Site icon Vistara News

BMW Motorrad: ಐಷಾರಾಮಿ BMW R 1300 GS ಬೈಕ್‌ ಬಿಡುಗಡೆ; ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ವಿವರ

BMW Motorrad

BMW Motorrad

ನವದೆಹಲಿ: ಬೈಕ್‌ಪ್ರಿಯರಿಗೆ ಐಷಾರಾಮಿ ದ್ವಿಚಕ್ರ ವಾಹನ ತಯಾರಕ ಕಂಪನಿ ಬಿಎಂಡಬ್ಲ್ಯು ಮೋಟೊರಾಡ್ (BMW Motorrad) ಗುಡ್‌ನ್ಯೂಸ್‌ ನೀಡಿದೆ. R 1300 ಜಿಎಸ್‌ (R 1300 GS) ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್ ಲೈಟ್ ವೈಟ್, ಟ್ರಿಪಲ್ ಬ್ಲ್ಯಾಕ್‌, ಜಿಎಸ್ ಟ್ರೋಫಿ ಮತ್ತು ಚಾಯ್ಸ್ 719 ಟ್ರಮುಂಟನಾ (Light White, Triple Black, GS Trophy, and Option 719 Tramuntana) ಎಂಬ ನಾಲ್ಕು ಮಾದರಿಗಳಲ್ಲಿ ಲಭ್ಯ. ಈ ಬೈಕ್‌ನ ವಿಶೇಷತೆ, ಒಳಗೊಂಡಿರುವ ಫೀಚರ್‌, ಬೆಲೆ ಮುಂತಾದ ಇಲ್ಲಿದೆ.

ಬೆಲೆ ಎಷ್ಟು?

ಈ R 1300 GS ಬೈಕ್‌ನ ಬೆಲೆ 20.95 ಲಕ್ಷ ರೂ. ಅಂದರೆ ಈ ಹಿಂದಿನ R 1250 GS ಮಾಡಲ್‌ಗಿಂತ ಸುಮಾರು 40 ಸಾವಿರ ರೂ. ಅಧಿಕ. ಇತರ ಐಷಾರಾಮಿ ಬೈಕ್‌ಗಳಾದ ಡುಕಾಟಿ ಮಲ್ಟಿಸ್ಟ್ರಾಡಾ ವಿ4 ಸರಣಿಯ ಬೈಕ್‌ಗೆ 21.48 ಲಕ್ಷ ರೂ.- 31.48 ಲಕ್ಷ ರೂ. ಮತ್ತು ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಸ್ಪೆಷಲ್ ಬೈಕ್‌ಗೆ 24.64 ಲಕ್ಷ ರೂ. ಇದೆ. ಟ್ರಯಂಫ್ ಟೈಗರ್ 1200 ಜಿಟಿ ಪ್ರೊ ಬೈಕ್‌ನ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ 19.19 ಲಕ್ಷ ರೂ. ಸದ್ಯ ಯುವ ಜನತೆಯ ನಿದ್ದೆಗೆಡಿಸಿರುವ R 1300 GS ಬೈಕ್‌ನ ವಿತರಣೆ ಈ ತಿಂಗಳಲ್ಲೇ ನಡೆಯಲಿದ್ದು, ಪ್ರತಿಸ್ಪರ್ಧಿಗಳಿಗೆ ಠಕ್ಕರ್‌ ಕೊಡಲಿದೆ ಎಂದು ತಜ್ಞರು ಊಹಿಸಿದ್ದಾರೆ.

ಎಂಜಿನ್‌ ಸಾಮರ್ಥ್ಯ

ಈ ಹೊಸ ಬಿಎಂಡಬ್ಲ್ಯು R 1300 GS ಬೈಕ್‌ 1,300cc, ಅವಳಿ-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750rpmನಲ್ಲಿ 143 bhp ಮತ್ತು 6,500rpmನಲ್ಲಿ 149 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್‌ನ ತೂಕ 237 ಕೆಜಿ. R 1250 GSಗಿಂತ 12 ಕೆಜಿ ಹಗುರವಾಗಿದೆ. ಜತೆಗೆ 19 ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ.

ಈ ಬೈಕ್‌ನ ಟಾಪ್-ಸ್ಪೆಕ್ 719 ಟ್ರಾಮುಂಟಾನಾ ಮಾಡೆಲ್‌ ಆಕ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಫ್ರಂಟ್ ಕೊಲಿಷನ್ ವಾರ್ನಿಂಗ್ (Active Cruise Control and Front Collision Warning)ನಂತಹ ರಾಡಾರ್-ನೆರವಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಗಮನ ಸೆಳೆಯುವ ಹಸಿರು / ಹಳದಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಆದಾಗ್ಯೂ ಇದು ಅಡಾಪ್ಟಿವ್ ರೈಡ್ ಹೈಟ್ (Adaptive Ride Height -ARH) ವೈಶಿಷ್ಟ್ಯವನ್ನು ಒಳಗೊಂಡಿಲ್ಲ. ಟ್ರಿಪಲ್ ಬ್ಲ್ಯಾಕ್ ಮಾಡೆಲ್‌ನಲ್ಲಿ ಮಾತ್ರ ಎಆರ್‌ಎಚ್‌ ಲಭ್ಯ. ಎಲ್ಲ ಮಾದರಿಗಳು ಕ್ರಾಸ್-ಸ್ಪೋಕ್ಡ್ ಟ್ಯೂಬ್‌ಲೆಸ್ ವ್ಹೀಲ್ ಹೊಂದಿವೆ.

ಇದನ್ನೂ ಓದಿ: Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

R 1300 GSನ ಎಲ್ಲ ಮಾಡೆಲ್‌ಗಳು ಆಕರ್ಷಕ ಕೊಡುಗೆಗಳೊಂದಿಗೆ ಲಭ್ಯ. ಇದರಲ್ಲಿ ಎಲೆಕ್ಟ್ರಾನಿಕ್ ವಿಂಡ್ ಸ್ಕ್ರೀನ್, ಬೈಡಿರೆಕ್ಷನಲ್ ಕ್ವಿಕ್ ಶಿಫ್ಟರ್, ಸೆಂಟರ್ ಸ್ಟ್ಯಾಂಡ್ ಮತ್ತು ಪ್ರೊ ರೈಡಿಂಗ್ ಮೋಡ್‌ಗಳು ಸೇರಿವೆ. ಬೇಸ್ ಲೈಟ್ ವೈಟ್ ಮಾದರಿಯನ್ನು ಹೊರತುಪಡಿಸಿ ಎಲ್ಲ ಮಾಡೆಲ್‌ಗಳು ಟೂರಿಂಗ್ ಪ್ಯಾಕೇಜ್ ಹೊಂದಿವೆ. ಇದರಲ್ಲಿ ಪ್ಯಾನಿಯರ್ ಮೌಂಟ್‌, ಕ್ರೋಮ್ಡ್ ಎಕ್ಸಾಸ್ಟ್ ಹೆಡರ್ ಪೈಪ್, ಅಡಾಪ್ಟಿವ್ ಹೆಡ್ ಲೈಟ್, ನಕಲ್-ಗಾರ್ಡ್ ಎಕ್ಸ್ ಟೆಂಡರ್ ಮತ್ತು ಜಿಪಿಎಸ್ ಡಿವೈಸ್ ಮೌಂಟಿಂಗ್ ಸೇರಿವೆ.

Exit mobile version