Site icon Vistara News

Ather 450 Apex : ಭಾರತದ ಅತ್ಯಂತ ವೇಗದ ಇವಿ ಸ್ಕೂಟರ್​ ಬಿಡುಗಡೆ

Ather ‘Apex’

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಏಥರ್ ಎನರ್ಜಿ ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ 450 ಅಪೆಕ್ಸ್ (Ather 450 Apex) ಬಿಡುಗಡೆ ಮಾಡಿದೆ. ಕಂಪನಿಯು ಕಳೆದ ತಿಂಗಳು ಈ ಸ್ಕೂಟರ್ ಗಾಗಿ ಬುಕಿಂಗ್ ಆರಂಭಿಸಿತ್ತು. 2,500 ರೂ.ಗಳ ಟೋಕನ್ ಮೊತ್ತದೊಂದಿಗೆ ಸ್ಕೂಟರ್ ಬುಕ್ ಮಾಡಬಹುದಾಗಿ್ತು. ಇದೀಗ ಸ್ಕೂಟರ್​​ ವಿತರಣೆಯು ಮಾರ್ಚ್ 2024 ರಲ್ಲಿ ಪ್ರಾರಂಭವಾಗಲಿದೆ. ಇದು ಭಾರತದ ಅತ್ಯಂತ ವೇಗದ ಸ್ಕೂಟರ್​ ಎಂದು ಕಂಪನಿಯು ಹೇಳಿದೆ. ಕೇವಲ ಕೇವಲ 2.9 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಪಡೆಯುವ ಮೊದಲ ಸ್ಕೂಟರ್​ ಎನ್ನಲಾಗಿದೆ.

ಏಥರ್​ 450 ಅಪೆಕ್ಸ್ ಸ್ಕೂಟರ್ ಹಿಂದಿನ ಏಥರ್ 450ಎಕ್ಸ್ ಸ್ಕೂಟರ್ ಗೆ ಹೋಲಿಸಿದರೆ ಹಲವಾರು ಅಪ್​ಡೇಟ್​ಗಳನ್ನು ಪಡೆದುಕೊಂಡಿದೆ. ಇದು ಹೆಚ್ಚು ಶಕ್ತಿಶಾಲಿ 7.0 ಕಿಲೋವ್ಯಾಟ್ / 26 ಎನ್ಎಂ ಮೋಟರ್ ಅನ್ನು ಹೊಂದಿದೆ. ಈ ಮೋಟರ್​​ ಗರಿಷ್ಠ 100 ಕಿ.ಮೀ ವೇಗವನ್ನು ಮೀರಿ ಹೋಗಲು ಅನುವು ಮಾಡಿಕೊಡುತ್ತದೆ. ಹಿಂದಿನ 450 ಸ್ಕೂಟರ್​ನ ಎಕ್ಸ್ ಟಾಪ್ ಸ್ಪೀಡ್ ಅನ್ನು ಗಂಟೆಗೆ 90 ಕಿ.ಮೀ. ನಿಗದಿ ಮಾಡಲಾಗಿತ್ತು. ಕೇವಲ 2.9 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪುತ್ತಿತ್ತು.

ಫ್ಲ್ಯಾಗ್ ಶಿಪ್ ಸ್ಕೂಟರ್ 450 ಎಕ್ಸ್ ನಂತೆಯೇ 3.7 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆದುಕೊಂಡಿದೆ. ಆದರೆ ಒಂದು ಬಾರಿ ಚಾರ್ಜ್ ಮಾಡಿದರೆ 157 ಕಿ.ಮೀ ವ್ಯಾಪ್ತಿಯನ್ನು ಸಾಗುತ್ತದೆ. ಇದು ಹೊಸ ‘ವಾರ್ಪ್ +’ ಮೋಡ್ ಸೇರಿದಂತೆ ಐದು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಇದು 75 ಕಿ.ಮೀ ವೇಗವನ್ನು ಒಟ್ಟು ರೇಂಜ್​ ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಆರಾಮವಾಗಿ ಪಡೆಯುತ್ತದೆ. ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ ‘ಮ್ಯಾಜಿಕ್ ಟ್ವಿಸ್ಟ್’, ಪ್ರತಿ ಬಾರಿ ಥ್ರೋಟಲ್ ಬಿಡುಗಡೆ ಮಾಡಿದಾಗ ಬ್ರೇಕ್ ಬಳಸದೆ ಸ್ಕೂಟರ್ ನಿಧಾನಗೊಳ್ಳುತ್ತದೆ.

