Site icon Vistara News

Car Care Tips : ಕಾಸು ಉಳಿಸಿ ಎಂಜಿನ್ ಬೆಳಗಿಸಿ, ಕಾರಿನ ಎಂಜಿನ್ ನೀವೇ ​ಕ್ಲೀನ್ ಮಾಡಲು ಇಲ್ಲಿವೆ ಟಿಪ್ಸ್​​​

car care tips

ಬೆಂಗಳೂರು: ತಮ್ಮ ಕಾರುಗಳನ್ನು ಆಗಾಗ ತೊಳೆಯುವ ಮಂದಿ ಅದರ ಎಂಜಿನ್ (Car Engine) ಸ್ವಚ್ಛತೆ ಬಗ್ಗೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಎಂಜಿನ್ ಎಲ್ಲರಿಗೂ ಕಾಣುವುದಿಲ್ಲ ಎಂಬುದು ಮೊದಲ ಕಾರಣವಾದರೆ ಕ್ಲೀನ್ ಮಾಡಲು ಕಷ್ಟ ಎಂಬುದು ಎರಡನೇ ಸಂಗತಿ. ಆದರೆ, ಗ್ರೀಸ್​, ಆಯಿಲ್​ಗಳ ಸಣ್ಣ ಪ್ರಮಾಣದ ಸೋರಿಕೆ ಹಾಗೂ ಇನ್ನಿತ್ಯಾದಿ ಕಾರಣಕ್ಕೆ ಎಂಜಿನ್ ಮೇಲೆ ಹೆಚ್ಚು ಕೊಳೆ ಇರುತ್ತದೆ. ಅಂಕಿಅಂಶಗಳ ಪ್ರಕಾರ, 60% ಕ್ಕೂ ಹೆಚ್ಚು ಕಾರು ಮಾಲೀಕರಿಗೆ ಎಂಜಿನ್ ಸ್ವಚ್ಛ ಮಾಡುವುದೇ ಸವಾಲು. ಅದಕ್ಕಾಗಿ ವರ್ಷಕ್ಕೊಮ್ಮೆ ಸರ್ವಿಸ್​ಗೆ ಬಿಡುವಾಗ ಮಾತ್ರ ಎಂಜಿನ್ ಸ್ವಚ್ಛ ಮಾಡುತ್ತಾರೆ. ಹಾಗೆ ಮಾಡುವುದು ಸೂಕ್ತ ಮಾರ್ಗವಲ್ಲ. ಅದಕ್ಕಾಗಿ ಎಂಜಿನ್ ಶುಚಿ ಮಾಡುವಂಥ ಕೆಲವೊಂದು ಉಪಾಯಗಳನ್ನು ಈ ಕೆಳಗೆ (Car Care Tips) ನೀಡಲಾಗಿದೆ. ಅದನ್ನು ಪಾಲಿಸಿದರೆ ನಿಮ್ಮ ಕಾರಿನ ಎಂಜಿನ್ ಸದಾ ಬೆಳಗುತ್ತಿರುತ್ತದೆ.

