Site icon Vistara News

Viral News : ಮಳೆ ನೀರು ತುಂಬಿದ್ದ ರಸ್ತೆಯಲ್ಲಿ ಕೆಟ್ಟು ನಿಂತ ಕಾರು, ರಿಪೇರಿಗೆ ಬೇಕಾಯ್ತು 40 ಲಕ್ಷ ರೂಪಾಯಿ!

BMW Car water Logged in Hyderabad

ಬೆಂಗಳೂರು: ಮಾನ್ಸೂನ್ ಮಳೆಗೆ ಭಾರತದ ನಗರಗಳಲ್ಲಿ ರಸ್ತೆ ಮೇಲೆ ನೀರು ತುಂಬಿಕೊಳ್ಳುವುದು ಮಾಮೂಲಿ. ಅಧಿಕಾರಿಗಳು ಪ್ರತಿ ವರ್ಷ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಭರವಸೆ ಕೊಟ್ಟು ಮರೆತುಬಿಡುತ್ತಾರೆ. ಹೀಗಾಗಿ ಸಮಸ್ಯೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಅಂತೆಯೇ ಹೈದರಾಬಾದ್​ನಲ್ಲಿ ಇತ್ತೀಚೆಗೆ ನೀರು ತುಂಬಿದ್ದ ರಸ್ತೆಯಲ್ಲಿ ಸಾಗುತ್ತಿದ್ದ ಬಿಎಂಡಬ್ಲ್ಯು 5 ಸೀರಿಸ್ ಸೆಡಾನ್ ಕಾರು ನೀರು ನುಗ್ಗಿ ಕೆಟ್ಟು ಹೋಗಿತ್ತು. ಕಾರಿನಲ್ಲಿದ್ದ ದಂಪತಿ ಬೇರೆ ವಾಹನದ ಮೂಲಕ ಮನೆಗೆ ತಲುಪಿ ಕಾರನ್ನು ಶೋರೂಮ್​ಗೆ ದುರಸ್ತಿಗೆ ಕಳುಹಿಸಿದ್ದರು. ಆದರೆ ಅವರು ಕಳುಹಿಸಿದ ಬಿಲ್​ ನೋಡಿ ಅವರಿಗೆ ಗಾಬರಿ ಬಿದ್ದಿದ್ದಾರೆ. 40 ಲಕ್ಷ ರೂಪಾಯ ವೆಚ್ಚವಾಗಿದೆ ಎಂದು ಕಂಪನಿ ಬಿಲ್​ ಕಳುಹಿಸಿದೆ.

ಜಿ 30 5-ಸೀರಿಸ್ ಮಾಲೀಕ ಉದಯ್ ಎಂ ತೇಜಾ ಅವರು ತಮ್ಮ ಕಾರು ಹೈದರಾಬಾದ್ ಒಆರ್​ಆರ್​ನ ಸರ್ವಿಸ್ ರಸ್ತೆಯಲ್ಲಿ ಸಿಲುಕಿಕೊಂಡಿದೆ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಪತ್ನಿ ಜತೆ ವೈದ್ಯರ ಬಳಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿ ಸ್ವಲ್ಪ ನೀರು ನಿಂತಿತ್ತು. ಅದರ ಮೇಲೆ ಸಾಗಿದಾಗ ಕಾರು ಹೈಡ್ರೋ ಲಾಕ್ ಆಗಿತ್ತು. ಗರ್ಭಿಣಿ ಪತ್ನಿಯೊಂದಿಗೆ ಟೋಯಿಂಗ್ ಸೇವೆಗಾಗಿ ಕಾರಿನಲ್ಲಿಯೇ ಕುಳಿತು ಕಾದಿದ್ದರು. ಬಳಿಕ ಬೇರೆ ವಾಹನದ ಮೂಲಕ ಅಲ್ಲಿಗೆ ತಲುಪಿದ್ದಾರೆ ಎನ್ನಲಾಗಿದೆ.

12 ಬಿಎಂಡಬ್ಲ್ಯೂ ಕಾರುಗಳು ಮತ್ತು 8 ಮರ್ಸಿಡಿಸ್ ಬೆಂಜ್​​ ಕಾರುಗಳು ಹೈದರಾಬಾದ್​ನಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ಸಿಲುಕಿಕೊಂಡಿವೆ ಎಂದು ಅವರು ಹೇಳಿದ್ದಾರೆ. ರಸ್ತೆಯಲ್ಲಿ ಮಳೆನೀರು ಚರಂಡಿಗಳನ್ನು ಮಾಡಲು ಮರೆತ ಅಧಿಕಾರಿಗಳಿಂದಲೇ ಸಮಸ್ಯೆ ಆಗಿದೆ ಎಂದಿದ್ದಾರೆ ಅವರು. ದೊಡ್ಡ ದೊಡ್ಡ ಡಿವೈಡರ್​​ಗಳನ್ನು ನಿರ್ಮಿಸಿದ ಕಾರಣ ರಸ್ತೆಗಳು ಮುಳುಗುತ್ತವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Viral News : ಬಸ್​ನ ಏಣಿ ಮೇಲೆ ಹತ್ತಿಕೊಂಡು ಗೋವಾದಲ್ಲಿ ಫ್ರೀ ರೈಡ್​ ಮಾಡಿದ ವಿದೇಶಿ ದಂಪತಿ!

