ಬೆಂಗಳೂರು: ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಜಾವ 42 FJ ಬೈಕ್ ಅನ್ನು ಭಾರತಾದ್ಯಂತ ಬಿಡುಗಡೆ ಮಾಡಿದೆ. ಬೆಂಗಳೂರಿನ ಇನ್ಪಾಂಟರಿ ರಸ್ತೆಯಲ್ಲಿರುವ Safina Motors ಸಂಸ್ಥೆಗೆ ಕ್ಲಾಸಿಕ್ ಲೆಜೆಂಡ್ಸ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅನುಪಮ್ ತೆರೆಜ ಅಕ್ಟೋಬರ್ 10 ರಂದು ಬಿಡುಗಡೆ ಮಾಡಿದ್ದಾರೆ. ನೂತನ ಬಿ.ಎಸ್.ಎ ಮೋಟರ್ ಸೈಕಲ್ ಅನ್ನು ಕೂಡ ಗ್ರಾಹಕರು ಸಫೀನ್ ಮೋಟರ್ಸ್ ನಿಂದ (BSA motorcycles) ಪಡೆಯಬಹುದಾಗಿದೆ.
Classic legends ಮಾರುಕಟ್ಟೆಗೆ 2018ರಲ್ಲಿ ಲಗ್ಗೆ ಇಟ್ಟಿತ್ತು. ಆನಂದ ಮಹೀಂದ್ರಾ , ಅನುಪಮ್ ತರೇಜ ಹಾಗು ಬೊಮನ್ ಇರಾನಿ ಇದರ ಸಾರಥಿಗಳಾದರು. ಕರ್ನಾಟಕದ ಮೈಸೂರಿನ ಹೆಮ್ಮೆಯ ಐಡಿಯಲ್ ಜಾವ ಸಂಸ್ಥೆಯು 1996 ರಲ್ಲಿ ಸ್ಥಗಿತಗೊಂಡಿತು. ಮತ್ತೆ 2018 ರಿಂದ ಜಾವ ಬಳಗದ ಬೈಕ್‌ಗಳನ್ನು ನೂತನ ಇಂಜಿನ್, ಪ್ಲಾಟ್ಪಾರ್ಮ್ ಮೂಲಕ ಜಾವ ಕ್ಲಾಸಿಕ್, ಜಾವ 42, ಜಾವ ಪೆರಾಕ್ (jawa perak) ಬೈಕ್‌ಗಳನ್ನು ಬಿಡುಗಡೆ ಮಾಡಿತು.
2022 ಯೆಜ್ಡಿ ಬ್ರಾಂಡ್ (Yezdi Brand) ಅನ್ನು ಮತ್ತೆ ಮರು ಬಿಡುಗಡೆ ಮಾಡಿತು. ಈಗ ಜಾವ 42 FJ ಬಿಡುಗಡೆ ಮಾಡಿತು. Fj ಅಂದರೆ Frantisek Janecek(ಜಾವ ಸಂಸ್ಥೆಯ ಜೆಕ್ ರಾಷ್ಟ್ರದಲ್ಲಿ) 1929 ರಲ್ಲಿ ಸಂಸ್ಥಾಪಿಸಿದ್ದರು. ಅವರ ಗೌರವಾರ್ಥವಾಗಿ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಜಾವ 42 FJ ಬೈಕನ್ನು ಭಾರತಾದ್ಯಂತ ಬಿಡುಗಡೆ ಮಾಡಿದೆ. ಬೆಂಗಳೂರಿನ ಇನ್ಪಾಂಟರಿ ರಸ್ತೆಯಲ್ಲಿರುವ Safina Motors ಸಂಸ್ಥೆಗೆ ಕ್ಲಾಸಿಕ್ ಲೆಜೆಂಡ್ಸ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅನುಪಮ್ ತೆರೆಜ ಅಕ್ಟೋಬರ್ 10 ರಂದು ಬಿಡುಗಡೆ ಮಾಡಿದರು.