ಕಾರ್ ಎಂಜಿನ್ ಅನ್ನು ಸ್ವಚ್ಛಗೊಳಿಸುವುದು ಹೇಗೆ

ಕಾರಿನ ಎಂಜಿನ್ ಕ್ಲೀನಿಂಗ್ ಸವಾಲಿನಿಂದ ಕೂಡಿರುವುದಕ್ಕೆ ಅದರ ಮೇಲೆ ಅಂಟಿರುವ ಗ್ರೀಸ್ ಹಾಗೂ ಇನ್ನಿತರ ವಸ್ತುಗಳ ಹಾಗೂ ಜಟಿಲ ಪ್ರದೇಶವೇ ಕಾರಣ. ಅನೇಕರು ಈ ಕಾರ್ಯವನ್ನು ವೃತ್ತಿಪರರಿಗೆ ವಹಿಸುತ್ತಾರೆ. ಆದರೆ ಹಣವನ್ನು ಉಳಿಸಬೇಕಾದರೆ ನೀವೇ ಅದನ್ನು ತೊಳೆಯಬಹುದು. ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಎಂಜಿನ್ ಸ್ವಚ್ಛಗೊಳಿಸುವುದರಿಂದ ಅದು ತುಕ್ಕು ಸೇರಿದಂತೆ ನಾನಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಎಂಜಿನ್ ತೊಳೆಯಲು ಹೊರಡುವ ಮೊದಲು ಅಗತ್ಯ ವಸ್ತುಗಳು ಮತ್ತು ಪರಿಕರಗಳನ್ನು ತರಬೇಕು. ಮುಖ್ಯ ಉತ್ಪನ್ನಗಳಲ್ಲಿ ಒಂದು ಡಿಗ್ರೀಸರ್. ಇವುಗಳು ಎಂಜಿನ್ ಮೇಲೆ ಕುಳಿತಿರುವ ಗ್ರೀಸ್​ನಂಥ ಜಿಡ್ಡಿನಂಶವನ್ನು ಬೇಗ ಕರಗಿಸುತ್ತದೆ. ಇಂಥ ಕೆಮಿಕಲ್​ಗಲು ಹೊಂದಿರುವ ಘಾಟು ವಾಸನೆಯಿಂದಾಗಿ ಅವುಗಳನ್ನು ಹೊರಾಂಗಣದಲ್ಲಿ ಬಳಸಬೇಕು. ಲಿಕ್ವಿಡ್​ ಮಾದರಿಯ ಡಿಗ್ರೀಸರ್​ಗಳನ್ನು ಬಳಸಲು ಅನುಕೂಲ ಮಾಡಬಹುದು.

ಇನ್ನೇನು ಬೇಕು?

ಸ್ವಚ್ಛಗೊಳಿಸುವ ದಿನ ಮಳೆ ಅಥವಾ ಹೆಚ್ಚು ಚಳಿ ಇಲ್ಲದಿದ್ದರೆ ಉತ್ತಮ. ಇದರಿಂದ ಎಂಜಿನ್ ಮತ್ತು ಅದರ ಘಟಕಗಳು ತೊಳೆದ ಸ್ವಲ್ಪ ಹೊತ್ತಿನಲ್ಲಿಯೇ ಒಣಗುತ್ತವೆ. ಇನ್ನು ಎಂಜಿನ್ ಆಫ್​ ಮಾಡಿದ ಬಳಿಕ ಸಾಕಷ್ಟು ಹೊತ್ತು ಕಾಯುವುದು ಉತ್ತಮ. ತೊಳೆಯುವ ಸಂದರ್ಭದಲ್ಲಿ ಉಂಟಾಗಬಹುದಾದ ಸುಟ್ಟ ಗಾಯಗಳನ್ನು ತಪ್ಪಿಸಬಹುದು.

