ಜುಲೈ ತಿಂಗಳು ಕೆಲವು ಕಾರು ಕಂಪನಿಗಳಿಗೆ (car) ಹಬ್ಬವನ್ನು ಉಂಟು (Best Selling Cars) ಮಾಡಿದರೆ, ಇನ್ನು ಕೆಲವು ಕಾರು ತಯಾರಕರಿಗೆ ಸಣ್ಣ ಹೊಡೆತವನ್ನೂ ನೀಡಿದೆ. ಇದರಲ್ಲಿ ಮುಖ್ಯವಾಗಿ ಮಾರುತಿ ಸುಜುಕಿ (Maruti Suzuki), ಹುಂಡೈ (Hyundai) ಮತ್ತು ಟಾಟಾ ಮೋಟಾರ್ಸ್‌ನ (Tata Motors) ಕಾರುಗಳು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿತ್ತು. ಹಿನ್ನಡೆಯ ಹೊರತಾಗಿಯೂ ಹುಂಡೈ ಜುಲೈ ತಿಂಗಳಲ್ಲಿ ಕಾರು ಮಾರಾಟದಲ್ಲಿ ಕ್ರೆಟಾ (Hyundai Creta) ಟಾಟಾ ಪಂಚ್ (Tata Punch) ಸೇರಿದಂತೆ ಕೆಲವು ಜನಪ್ರಿಯ ಮಾದರಿಗಳಿಗೆ ಸಡ್ಡು ಹೊಡೆದಿದೆ.
ಜುಲೈ 2024ರಲ್ಲಿ ಹೆಚ್ಚು ಮಾರಾಟವಾದ ಹತ್ತು ಪ್ರಮುಖ ಕಾರುಗಳ ವಿವರ ಇಲ್ಲಿದೆ:
ಜುಲೈ ತಿಂಗಳಲ್ಲಿ 17,350 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಹ್ಯುಂಡೈ ಕ್ರೆಟಾ ಮುನ್ನಡೆಯನ್ನು ಕಂಡಿದೆ. 2023ರ ಜುಲೈಗೆ ಹೋಲಿಸಿದರೆ ಶೇ. 23ರಷ್ಟು ಬೇಡಿಕೆ ಹೆಚ್ಚಾಗಿರುವುದಾಗಿ ಕಂಪನಿ ಪ್ರಕಟಿಸಿದೆ. ಅಲ್ಲದೇ ಹೊಸ ಹುಂಡೈ ಕ್ರೆಟಾ ಜನವರಿಯಿಂದ ಈವರೆಗೆ 1 ಲಕ್ಷ ಮಾರಾಟದ ಮೈಲುಗಲ್ಲನ್ನು ತಲುಪಿದೆ. ಈ ವರ್ಷ. ಕ್ರೆಟಾ ಎನ್ ಲೈನ್ ಆವೃತ್ತಿಯಲ್ಲಿಯೂ ಲಭ್ಯವಿದ್ದು, ಸ್ಪೋರ್ಟಿಯರ್ ಆವೃತ್ತಿಯನ್ನು ಬಯಸುವ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಮಾರುತಿ ಸುಜುಕಿ ಸ್ವಿಫ್ಟ್ ನಂ.2
ಕ್ರೆಟಾದ ಬಳಿಕ ಮಾರುತಿ ಸುಜುಕಿ ಸ್ವಿಫ್ಟ್ 16,854 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ. ಶೇ. 6ರಷ್ಟು ಮಾರಾಟ ಕುಸಿತವನ್ನು ಕಂಡಿದೆ. ಸ್ವಿಫ್ಟ್ ಅನಂತರ ವ್ಯಾಗನರ್ ಕಳೆದ ತಿಂಗಳು ಮಾರಾಟ ಕುಸಿತವನ್ನು ದಾಖಲಿಸಿದ ಅನಂತರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 25ರಷ್ಟು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
ಕಳೆದ ತಿಂಗಳ ಬೆಸ್ಟ್-ಸೆಲ್ಲರ್, ಟಾಟಾ ಪಂಚ್ 16,121 ಯುನಿಟ್‌ಗಳ ಮಾರಾಟ ಮತ್ತು ಶೇ. 34ರಷ್ಟು ಬೆಳವಣಿಗೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಂಚ್ ಸೇರಿದಂತೆ ಇನ್ನೂ ಎರಡು ಮಾರುತಿ ಸುಜುಕಿ ವಾಹನಗಳಾದ ಎರ್ಟಿಗಾ ಮತ್ತು ಬ್ರೆಝಾ, ಕ್ರಮವಾಗಿ 15,701 ಯುನಿಟ್ ಮತ್ತು 14,676 ಯುನಿಟ್‌ಗಳನ್ನು ಮಾರಾಟವಾಗಿದೆ. ಎರ್ಟಿಗಾ ಶೇ. 9, ಬ್ರೆಝಾ ಶೇ. 11 ರಷ್ಟು ಮಾರಾಟ ಕುಸಿತವನ್ನು ಅನುಭವಿಸಿದೆ.
