Site icon Vistara News

Viral News : ನಾರಿ ಮುನಿದರೆ ಮಾರಿ! ಮಹಿಳೆಯ ಕೋಪಕ್ಕೆ ಡ್ಯೂಕ್‌ ಬೈಕ್‌ ಚಿಂದಿ!

Lady Breaking Duke bike

#image_title

ನವ ದೆಹಲಿ: ಕೆಲವೊಂದು ರಸ್ತೆ ಅವಘಡಗಳಿಗೆ (Accident) ಪಾದಚಾರಿಗಳ ಕೊಡುಗೆಯೂ ಸಾಕಷ್ಟಿರುತ್ತದೆ. ನಿರ್ಲಕ್ಷ್ಯದಿಂದ ರಸ್ತೆ ದಾಟುವಾಗ ವೇಗದಲ್ಲಿ ಬರುವ ವಾಹನಗಳು ಚಾಲಕನ ನಿಯಂತ್ರಣಕ್ಕೆ ಸಿಗದೇ ಬೇರೆ ವಾಹನಗಳಿಗೆ ಅವಘಡಕ್ಕೆ ಈಗಾಡುತ್ತವೆ. ಇಂಥ ಪ್ರಕರಣಗಳಲ್ಲಿ ದ್ವಿಚಕ್ರ ವಾಹನವಾದರೆ (Two Wheeler) ಸವಾರನಿಗೊಂದು ಗತಿ ಗ್ಯಾರಂಟಿ. ಆದರೆ, ಪಾದಚಾರಿಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಚಾಲಕರ ಮೇಲೆಯೇ ಕೇಸ್‌ ಬೀಳುತ್ತದೆ. ಮಂಗಳೂರಿನಲ್ಲಿ ಇತ್ತೀಚೆಗೆ ನಿರ್ಲಕ್ಷ್ಯದಿಂದ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬಳನ್ನು ಬಸ್‌ ಚಾಲಕ ಬಚಾವ್‌ ಮಾಡಿದ್ದ ಹೊರತಾಗಿಯೂ ಆತನ ಮೇಲೆ ನಿರ್ಲಕ್ಷ್ಯದ ಕೇಸ್‌ ಜಡಿದಿರುವುದು ಇದಕ್ಕೆ ಸೂಕ್ತ ಉದಾಹರಣೆ. ಮಧ್ಯ ಪ್ರದೇಶದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಅಲ್ಲಿ ಮಹಿಳೆಯೊಬ್ಬಳು ಏಕಾಏಕಿ ರಸ್ತೆ ದಾಟಿದ್ದಳು. ಬೈಕ್‌ ಸವಾರ ಹೇಗೋ ಬಚಾವಾಗಿದ್ದ. ಆದರೆ, ಘಟನೆಯಿಂದ ವ್ಯಗ್ರಗೊಂಡ ಮಹಿಳೆ ಆತ ಬೈಕ್‌ ಅನ್ನೇ ಚಿಂದಿ ಮಾಡಿ ಬಿಸಾಕಿದ್ದಾರೆ. ಇದರ ವಿಡಿಯೊ ವೈರಲ್‌ (Viral News) ಆಗಿದೆ.

ಭೋಪಾಲ್‌ನ ಮೋಟೊ ವ್ಲಾಗ್‌ನ ಯೂಟ್ಯೂಬ್ ಶಾರ್ಟ್ಸ್ ವೀಡಿಯೊದಲ್ಲಿ ಇದನ್ನು ಅಪ್‌ಲೋಡ್‌ ಮಾಡಲಾಗಿದೆ. ಮಹಿಳೆಯೊಬ್ಬರು ರಾಜ್ಯ ಹೆದ್ದಾರಿಯಲ್ಲಿ ಕೆಟಿಎಂ ಆರ್ಸಿ 390 ಅನ್ನು ಚಿಂದಿ ಮಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಆ ಮಹಿಳೆಗೆ ಬೈಕ್‌ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲ ತಪ್ಪಿತ್ತು. ಅಪಘಾತವನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಸವಾರ ಮಹಿಳೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವನು ಹಿಂತಿರುಗಿದ್ದ. ಕೋಪಗೊಂಡ ಮಹಿಳೆ ಕೆಟಿಎಂ ಆರ್ ಸಿ 390 ಬೈಕಿನ ಸೈಡ್ ಫೇರಿಂಗ್ ಮುರಿದು ಹಾಕಿದ್ದಾರೆ.