ಮೊದಲಿಗೆ ಎಂಜಿನ್ ಕಂಪಾರ್ಟ್​ಮೆಂಟ್​ ಅನ್ನು ಓಪನ್ ಮಾಡಬೇಕು. ಮೇಲೆ ನಿಂತಿರುವ ಎಲೆಗಳು ಮತ್ತು ಕಡ್ಡಿಗಳನ್ನು ನಿಧಾನವಾಗಿ ತೆಗೆಯಬೇಕು. ವ್ಯಾಕ್ಯೂಮ್ ಕ್ಲೀನರ್ ಅಥವಾ ಏರ್ ಕಂಪ್ರೆಸರ್ ಅನ್ನು ಅದಕ್ಕಾಗಿ ಬಳಸಬಹುದು. ಈ ವೇಳೆ ಬ್ಯಾಟರಿ, ಇಗ್ನಿಷನ್ ಕೇಬಲ್ ಗಳು ಮತ್ತು ಎಂಜಿನ್ ಕಂಟ್ರೋಲ್ ಯುನಿಟ್ ನಂತಹ ಎಲ್ಲಾ ಎಲೆಕ್ಟ್ರಾನಿಕ್ ಘಟಕಗಳನ್ನು ಸೀಲ್​ ಮಾಡಿರಬೇಕು. ಇದಕ್ಕೆ ನೀರು ಬೀಳದಂತೆ ನೋಡಿಕೊಳ್ಳಬೇಕು. ಏರ್ ಫಿಲ್ಟರ್​ಗಳನ್ನು ತೆಗೆದುಬಿಡಿ. ಸರಿಯಾದ ಟೂಲ್ಸ್​ ಇದ್ದರೆ ಬ್ಯಾಟರಿ ಸಂಪರ್ಕವನ್ನೂ ತಪ್ಪಿಸಿ. ಇದರಿಂದ ಶಾರ್ಟ್​ ಸರ್ಕೀಟ್​ನಂಥ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು.

ಡಿಗ್ರೀಸರ್ ನ ಹಾಕಿ

ಎಂಜಿನ್​ ಮೇಲ್ಮೈ ಕೊಳೆಯನ್ನು ತೆಗೆಯಲು ಒತ್ತಡದೊಂದಿಗೆ ನೀರು ಹಾಯಿಸಿ. ಮಾರುಕಟ್ಟೆಯಲ್ಲಿ ಬಗೆಬಗೆಯ ಕಂಪ್ರೆಸರ್​​ಗಳಿವೆ. ಎಂಜಿನ್ ಗೆ ಡಿಗ್ರೀಸರ್ ಹಚ್ಚಿ, ವಿಶೇಷವಾಗಿ ಕವರ್ ಗಳು ಮತ್ತು ಪೈಪ್ ಗಳಂತಹ ಭಾರಿ ಕೊಳೆಯಿರುವ ಜಾಗಗಳಿಗೆ ಪರಿಣಾಮಕಾರಿಯಾಗಿ ಹಚ್ಚಿ. ಸ್ವಚ್ಛಗೊಳಿಸಲು ಸಿಂಥೆಟಿಕ್ ಬ್ರಿಸ್ಟಲ್ ಬ್ರಷ್ ಬಳಸಿ. ಅಗತ್ಯವಿದ್ದರೆ, ಡಿಗ್ರೀಸರ್ ಅಪ್ಲಿಕೇಶನ್ ಮತ್ತೆ ಮತ್ತೆ ಹಾಕಿ.

ಡಿಗ್ರೀಸರ್ ಅನ್ನು ತೆಗೆದುಹಾಕಲು ಎಂಜಿನ್ ಅನ್ನು ಮತ್ತೆ ನೀರಿನಿಂದ ತೊಳೆಯಿರಿ. ಹಾನಿಯನ್ನು ತಪ್ಪಿಸಲು ಎಲ್ಲ ಗ್ರೀಸರ್​ಗಳನ್ನು ಚೆನ್ನಾಗಿ ತೊಳೆಯಿರು.

ಒಣಗಿಸಿ

ಎಂಜಿನ್ ಮೇಲೆ ನೀರಿನ ಕಲೆಗಳು ನಿಲ್ಲುವುದನ್ನು ತಪ್ಪಿಸಲು ಚೆನ್ನಾಗಿ ಒಣಗಿಸಿ. ನೀವು ಅದನ್ನು ಗಾಳಿಯಲ್ಲಿ ಒಣಗಲು ಬಿಡಬಹುದು ಅಥವಾ ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಉಜ್ಜಬಹುದು. ಮೂಲೆಗಳನ್ನು ಮತ್ತು ತಲುಪಲು ಕಷ್ಟಕರವಾದ ಪ್ರದೇಶಗಳನ್ನು ಒಣಗಿಸಲು ಬಟ್ಟೆ ಬಳಸಿ. ಸಂಪೂರ್ಣವಾಗಿ ಒಣಗಿದ ನಂತರ, ಪ್ಲಾಸ್ಟಿಕ್ ಕವರ್​ ತೆಗೆದು ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಮರುಸಂಪರ್ಕಿಸಿ.

