ಆಟೋಮೊಬೈಲ್
Tata Motors : ಆಲ್ಟ್ರೋಜ್ ಐಸಿಎನ್ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್?
ಆಲ್ಟ್ರೋಜ್ ಐಸಿಎನ್ಜಿ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಅತ್ಯಾಧುನಿಕ ಸುರಕ್ಷತಾ ಫೀಚರ್ಗಳನ್ನು ಕೊಡಲಾಗಿದೆ.
ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಸಿಎನ್ಜಿ ಚಾಲಿತ ಪ್ಯಾಸೆಂಜರ್ ಕಾರಉ ಆಲ್ಟ್ರೋಜ್ ಐಸಿಎನ್ಜಿಯ ಬೆಲೆಯನ್ನು ಇತ್ತೀಚೆಗೆ ಘೋಷಿಸಿದೆ. ಆಲ್ಟ್ರೋಜ್ ಐಸಿಎನ್ ಜಿ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.55 ಲಕ್ಷಗಳಿಂದ ಆರಂಭವಾಗಿ ರೂ.10.55 ಲಕ್ಷಗಳ ತನಕ ನಿಗದಿ ಮಾಡಲಾಗಿದೆ. ಆಲ್ಟ್ರೋಜ್ ಐಸಿಎನ್ಜಿ ಕಾರನ್ನು 2023ರ ಆಟೋ ಎಕ್ಸ್ಪೋದಲ್ಲಿ ಬಿಡುಗಡೆ ಅನಾವರಣ ಮಾಡಲಾಗಿತ್ತು. ಇದು ಟಾಟಾ ಮೋಟಾರ್ಸ್ನ ಮೂರನೇ ಸಿಎನ್ಜಿ ಕಾರಾಗಿದೆ. ಆಲ್ಟ್ರೋಜ್ ಕಾರು ಆರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಎಕ್ಸ್ಇ, ಎಕ್ಸ್ಎಂ+, ಎಕ್ಸ್ಎಂ + (ಎಸ್), ಎಕ್ಸ್ಜಡ್, ಎಕ್ಸ್ಝಡ್ + (ಎಸ್), ಮತ್ತು ಎಕ್ಸ್ಝಡ್ + ಒ (ಎಸ್) ಎಂಬ ವೇರಿಯೆಂಟ್ಗಳಲ್ಲಿ ಸಿಗುತ್ತಿವೆ. ಒಪೆರಾ ಬ್ಲೂ, ಡೌನ್ಟೌನ್ ರೆಡ್, ಆರ್ಕೇಡ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
ಟಾಟಾ ಮೋಟಾರ್ಸ್ ಈ ಹಿಂದೆ ಆಲ್ಟ್ರೋಜ್ ಐಸಿಎನ್ಜಿ ಕಾರನ್ನು 21,000 ರೂಪಾಯಿ ಟೋಕನ್ ಕೊಟ್ಟು ಬುಕಿಂಗ್ ಮಾಡಬಹುದು ಎಂದು ಘೋಷಿಸಿತ್ತು. ಇದೀಗ ಅದರ ದರಪಟ್ಟಿಯನ್ನು ಪ್ರಕಟಿಸಿದೆ. 2020ರ ಜನವರಿಯಲ್ಲಿ ಆಲ್ಟ್ರೋಜ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಅಲ್ಲಿಂದ ಅದು ಯಶಸ್ಸಿನ ಹಾದಿಯಲ್ಲೇ ಸಾಗುತ್ತಿತ್ತು. ಇದೀಗ ಆಲ್ಟ್ರೋಜ್ ಐಸಿಎನ್ಜಿಯನ್ನು ಪರಿಚಯಿಸುವ ಮೂಲಕ ತನ್ನ ಗ್ರಾಹಕರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಆಲ್ಟ್ರೋಜ್ ಜತೆ ಹೋಲಿಕೆ ಮಾಡುವುದಾದರೆ ಬಾಹ್ಯ ವಿನ್ಯಾಸವು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. 7.0-ಇಂಚಿನ ಟಚ್ ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆ್ಯಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆ,, ಆಟೋ ಕ್ಲೈಮೆಟ್ ಕಂಟ್ರೋಲ್ ಮತ್ತಿತರ ಫೀಚರ್ಗಳನ್ನು ಹೊಂದಿದೆ . 