹೊಸ ಆಲ್ಟೊ ಲಭ್ಯವಿದೆ. ಆರಂಭಿಕ ಬೆಲೆ ೩.೯೯ ಲಕ್ಷ ರೂಪಾಯಿಯಾದರೆ, ಟಾಪ್ ವೇರಿಯೆಂಟ್ ಕಾರಿನ ಬೆಲೆ ೫.೮೩ ಲಕ್ಷ ರೂಪಾಯಿ (ಎಕ್ಸ್ ಶೋರೂಮ್). ಅದರಲ್ಲಿ ಮ್ಯಾನ್ಯುಯಲ್ ವೇರಿಯೆಂಟ್‌ನ ಕಾರಿನ ಬೆಲೆ ೩.೯೯ ಲಕ್ಷ ರೂಪಾಯಿಯಿಂದ ಆರಂಭಗೊಂಡು, ೫.೩೩ ಲಕ್ಷ ರೂಪಾಯಿಯವರೆಗೆ ಇದ್ದರೆ, ಆಟೋಮ್ಯಾಟಿಕ್ ವೇರಿಯೆಂಟ್‌ನ ಬೆಲೆ ೫.೪೯ ಲಕ್ಷ ರೂಪಾಯಿಂದ ಆರಂಭಗೊಂಡು ೫.೮೩ ಲಕ್ಷ ರೂಪಾಯಿಗಳಾಗಿದೆ.
ಬಣ್ಣ ಆಯ್ಕೆಗಳೇನು?
ಆರು ಬಣ್ಣಗಳಲ್ಲಿ 2022 Maruti Alto K10 ಕಾರು ಲಭ್ಯವಿದೆ. ಸಾಲಿಡ್ ವೈಟ್, ಸಿಲ್ಕಿ ವೈಟ್, ಸಿಜಿಲಿಂಗ್ ರೆಡ್, ಗ್ರಾನೈಟ್ ಗ್ರೇ, ಸ್ಪೀಡಿ ಬ್ಲೂ, ಅರ್ಥ್ ಗೋಲ್ಡ್ ಎಂಬ ಬಣ್ಣಗಳ ಆಯ್ಕೆ ನೀಡಲಾಗಿದೆ. ಈ ಹ್ಯಾಚ್‌ಬ್ಯಾಕ್ ಕಾರಿನೊಂದಿಗೆ ಇಂಪಾಕ್ಟೊ ಮತ್ತು ಗ್ಲಿಂಟೊ ಎಂಬ ಎರಡು ಅಕ್ಸೆಸರಿ ಕಿಟ್‌ಗಳ ಆಯ್ಕೆಯೂ ನೀಡಲಾಗಿದೆ.
ಗಾತ್ರ ಎಷ್ಟಿದೆ?
2022 Maruti Alto K10 ಕಾರು ೩೫೩೦ ಮಿಲಿ ಮೀಟರ್ ಉದ್ದವಿದ್ದು, ೧೪೯೦ ಮಿಲಿ ಮೀಟರ್ ಅಗಲವಿದೆ. ೨೩೮೦ ಮಿಲಿ ಮೀಟರ್ ವೀಲ್ ಬೇಸ್ ಹೊಂದಿದ್ದು, ೧೬೦ ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ೧೭೭ ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ.
ಫೀಚರ್‌ಗಳು
ವಿನ್ಯಾಸ ಹಾಗೂ ಫೀಚರ್‌ಗಳ ವಿಚಾರಕ್ಕೆ ಬಂದಾಗ 2022 Maruti Alto K10 ಹಳೆಯ ಮಾದರಿಗಿಂತ ಅತ್ಯಾಕರ್ಷಕವಾಗಿದೆ. ಹನಿ ಕೂಂಬ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹ್ಯಾಲೊಜಿನ್ ಹೆಡ್‌ಲೈಟ್ ಮುಂಬದಿಯ ನೋಟವನ್ನು ವೃದ್ಧಿಸಿದೆ.
ಒಳಗೆ ಏಳು ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ಇನ್ಫೋಟೈನ್‌ಮೆಂಟ್ ಇದ್ದು, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ ನೀಡಲಾಗಿದೆ. ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮುಂಬದಿ ಹಾಗೂ ಹಿಂಬದಿ ಡೋರ್‌ಗಳಲ್ಲಿ ಸ್ಪೀಕರ್‌ಗಳು, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು ವಾಯ್ಸ್ ಕಂಟ್ರೊಲ್ ವ್ಯವಸ್ಥೆ ಹೊಂದಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಪವರ್ ವಿಂಡೊ ಬಟನ್ ನೀಡಲಾಗಿದ್ದು, ಕಿ ಲೆಸ್ ಎಂಟ್ರಿ ಹಾಗೂ ಎಲೆಕ್ಟ್ರಿಕಲ್ ಒಆರ್‌ವಿಎಮ್‌ಗಳನ್ನು ಹೊಸ ಕಾರಿನ ಆಕರ್ಷಣೆಗಳಾಗಿವೆ.
ಸುರಕ್ಷತೆ?
ಮುಂಬದಿಯಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ನೀಡಲಾಗಿದ್ದು, ಫೋರ್ಸ್ ಲಿಮಿಟರ್ ಹಾಗೂ ಪ್ರಿ ಟೆನ್ಷನರ್ ಫ್ರಂಟ್ ಸೀಟ್‌ಬೆಲ್ಟ್‌ಗಳು, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಎಲೆಕ್ಟ್ರಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ), Antilock ಬ್ರೇಕಿಂಗ್ ಸಿಸ್ಟಮ್ ಹಾಗೂ ಹೈ ಸ್ಪೀಡ್ ಅಲರ್ಟ್ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲಿದೆ.
ಎಂಜಿನ್ ಸಾಮರ್ಥ್ಯ
ಹೊಸ ಮಾದರಿಯ 2022 Maruti Alto K10 ಕಾರಿನಲ್ಲಿ ೧.೦ ಲಿಟರ್‌ನ ಡ್ಯುಯಲ್‌ಜೆಟ್ ಎಂಜಿನ್ ಇದೆ. ಡ್ಯುಯಲ್ ವಿವಿಟಿ ಕೆ- ಸೀರಿಸ್‌ನ ಈ ಎಂಜಿನ್ ೬೭ ಎಚ್‌ಪಿ ಪವರ್ ಹಾಗೂ ೮೯ ಎನ್ಎಮ್ ಟಾರ್ಕ್ಯೂ ಸೃಷ್ಟಿಸುತ್ತದೆ. ಐದು ಸ್ಪೀಡ್‌ನ ಮ್ಯಾನುಯಲ್ ಹಾಗೂ ೫ ಸ್ಪೀಡ್ ಅಟೋಮ್ಯಾಟಿಕ್ ಗೇರ್ ಆಯ್ಕೆಯಿದೆ. ಮ್ಯಾನುಯಲ್ ಕಾರು ೨೪.೩೯ ಕಿ.ಮೀ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಕಾರು ೨೪.೯೦ ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.