Site icon Vistara News

Car Lover : 60ಕ್ಕೂ ಅಧಿಕ ಕಾರು ಖರೀದಿಸಿರುವ 85ರ ಅಜ್ಜ, ಅವರ ಕಾರ್ ಕ್ರೇಜ್​ ನಿಜಕ್ಕೂ ಗ್ರೇಟ್​!

Car Lover Narayanan pillai

#image_title

ಬೆಂಗಳೂರು ; ಸೆಲೆಬ್ರಿಟಿಗಳು ಮತ್ತು ಯುವ ಉದ್ಯಮಿಗಳಿಗೆ ಹೊಸ ಹೊಸ ಕಾರುಗಳನ್ನು ಖರೀದಿ ಮಾಡುವುದು ಖಯಾಯಿ. ನಮ್ಮ ಗ್ಯಾರೇಜ್​ನಲ್ಲಿ ಹೆಚ್ಚು ಹೆಚ್ಚು ಕಾರುಗಳು ಇರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅವರು ದುಬಾರಿ ಕಾರುಗಳು ಮತ್ತು ಎಸ್ ಯುವಿಗಳನ್ನು ಖರೀದಿಸುತ್ತಿದ್ದಾರೆ. ಅನೇಕರಿಗೆ ಅದು ತಮ್ಮ ಸಂಪತ್ತಿನ ಪ್ರದರ್ಶನಕ್ಕಿರುವ ಮಾರ್ಗವೂ ಹೌದು. ಆದರೆ, ಕೆಲವರು ನಿಜವಾದ ಕಾರು ಪ್ರೇಮಿಗಳಿರುತ್ತಾರೆ. ಅವರಿಗೆ ಅವೆಲ್ಲವೂ ಸಖುಷಿಯ ಸಂಗತಿ. ಕಾರು ಖರೀದಿ ಮಾಡುವುದು ಅವರಿಗೆ ಉತ್ಸಾಹ ವಿಚಾರ. ಇಂಥದ್ದೇ ಒಬ್ಬರು ಕೇರಳದಲ್ಲಿದ್ದಾರೆ. ಅವರು ಇದುವರೆಗೆ ನಾನಾ ಕಂಪನಿಗಳ 60ಕ್ಕೂ ಅಧಿಕ ಕಾರುಗಳನ್ನು ಖರೀದಿಸಿದ್ದಾರೆ. ಅಂದ ಹಾಗೆ ವ್ಯಕ್ತಿಯ ವಯಸ್ಸು ಈಗ 85. 18 ವರ್ಷಕ್ಕೆ ಲೈನ್ಸೆಸ್​ ಪಡೆದು ಕಾರು ಖರೀದಿ ಮಾಡಲು ಆರಂಭಿಸಿದ್ದರು ಎಂದು ಅಂದಾಜು ಮಾಡಿದ್ದರೂ ಎರಡು ವರ್ಷಕ್ಕೊಂದರಂತೆ ಅವರು ಕಾರನ್ನು ಬದಲಾಯಿಸಿದ್ದಾರೆ!

ಹಿರಿಯ ಕಾರು ಪ್ರೇಮಿಯ ವಿಡಿಯೊವನ್ನು ಬಿಹೈಂಡ್​ ವುಡ್ಸ್​ ಎಂಬ ಯೂಟ್ಯೂಚ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ವೀಡಿಯೊದಲ್ಲಿ ಕೇರಳದ ಮಾವೆಲಿಕ್ಕರಾದ 85 ವರ್ಷದ ನಾರಾಯಣನ್ ಪಿಳ್ಳೈ ಅವರ ಕಾರು ಪ್ರೇಮದ ಕತೆಯನ್ನು ವಿವರಿಸಲಾಗಿದೆ. ವಕೀಲ ವೃತ್ತಿ ಮಾಡುತ್ತಿದ್ದು ಅವರು ಆಸ್ಟ್ರೇಲಿಯಾದಲ್ಲೂ ಹಲವು ವರ್ಷಗಳ ಕಾಲ ಜೀವನ ಮಾಡಿದ್ದರು. ಒಂದು ಬಾರಿ ಹಣ ಸಂಪಾದಿಸಲ ಪ್ರಾರಂಭಿಸಿದ ನಂತರ, ಅವರು ಹೊಸ ಕಾರುಗಳನ್ನು ಖರೀದಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದರು. ಅವರ ಮೊದಲ ಕಾರು ಆಡಿ ಫಾಕ್ಸ್. ಇದು ಅವರು ಆಸ್ಟ್ರೇಲಿಯಾದಲ್ಲಿ ಖರೀದಿಸಿದ ಆಡಿ 80ನ ರಿಬ್ಯಾಡ್ಜ್ ಆವೃತ್ತಿ. ಅಂದಿನಿಂದ, ನಾರಾಯಣನ್ ಪಿಳ್ಳೈ ಹಲವಾರು ಕಾರುಗಳನ್ನು ಖರೀದಿಸಿದ್ದಾರೆ.