ಅಥೆರ್ 450 ಅಪೆಕ್ಸ್ ಸ್ಕೂಟರ್ ಇಂಡಿಯಂ ಬ್ಲೂ ಬಣ್ಣದಲ್ಲಿ ಲಭ್ಯವಿದೆ. ಇದು ಪಾರದರ್ಶಕ ಸೈಡ್ ಪ್ಯಾನೆಲ್ ಗಳನ್ನು ಹೊಂದಿದೆ. 450 ಎಕ್ಸ್ ಗೆ ಒದಗಿಸಲಾದ 3 ವರ್ಷ / 30,000 ಕಿ.ಮೀ ವ್ಯಾಪ್ತಿಗೆ ಹೋಲಿಸಿದರೆ ಇದು 5 ವರ್ಷ / 60,000 ಕಿ.ಮೀ ಬ್ಯಾಟರಿ ವಾರಂಟಿ ನೀಡಲಾಗಿದೆ. ಈ ಬದಲಾವಣೆಗಳನ್ನು ಹೊರತುಪಡಿಸಿ, ಸ್ಕೂಟರ್ ಹೆಚ್ಚಾಗಿ ಒಂದೇ ವಿನ್ಯಾಸ ಹೊಂದಿದೆ. ಒಂದೇ ರೀತಿಯ ವೈಶಿಷ್ಟ್ಯಗಳು ಮತ್ತು ಹಾರ್ಡ್ ವೇರ್ ನೊಂದಿಗೆ ಮಾರುಕಟ್ಟೆಗೆ ಇಳಿದಿದೆ.

ಇದನ್ನೂ ಓದಿ : Maruti Suzuki Jimny : ಈ ರೀತಿಯ ಜನರಿಗೆ ಮಹೀಂದ್ರಾ ಥಾರ್​ಗಿಂತ ಮಾರುತಿ ಜಿಮ್ನಿಯೇ ಬೆಸ್ಟ್​​

ಏಥರ್‌ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಅವರು ಮಾತನಾಡಿ, ‘ಏಥರ್‌ನ 10 ವರ್ಷಗಳ ಪಯಣವನ್ನು ಸ್ಮರಿಸಲು ಮತ್ತು ವಿನ್ಯಾಸ, ಕಾರ್ಯಕ್ಷಮತೆ ಹಾಗೂ ನಾವೀನ್ಯತೆಯ ವ್ಯಾಪ್ತಿಯನ್ನು ವಿಸ್ತರಿಸಲು ಈ ಸ್ಕೂಟರ್ ಬಿಡುಗಡೆ ಮಾಡಿದ್ದೇವೆ. ‘450 ಅಪೆಕ್ಸ್’ ಆ ಪ್ರಯತ್ನದ ಗರಿಷ್ಠ ಫಲಿತಾಂಶವಾಗಿದೆ. ‘ಅಪೆಕ್ಸ್​​ ಏಥರ್‌ ತಯಾರಿಸುತ್ತಿರುವ ಅತ್ಯಂತ ರೋಮಾಂಚಕಾರಿ ಸ್ಕೂಟರ್. ವಿನ್ಯಾಸದ ವಿಶಿಷ್ಟ ಭಾಷೆ, ಶ್ರೀಮಂತ ಸ್ಯಾಟಿನ್ ಬಣ್ಣಗಳು ಮತ್ತು ಪಾರದರ್ಶಕ ಫಲಕವು ‘450 ಅಪೆಕ್ಸ್’ ಅನ್ನು ರಸ್ತೆಯ ಮೇಲಿನ ಅತ್ಯಂತ ವಿಶಿಷ್ಟವಾಗಿ ಬಿಂಬಿಸಲಿದೆ ಎಂದು ಹೇಳಿದ್ದಾರೆ.

Exit mobile version