ಎಂಜಿನ್ ತೊಳೆಯುವುದರಿಂದ ಆಗುವ ಪ್ರಯೋಜಗಳು

ಎಂಜಿನ್​ ಮೇಲೆ ಕೊಳೆ ಕಡಿಯಿದ್ದಾಗ ಅದಕ್ಕೆ ಚೆನ್ನಾಗಿ ಗಾಳಿ ಬಡಿಯುತ್ತದೆ. ಅದರಿಂದ ಕಾರಿನ ಎಂಜಿನ್ ಅತಿಯಾಗಿ ಬಿಸಿಯಾಗುವ ಸಾಧ್ಯತೆ ಕಡಿಮೆ. ಎಂಜಿನ್ ನಿರ್ವಹಣೆ ಸುಲಭವಾಗುತ್ತದೆ. ಸೋರಿಕೆಗಳು, ಬಿರುಕುಗಳು ಮತ್ತು ಇತರ ಹಾನಿಯು ಚೆನ್ನಾಗಿ ಕಾಣಿಸುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಎಂಜಿನ್ ಭಾಗಗಳು ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: Shilpa Shetty : 3.5 ಕೋಟಿ ರೂಪಾಯಿ ಬೆಲೆಯ ರೇಂಜ್​ ರೋವರ್​​ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ; ವಿಡಿಯೊ ನೋಡಿ

ಡಿಗ್ರೀಸರ್​ಗಳು ಯಾವುದೆಲ್ಲ?

ಆರ್ಗಾನಿಕ್​ ಡಿಗ್ರೀಸರ್​ಗಳು ಮಾರುಕಟ್ಟೆಯಲ್ಲಿವೆ. ಈ ಡಿಗ್ರೀಸರ್ ಗಳು ಕಡಿಮೆ ಬೆಲೆಗೆ ದೊರೆಯುತ್ತವೆ. ಡಾಂಬರು ಕಲೆಗಳು, ಯಂತ್ರ ತೈಲ, ಮ್ಯಾಸ್ಟಿಕ್, ನೈಸರ್ಗಿಕ ರಬ್ಬರ್ ಮತ್ತು ಸಿಲಿಕಾನ್ ಅನ್ನು ಇದರಿಂದ ತೆಗೆಯಬಹುದು. ಇದು ಬೆಂಕಿ ಅಪಾಯಕಾರಿ, ಆದ್ದರಿಂದ ಅವುಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ.

ಎರಡನೆಯದದ್ದು ಲಿಕ್ವಿಡ್​ ಆಧಾರಿತ ಡಿಗ್ರೀಸರ್. ಇದು ಅತ್ಯುತ್ತಮ ಆಂಟಿ-ಸ್ಟ್ಯಾಟಿಕ್ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ತುಕ್ಕು ಸೇರಿದಂತೆ ಕಠಿಣ ಕಲೆಗಳನ್ನು ತೆಗೆದುಹಾಕಬಹುದು. ಅವು ಸುರಕ್ಷಿತ ಮತ್ತು ನಿರುಪದ್ರವಿ. ಪ್ಲಾಸ್ಟಿಕ್ ಮೇಲ್ಮೈಗೂ ಹಾಕಬಹುದು. ಫೆರಸ್ ಮತ್ತು ಕಬ್ಬಿಣೇತರ ಲೋಹಗಳನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ.
ಮೂರನೇ ಮಾದರಿಯ ಸಾವಯವ ದ್ರಾವಕಗಳ ಎಮಲ್ಷನ್​ಗಳು ಅತ್ಯುತ್ತಮ ನುಗ್ಗುವ ಸಾಮರ್ಥ್ಯ ಹೊಂದಿವೆ. ತೈಲ ಕಣಗಳೊಂದಿಗೆ ಮೇಲ್ಮೈ ಮರು-ಮಾಲಿನ್ಯ ತಡೆಯುತ್ತವೆ. ಮಸಿ ಮತ್ತು ಆಕ್ಸೈಡ್​ ಫಿಲ್ಮ್ ಗಳನ್ನು ತೆಗೆದುಹಾಕುವಲ್ಲಿ ಅವು ಅತ್ಯುತ್ತಮವಾಗಿವೆ.