ಮಹಿಳೆಯ ಹೇಳುವ ಪ್ರಕಾರ, ಅವರು ರಸ್ತೆ ದಾಟುತ್ತಿದ್ದಾಗ ಬಿಡಾಡಿ ದನಗಳು ಅಡ್ಡ ಬಂದಿತ್ತು. ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ವೇಗದಲ್ಲಿ ಬಂದಿದ್ದರು. ಸ್ವಲ್ಪದರಲ್ಲೇ ತಮಗೆ ಗುದ್ದುವುದ ತಪ್ಪಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಸವಾರ ಶಾಂತವಾಗಿ ಪ್ರತಿಕ್ರಿಯಿಸಿದ್ದ. ಆದರೆ, ಮಹಿಳೆ ವಾಗ್ವಾದ ಮಾಡಲು ಆರಂಭಿಸಿದ್ದರು. ಬಳಿಕ ಆಕ್ರೋಶದಲ್ಲಿ ಬೈಕ್‌ನ ಸೈಡ್ ಫೇರಿಂಗ್ ಅನ್ನು ಹಾನಿಗೊಳಿಸಿದ್ದಾರೆ. ಸವಾರ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದರು, ಇದು ಡಿಕ್ಕಿಗೆ ಕಾರಣವಾಗಬಹುದಾಗಿತು. ನಾನು ಸುಮ್ಮನೇ ಆಸ್ಪತ್ರೆ ಸೇರಬೇಕಾಗಿತ್ತು ಎಂದು ಮಹಿಳೆ ವಾದಿಸುತ್ತಿದ್ದಾರೆ.

ಇದನ್ನೂ ಓದಿ : Video Viral: ಐಸಿಯು ಬೆಡ್ ಮೇಲೆಯೇ ಸಂಗೀತಕ್ಕೆ ಕೈಯಾಡಿಸಿದ ಬಾಲಕ

ಬೈಕ್ ಸವಾರ ಮತ್ತು ಮಹಿಳೆಯ ನಡುವಿನ ವಾಗ್ವಾದ ಇತರ ವಾಹನ ಚಾಲಕರು ಮತ್ತು ನಾಗರಿಕರ ಗಮನವನ್ನು ಸೆಳೆದಿತ್ತು. ವಾಗ್ವಾದಕ್ಕೆ ಸಾಕ್ಷಿಯಾದ ವ್ಯಕ್ತಿಯೊಬ್ಬರು ಚೆನ್ನಾಗಿ ದಬಾಯಿಸಿದ್ದರು. ಅವರ ಬೆಂಬಲದಿಂದ ಪ್ರೇರಣೆಗೊಂಡ ಮಹಿಳೆ ತಮ್ಮ ಧ್ವನಿಯನ್ನು ಮತ್ತಷ್ಟು ಹೆಚ್ಚಿಸಿದರು ಹಾಗೂ ಸವಾರನ ಮೇಲಿನ ಕೂಗಾಟ ಹೆಚ್ಚಿಸಿದರು.

ಯಾರು ತಪ್ಪು ಮಾಡಿದರು ಅಥವಾ ಪರಿಸ್ಥಿತಿಯನ್ನು ಹೇಗೆ ಪರಿಹರಿಸಲಾಯಿತು ಎಂಬುದನ್ನು ವೀಡಿಯೊದಲ್ಲಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಸವಾರನ ಮೋಟಾರ್‌ ಸೈಕಲ್‌ಗೆ ಹಾನಿ ಮಾಡಲು ಮಹಿಳೆ ನೀಡಿದ ಕಾರಣ ಏನು ಎಂಬುದು ಸ್ಪಷ್ಟವಾಗಿದೆ.

ಎಲ್ಲರ ಜವಾಬ್ದಾರಿ

ವಾಹನಗಳು ಹೆಚ್ಚಿರುವ ಹೆದ್ದಾರಿಗಳಲ್ಲಿ ರಸ್ತೆ ದಾಟುವುದು ಅಪಾಯಕಾರಿ. ಇಂಥ ಕಡೆ ಪಾದಚಾರಿಗಳು ಎಚ್ಚರಿಕೆ ವಹಿಸಲೇಬೇಕು. ವಾಹನ ಸವಾರರು ಕೂಡು ಜನನಿಬಿಡ ಪ್ರದೇಶಗಳಲ್ಲಿ ವಾಹವನ್ನು ವೇಗವಾಗಿ ಓಡಿಸಬಾರದು. ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವುದು ವಾಹನ ಚಾಲಕರ ಜವಾಬ್ದಾರಿಯಾಗಿದೆ.

ಹೆದ್ದಾರಿಗಳು ಮತ್ತು ಬೀದಿಗಳಿಗೆ ಭಾರತವು ವಿಭಿನ್ನ ಕಾನೂನುಗಳನ್ನು ಹೊಂದಿಲ್ಲವಾದರೂ, ಪ್ರತಿಯೊಂದಕ್ಕೂ ಪ್ರತ್ಯೇಕ ನಿಯಮಗಳಿವೆ. ಗೊತ್ತುಪಡಿಸಿದ ಜೀಬ್ರಾ ಕ್ರಾಸಿಂಗ್ ಹೊರತುಪಡಿಸಿ ಎಲ್ಲಿಯಾದರೂ ರಸ್ತೆ ಅಥವಾ ರಸ್ತೆಯನ್ನು ದಾಟುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಭಾರತದಲ್ಲಿ ಪಾದಚಾರಿಗಳು ರಸ್ತೆ ದಾಟುವ ವೇಳೆ ತಮ್ಮ ಸುರಕ್ಷತೆ ಕಡೆಗಣಿಸುತ್ತಾರೆ.

Exit mobile version