16ಇಂಚಿನ ಅಲಾಯ್ ವೀಲ್ಗಳು ಈ ಕಾರಿನಲ್ಲಿವೆ. ಆಲ್ಟ್ರೋಜ್ ಐಸಿಎನ್ಜಿ ಆರು ಏರ್ ಬ್ಯಾಗ್ ಗಳು, ಎಬಿಎಸ್ ವಿತ್ ಇಬಿಡಿ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ಚಂದ್ರ ಮಾತನಾಡಿ, ಆರ್ಥಿಕ ಮತ್ತು ಪರಿಸರ ಸ್ನೇಹಿ ಚಾಲನೆಯ ಉದ್ದೇಶದಿಂದ ಗ್ರಾಹಕರು ಪರ್ಯಾಯ ಇಂಧನ ಆಯ್ಕೆಗಳನ್ನು ಬಯಸುತ್ತಿದ್ದಾರೆ. ಸಿಎನ್ಜಿ ಇಂಧನದ ವ್ಯಾಪಕ ಲಭ್ಯತೆಯಿಂದಾಗಿ ಆ ಕಡೆಗೂ ಜನರು ಗಮನ ಹರಿಸುತ್ತಿದ್ದಾರೆ. ಆದರೆ, ಸಿಎನ್ಜಿಯನ್ನು ಆಯ್ಕೆ ಮಾಡಿಕೊಂಡರೆ ಬೂಟ್ ಸ್ಪೇಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬೂಟ್ ಸ್ಪೇಸ್ ಕಡಿಮೆಯಾಗದಂತೆ ಸುಧಾರಿತ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದೇವೆ. 2022ರ ಜನವರಿಯಲ್ಲಿ ಟಿಯಾಗೊ ಮತ್ತು ಟಿಗೋರ್ನಲ್ಲಿ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡೆವು. ಅದೇ ದಿಕ್ಕಿನಲ್ಲಿ ಆಲ್ಟ್ರೋಜ್ ಕೂಡ ಮಾರುಕಟ್ಟೆಗೆ ಇಳಿದಿದೆ ಎಂಬುದಾಗಿ ಹೇಳಿದರು.
ಇದನ್ನೂ ಓದಿ : Altroz CNG : ಟಾಟಾ ಮೋಟಾರ್ಸ್ನ ಆಲ್ಟ್ರೋಜ್ ಸಿಎನ್ಜಿ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು
ಆಲ್ಟ್ರೋಜ್ ಐಸಿಎನ್ಜಿಯಲ್ಲಿ ಮೈಕ್ರೊ ಸ್ವಿಚ್ ಅಳವಡಿಸಲಾಗಿದ್ದು ಇಂಧನ ತುಂಬಿಸುವ ಸಮಯದಲ್ಲಿ ಕಾರು ಎಂಜಿನ್ ಆಫ್ ಆಗುತ್ತದೆ. ಇದು ಅಪಾಯಕಾರಿ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳುತ್ತದೆ. ಅದೇ ರೀತಿ ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್ ಸಿಸ್ಟಮ್ ಕೂಡ ಸೇರಿಸಲಾಗಿದೆ. ಇದು ಅಪಘಾತ ಸಂಭವಿಸಿದ ವೇಳೆ ಸಿಎನ್ಜಿ ಸೋರಿಕೆಯನ್ನು ತಡೆಯುತ್ತದೆ. ಡಿಕ್ಕಿಯಲ್ಲಿ ಅವಳಿ ಸಿಲಿಂಡರ್ಗಳನ್ನು ಇಟ್ಟಿರುವ ಕಾರಣ ಜಾಗದ ಸಮಸ್ಯೆ ಪರಿಹಾರವಾಗಿದೆ. ಲೋಡ್ ಫ್ಲೋರ್ ಅಡಿಯಲ್ಲಿ ವಾಲ್ವ್ಗಳು ಹಾಘೂ ಪೈಪ್ಗಳನ್ನು ರಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗದೆ.
ಆಟೋಮೊಬೈಲ್
Simple One: ಒಂದು ಚಾರ್ಜ್ಗೆ 212 ಕಿ.ಮೀ ಓಡುವ ಸ್ಕೂಟರ್ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?
ಸಿಂಪಲ್ ಒನ್ ಸ್ಕೂಟರ್ ಭಾರತದಲ್ಲಿ ಮಾರಾಟವಾಗುತ್ತಿರುವ ಇತರ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿದೆ.
ಬೆಂಗಳೂರು: ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಅಂತಿಮವಾಗಿ ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಬಿಡಗಡೆ ಮಾಡಿದು. ಇದು ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯಂತ ದೊಡ್ಡ ಬ್ಯಾಟರಿ ಹೊಂದಿರುವ ಸ್ಕೂಟರ್ ಆಗಿದೆ. ಈ ಸ್ಕೂಟರ್ನ ಬೆಲೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಬೆಂಗಳೂರು) ಎಂದು ಕಂಪನಿಯು ಘೋಷಿಸಿದೆ.
