Site icon Vistara News

Maruti Suzuki | ಇಂದಿನಿಂದ ಮಾರುತಿ ಸುಜುಕಿ ಕಾರುಗಳು ದುಬಾರಿ! ಎಷ್ಟು ಬೆಲೆ ಹೆಚ್ಚಳ?

Maruti Suzuki

ನವದೆಹಲಿ: ಭಾರತದಲ್ಲಿ ಅತಿದೊಡ್ಡ ಆಟೋ ಮಾರುಕಟ್ಟೆಯನ್ನು ಹೊಂದಿರುವ ಮಾರುತಿ ಸುಜುಕಿ ಇಂಡಿಯಾ(Maruti Suzuki), ತನ್ನೆಲ್ಲ ವಾಹನಗಳ ಮಾಡೆಲ್‌ಗಳ ಬೆಲೆಯನ್ನು ಶೇ.1.1ರಷ್ಟು ಹೆಚ್ಚಳ ಮಾಡಿದೆ. ಜನವರಿ 16ರಿಂದ ಈ ಪರಿಷ್ಕೃತ ದರಗಳು ಜಾರಿಗೆ ಬಂದಿವೆ. ಹೆಚ್ಚುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ತಯಾರಿಕಾ ವೆಚ್ಚ ಮತ್ತು ಸರ್ಕಾರದ ನಿಯಮಗಳನ್ನು ಪೂರೈಸುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕಂಪನಿಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತದೆ. ಹಾಗಿದ್ದೂ, ಬೆಲೆ ಹೆಚ್ಚಳದ ಮೂಲಕ ಕೆಲವು ಪರಿಣಾಮವನ್ನು ವರ್ಗಾಯಿಸಲು ಇದು ಅನಿವಾರ್ಯವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೆಚ್ಚುತ್ತಿರುವ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಆಟೋ ಕಂಪನಿಗಳು ಕಳೆದ ಎರಡು ವರ್ಷಗಳಿಂದ ಆಗಾಗ ತಮ್ಮ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಲೇ ಇವೆ.

ಬೆಲೆ ಹೆಚ್ಚಳವು ಖಂಡಿತವಾಗಿಯೂ ಮಾರಾಟದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಈ ಬೆಲೆ ಏರಿಕೆ ಎಲ್ಲಿಯವರೆಗೆ ಮುಟ್ಟಲಿದೆ ಎಂಬುದು ನಮಗೂ ಗೊತ್ತಿಲ್ಲ. ವಿದೇಶಿ ವಿನಿಮಯ ಮತ್ತು ತಯಾರಿಕಾ ವೆಚ್ಚ ನಿರ್ವಹಣೆ ಹೇಗೆ ಎಂಬುದು ಗೊತ್ತಿಲ್ಲ. ಇವೆಲ್ಲ ಅನಿಶ್ಚಿತ ಸಂಗತಿಗಳು ಮತ್ತು ಅವುಗಳ ಪರಿಣಾಮ ಇದ್ದೇ ಇರುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾ ಚೇರ್ಮನ್ ಆರ್ ಸಿ ಭಾರ್ಗವ್ ಅವರು ಹೇಳಿದ್ದಾರೆ.

ಇದನ್ನೂ ಓದಿ | Auto Expo 2023 | ಮಾರುತಿ ಸುಜುಕಿಯ ಇವಿಎಕ್ಸ್​ ಎಸ್​ಯುವಿ ಕಾನ್ಸೆಪ್ಟ್​ ಕಾರು ಅನಾವರಣ, 2025ಕ್ಕೆಮಾರಾಟ ಅರಂಭ

Exit mobile version