Site icon Vistara News

Tata Motors : ಆಲ್ಟ್ರೋಜ್​ ಐಸಿಎನ್​ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್​?

Tata Motors ICNG Car

#image_title

ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಸಿಎನ್​​ಜಿ ಚಾಲಿತ ಪ್ಯಾಸೆಂಜರ್ ಕಾರಉ ಆಲ್ಟ್ರೋಜ್ ಐಸಿಎನ್​ಜಿಯ ಬೆಲೆಯನ್ನು ಇತ್ತೀಚೆಗೆ ಘೋಷಿಸಿದೆ. ಆಲ್ಟ್ರೋಜ್ ಐಸಿಎನ್ ಜಿ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.55 ಲಕ್ಷಗಳಿಂದ ಆರಂಭವಾಗಿ ರೂ.10.55 ಲಕ್ಷಗಳ ತನಕ ನಿಗದಿ ಮಾಡಲಾಗಿದೆ. ಆಲ್ಟ್ರೋಜ್ ಐಸಿಎನ್​​ಜಿ ಕಾರನ್ನು 2023ರ ಆಟೋ ಎಕ್ಸ್​ಪೋದಲ್ಲಿ ಬಿಡುಗಡೆ ಅನಾವರಣ ಮಾಡಲಾಗಿತ್ತು. ಇದು ಟಾಟಾ ಮೋಟಾರ್ಸ್​​ನ ಮೂರನೇ ಸಿಎನ್​​ಜಿ ಕಾರಾಗಿದೆ. ಆಲ್ಟ್ರೋಜ್​ ಕಾರು ಆರು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಎಕ್ಸ್ಇ, ಎಕ್ಸ್ಎಂ+, ಎಕ್ಸ್ಎಂ + (ಎಸ್), ಎಕ್ಸ್​ಜಡ್​, ಎಕ್ಸ್ಝಡ್ + (ಎಸ್), ಮತ್ತು ಎಕ್ಸ್ಝಡ್ + ಒ (ಎಸ್) ಎಂಬ ವೇರಿಯೆಂಟ್​​ಗಳಲ್ಲಿ ಸಿಗುತ್ತಿವೆ. ಒಪೆರಾ ಬ್ಲೂ, ಡೌನ್​ಟೌನ್​ ರೆಡ್, ಆರ್ಕೇಡ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಟಾಟಾ ಮೋಟಾರ್ಸ್ ಈ ಹಿಂದೆ ಆಲ್ಟ್ರೋಜ್ ಐಸಿಎನ್​​ಜಿ ಕಾರನ್ನು 21,000 ರೂಪಾಯಿ ಟೋಕನ್​ ಕೊಟ್ಟು ಬುಕಿಂಗ್​ ಮಾಡಬಹುದು ಎಂದು ಘೋಷಿಸಿತ್ತು. ಇದೀಗ ಅದರ ದರಪಟ್ಟಿಯನ್ನು ಪ್ರಕಟಿಸಿದೆ. 2020ರ ಜನವರಿಯಲ್ಲಿ ಆಲ್ಟ್ರೋಜ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಅಲ್ಲಿಂದ ಅದು ಯಶಸ್ಸಿನ ಹಾದಿಯಲ್ಲೇ ಸಾಗುತ್ತಿತ್ತು. ಇದೀಗ ಆಲ್ಟ್ರೋಜ್ ಐಸಿಎನ್​​ಜಿಯನ್ನು ಪರಿಚಯಿಸುವ ಮೂಲಕ ತನ್ನ ಗ್ರಾಹಕರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಆಲ್ಟ್ರೋಜ್​ ಜತೆ ಹೋಲಿಕೆ ಮಾಡುವುದಾದರೆ ಬಾಹ್ಯ ವಿನ್ಯಾಸವು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. 7.0-ಇಂಚಿನ ಟಚ್ ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆ್ಯಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆ,, ಆಟೋ ಕ್ಲೈಮೆಟ್​ ಕಂಟ್ರೋಲ್​ ಮತ್ತಿತರ ಫೀಚರ್​ಗಳನ್ನು ಹೊಂದಿದೆ . 16ಇಂಚಿನ ಅಲಾಯ್ ವೀಲ್​​ಗಳು ಈ ಕಾರಿನಲ್ಲಿವೆ. ಆಲ್ಟ್ರೋಜ್ ಐಸಿಎನ್​​ಜಿ ಆರು ಏರ್ ಬ್ಯಾಗ್ ಗಳು, ಎಬಿಎಸ್ ವಿತ್ ಇಬಿಡಿ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್​​​ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್​​ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್​​ಚಂದ್ರ ಮಾತನಾಡಿ, ಆರ್ಥಿಕ ಮತ್ತು ಪರಿಸರ ಸ್ನೇಹಿ ಚಾಲನೆಯ ಉದ್ದೇಶದಿಂದ ಗ್ರಾಹಕರು ಪರ್ಯಾಯ ಇಂಧನ ಆಯ್ಕೆಗಳನ್ನು ಬಯಸುತ್ತಿದ್ದಾರೆ. ಸಿಎನ್​​​ಜಿ ಇಂಧನದ ವ್ಯಾಪಕ ಲಭ್ಯತೆಯಿಂದಾಗಿ ಆ ಕಡೆಗೂ ಜನರು ಗಮನ ಹರಿಸುತ್ತಿದ್ದಾರೆ. ಆದರೆ, ಸಿಎನ್​​ಜಿಯನ್ನು ಆಯ್ಕೆ ಮಾಡಿಕೊಂಡರೆ ಬೂಟ್​ ಸ್ಪೇಸ್​ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬೂಟ್​ ಸ್ಪೇಸ್​ ಕಡಿಮೆಯಾಗದಂತೆ ಸುಧಾರಿತ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದೇವೆ. 2022ರ ಜನವರಿಯಲ್ಲಿ ಟಿಯಾಗೊ ಮತ್ತು ಟಿಗೋರ್​ನಲ್ಲಿ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡೆವು. ಅದೇ ದಿಕ್ಕಿನಲ್ಲಿ ಆಲ್ಟ್ರೋಜ್​ ಕೂಡ ಮಾರುಕಟ್ಟೆಗೆ ಇಳಿದಿದೆ ಎಂಬುದಾಗಿ ಹೇಳಿದರು.