ಸಿಂಪಲ್ ಒನ್ 5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 212 ಕಿ.ಮೀ ದೂರ ಪ್ರಯಾಣ ಮಾಡಬಹುದು. ಬ್ಯಾಟರಿಗಳನ್ನು ಎರಡು ಪ್ಯಾಕ್ಗಳಾಗಿ ವಿಂಗಡಿಸಲಾಗಿದ್ದು, ಒಂದು ಸ್ಥಿರ ಮತ್ತು ಒಂದು ತೆಗೆದಿಡುವ ಆಯ್ಕೆಯನ್ನು ನೀಡಲಾಗಿದೆ. ಈ ಬ್ಯಾಟರಿಗಳು ಮ್ಯಾಗ್ನೆಟ್ ಮೋಟರ್ ಗೆ ಶಕ್ತಿ ನೀಡುತ್ತದೆ. ಮೋಟಾರ್ 8.5 ಕಿಲೋವ್ಯಾಟ್ ಗರಿಷ್ಠ ಶಕ್ತಿ (4.5 ಕಿಲೋವ್ಯಾಟ್ ನಿರಂತರ) ಮತ್ತು 72 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು 2.77 ಸೆಕೆಂಡುಗಳಲ್ಲಿ 0ಯಿಂದ 40 ಕಿ.ಮೀ ವೇಗವನ್ನು ಪಡೆಯುತ್ತದೆ ಹಾಗೂ 105 ಕಿ.ಮೀ ಗರಿಷ್ಠ ವೇಗ ಪಡೆಯಲು ನೆರವಾಗುತ್ತದೆ.
ಪೋರ್ಟಬಲ್ ಮತ್ತು ಹೋಮ್ ಚಾರ್ಜರ್ಗಳನ್ನು ಬಳಸಿಕೊಂಡು 5 ಗಂಟೆ 54 ನಿಮಿಷಗಳಲ್ಲಿ ಬ್ಯಾಟರಿಯನ್ನು 0ಯಿಂದ 80 ಶೇಕಡ ಚಾರ್ಜ್ ಮಾಡಬಹುದು ಎಂದು ಸಿಂಪಲ್ ಎನರ್ಜಿ ಹೇಳಿಕೊಂಡಿದೆ. ಫಾಸ್ಟ್ ಚಾರ್ಜರ್ನೊಂದಿಗೆ ಸ್ಕೂಟರ್ ಅನ್ನು ನಿಮಿಷಕ್ಕೆ 1.5 ಕಿ.ಮೀ ದರದಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಆದರೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇನ್ನೂ ಸಿದ್ಧಪಡಿಸಿಲ್ಲ. ಫಾಸ್ಟ್ ಚಾರ್ಜಿಂಗ್ ನೆಟ್ವರ್ಕ್ ಆಗಸ್ಟ್ ಬಳಿಕದಿಂದ ಕಾರ್ಯಾರಂಭಿಸಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Tata Motors : ಆಲ್ಟ್ರೋಜ್ ಐಸಿಎನ್ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್?
134 ಕೆ.ಜಿ ತೂಕದ ಸಿಂಪಲ್ ಒನ್ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಭಾರವಾದ ಇ-ಸ್ಕೂಟರ್ ಎನಿಸಿಕೊಂಡಿದೆ. (ಉತ್ಪಾದನೆಗೆ ಮೊದಲು ಸಿಂಪಲ್ ಒನ್ ಮಾದರಿಯು 20 ಕೆ.ಜಿ ಕಡಿಮೆಯಿತ್ತು). ಸೀಟ್ ಎತ್ತರ 796 ಎಂಎಂನಷ್ಟಿದೆ. 1,335 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಅಥೆರ್ 450 ಎಕ್ಸ್ ಗಿಂತ 40 ಎಂಎಂ ಉದ್ದವಿದೆ. ಇದು ಟ್ಯೂಬ್ ಆಕಾರದ ಸ್ಟೀಲ್ ಚಾಸಿಸ್ ಅನ್ನು ಹೊಂದಿದ್ದು, ಟೆಲಿಸ್ಕೋಪಿಕ್ ಫೋರ್ಕ್ / ಮೊನೊಶಾಕ್ ಸೆಟ್ಅಪ್ ಮೂಲಕ ಜೋಡಿಸಲಾಗಿದೆ. 90 ಸೆಕ್ಷನ್ ರಬ್ಬರ್ನೊಂದಿಗೆ 12 ಇಂಚಿನ ವೀಲ್ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ ಮುಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 190 ಎಂಎಂ ಡಿಸ್ಕ್ ಬ್ರೇಕ್ಗಳನ್ನು ಅಳವಡಿಸಲಾಗಿದೆ.