ತಾವು ಖರೀದಿ ಮಾಡಿರುವ ಕಾರುಗಳಲ್ಲಿ ಅಷ್ಟನ್ನೂ ಅವರು ಮಾರಿದ್ದಾರೆ. ಒಂದನ್ನೂ ಇಟ್ಟುಕೊಂಡಿಲ್ಲ. ಅವರ ಕಾರುಗಳು ಪ್ರದರ್ಶನಕ್ಕೆ ಲಭ್ಯವಿಲ್ಲ. ಅವರು ಒಂದು ಕಾರನ್ನು ಖರೀದಿಸಿ ಒಂದು ಅಥವಾ ಎರಡು ವರ್ಷಗಳವರೆಗೆ ಬಳಸುತ್ತಾರೆ. ಅದನ್ನು ಮಾರಿ ಮತ್ತೊಂದು ಬ್ರಾಂಡ್​ನ ಕಾರನ್ನು ಖರೀದಿ ಮಾಡುತ್ತಾರೆ. ಅವರು ಆಸ್ಟ್ರೇಲಿಯಾದಲ್ಲಿ ಸರಿಸುಮಾರು 43 ವರ್ಷಗಳನ್ನು ಮತ್ತು ಯುಕೆಯಲ್ಲಿ 7 ವರ್ಷಗಳನ್ನು ಕಳೆದಿದ್ದಾರೆ. ಭಾರತಕ್ಕೆ ಬಂದಾಗ, ಅವರ ಮೊದಲ ಕಾರು ಫೋಕ್ಸ್ ವ್ಯಾಗನ್ ಜೆಟ್ಟಾ. ಅದನ್ನು ಅವರು ಮತ್ತೊಂದು ಕಾರಿಗೆ ವಿನಿಮಯ ಮಾಡಿಕೊಳ್ಳುವ ಮೊದಲು ಸುಮಾರು ಒಂದು ವರ್ಷ ಬಳಸಿದ್ದರು.

ಇದನ್ನೂ ಓದಿ : Hero Xtreme : ಹೆಚ್ಚು ತೂಕ, ಹೊಸ ಲುಕ್! ಇನ್ನೇನಿವೆ ಹೊಸ ಹೀರೊ ಎಕ್ಸ್​ಟ್ರೀಮ್​ 160 ಆರ್​4 ವಿ ಬೈಕ್​ನಲ್ಲಿ?

ವಯಸ್ಸಾಗುತ್ತಿದ್ದಂತೆ ಅವರುಐಷಾರಾಮಿ ಕಾರುಗಳತ್ತ ಆಕರ್ಷಿತರಾಗಿದ್ದರು. ಏಕೆಂದರೆ ಅವು ಹೆಚ್ಚಿನ ಆರಾಮ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತವೆ ಎಂಬುದೇ ಅವರ ವಾದು. ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್​್ಗಳಲ್ಲಿ ನಾರಾಯಣನ್ ಪಿಳ್ಳೈ ಅವರಿಗೆ ಬಿಎಂಡಬ್ಲ್ಯು ಅಚ್ಚುಮೆಚ್ಚು 2008ರಿಂದ ಬಿಎಂಡಬ್ಲ್ಯು ವಾಹನಗಳನ್ನು ಪ್ರತ್ಯೇಕವಾಗಿ ಬಳಸಿರುವ ಅವರು ಕೇರಳದ ಇವಿಎಂ ಸಮೂಹದ ಡೀಲರ್​​ ಶಿಪ್​ನಿಂ ಸುಮಾರು 14 ಕಾರುಗಳನ್ನು ಖರೀದಿಸಿದ್ದಾರೆ.

ನಾರಾಯಣನ್ ಪಿಳ್ಳೈ ಅವರ ಇತ್ತೀಚಿನ ಕಾರು ಬಿಎಂಡಬ್ಲ್ಯು 2 ಸೀರಿಸ್ ಸೆಡಾನ್. ಅವರೇ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಾರೆ. ಅದು ಅವರ ಅತ್ಯಂತ ನೆಚ್ಚಿನ ಸಂಗತಿ. ಅವರು ಚಾಲಕನನ್ನು ನೇಮಕ ಮಾಡಿಕೊಳ್ಳುವುದಿಲ್ಲ. ಬದಲಾಗಿ ತಾವೇ ಚಾಲನೆ ಮಾಡಿಕೊಂಡು ಹೋಗತ್ತಾರೆ. ಸದ್ಯ ಆಗಾಗ ತಮಿಳುನಾಡಿಗೆ ಪ್ರಯಾಣಿಸುತ್ತಾರೆ. ಆಸ್ಟ್ರೇಲಿಯಾದಲ್ಲೂ ಅವರು ಕಾರು ರೈಡಿಂಗ್​ ಕ್ರೇಜ್ ಹೊಂದಿದ್ದರು. ಅಲ್ಲೂ ಕಾರಿನ ಮೂಲಕ ದೇಶದ ಮೂಲೆ ಮೂಲೆಗೆ ಪ್ರಯಾಣ ಮಾಡಿದ್ದಾರೆ.

ಕೇರಳದಲ್ಲಿ ರಸ್ತೆಗಳ ಸ್ಥಿತಿ ತಮಿಳುನಾಡು ಅಥವಾ ಇತರ ರಾಜ್ಯಗಳಲ್ಲಿರುವಂತೆ ಉತ್ತಮವಾಗಿಲ್ಲ ಎಂಬುದು ಅವರ ವಾದ. ವೇಗದ ಚಾಲನೆಯ ಪ್ರೇಮಿಯಾಗಿರುವ ಅವರು ಐಷಾರಾಮಿ ಕಾರುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ವೇಗದಲ್ಲಿ ಸಾಗುವಾಗ ಹೆಚ್ಚು ಸುರಕ್ಷತೆ ನೀಡುವ ಕಾರಣ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಿದ್ದೇಣೆ ಎಂದು ಅವರು ಹೇಳಿದ್ದಾರೆ.

Exit mobile version