Site icon Vistara News

Electric Bike : ಬೆಂಗಳೂರಿನ ರಸ್ತೆಗಿಳಿದಿದೆ 65,990 ರೂಪಾಯಿಯ ಎಲೆಕ್ಟ್ರಿಕ್​ ಬೈಕ್​

Electric bike priced at Rs 65,990 launched in Bengaluru

#image_title

ಬೆಂಗಳೂರು: ಓಝೋಟೆಕ್ ಕಂಪನಿಯು ‘ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌‌ಚಾಲಿತ (ಇವಿ) ದ್ವಿಚಕ್ರ ವಾಹನ (Electric Bike) ಬಿಡುಗಡೆ ಮಾಡಿದೆ. 65,990 ರೂ.ನಿಂದ ಬೆಲೆ ಆರಂಭವಾಗಲಿದೆ ಎಂದು ಕಂಪನಿಯು ಹೇಳಿದೆ. ಮೇ 25ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೈಕ್​ ಬಿಡುಗಡೆಗೊಂಡಿತು.

ಕಂಪನಿಯ ವೆಬ್‌‌‌ಸೈಟ್ ಮತ್ತು ಶೋರೂಂಗಳಲ್ಲಿ ಭೀಮ್ ವಾಹನದ ಮುಂಗಡ ಬುಕಿಂಗ್ ಮೇ25ರಿಂದ ಆರಂಭವಾಗಿದೆ.. ಇತರ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಗಿಂತ ಇದು ಭಿನ್ನ. ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ಹೇಳಿದೆ.

10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಇದರಿಂದಾಗಿ ದೀರ್ಘ ಪ್ರಯಾಣಗಳಿಗೂ ಅನುಕೂಲ. ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌‌‌ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಾಂತ್ರಿಕತೆಯ ಸಂಯೋಜನೆ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರೆ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿವೆ.

ಭೀಮ್ ಎಲೆಕ್ಟ್ರಿಕ್​ ಬೈಕ್​ಗೆ 7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿದ: Karnataka Election: ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಾದ ಇವಿಎಂ ಉಪಯೋಗಿಸಿಲ್ಲ: ಚುನಾವಣಾ ಆಯೋಗ

ಒಜೊಟೆಕ್ನ ಸ್ಥಾಪಕ ಮತ್ತು ಸಿಇಒ ಬರಥಾನ್ ಮಾತನಾಡಿ “ನಾವು ಉತ್ತಮ ಗುಣಮಟ್ಟದ ಎಂಜಿನ್​​ಗಳು, ಪಂಪ್​ಗಳು ಮತ್ತು ಜವಳಿಗಳನ್ನು ತಯಾರಿಸುವ ನಗರವಾದ ಕೊಯಮತ್ತೂರಿನಲ್ಲಿ ನೆಲೆಗೊಂಡಿದ್ದೇವೆ. ಸಾಮಾಜಿಕ ನಾವೀನ್ಯತೆಯನ್ನು ಜಗತ್ತಿಗೆ ತರಲು ಒಜೋಟೆಕ್ ಅನ್ನು ಸ್ಥಾಪಿಸಿದೆವು. 20 ವರ್ಷಗಳ ಅಭಿವೃದ್ಧಿ ಅನುಭವದೊಂದಿಗೆ, ನಿಯಂತ್ರಣ ವ್ಯವಸ್ಥೆಗಳು ಮತ್ತು ಮೋಟರ್ ಗಳ ವಿನ್ಯಾಸ ಮತ್ತು ತಯಾರಿಕೆಯ ಬಗ್ಗೆ ನಮಗೆ ವ್ಯಾಪಕ ಜ್ಞಾನವಿದೆ. ಈ ಜ್ಞಾನದೊಂದಿಗೆ, ನಾವು ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಫ್ಲಿಯೊವನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಬಿಡುಗಡೆ ಮಾಡಿ, 6,000 ಕ್ಕೂ ಹೆಚ್ಚು ಗ್ರಾಹಕರಿಗೆ ಮಾರಾಟ ಮಾಡಿದ್ದೆವು. ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಇವಿ ತಯಾರಕರು ಅನೇಕ ಗ್ರಾಹಕರ ಅಗತ್ಯಗಳನ್ನು ಪೂರೈಸುವುದಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ತಾಂತ್ರಿಕ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುವಾಗ ಪ್ರಮುಖ ಘಟಕಗಳಿಗೆ ಆದ್ಯತೆ ನೀಡುವ ಮಹತ್ವವನ್ನು ನಾವು ಗುರುತಿಸಿದ್ದೇವೆ. ಬ್ಯಾಟರಿ, ಎಂಜಿನ್, ಚಾಸಿಸ್. ಈ ಅಗತ್ಯವನ್ನು ಪೂರೈಸಲು, ಎಲ್ಲಾ ಪ್ರಮುಖ ಘಟಕಗಳನ್ನು ಆಂತರಿಕವಾಗಿ ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಭಾರತದ ಏಕೈಕ ಕಂಪನಿ ನಮ್ಮದು ಎಂದು ಹೇಳಿದರು.

ಬರಥಾನ್ ಅವರು 2002ರಲ್ಲಿ ಸ್ಥಾಪಿಸಿದ ಒಜೋಟೆಕ್ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಪ್ರಸಿದ್ಧ ಕಂಪನಿಯಾಗಿದೆ. ಒಜೋಟೆಕ್ ಫಿಕ್ಸೆಡ್ ಸೆಲ್ಯುಲಾರ್ ಟರ್ಮಿನಲ್ಸ್ (ಎಫ್ಸಿಟಿ) ಮತ್ತು ಕೈಗಾರಿಕಾ ಯಾಂತ್ರೀಕೃತ ಉತ್ಪನ್ನಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ. 150 ನುರಿತ ಉದ್ಯೋಗಿಗಳ ತಂಡ ಮತ್ತು 30,000 ಚದರ ಅಡಿ ಅತ್ಯಾಧುನಿಕ ಸ್ಥಳದೊಂದಿಗೆ, ಒಜೋಟೆಕ್ ನಮ್ಮ ಗ್ರಾಹಕರ ಜೀವನವನ್ನು ಸುಧಾರಿಸುವ ನವೀನ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತದೆ.

Exit mobile version