Site icon Vistara News

Scorpio N SUV | ನಾಳೆಯಿಂದ ಬುಕಿಂಗ್‌ ಆರಂಭ

ನವ ದೆಹಲಿ: ಕಳೆದ ತಿಂಗಳು ಅನಾವರಣಗೊಂಡಿದ್ದ Mahindra Scorpio N SUV ಕಾರಿನ ಬುಕಿಂಗ್‌ ಶನಿವಾರದಿಂದ (ಜುಲೈ೩೦) ಆರಂಭಗೊಳ್ಳಲಿದೆ. ಈ ಕಾರುಗಳು ಸೆಪ್ಟೆಂಬರ್‌ ೨೬ರಿಂದ ಗ್ರಾಹಕರಿಗೆ ವಿತರಣೆಯಾಗಲಿದೆ. ಹಬ್ಬಗಳ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ಈ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದೆ. ಕಾರಿನ ಬುಕಿಂಗ್‌ ಬುಕಿಂಗ್‌ ಮೊತ್ತ ೨೧೦೦೦ ರೂಪಾಯಿಗಳು ಎಂದು ಕಂಪನಿ ಹೇಳಿದೆ.

ನೂತನ Mahindra Scorpio N SUV ಕಾರಿನ ಆರಂಭಿಕ ಬೆಲೆ ೧೧.೯೯ ಲಕ್ಷ ರೂಪಾಯಿಗಳಾದರೆ, Z8L ಮಾದರಿಯ AWD ವೇರಿಯೆಂಟ್‌ನ ಬೆಲೆ ೨೩.೯೦ ಲಕ್ಷ ರೂಪಾಯಿಗಳು. ಇದು ಎಕ್ಸ್‌ಶೋ ರೂಮ್‌ ಬೆಲೆಯಾಗಿದೆ. ಮಹೀಂದ್ರಾ ಆಂಡ್‌ ಮಹೀಂದ್ರಾ ಡಿಜಿಟಲ್‌ ವೇದಿಕೆಗಳ ಮೂಲಕ ಶನಿವಾರ ಮಧ್ಯಾಹ್ನ ೧೧ ಗಂಟೆಯ ಬಳಿಕ ಬುಕಿಂಗ್‌ ಆರಂಭಿಸಬಹುದು.

ಮೊದಲು ಬುಕ್‌ ಮಾಡಿದವರಿಗೆ ಮೊದಲು ವಿತರಣೆ ಎಂಬ ನಿಯಮದನ್ವಯ ಕಾರನ್ನು ವಿತರಣೆ ಮಾಡಲಾಗುವುದು. ವೇರಿಯೆಂಟ್‌ ಆಧರಿಸಿ ಡೆಲಿವರಿ ದಿನಾಂಕ ನೀಡಲಾಗುತ್ತದೆ ಎಂದೂ ಹೇಳಿದೆ.

ಝಡ್‌೨, ಝಡ್‌೪, ಝಡ್‌೬, ಝಡ್‌೮ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಕಾರುಗಳನ್ನು ಮಾರುಕಟ್ಟೆಗೆ ಇಳಿಸಲಾಗಿದೆ. ನಾಲ್ಕೂ ಆವೃತ್ತಿಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಆಯ್ಕೆಗಳಿವೆ. ಎಲ್ಲ ಕಾರುಗಳಲ್ಲಿ ಆಲ್‌ ವೀಲ್‌ ಡ್ರೈವ್‌ ಆಯ್ಕೆಯಿದೆ. ಹೆಚ್ಚುವರಿಯಾಗಿ ಝಡ್‌೮ಎಲ್‌ ಎಂಬ ಆಲ್‌ ವೀಲ್‌ ಡ್ರೈವ್‌ ಆಯ್ಕೆಯನ್ನೂ ನೀಡಲಾಗಿದೆ. mstallion ಪೆಟ್ರೋಲ್‌ ಎಂಜಿನ್‌ ೨೦೦ಪಿಎಸ್‌ ಪವರ್‌ ಹಾಗೂ ೩೮೦ ಪಿಎಸ್‌ ಟಾರ್ಕ್ಯೂ ಬಿಡುಗಡೆ ಮಾಡಿದರೆ, ಡೀಸಲ್‌ ಎಂಜಿನ್‌ ೧೭೫ ಪಿಎಸ್‌ ಪವರ್‌ ಹಾಗೂ ೪೦೦ ಎನ್‌ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ.

Exit mobile version