ಸಿಂಪಲ್ ಒನ್ ವಿಶೇಷತೆಗಳು
ಸಿಂಪಲ್ ಒನ್ 7 ಇಂಚಿನ ಟಿಎಫ್ಟಿ ಡ್ಯಾಶ್ ಹೊಂದಿದೆ. ಇದಕ್ಕೆ ಬ್ಲೂಟೂತ್ ಮೂಲಕ ಪೋನ್ ಸಂಪರ್ಕ ಸಾಧಿಸಬಹುದು. ನ್ಯಾವಿಗೇಷನ್ ಮತ್ತು ಅದರ ಮೇಲಿನ ಮ್ಯೂಸಿಕ್ ಕಂಟ್ರೋಲ್ ಕೂಡ ಸಾಧ್ಯವಿದೆ. ಓವರ್ ದಿ ಏರ್ (ಒಟಿಎ) ಮೂಲಕ ಸಾಫ್ಟ್ವೇರ್ ಅಪ್ಡೇಟ್ ಮಾಡಬಹುದು. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ನಾಲ್ಕು ರೈಡಿಂಗ್ ಮೋಡ್ಗಳನ್ನು ನೀಡಲಾಗಿದೆ. ಇದು ಆಲ್ ಎಲ್ಇಡಿ ಲೈಟಿಂಗ್ ಮತ್ತು ಬೂಟ್ಲೈಟ್ ಕೂಡ ಸ್ಕೂಟರ್ನಲ್ಲಿದೆ. 30 ಲೀಟರ್ ಬೂಟ್ ಸಾಮರ್ಥ್ಯದ ಮೂಲಕ ಈ ಸೆಗ್ಮೆಂಟ್ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.
ಕಪ್ಪು, ಕೆಂಪು, ನೀಲಿ ಮತ್ತು ಬಿಳಿ ಎಂಬ ನಾಲ್ಕು ಸಿಂಗಲ್ ಟೋನ್ ಬಣ್ಣಗಳಲ್ಲಿ ಸಿಂಪಲ್ ಒನ್ ಲಭ್ಯವಿದೆ. ಅದೇ ರೀತಿ ಕೆಂಪು ಅಲಾಯ್ ಚಕ್ರಗಳು ಮತ್ತು ಹೈಲೈಟ್ಗಳೊಂದಿಗೆ ಬಿಳಿ ಮತ್ತು ಕಪ್ಪು ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿಯೂ ಇದೆ. ಡ್ಯುಯಲ್-ಟೋನ್ ಬಣ್ಣಗಳ ಬೆಲೆಯು ಸಿಂಗಲ್-ಟೋನ್ ಬಣ್ಣಗಳಿಗಿಂತ 5,000 ರೂ.ಗಳಷ್ಟು ಅಧಿಕ.
ಸಿಂಪಲ್ ಒನ್ ಬೆಲೆ, ಪ್ರತಿಸ್ಪರ್ಧಿ ಸ್ಕೂಟರ್ಗಳು
ಸಿಂಪಲ್ ಒನ್ ಸ್ಕೂಟರ್ಗೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ ( ಬೆಂಗಳೂರು ಎಕ್ಸ್ ಶೋರೂಂ) ಬೆಲೆ ನಿಗದಿ ಮಾಡಲಾಗಿದೆ. ಈ ಮೂಲಕವೂ ಭಾರತದ ದುಬಾರಿ ಇ-ಸ್ಕೂಟರ್ ಎನಿಸಿಕೊಂಡಿದೆ. ವೇಗದ 750 ವ್ಯಾಟ್ ಚಾರ್ಜರ್ಗೆ 13,000 ರೂಪಾಯಿ ಪಾವತಿ ಮಾಡಬೇಕು. ಇದು ಸೆಪ್ಟೆಂಬರ್ನಿಂದ ಲಭ್ಯ.
ಓಲಾ ಎಸ್ 1 ಪ್ರೊ, ಏಥರ್ 450 ಎಕ್ಸ್, ಟಿವಿಎಸ್ ಐಕ್ಯೂಬ್ ಎಸ್, ಬಜಾಜ್ ಚೇತಕ್ ಮತ್ತು ವಿಡಾ ವಿ 1 ಪ್ರೊ ಸ್ಕೂಟರ್ಗಳಿಗೆ ಪೈಪೋಟಿ ಒಡ್ಡಲಿದೆ. ಸ್ಕೂಟರ್ನ ವಿತರಣೆ ಜೂನ್ 6 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಶೀಘ್ರದಲ್ಲೇ ಇತರ ನಗರಗಳಲ್ಲಿ ವಿತರಣೆ ಶುರುವಾಗಲಿದೆ. ಮುಂದಿನ 8ರಿಂದ 10 ತಿಂಗಳಲ್ಲಿ ಭಾರತದಲ್ಲಿ ‘140 ರಿಂದ 150’ ಶೋರೂಂಗಳನ್ನು ಸ್ಥಾಪಿಸುವ ಗುರಿಯನ್ನು ಸಿಂಪಲ್ ಒನ್ ಹೊಂದಿದೆ.
ಆಟೋಮೊಬೈಲ್
Electric Bike : ಬೆಂಗಳೂರಿನ ರಸ್ತೆಗಿಳಿದಿದೆ 65,990 ರೂಪಾಯಿಯ ಎಲೆಕ್ಟ್ರಿಕ್ ಬೈಕ್
ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ಇದು ಎಂದು ಕಂಪನಿಯು ಹೇಳಿದೆ.
