Site icon Vistara News

Viral News : ಚಲಿಸುತ್ತಿದ್ದ ಬೈಕ್‌ನಲ್ಲಿ ಯುವ ಜೋಡಿಯ ರೊಮ್ಯಾನ್ಸ್‌; ವಾಹನ ಸವಾರರಿಗೆ ಫ್ರೀ ಪಿಚ್ಚರ್‌!

BIke rider viral video

#image_title

ಲಖನೌ: ಸಾರ್ವಜನಿಕ ರಸ್ತೆಗಳು ಸ್ಟಂಟ್‌ಗಳನ್ನು (Road Stunt) ಮಾಡುವ ಸ್ಥಳವಲ್ಲ ಎಂದು ಗೊತ್ತಿದ್ದರೂ ಕೆಲವರು ಮತ್ತೆ ಮತ್ತೆ ಕಿತಾಪತಿ ಮಾಡುತ್ತಾರೆ. ಇಂಥ ಕೃತ್ಯಗಳು ಸಂಪೂರ್ಣವಾಗಿ ಕಾನೂನುಬಾಹಿರ (Illegal). ಇಂಥ ಕೃತ್ಯಗಳನ್ನು ಪತ್ತೆ ಹಚ್ಚಿ ಸವಾರರನ್ನು ದಂಡಿಸಲು ಪೊಲೀಸರು (Police) ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಆದರೂ ಕೆಲವರಿಗೆ ಬುದ್ಧಿ ಬರುವುದಿಲ್ಲ. ಮತ್ತೆ ಮತ್ತೆ ನಿರ್ಲಕ್ಷ್ಯ ತೋರುತ್ತಾರೆ. ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ ಇದೇ ಮಾದರಿಯ ಪ್ರಕರಣವೊಂದು (Viral News) ನಡೆದಿದೆ. ಯುವ ಜೋಡಿಯೊಂದು ಬೈಕ್‌ ಸವಾರಿಯ ನಡುವೆಯೇ ರೊಮ್ಯಾನ್‌ (Romance) ಮಾಡಿದ್ದಾರೆ. ಬೇರೆ ಸವಾವರರಿಗೆ ಇದು ಪುಕ್ಕಟೆ ಮನರಂಜನೆ ಕೊಟ್ಟಿತ್ತು. ಆದರೆ, ಅವರು ವಿಡಿಯೊ ಮಾಡಿ ಪೊಲೀಸರಿಗೆ ತಲುಪಿಸಿದ್ದರು. ಪೊಲೀಸರು ಆತನನ್ನು ಪತ್ತೆ ಹಚ್ಚಿ ಬೈಕ್ ಸವಾರಿ ವೇಳೇ ಪ್ರಣಯದಲ್ಲಿ ತೊಡಗಿದ್ದಕ್ಕಾಗಿ 21,000 ರೂಪಾಯಿ ದಂಡ ವಿಧಿಸಿದ್ದಾರೆ.

ಆಕಾಶ್ ಕುಮಾರ್ ಎಂಬುವವರು ಈ ದೃಶ್ಯವನ್ನು ಸೆರೆ ಹಿಡಿದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ದೆಹಲಿ ಮತ್ತು ಮೀರತ್ ಅನ್ನು ಸಂಪರ್ಕಿಸುವ ಗಾಜಿಯಾಬಾದ್‌ನ ಎನ್ಎಚ್ 9ರಲ್ಲಿ ಈ ಘಟನೆ ನಡೆದಿದೆ ಎಂದು ವೀಡಿಯೊ ಸೂಚಿಸುತ್ತದೆ. ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಬೈಕ್ ಹೋಂಡಾ ಸಿಬಿಆರ್. ಯುವತಿ ಸವಾರನೊಂದಿಗೆ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ಪೆಟ್ರೋಲ್‌ ಟ್ಯಾಂಕ್ ಮೇಲೆ ಕುಳಿತು ಆತನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ಅರು ಹೆಚ್ಚು ವೇಗದಲ್ಲಿ ಹೋಗುತ್ತಿರಲಿಲ್ಲ. ಆದರೆ, ರೊಮ್ಯಾನ್ಸ್‌ ಮಾಡುವ ವೇಲೆ ಅವರಿಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ!

ಅದೇ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇನ್ನೊಬ್ಬ ವ್ಯಕ್ತಿಯೂ ವೀಡಿಯೊವನ್ನು ಸೆರೆಹಿಡಿದಿದ್ದರು ಒಂದು ನಿಮಿಷಕ್ಕೂ ಹೆಚ್ಚು ಕಾಲ ಇರುವ ಈ ವೀಡಿಯೊದಲ್ಲಿ, ಸವಾರ ಮತ್ತು ಅವನ ಸಂಗಾತಿ ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆಯಿಂದ ಸವಾರಿ ಮಾಡಿದ್ದರು. ವೀಡಿಯೊವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡ ತಕ್ಷಣವೇ ವೈರಲ್ ಆಗಿದೆ. ಟ್ವಿಟ್ಟರ್ ಬಳಕೆದಾರರು ಯುಪಿ ಟ್ರಾಫಿಕ್ ಪೊಲೀಸ್ ಮತ್ತು ಗಾಜಿಯಾಬಾದ್ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿದ್ದರು. ಸಂಬಂಧಿತ ಅಧಿಕಾರಿಗಳು ವೀಡಿಯೊವನ್ನು ನೋಡಿ ಸವಾರನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಯಾವುದಕ್ಕೆಲ್ಲ ದಂಡ?

ಪೊಲೀಸರು ಮೋಟಾರ್‌ಸೈಕಲ್‌ನ ಮಾಲೀಕನನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದರು. ಅನೇಕ ಅಪರಾಧಗಳಿಗಾಗಿ 21,000 ರೂ.ಗಳ ಚಲನ್ ನೀಡಿದ್ದಾರೆ. ಮೊದಲ ಅಪರಾಧವೆಂದರೆ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಸವಾರಿ ಹೆಲ್ಮೆಟ್ ಧರಿಸದಿರುವುದ. ಇದಕ್ಕೆ 1,000 ರೂ. ಫೈನ್‌. ಮೋಟಾರ್‌ಸೈಕಲ್‌ಗೆ ಅಸಮರ್ಪಕ ನಂಬರ್ ಪ್ಲೇಟ್ ಹಾಕಿರುವುದ. ನಿಯಮಗಳ ಪ್ರಕಾರ ಎಲ್ಲಾ ವಾಹನಗಳು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಹೊಂದಿರಬೇಕು. ಅದಕ್ಕೆ 5,000 ರೂ. ದಂಡ ಹಾಕಿದ್ದರು.

ಮೋಟಾರ್ಸೈಕಲ್‌ನ ನೋಂದಣಿ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ, ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರ ಅವಧಿ ಮೀರಿತ್ತು. ಈ ಉಲ್ಲಂಘನೆಗೆ 10,000 ರೂಪಾಯಿ ದಂಡ ಹಾಕಿದ್ದರು. ಅನುಮತಿಯಿಲ್ಲದೆ ರೇಸಿಂಗ್, ಟ್ರಯಲ್ಸ್ ಅಥವಾ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡಿದ್ದಕ್ಕಾಗಿ ಸವಾರನಿಗೆ ಹೆಚ್ಚುವರಿ 5,000 ರೂಪಾಯಿ ದಂಡ ಹಾಕಲಾಗಿದೆ.

Exit mobile version