Safina Motors ಹಾಗೂ ಜಾವ-ಯಜೆಡಿ ಬೈಕ್‌ಗಳ ಸಂಬಂಧ
ಸಫೀನ್ ಮೋಟರ್ಸ್ (Safina Motors) ಕರ್ನಾಟಕದಲ್ಲಿ ಮೊಟ್ಡ ಮೊದಲ ಬಾರಿಗೆ ಜಾವ ಯೆಜಡಿ ಬೈಕ್‌ಗಳನ್ನು ಮಾರಾಟ ಮಾಡಲು ಶುರು ಮಾಡಿದರು . ಹಾಜಿ ಸೇಠ್ ಆಗ ಬೆಂಗಳೂರಿನಲ್ಲಿ ಸಫೀನ್ ಮೋಟರ್ಸ್ (Safina Motors) ಅನ್ನು ಸ್ಥಾಪಿಸಿದರು. ಈಗ ನೂತನ ಮಾದರಿಯ ಜಾವ/ಯೆಜಡಿ/ಬಿ.ಎಸ್.ಎ ಬೈಕ್‌ಗಳನ್ನು ಹಾಜಿ ಸೇಠ್‌ರ ಮಗ ಫಿರೋಜ್ ಸೇಠ್ ಅದೇ Safina Motors ಅನ್ನು 2018ರಲ್ಲಿ ಮತ್ತೆ ಪ್ರಾರಂಭಿಸಿದರು. ನೂತನ ಬಿ.ಎಸ್.ಎ ಮೋಟರ್ ಸೈಕಲ್ ಅನ್ನು ಕೂಡ ಗ್ರಾಹಕರು ಸಫೀನ್ ಮೋಟರ್ಸ್ ನಿಂದ ಪಡೆಯಬಹುದಾಗಿದೆ.
ಅನುಪಮ್ ತೆರೇಜ ಹಾಗೂ ಫಿರೋಜ್ ಸೇಠ್ ತಮಗೂ ಹಾಗು ಸಫೀನ ಮೋಟಾರ್ ಬಗೆಗಿನ ನೆನಪುಗಳನ್ನು ಮೆಲುಕು ಹಾಕಿದ್ದರು. ಅದ್ಭುತ ತಂತ್ರಜ್ಞಾನ, ಇಂಜಿನ್, ಡಿಸೈನ್, ರೆಟ್ರೊಲುಕ್ ಗಳ ಪವರ್ಪ್ಪುಲ್ ಬೈಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ಸ ಸಮರ್ಪಿಸುತ್ತಿದೆ. ನಮ್ಮ ಭಾರತದ ಹೆಮ್ಮೆಯ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗುತ್ತಿದೆ. ಜಾವ/ಯೆಜಡಿ/ಬಿ.ಎಸ.ಎ ಮೋಟಾರು ಸೈಕಲ್‌ಗಳು ಇತಿಹಾಸದ ಪುಟಗಳಿಗೆ ಸೇರಿದ್ದವು. ಅದರ ಪುನರ್ ನಿರ್ಮಾಣ ಮಾಡಿ ಅದನ್ನು ಮತ್ತೆ ಹಿಂದಿನ ಗತವೈಭವಕ್ಕೆ ತಂದ ಕೀರ್ತಿ ಆನಂದ ಮಹೀಂದ್ರಾ, ಅನುಪಮ್ ತೆರೇಜ ಹಾಗು ಬೊಮನ್ ಇರಾನಿ ಇವರುಗಳಿಗೆ ಸಲ್ಲುತ್ತದೆ. ಬೈಕ್ ಪ್ರಿಯರು ತಮ್ಮ ಕನಸಿನ ಬ್ರಾಂಡ್‌ಗಳನ್ನು ಇಂದು ಸಾಕ್ಷಾತ್ಕರಿಸುತಿದ್ದಾರೆ.