Site icon Vistara News

Viral Video : ಹಾಡಹಗಲೇ ಬೈಕ್​ನಲ್ಲಿ ಯುವ ಜೋಡಿಯ ರೊಮ್ಯಾನ್ಸ್​; ಎಲ್ಲ ಮುಗಿದ ಮೇಲೆ ಬಿತ್ತು ಸಾವಿರಾರು ರೂಪಾಯಿ ದಂಡ!

Bike Romance

ನವ ದೆಹಲಿ: ಬೈಕ್​ನಲ್ಲಿ ಹೋಗುತ್ತಲೇ ರೊಮ್ಯಾನ್ಸ್ ಮಾಡುವ ಪ್ರಕರಣಗಳು ಇತ್ತಿಚೆಗೆ ಹೆಚ್ಚಾಗುತ್ತಿದೆ. ಹುಚ್ಚು ಸಾಹಸವೂ, ಪ್ರೇಮದ ಉನ್ಮಾದವೋ ಗೊತ್ತಿಲ್ಲ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಪರಸ್ಪರ ಎದುರುಬದುರು ಕುಳಿತುಕೊಂಡು ಮುದ್ದಾಡಿಕೊಂಡು ಹೋಗುವ ಪ್ರಕರಣ ಏರಿಕೆಯಾಗುವೆ. ಅಂತೆಯೇ ಕೆಲ ದಿನಗಳ ಹಿಂದೆ ದೆಹಲಿಯ ಜನನಿಬಿಡ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಮೋಟಾರ್ ಸೈಕಲ್​ನಲ್ಲಿ ಯುವ ಜೋಡಿಯೊಂದು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೆಹಲಿಯ ಮಂಗೋಲ್ಪುರಿ ನೆರೆಹೊರೆಯ ಹೊರ ವರ್ತುಲ ರಸ್ತೆ ಫ್ಲೈಓವರ್​ ಬಳಿ ಈ ಘಟನೆ ನಡೆದಿದೆ. (Viral Video) ಇದು ಸಾರ್ವಜನಿಕ ಸುರಕ್ಷತೆ ಅಪಾಯಗಳ ಬಗ್ಗೆ ವ್ಯಾಪಕ ಕಳವಳ ಹುಟ್ಟುಹಾಕಿದೆ. ಹೆಲ್ಮೆಟ್ ಧರಿಸದೆ ಸವಾರಿ ಮಾಡಿದ ಯುವತಿ ಇಂಧನ ಟ್ಯಾಂಕ್ ಮೇಲೆ ಕುಳಿತು ತನ್ನ ಸಂಗಾತಿಯನ್ನು ಅಪ್ಪಿಕೊಂಡಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ದೆಹಲಿ ಸಂಚಾರ ಪೊಲೀಸರು ತಕ್ಷಣದ ಕ್ರಮ ಕೈಗೊಂಡಿದ್ದು, ಅಜಾಗರೂಕ ಮತ್ತು ಅನುಚಿತ ವರ್ತನೆಗಾಗಿ ದಂಪತಿಗೆ 11,000 ರೂ.ಗಳ ದಂಡ ವಿಧಿಸಿದ್ದಾರೆ.

ಜೋಡಿಯ ರೊಮ್ಯಾನ್ಸ್​ ಅನ್ನು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದ ಟ್ವಿಟರ್ ಬಳಕೆದಾರರು ಅದನ್ನು ಪೋಸ್ಟ್ ಮಾಡಿದ್ದರು. ಬಳಿಕ ಆ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿತ್ತು. (viral Video) ಯುವಕ ಮತ್ತು ಯುವತಿ ಅಪಾಯಕಾರಿ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಯುವತಿ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಅವರ ಹುಚ್ಚು ಸಾಹಸ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚೆಗಳೂ ನಡೆದವು.

