Site icon Vistara News

Ather Rizta : ದೊಡ್ಡ ಸ್ಟೋರೇಜ್​, ಕಡಿಮೆ ಬೆಲೆ; ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಹೊಸ ಅಥೆರ್​ ರಿಶ್ತಾ

Ather Rizta

ಬೆಂಗಳೂರು: ಭಾರತದ ಜನಪ್ರಿಯ ಇವಿ ಸ್ಕೂಟರ್ ಉತ್ಪಾದನಾ ಕಂಪನಿ ಅಥೆರ್​ ಎನರ್ಜಿ ತನ್ನ ಬಹುನಿರೀಕ್ಷಿತ ಅಥೆರ್ ರಿಶ್ತಾ ಸ್ಕೂಟರ್ (Ather Rizta)​ ಅನ್ನು ಅಂತಿಮವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಬೆಲೆಯು 1.10 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 1.45 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ತನಕ ಸಾಗುತ್ತದೆ. ರಿಶ್ತಾ ಸ್ಕೂಟರ್​ ಈ ಹಿಂದಿನ ಅಥೆಲ್​ ಸ್ಪೋರ್ಟಿ 450 ಶ್ರೇಣಿಗಿಂತ ಹೆಚ್ಚು ಪ್ರಾಯೋಗಿಕ ಹಾಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ವಿಭಿನ್ನ ಫೀಚರ್​ಗಳೊಂದಿಗೆ ರಸ್ತೆಗಿಳಿಸಲಾಗಿದ್ದು. ಲಗೇಜ್​ ಸ್ಪೇಸ್ ಅನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಬೆಂಗಳೂರಿನಲ್ಲಿ ನಡೆದ ಅಥೆರ್ ಕಮ್ಯುನಿಟಿ ಡೇಯಲ್ಲಿ ಬೃಹತ್​ ಅಭಿಮಾನಿಗಳ ಸಮ್ಮುಖದಲ್ಲಿ ಈ ವಾಹನಗಳನ್ನು ಸ್ಕೂಟರ್​ಗಳನ್ನು ಪರಿಚಯಿಸಲಾಗಿದೆ.

ಅಥೆರ್​ ರಿಶ್ತಾ ಹೊಸ ವಿನ್ಯಾಸದೊಂದಿಗೆ ಬಿಡುಗಡೆಗೊಂಡಿದೆ. ಹಿಂದಿನ 450 ಸರಣಿಯಲ್ಲಿರುವ ತೀಕ್ಷ್ಣ ವಿನ್ಯಾಸಕ್ಕೆ ಹೋಲಿಸಿದರೆ ರಿಶ್ತಾ ಬಾಕ್ಸಿ ಲುಕ್ ಹೊಂದಿದೆ. ಎಲ್ಇಡಿ ಹೆಡ್ ಲೈಟ್ ಇಂಟಿಗ್ರೇಟೆಡ್ ಇಂಡಿಕೇಟರ್ ಗಳೊಂದಿಗೆ ಬಹುತೇಕ ಆಯತಾಕಾರದಂತೆ ಗೋಚರಿಸುತ್ತದೆ. ಇದು ತನ್ನ ಬ್ರಾಂಡ್​ ನಿಕಟ ಪ್ರತಿಸ್ಪರ್ಧಿಯಾದ ಟಿವಿಎಸ್ ಐಕ್ಯೂಬ್ ಗೆ ಸಮಾನವಾಗಿರುವ ವಿನ್ಯಾಸ ಹೊಂದಿದೆ. ಪ್ರಮುಖವಾಗಿ ಇದರ ಸೀಟ್​ ಹೆಚ್ಚು ಅಗಲವಾಗಿದ್ದು. 450 ಸೀರಿಸ್​ಗಿಂತ ಹೆಚ್ಚು ಆರಾಮದಾಯಕವಾಗಿದೆ. ಇಬ್ಬರಿಗೆ ಆರಾಮವಾಗಿ ಕುಳಿತುಕೊಳ್ಳುವಂತೆ ನಿರ್ಮಿಸಲಾಗಿದೆ.