ಡಿಗ್ರೀಸರ್ ಗಳನ್ನು ಬಳಸುವ ಮುನ್ನ

ಮೊದಲಿಗೆ ಬಾಟಲಿಗಳಲ್ಲಿ ಬರೆದಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ. ತಯಾರಕರ ಶಿಫಾರಸುಗಳನ್ನು ಅನುಸರಿಸಿ. ಉತ್ಪನ್ನವು ನೀವು ತೊಳೆಯುವ ಎಂಜಿನ್​ಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಟ್ರೈಕ್ಲೋರೋಫ್ಲೋರೋಮೀಥೇನ್ ಆಧಾರಿತ ಡಿಗ್ರೀಸರ್ ಗಳು ಅಲ್ಯೂಮಿನಿಯಂ ವಸ್ತುಗಳಿಗೆ ಬಿದ್ದಾಗ ಸ್ಫೋಟವಾಗುತ್ತದೆ.

ದ್ರಾವಣ ಆಧಾರಿತ ಡಿಗ್ರೀಸರ್ ಗಳನ್ನು ಬಳಸುವಾಗ, ಬಟ್ಟೆ, ಸುರಕ್ಷತಾ ಕನ್ನಡಕಗಳು ಮತ್ತು ಉಸಿರಾಟದ ಸಾಧನವನ್ನು ಧರಿಸಿ. ಗಾಳಿಯಾಡುವ ಪ್ರದೇಶದಲ್ಲಿ ಕೆಲಸ ಮಾಡಿ. ಬೆಂಕಿಯ ಸಮೀಪ ತೆಗೆದುಕೊಂಡು ಹೋಗಬೇಡಿ. ಡಿಗ್ರೀಸರ್ ಅನ್ನು ಸಮಾನವಾಗಿ ಹಾಕಲು ಸ್ಪ್ರೇಯರ್ ಅಥವಾ ಲಿಂಟ್-ಫ್ರೀ ಬಟ್ಟೆಯನ್ನು ಬಳಸಿ.
ರಾಸಾಯನಿಕ ಉತ್ಪನ್ನವನ್ನು ಸಂಪೂರ್ಣವಾಗಿ ಒಣಗಲು ಬಿಡಬೇಡಿ.

ಶುಚಿಗೊಳಿಸುವ ಗುಣಮಟ್ಟ ನಿಯಂತ್ರಣ

ಆಟೋಮೋಟಿವ್ ತಜ್ಞರ ಪ್ರಕಾರ, ಡಿಗ್ರೀಸರ್ ಗಳ ಸಮಪರ್ಕ ಬಳಕೆ ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಕಾರಿನ ಜೀವಿತಾವಧಿಯನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. ಅದರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಡಿಗ್ರೀಸರ್ ಗಳನ್ನು ಆಯ್ಕೆ ಮಾಡಲು ಮತ್ತು ಬಳಸಲು ಮತ್ತು ನಿಯಮಿತ ಎಂಜಿನ್ ಕ್ಲೀನಿಂಗ್ ಗಾಗಿ ಶಿಫಾರಸುಗಳನ್ನು ಅನುಸರಿಸಬೇಕು.

Exit mobile version