ಬೆಂಗಳೂರು: ಓಝೋಟೆಕ್ ಕಂಪನಿಯು ‘ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌ಚಾಲಿತ (ಇವಿ) ದ್ವಿಚಕ್ರ ವಾಹನ (Electric Bike) ಬಿಡುಗಡೆ ಮಾಡಿದೆ. 65,990 ರೂ.ನಿಂದ ಬೆಲೆ ಆರಂಭವಾಗಲಿದೆ ಎಂದು ಕಂಪನಿಯು ಹೇಳಿದೆ. ಮೇ 25ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೈಕ್ ಬಿಡುಗಡೆಗೊಂಡಿತು.
ಕಂಪನಿಯ ವೆಬ್‌ಸೈಟ್ ಮತ್ತು ಶೋರೂಂಗಳಲ್ಲಿ ಭೀಮ್ ವಾಹನದ ಮುಂಗಡ ಬುಕಿಂಗ್ ಮೇ25ರಿಂದ ಆರಂಭವಾಗಿದೆ.. ಇತರ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಗಿಂತ ಇದು ಭಿನ್ನ. ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ಹೇಳಿದೆ.
10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಇದರಿಂದಾಗಿ ದೀರ್ಘ ಪ್ರಯಾಣಗಳಿಗೂ ಅನುಕೂಲ. ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಾಂತ್ರಿಕತೆಯ ಸಂಯೋಜನೆ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರೆ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿವೆ.
ಭೀಮ್ ಎಲೆಕ್ಟ್ರಿಕ್ ಬೈಕ್ಗೆ 7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿದ: Karnataka Election: ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಾದ ಇವಿಎಂ ಉಪಯೋಗಿಸಿಲ್ಲ: ಚುನಾವಣಾ ಆಯೋಗ
ಒಜೊಟೆಕ್ನ ಸ್ಥಾಪಕ ಮತ್ತು ಸಿಇಒ ಬರಥಾನ್ ಮಾತನಾಡಿ “ನಾವು ಉತ್ತಮ ಗುಣಮಟ್ಟದ ಎಂಜಿನ್ಗಳು, ಪಂಪ್ಗಳು ಮತ್ತು ಜವಳಿಗಳನ್ನು ತಯಾರಿಸುವ ನಗರವಾದ ಕೊಯಮತ್ತೂರಿನಲ್ಲಿ ನೆಲೆಗೊಂಡಿದ್ದೇವೆ. ಸಾಮಾಜಿಕ ನಾವೀನ್ಯತೆಯನ್ನು ಜಗತ್ತಿಗೆ ತರಲು ಒಜೋಟೆಕ್ ಅನ್ನು ಸ್ಥಾಪಿಸಿದೆವು. 20 ವರ್ಷಗಳ ಅಭಿವೃದ್ಧಿ ಅನುಭವದೊಂದಿಗೆ, ನಿಯಂತ್ರಣ ವ್ಯವಸ್ಥೆಗಳು ಮತ್ತು ಮೋಟರ್ ಗಳ ವಿನ್ಯಾಸ ಮತ್ತು ತಯಾರಿಕೆಯ ಬಗ್ಗೆ ನಮಗೆ ವ್ಯಾಪಕ ಜ್ಞಾನವಿದೆ. ಈ ಜ್ಞಾನದೊಂದಿಗೆ, ನಾವು ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಫ್ಲಿಯೊವನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಬಿಡುಗಡೆ ಮಾಡಿ, 6,000 ಕ್ಕೂ ಹೆಚ್ಚು ಗ್ರಾಹಕರಿಗೆ ಮಾರಾಟ ಮಾಡಿದ್ದೆವು. ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಇವಿ ತಯಾರಕರು ಅನೇಕ ಗ್ರಾಹಕರ ಅಗತ್ಯಗಳನ್ನು ಪೂರೈಸುವುದಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ತಾಂತ್ರಿಕ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುವಾಗ ಪ್ರಮುಖ ಘಟಕಗಳಿಗೆ ಆದ್ಯತೆ ನೀಡುವ ಮಹತ್ವವನ್ನು ನಾವು ಗುರುತಿಸಿದ್ದೇವೆ. ಬ್ಯಾಟರಿ, ಎಂಜಿನ್, ಚಾಸಿಸ್. ಈ ಅಗತ್ಯವನ್ನು ಪೂರೈಸಲು, ಎಲ್ಲಾ ಪ್ರಮುಖ ಘಟಕಗಳನ್ನು ಆಂತರಿಕವಾಗಿ ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಭಾರತದ ಏಕೈಕ ಕಂಪನಿ ನಮ್ಮದು ಎಂದು ಹೇಳಿದರು.