ಫ್ರೇಮ್​ ಮರುನಿರ್ಮಾಣ

ರಿಶ್ತಾಗಾಗಿ ಏಥರ್ ಸಂಸ್ಥೆಯು ಸ್ಕೂಟರ್​ನ ಫ್ರೇಮ್ ಅನ್ನೇ ತಗ್ಗಿಸಿದೆ. ಹಿಂದಿನ 450ಗಿಂತ ಕಡಿಮೆ ಎತ್ತರದ ಹಾಗೂ ಭಿನ್ನವಾಗಿರುವ ಫ್ರೇಮ್​ ನೀಡಲಾಗಿದೆ. ಹಿಂಭಾಗವನ್ನು ಹಾಗೂ ಸೀಟ್​ ಅಗಲ ಮಾಡಲು ಫ್ರೇಮ್​ ಮರುನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಸ್ಕೂಟರ್ ಪ್ರಯಾಣಿಕ ಸ್ನೇಹಿ ಅನಿಸಿಕೊಂಡಿದೆ. ಈ ಫ್ರೇಮ್​ ​ ನಿಧಾನವಾಗಿ ಸಾಗುವಾಗ ಹೆಚ್ಚು ಬ್ಯಾಲೆನ್ಸ್​ ಪಡೆಯಲು ನೆರವಾಗಿದೆ.

119 ಕೆಜಿ ತೂಕವನ್ನು ಹೊಂದಿರುವ ರಿಜ್ಟಾ ಟಿವಿಎಸ್ ಐಕ್ಯೂಬ್ ನಷ್ಟೇ ಭಾರ ಹೊಂದಿದೆ. ಇದುರ 450 ಎಕ್ಸ್​ಗಿಂತ 8 ಕೆ.ಜಿ. ಹೆಚ್ಚು ತೂಕ ಹೊಂದಿದೆ. ಇದು 780 ಎಂಎಂ ಸೀಟ್ ಎತ್ತರವನ್ನು ಹೊಂದಿದೆ ಮತ್ತು ಅದರ ಹೊರತಾಗಿಯೂ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ.

ಎರಡು ವೇರಿಯೆಂಟ್​ಗಳಲ್ಲಿ ಲಭ್ಯ

ರಿಶ್ತಾವನ್ನು ಎಸ್ ಮತ್ತು ಝಡ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲನೆಯದು 2.9 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಮತ್ತು ಎರಡನೆಯದು 3.7 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯವನ್ನು ಪಡೆಯುತ್ತದೆ. 2.9 ಕಿಲೋವ್ಯಾಟ್ ಪ್ಯಾಕ್ ಹೊಂದಿರುವ ರಿಸ್ತಾ ಐಡಿಸಿ 123 ಕಿ.ಮೀ ಮತ್ತು ಅಥೆರ್ 105 ಕಿ.ಮೀ ಟ್ರೂರೇಂಜ್​ ನೀಡಲಿದೆ. 3.7 ಕಿಲೋವ್ಯಾಟ್ ಘಟಕವು 160 ಕಿ.ಮೀ ಮತ್ತು 125 ಕಿ.ಮೀ ರೇಂಜ್ ಹೊಂದಿದೆ. ಎರಡೂ ಪ್ಯಾಕ್ ಗಳು ಐಪಿ 67 ಪ್ರಮಾಣೀಕೃತಗೊಂಡಿದೆ. ರಿಶ್ತಾ 400 ಎಂಎಂ ವಾಟರ್ ವಾಡಿಂಗ್ ಸಾಮರ್ಥ್ಯ ಹೊಂದಿದೆ. ಎರಡೂ ರೂಪಾಂತರಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 80 ಕಿ.ಮೀ.

ಭರ್ಜರಿ ಸ್ಟೋರೇಜ್​

ಅಂಡರ್ ಸೀಟ್ ಸ್ಟೋರೇಜ್ ಸ್ಪೇಸ್ 34 ಲೀಟರ್ ನೀಡಲಾಗಿದೆ. ಸಣ್ಣ ಪುಟ್ಟ ವಸ್ತುಗಳನ್ನು ಇಡಲು ಅಥೆರ್ ಸೀಟಿನ ಕೆಳಗೆ ಮತ್ತೊಂದು ಪಾಕೆಟ್ ಸ್ಪೇಸ್​ ಕೂಡ ನೀಡಿದೆ.