ಇದನ್ನೂ ಓದಿ : Altroz CNG : ಟಾಟಾ ಮೋಟಾರ್ಸ್​​ನ ಆಲ್ಟ್ರೋಜ್​ ಸಿಎನ್​ಜಿ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು

ಆಲ್ಟ್ರೋಜ್ ಐಸಿಎನ್​​ಜಿಯಲ್ಲಿ ಮೈಕ್ರೊ ಸ್ವಿಚ್ ಅಳವಡಿಸಲಾಗಿದ್ದು ಇಂಧನ ತುಂಬಿಸುವ ಸಮಯದಲ್ಲಿ ಕಾರು ಎಂಜಿನ್ ಆಫ್​ ಆಗುತ್ತದೆ. ಇದು ಅಪಾಯಕಾರಿ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳುತ್ತದೆ. ಅದೇ ರೀತಿ ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್ ಸಿಸ್ಟಮ್ ಕೂಡ ಸೇರಿಸಲಾಗಿದೆ. ಇದು ಅಪಘಾತ ಸಂಭವಿಸಿದ ವೇಳೆ ಸಿಎನ್​​ಜಿ ಸೋರಿಕೆಯನ್ನು ತಡೆಯುತ್ತದೆ. ಡಿಕ್ಕಿಯಲ್ಲಿ ಅವಳಿ ಸಿಲಿಂಡರ್​​ಗಳನ್ನು ಇಟ್ಟಿರುವ ಕಾರಣ ಜಾಗದ ಸಮಸ್ಯೆ ಪರಿಹಾರವಾಗಿದೆ. ಲೋಡ್ ಫ್ಲೋರ್ ಅಡಿಯಲ್ಲಿ ವಾಲ್ವ್​​ಗಳು ಹಾಘೂ ಪೈಪ್​​ಗಳನ್ನು ರಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗದೆ.

Exit mobile version