ಸರ್ವಿಸ್​ ಸ್ಟೇಷನ್​ನಿಂದ 40 ಲಕ್ಷ ರೂಪಾಯಿಗಳ ಅಂದಾಜು ಬಿಲ್ ನೀಡಲಾಗಿದೆ ಎಂದು ಹೇಳಲಾಗಿದೆ. ಕಾರಿನಲ್ಲಿ ಪ್ರಮುಖ ಘಟಕಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ. ಹೈಡ್ರೊಸ್ಟಾಟಿಕ್ ಲಾಕ್ ದುಬಾರಿ ಎನಿಸಿದೆ. ಏಕೆಂದರೆ ಎಂಜಿನ್ ಅನ್ನು ಸಂಪೂರ್ಣವಾಗಿ ಬೇರ್ಪಡಿಸಬೇಕು ಮತ್ತು ನೀರನ್ನು ಒಣಗಿಸಬೇಕು ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಬಯಸುವ ಕಾರುಗಳು ಭಾರತದ ಮೂಲ ಸೌಕರ್ಯದ ಕೊರತೆಯನ್ನು ಪ್ರತಿನಿಧಿಸುತ್ತದೆ. ಹೆಚ್ಚಿನ ಗ್ರಾಹಕರು ಈಗ ಎಸ್​ಯುವಿ ಮತ್ತು ಗ್ರೌಂಡ್ ಕ್ಲಿಯರೆನ್ಸ್​ ಹೆಚ್ಚಿರುವ ಕಾರುಗಳನ್ನು ಬಯಸುತ್ತಿದ್ದಾರೆ.

ಐಷಾರಾಮಿ ಕಾರುಗಳನ್ನು ಅಂತಹ ಪ್ರವಾಹದ ರಸ್ತೆಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿಲ್ಲ. ಈ ಕಾರುಗಳಲ್ಲಿ ಕಡಿಮೆ ಗ್ರೌಂಡ್ ಕ್ಲಿಯರೆನ್ಸ್​ ಇರುತ್ತವೆ. ಹೀಗಾಗಿಯೇ ಸುಲಭವಾಗಿ ಹೈಡ್ರೋಲಾಕ್ ಆಗುತ್ತವೆ. ಅಲ್ಲದೆ, ಈ ಐಷಾರಾಮಿ ಕಾರುಗಳು ಸಂಕೀರ್ಣ ಎಲೆಕ್ಟ್ರಾನಿಕ್ಸ್ ಅನ್ನು ಹೊಂದಿರುತ್ತವೆ. ಹೈ ಎಂಡ್ ಕಾರುಗಳ ರಿಪೇರಿ ಬಿಲ್ ಗಳು ತುಂಬಾ ದುಬಾರಿಯಾಗಲು ಇದು ಕಾರಣವಾಗಿದೆ.

ಈ ಹಿಂದೆ ಐಷಾರಾಮಿ ಕಾರು ತಯಾರಕರು ತಮ್ಮ ಗ್ರಾಹಕರಿಗೆ ಪ್ರವಾಹದ ಋತುವಿನಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದೇವೆ. ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ಮಾನ್ಸೂನ್ ಆಫರ್​ ಎಂದು ಕರೆಯಲಾಗುತ್ತದೆ. ಈ ವರ್ಷ, ಮಾನ್ಸೂನ್ ಇಡೀ ದೇಶವನ್ನು ನಿರೀಕ್ಷಿತ ಸಮಯಕ್ಕಿಂತ ಮೊದಲೇ ಆವರಿಸಿದೆ, ಇದರಿಂದಾಗಿ ನಗರಗಳಾದ್ಯಂತ ಭಾರಿ ಮಳೆಯಾಗಿದೆ. ಹೀಗಾಗಿ ಐಷಾರಾಮಿ ಕಾರುಗಳು ಸಮಸ್ಯೆಗೆ ಒಳಗಾಗುತ್ತವೆ.

Exit mobile version