ಬಿತ್ತು ಭರ್ಜರಿ ದಂಡ

ವೀಡಿಯೊ ವೈರಲ್ ಆದ ನಂತರ, ದೆಹಲಿ ಸಂಚಾರ ಪೊಲೀಸರು ದಂಡ ಹಾಕುವುದಕ್ಕೆ ಸಮಯ ವ್ಯರ್ಥ ಮಾಡಲಿಲ್ಲ. ಅಲ್ಲದೆ ಇಂಥ ಪ್ರಕರಣಗಳು ಕಂಡು ಬಂದರೆ ಟ್ರಾಫಿಕ್ ಪೊಲೀಸ್ ಸೆಂಟಿನೆಲ್ ಅಪ್ಲಿಕೇಶನ್ ಮೂಲಕ ವರದಿ ಮಾಡುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದರೆ. ಯುವ ಜೋಡಿಯ ಅಪಾಯಕಾರಿ ನಡವಳಿಕೆಗೆ ಪ್ರತಿಕ್ರಿಯೆಯಾಗಿ, ದೆಹಲಿ ಪೊಲೀಸರು ಸಂಬಂಧಿತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ 11,000 ರೂ.ಗಳ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ : Viral Video: ಬಿಜೆಪಿ ‘ಭ್ರಷ್ಟಾಚಾರ’ ಪಟ್ಟಿ ಓದಲು ತಡಕಾಡಿದ ಪ್ರಿಯಾಂಕಾ ವಾದ್ರಾ; ಅಂಕಿ-ಅಂಶ ಹೇಳುವಾಗಲೂ ಎಡವಟ್ಟು

ತಮ್ಮ ಹುಚ್ಚು ಸಾಹಸ ಅಪಾಯಕಾರಿ ಎಂದು ಜೋಡಿಗೆ ಗೊತ್ತಿರುತ್ತದೆ. ಆದರೆ, ಸಂಚಾರ ನಿಯಮ ಪಾಲನೆ ಯಾಕೆ ಮಾಡುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಅದೇ ರೀತಿ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ಬೈಕ್​ ಸ್ಟಂಟ್ ಅನೇಕ ನಗರಗಳಲ್ಲಿ ಸಾಮಾನ್ಯವಾಗಿದೆ, ಅಂತಹ ಹಲವಾರು ಘಟನೆಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ಮೋಟಾರ್ ಸೈಕಲ್ ಸವಾರಿ ಮಾಡುವಾಗ ರೊಮ್ಯಾಂಟಿಕ್ ಅಥವಾ ಸ್ಟಂಟ್ ತರಹದ ಚಟುವಟಿಕೆಗಳನ್ನು ಮಾಡುವುದರಿಂದ ಸವಾರನ ಗಮನ ರಸ್ತೆಯಿಂದ ಬೇರೆಡೆಗೆ ಹೋಗುತ್ತದೆ, ಈ ಚಂಚಲತೆಯು ಹಠಾತ್ ಅಡೆತಡೆಗಳು, ಪಾದಚಾರಿಗಳು ಅಥವಾ ಇತರ ವಾಹನಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಅವರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇವೆಲ್ಲರೂ ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು.

ರಕ್ಷಣಾ ಕವಚ ಅತ್ಯಗತ್ಯ

ಹೆಲ್ಮೆಟ್ ಗಳು, ಗ್ಲವ್ಸ್​​ಗಳು ಮತ್ತು ರಕ್ಷಣಾತ್ಮಕ ಬಟ್ಟೆಗಳಂತಹ ಸೂಕ್ತ ಸುರಕ್ಷತಾ ಸಾಧನಗಳನ್ನು ಧರಿಸದೇ ಸ್ಟಂಟ್ ಮಾಡಿದಾಗ ಡಿಕ್ಕಿ ಅಥವಾ ಬಿದ್ದರೆ ತೀವ್ರ ಗಾಯಗಳಿಗೆ ಗುರಿಯಾಗುತ್ತಾರೆ. ಅಪಘಾತದ ಸಮಯದಲ್ಲಿ ದೇಹದ ಅತ್ಯಂತ ದುರ್ಬಲ ಭಾಗವಾದ ತಲೆ ರಕ್ಷಣೆಯಲ್ಲಿ ಹೆಲ್ಮೆಟ್ ನಿರ್ಣಾಯಕವಾಗಿವೆ. ಹೀಗಾಗಿ ಏನೂ ಇಲ್ಲದೆ ಸ್ಟಂಟ್ ಮಾಡಿದರೆ ಜೀವ ಹಾನಿ ಗ್ಯಾರಂಟಿ.

ಬೈಕ್​ನಲ್ಲಿ ರೊಮ್ಯಾನ್ಸ್ ಮಾಡುವ ನಡವಳಿಕೆಯ ಬೇರೆಯವರ ಮನಸ್ಸಿನ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು. ಯುವಜನರು ಇದೇ ರೀತಿಯ ಸಾಹಸ ಮಾಡಲು ಮುಂದಾಗುತ್ತಾರೆ. ಈ ರಿತಿಯ ನಡವಳಿಕೆಯನ್ನು ಪ್ರೋತ್ಸಾಹಿಸುವುದು ಅಥವಾ ಪ್ರೋತ್ಸಾಹ ಕೊಡುವುದು ಅಪಾಯಕಾರಿ.

Exit mobile version