ಬರಥಾನ್ ಅವರು 2002ರಲ್ಲಿ ಸ್ಥಾಪಿಸಿದ ಒಜೋಟೆಕ್ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಪ್ರಸಿದ್ಧ ಕಂಪನಿಯಾಗಿದೆ. ಒಜೋಟೆಕ್ ಫಿಕ್ಸೆಡ್ ಸೆಲ್ಯುಲಾರ್ ಟರ್ಮಿನಲ್ಸ್ (ಎಫ್ಸಿಟಿ) ಮತ್ತು ಕೈಗಾರಿಕಾ ಯಾಂತ್ರೀಕೃತ ಉತ್ಪನ್ನಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ. 150 ನುರಿತ ಉದ್ಯೋಗಿಗಳ ತಂಡ ಮತ್ತು 30,000 ಚದರ ಅಡಿ ಅತ್ಯಾಧುನಿಕ ಸ್ಥಳದೊಂದಿಗೆ, ಒಜೋಟೆಕ್ ನಮ್ಮ ಗ್ರಾಹಕರ ಜೀವನವನ್ನು ಸುಧಾರಿಸುವ ನವೀನ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತದೆ.
ಆಟೋಮೊಬೈಲ್
Elon Musk: ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಆರಂಭಿಸಲು ಸ್ಥಳ ಗುರುತು ಎಂದ ಉದ್ಯಮಿ ಎಲಾನ್ ಮಸ್ಕ್
Elon Musk:ಕಳೆದ ಕೆಲವು ದಿನಗಳಿಂದಲೂ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಫ್ಯಾಕ್ಟರಿ ಆರಂಭಿಸಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ, ಅಮೆರಿಕ: ಭಾರತದಲ್ಲಿ ಟೆಸ್ಲಾ (Tesla) ತನ್ನ ಘಟಕವನ್ನು ಆರಂಭಿಸಲಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಘಟಕವನ್ನು ಆರಂಭಿಸುವ ಸ್ಥಳವನ್ನು ಗುರುತಿಸಲಾಗುವುದು ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಎಲಾನ್ ಮಸ್ಕ್ (Elon Musk) ಅವರು ಹೇಳಿದ್ದಾರೆ.
ವಾಲ್‌ಸ್ಟ್ರೀಟ್ ಜರ್ನಲ್‌ನ ಥೋರಾಲ್ಡ್ ಬಾರ್ಕರ್ ಅವರು ಕಾರ್ಯಕ್ರಮವೊಂದರಲ್ಲಿ, ಟೆಸ್ಲಾ ಫ್ಯಾಕ್ಟರಿ ಆರಂಭಕ್ಕೆ ಭಾರತವು ಆಸಕ್ತಿ ಹೊಂದಿದೆಯೇ ಎಂದು ಎಲಾನ್ ಮಸ್ಕ್ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಸಂಪೂರ್ಣವಾಗಿ ಎಂದು ಉತ್ತರಿಸಿದ್ದಾರೆ.
ಭಾರತದಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿಯನ್ನು ಆರಂಭಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತದ ತಂತ್ರಜ್ಞಾನ ಸಹಾಯಕ ಸಚಿವರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕಳೆದ ವಾರ ರಾಯ್ಟರ್ಸ್ ವರದಿ ಮಾಡಿತ್ತು.
ವಿಶ್ವದ ಅತ್ಯಂತ ಬೆಲೆಬಾಳುವ ವಾಹನ ತಯಾರಕ ಟೆಸ್ಲಾ ತನ್ನ ಜಾಗತಿಕ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ, ಈ ವರ್ಷದ ಆರಂಭದಲ್ಲಿ ಮೆಕ್ಸಿಕೋದಲ್ಲಿ ಗಿಗಾಫ್ಯಾಕ್ಟರಿಯನ್ನು ತೆರೆಯುವುದಾಗಿ ಘೋಷಿಸಿತ್ತು. ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್‌ನ ಸಿಇಒ ಮತ್ತು ಹಲವಾರು ಇತರ ಸಂಸ್ಥೆಗಳ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಮಂಗಳವಾರ ವಿವರಗಳನ್ನು ನೀಡದೆ, ಶಿಕ್ಷಣ ಸಂಸ್ಥೆಯನ್ನು ರಚಿಸುವ ಆಲೋಚನೆಯನ್ನು ತೇಲಿ ಬಿಟ್ಟರು.
ಎಲಾನ್ ಮಸ್ಕ್ ಅವರು ತಮ್ಮ ಕಂಪನಿಗಳ ಉತ್ತರಾಧಿಕಾರಿಯನ್ನು ಗುರುತಿಸಿದ್ದಾರೆ. ಆ ವ್ಯಕ್ತಿಯು ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ ಕಂಪನಿಯನ್ನು ನಡೆಸಬಹುದು ಎಂದು ಅವರು ಹೇಳಿದರು. ನೋಡಿ, ನನಗೆ ಏನಾದರೂ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ, ನನ್ನ ಅಧಿಕಾರ ವಹಿಸಿಕೊಳ್ಳಲು ಇದು ನನ್ನ ಶಿಫಾರಸು ಎಂದು ನಾನು ಮಂಡಳಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?