ಟಾಟಾ ನೆಕ್ಸಾನ್ ಸ್ಥಾನ ಏನು?:
ಏಳನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಇದ್ದು, ಇದು ಮೊದಲ ಬಾರಿಗೆ ಧನಾತ್ಮಕ ಬೆಳವಣಿಗೆಯನ್ನು ಕಂಡಿದೆ. ಟಾಟಾ ಜುಲೈ 2024 ರಲ್ಲಿ 13,902 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದ್ದು, ಶೇ. 13ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಜುಲೈ 2024ರಲ್ಲಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ಕೆಲವೇ ಕಾರು ತಯಾರಕರಲ್ಲಿ ಮಹೀಂದ್ರಾ ಕೂಡ ಒಂದಾಗಿದೆ. 12,237 ಯುನಿಟ್‌ಗಳ ಮಾರಾಟವನ್ನು ನೋಂದಾಯಿಸಿದ ಸ್ಕಾರ್ಪಿಯೊ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ. ಮಾರುತಿ ಸುಜುಕಿ ಉತ್ಪನ್ನಗಳಾದ ಇಕೋ, ಡಿಜೈರ್ ಎರಡೂ ಮಾರಾಟದಲ್ಲಿ ಕುಸಿತವನ್ನು ಅನುಭವಿಸಿದೆ.
ಇದನ್ನೂ ಓದಿ: Bike Mileage Tips: ಬೈಕ್‌ಗೆ ಟ್ಯೂಬ್, ಟ್ಯೂಬ್ ಲೆಸ್ ಟಯರ್; ಇವೆರಡರಲ್ಲಿ ಯಾವುದು ಬೆಸ್ಟ್?
ಯಾವುದು ಎಷ್ಟು?
ಹುಂಡೈ ಕ್ರೆಟಾ ಈ ಬಾರಿ 17,350ರಷ್ಟು ಮಾರಾಟವಾಗಿದ್ದು, ಕಳೆದ ವರ್ಷ 14,062ರಷ್ಟಾಗಿತ್ತು.
ಮಾರುತಿ ಸುಜುಕಿ ಸ್ವಿಫ್ಟ್ ಈ ಬಾರಿ 16,854, ಕಳೆದ ಬಾರಿ 17,896, ಮಾರುತಿ ಸುಜುಕಿ ವ್ಯಾಗನ್ ಆರ್ ಈ ಬಾರಿ 16,191, ಕಳೆದ ವರ್ಷ 12,970, ಟಾಟಾ ಪಂಚ್ ಈ ಬಾರಿ 16,121, ಕಳೆದ ವರ್ಷ 12,019, ಮಾರುತಿ ಸುಜುಕಿ ಎರ್ಟಿಗಾ ಈ ಬಾರಿ 15,701, ಕಳೆದ ಬಾರಿ 14,352, ಮಾರುತಿ ಸುಜುಕಿ ಬ್ರೆಝಾ ಈ ಬಾರಿ 14,676, ಕಳೆದ ವರ್ಷ 16,543, ಟಾಟಾ ನೆಕ್ಸಾನ್ ಈ ಬಾರಿ 13,902, ಕಳೆದ ವರ್ಷ 12,349, ಮಹೀಂದ್ರ ಸ್ಕಾರ್ಪಿಯೋ ಈ ಬಾರಿ 12,237, ಕಳೆದ ಬಾರಿ 10,522, ಮಾರುತಿ ಸುಜುಕಿ ಇಕೋ ಈ ಬಾರಿ 11,916, ಕಳೆದ ವರ್ಷ 12,037, ಮಾರುತಿ ಸುಜುಕಿ ಡಿಜೈರ್ ಈ ಬಾರಿ 11,647 ಕಳೆದ ವರ್ಷ 13,395ರಷ್ಟು ಮಾರಾಟವನ್ನು ದಾಖಲಿಸಿದೆ.