ರಿಜ್ಟಾದ ಅಕ್ಸೆಸೊರಿ ಸಾಫ್ಟ್ ‘ಫ್ರಂಕ್’ (ಮುಂಬದಿಯ ಸ್ಟೋರೇಜ್​ ಸ್ಪೇಸ್) 22 ಲೀಟರ್ ಸಾಮರ್ಥ್ಯವನ್ನು ಹೊಂದಿದೆ/ ಅಂದರೆ ಅಥೆರ್ ಸ್ಕೂಟರ್​​ನ ಒಟ್ಟು ಸ್ಟೋರೇಜ್​ ಸ್ಪೇಸ್​ 56 ಲೀಟರ್ ಆಗಿದೆ. ಅಥೆರ್ ಆರ್ಗನೈಸರ್ ಎಂಬ ಅಕ್ಸೆ ಸರಿಯನ್ನೂ ನೀಡುತ್ತದೆ. ಇದು ಅಂಡರ್ ಸೀಟ್ ಸ್ಟೋರೇಜ್ ಪ್ರದೇಶದಲ್ಲಿ ಸಂಗ್ರಹಿಸಲಾದ ನಿಮ್ಮ ವಸ್ತುಗಳಿಗೆ ಕ್ಯಾರಿ ಬ್ಯಾಗ್ ಕೆಲಸ ಮಾಡುತ್ತದೆ. ಅಂಡರ್ ಸೀಟ್ ಮಲ್ಟಿ-ಪರ್ಪಸ್ ಚಾರ್ಜರ್ ಅನ್ನು ಡಿವೈಸ್​ಗಳಿ ಚಾರ್ಜ್ ಮಾಡಲು ಬಳಸಬಹುದು.

ಸ್ಕಿಡ್ ಕಂಟ್ರೋಲ್​ ಫೀಚರ್​

ರಸ್ತೆಯಲ್ಲಿ ಸ್ಕೂಟರ್​ಗಳು ಸ್ಕಿಡ್ ಆಗುವುದು ಸಾಮಾನ್ಯ. ಆದರೆ ರಿಶ್ತಾದಲ್ಲಿ ಅದಕ್ಕೂ ಪರಿಹಾರ ನೀಡಲಾಗಿದೆ. ರಿಶ್ತಾ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮಾರುಕಟ್ಟೆಗೆ ಬಂದಿದೆ. ಇದು ಯಮಹಾ ಏರೋಕ್ಸ್ 155 ಬೈಕಿನಂತೆಯೇ ವ್ಹೀಲ್ ಸ್ಪೀಡ್ ಎನೇಬಲ್ಡ್ ಉತ್ಪಾದನೆಯಾಗಿದೆ. ಅಥೆರ್ ನ ಹೊಸ ಉತ್ಪನ್ನಗಳು ಒಟ್ಟು 7 ಬಣ್ಣಗಳಲ್ಲಿ ಲಭ್ಯವಿದೆ.

ಎರಡು ರೈಡ್ ಮೋಡ್​

ರಿಶ್ತಾ ಎರಡು ರೈಡಿಂಗ್ ಮೋಡ್ ಗಳನ್ನು ಪಡೆದುಕೊಂಡಿದೆ. ಜಿಪ್ ಮತ್ತು ಸ್ಮಾರ್ಟ್ ಇಕೋ – ಮೊದಲನೆಯದು ಅತ್ಯುತ್ತಮ ಫರ್ಫಾರ್ಮೆನ್ಸ್​ ನೀಡುವ ಮೋಡ್ . ಎರಡನೆಯದು ನಿಮಗೆ ಗರಿಷ್ಠ ರೇಂಜ್​ ನೀಡುತ್ತದೆ.. ಈ ಮೋಡ್ ಗಳ ಜೊತೆಗೆ, ರಿವರ್ಸ್, ಹಿಲ್-ಹೋಲ್ಡ್ ಮತ್ತು ಮ್ಯಾಜಿಕ್ ಟ್ವಿಸ್ಟ್ ನಂತಹ ಫೀಚರ್​ಗಳನ್ನೂ ಸೇರಿಸಲಾಗಿದೆ.