ಟೆಸ್ಲಾ ಮಂಡಳಿಯ ನಿರ್ದೇಶಕರಾದ ಜೇಮ್ಸ್ ಮುರ್ಡೋಕ್ ಅವರು ಕಳೆದ ವರ್ಷ ನ್ಯಾಯಾಲಯದಲ್ಲಿ ಟ್ವಿಟ್ಟರ್‌ಗೆ ಸಂಬಂಧಿಸಿದಂತೆ ಹೂಡಿಕೆದಾರರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಸಮಯದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರ ಮುಖ್ಯಸ್ಥರಾಗಲು ಸಂಭಾವ್ಯ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ಎಲಾನ್ ಮಸ್ಕ್ ಅವರು ಗುರುತಿಸಿದ್ದಾರೆ ಎಂದು ಸಾಕ್ಷ್ಯ ನುಡಿದಿದ್ದರು. ಇತ್ತೀಚೆಗಷ್ಟೇ ಟ್ವಿಟರ್‌ಗೆ ಸಿಇಒ ಅವರನ್ನು ಘೋಷಿಸಿರುವ ಮಸ್ಕ್ ಈಗ ತಮ್ಮ ಗಮನವನ್ನು ಟೆಸ್ಲಾ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಟೋಮೊಬೈಲ್
ಎಲೆಕ್ಟ್ರಿಕ್ ವಾಹನ ಓಡಿದಂತೆ ಬ್ಯಾಟರಿ ಚಾರ್ಜ್ ಮಾಡಬಲ್ಲ ವಿಶ್ವದ ಮೊದಲ ಶಾಶ್ವತ ‘ವಿದ್ಯುದ್ದಿಕೃತ ರಸ್ತೆ’ ಸ್ವಿಡನ್‌ನಲ್ಲಿ ಸಿದ್ಧ!
electrified road: ವಿದ್ಯುತ್ ಚಾಲಿತ ವಾಹನಗಳು ಸಂಚರಿಸಿದಂತೆ ಬ್ಯಾಟರಿ ಚಾರ್ಜ್ ಮಾಡಬಲ್ಲ ವಿಶ್ವದ ಮೊದಲ ಶಾಶ್ವತ ರಸ್ತೆಯನ್ನು ಸ್ವಿಡನ್ ಲಾಂಚ್ ಮಾಡಲು ಸಿದ್ಧವಾಗಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಯಲ್ಲಿ ಈ ರಸ್ತೆ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆ ಇದೆ.
ನವದೆಹಲಿ: ವಿದ್ಯುತ್ ಚಾಲಿತ ವಾಹನಗಳು ಸಂಚರಿಸಿದಂತೆ, ಬ್ಯಾಟರಿ ಚಾರ್ಜ್ ಮಾಡಬಲ್ಲ ವಿಶ್ವದ ಮೊದಲ ವಿದ್ಯುದ್ದಿಕೃತ ರಸ್ತೆ(Electrified Road)ಯನ್ನು ಲಾಂಚ್ ಮಾಡಲು ಸ್ವೀಡನ್ (sweden) ಸಜ್ಜಾಗಿದೆ. ಭಾರತವು ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಸಾಂಪ್ರದಾಯಿಕ ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ (electric vehicles) ಬಳಕೆಗೆ ಉತ್ತೇಜಿನ ನೀಡುತ್ತಿವೆ. ಈಗ ಸ್ವೀಡನ್ ರೂಪಿಸಿರುವ ರಸ್ತೆ ವ್ಯವಸ್ಥೆಯೇನಾದರೂ ಸಕ್ಸೆಸ್ ಕಂಡರೆ ವಿದ್ಯುತ್ ಚಾಲಿತ ವಾಹನಗಳ ಬಲಕೆಯಲ್ಲಿ ಕ್ರಾಂತಿ ಸಂಭವಿಸಲಿದೆ.
ಲೋಕಾರ್ಪಣೆಗೆ ಸಿದ್ಧವಾಗಿರುವ ಈ ವಿದ್ಯುದ್ದಿಕೃತ ರಸ್ತೆಯು ಸ್ಟಾಕ್‌ಹೋಮ್, ಗೋಥೆನ್‌ಬರ್ಗ್, ಮಾಲ್ಮೋ ಸೇರಿದಂತೆ ಸ್ವೀಡನ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ವಿಶ್ವದ ಮೊದಲ ಶಾಶ್ವತ ವಿದ್ಯುದ್ದಿಕೃತ ರಸ್ತೆ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಮಾಹಿತಿಯನ್ನು ಸ್ವಿಡನ್ ಒದಗಿಸಿಲ್ಲ. ಆದರೆ, ಶೀಘ್ರದಲ್ಲೇ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.
ಇಂಗಾಲ್ ಡೈ ಆಕ್ಸೈಡ್ ಕಡಿಮೆ ಮಾಡುವ ನಿಟ್ಟಿನ ಪ್ರಯತ್ನದ ಭಾಗವಾಗಿ ಸ್ವೀಡನ್, 3000 ಕಿ.ಮೀ. ರಸ್ತೆಯನ್ನು ವಿದ್ಯುದ್ದೀಕರಣ ಮಾಡುತ್ತಿದೆ. ಹಸಿರು ಸಾರಿಗೆ ಸಂಪರ್ಕ ಬಳಕೆಯಲ್ಲಿ ಸ್ವೀಡನ್ ಜಗತ್ತಿನಲ್ಲೇ ಮುಂಚೂಣಿಯಲ್ಲಿದ್ದು, ಲೋಕಾರ್ಪಣೆಗೆ ಸಜ್ಜಾಗಿರುವ ಈ ವಿದ್ಯುದ್ದಿಕೃತ ರಸ್ತೆಯನ್ನು ಸಾಕ್ಷಷ್ಟು ಪರೀಕ್ಷೆಗೆ ಒಳಪಡಿಸಲಾಗಿದೆ.
ಈ ರಸ್ತೆಯಲ್ಲಿ ಭಾರೀ ವಾಹನಗಳ ಚಾರ್ಜ್‌ಗಾಗಿ ಓವರ್ ಎಲೆಕ್ಟ್ರಿಕ್ ಲೈನ್ ಇದ್ದರೆ, ರಸ್ತೆ ಮೇಲ್ಮೈಯ ಒಳಗೆ ಇಂಡಕ್ಷನ್ ಕ್ವಾಯಿಲ್ ಅಳವಡಿಸಲಾಗಿದೆ. ಹಾಗೆಯೇ ಎಲೆಕ್ಟ್ರಿಕ್ ಟ್ರಕ್‌ಗಳಿಗಾಗಿ ಚಾರ್ಜಿಂಗ್ ರೈಲ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಸ್ವೀಡನ್ ಮಾತ್ರ ಈ ರೀತಿಯ ರಸ್ತೆಯನ್ನು ಹೊಂದಿದೆ. ಒಂದು ವೇಳೆ, ಈ ವಿದ್ಯುದ್ದಿಕೃತ ರಸ್ತೆ ಯಶಸ್ವಿಯಾದರೆ, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರಗಳಲ್ಲಿ ಬದಲಾವಣೆಗಳಾಗಲಿವೆ.
ಇದನ್ನೂ ಓದಿ: EV Vehicles : ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಭರ್ಜರಿ ಆಫರ್ ಕೊಟ್ಟ ಯೋಗಿ ನೇತೃತ್ವದ ಯುಪಿ ಸರಕಾರ, ಏನದು?
ಸಾಂಪ್ರದಾಯಿಕ ಇಂಧನ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಜನರು ಬಾರದಿರಲು, ಮೂಲಭೂತ ಸೌಕರ್ಯದ ಕೊರತೆಯೇ ಕಾರಣ. ವಿಶೇಷವಾಗಿ ಬ್ಯಾಟರಿ ಚಾರ್ಜಿಂಗ್ ಸಮಸ್ಯೆದ್ದೇ ದೊಡ್ಡ ಸವಾಲು ಆಗಿದೆ. ಹಾಗಾಗಿ, ಸ್ವೀಡನ್‌ನ ಈ ಕ್ರಾಂತಿಕಾರಿ ಉಪಕ್ರಮವು ಇಡೀ ಜಗತ್ತಿಗೇ ಹೊಸ ದಾರಿಯನ್ನು ತೋರಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.
ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ6 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
Live News9 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ21 hours ago
ರಾಜ್ಯ ಸಚಿವ ಸಂಪುಟ ವಿಸ್ತರಣೆ: ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ 24 ಶಾಸಕರಿಗೆ ಸಚಿವ ಸ್ಥಾನ, ಮತ್ತೆ ಸಿದ್ದು ಮೇಲುಗೈ
-
ಕರ್ನಾಟಕ20 hours ago
RP Ashok: ಇನ್ಸ್ಪೆಕ್ಟರ್ ಆರ್.ಪಿ.ಅಶೋಕ್ಗೆ ಆರ್ಯಭಟ ಪ್ರಶಸ್ತಿ ಪ್ರದಾನ
-
ಕ್ರಿಕೆಟ್21 hours ago
IPL 2023: ಗಿಲ್ ಶತಕದ ಕಮಾಲ್; ಮುಂಬೈಗೆ ಬೃಹತ್ ಮೊತ್ತದ ಗುರಿ
-
ಉತ್ತರ ಕನ್ನಡ19 hours ago
Honnavar News: ಕಾರಿಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ, 30 ಮಂದಿಗೆ ಗಾಯ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ರಾಜ್ಯಾದ್ಯಂತ ಗ್ಯಾರಂಟಿ ಭರವಸೆಯ ಗದ್ದಲ, ಹೊಸ ಸರ್ಕಾರ ಗೊಂದಲ ನಿವಾರಿಸಲಿ