ವೇರಿಯೆಂಟ್​ಗಲು ಮತ್ತು ಬುಕಿಂಗ್ ವಿವರಗಳು

ಅಥೆರ್ ರಿಶ್ತಾದ ಆರಂಭಿಕ ಬೆಲೆಗಳು ಎಸ್ ಗೆ ರೂ.1.10 ಲಕ್ಷ (ಎಕ್ಸ್ ಶೋರೂಂ), 2.9 ಕಿಲೋವ್ಯಾಟ್ ಝಡ್ ಗೆ ರೂ.1.25 ಲಕ್ಷ ಮತ್ತು ಝಡ್ 3.7 ಕಿಲೋವ್ಯಾಟ್ ಗೆ ರೂ.1.45 ಲಕ್ಷ ರೂಪಾಯಿ. ಝಡ್ ರೂಪಾಂತರಗಳು ಬ್ಯಾಕ್ ರೆಸ್ಟ್ ಅನ್ನು ಸ್ಟ್ಯಾಂಡರ್ಡ್ ಫಿಟ್ ಮೆಂಟ್ ಆಗಿ ಪಡೆಯುತ್ತವೆ ಮತ್ತು 7 ಬಣ್ಣಗಳಲ್ಲಿ ಲಭ್ಯವಿದೆ. ಆದರೆ ಎಸ್ ನಲ್ಲಿ ಇದು ಆಯ್ಕೆಯಾಗಿದೆ. ಇದು ಕೇವಲ 3 ಬಣ್ಣಗಳಲ್ಲಿ ಬರುತ್ತದೆ. ಎಲ್ಲಾ ಅಧಿಕೃತ ಅಥೆರ್ ಡೀಲರ್ ಶಿಪ್ ಗಳಲ್ಲಿ ಬುಕಿಂಗ್ ತೆರೆದಿದ್ದು, ಡೆಲಿವರಿ ಜುಲೈನಲ್ಲಿ ಪ್ರಾರಂಭವಾಗಲಿವೆ.

ಅಥೆರ್ ಸ್ಟಾಕ್ಸ್​ ಅಪ್​ಡೇಟ್​

ನಮ್ಮ ಮೊದಲ ಸ್ಕೂಟರ್ ಬಿಡುಗಡೆಯಾದಾಗಿನಿಂದ ಏಥರ್ ಸ್ಟಾಕ್ ನಮ್ಮ ಉತ್ಪನ್ನ ಕಾರ್ಯತಂತ್ರದ ಅವಿಭಾಜ್ಯ ಅಂಗವಾಗಿದ್ದು, ಇದು ನಮ್ಮ ಉತ್ಪನ್ನದ ಅನುಭವವನ್ನು ನಿರಂತರವಾಗಿ ಅಪ್​ಗ್ರೇಡ್​ ಮಾಡಲು ನೆರವು ನೀಡುತ್ತದೆ. ವಾಟ್ಸಾಪ್ ಆನ್ ಡ್ಯಾಶ್ಬೋರ್ಡ್ ನಂತಹ ಹೊಸ ವೈಶಿಷ್ಟ್ಯಗಳೊಂದಿಗೆ, ಲೈವ್ ಲೊಕೇಷನ್ ಶೇರಿಂಗ್ ಮತ್ತು ವಾಯ್ಸ್ ಕಮ್ಯಾಂಡ್ ಮೂಲಕ ಏಥರ್ ಸ್ಟಾಕ್ 6.0 ರೈಡರ್ ಸುರಕ್ಷತೆ, ಅನುಕೂಲತೆ ಮತ್ತು ಸಂಪರ್ಕಕ್ಕೆ ಪ್ರಮುಖವಾದ ಅಪ್ಗ್ರೇಡ್ ಅನ್ನು ತರುತ್ತದೆ,” ಎಂದು ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಸ್ವಪ್ನಿಲ್ ಜೈನ್ ಹೇಳಿದ್ದಾರೆ.

Exit mobile version