Electric bike priced at Rs 65,990 launched in Bengaluru Electric Bike : ಬೆಂಗಳೂರಿನ ರಸ್ತೆಗಿಳಿದಿದೆ 65,990 ರೂಪಾಯಿಯ ಎಲೆಕ್ಟ್ರಿಕ್​ ಬೈಕ್​ Vistara News
Connect with us

ಆಟೋಮೊಬೈಲ್

Electric Bike : ಬೆಂಗಳೂರಿನ ರಸ್ತೆಗಿಳಿದಿದೆ 65,990 ರೂಪಾಯಿಯ ಎಲೆಕ್ಟ್ರಿಕ್​ ಬೈಕ್​

ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ಇದು ಎಂದು ಕಂಪನಿಯು ಹೇಳಿದೆ.

VISTARANEWS.COM


on

Electric bike priced at Rs 65990 launched in Bengaluru
Koo

ಬೆಂಗಳೂರು: ಓಝೋಟೆಕ್ ಕಂಪನಿಯು ‘ಭೀಮ್’ ಹೆಸರಿನಲ್ಲಿ ಕೈಗೆಟುಕುವ ದರದಲ್ಲಿಹೊಸ ವಿದ್ಯುತ್‌‌ಚಾಲಿತ (ಇವಿ) ದ್ವಿಚಕ್ರ ವಾಹನ (Electric Bike) ಬಿಡುಗಡೆ ಮಾಡಿದೆ. 65,990 ರೂ.ನಿಂದ ಬೆಲೆ ಆರಂಭವಾಗಲಿದೆ ಎಂದು ಕಂಪನಿಯು ಹೇಳಿದೆ. ಮೇ 25ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೈಕ್​ ಬಿಡುಗಡೆಗೊಂಡಿತು.

ಕಂಪನಿಯ ವೆಬ್‌‌‌ಸೈಟ್ ಮತ್ತು ಶೋರೂಂಗಳಲ್ಲಿ ಭೀಮ್ ವಾಹನದ ಮುಂಗಡ ಬುಕಿಂಗ್ ಮೇ25ರಿಂದ ಆರಂಭವಾಗಿದೆ.. ಇತರ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳಗಿಂತ ಇದು ಭಿನ್ನ. ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಇವಿ ಬೈಕ್ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿಯು ಹೇಳಿದೆ.

10 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಬೈಕ್, ಒಮ್ಮೆ ಚಾರ್ಜ್ ಮಾಡಿದರೆ 525 ಕಿಮೀ.ವರೆಗೆ ಕ್ರಮಿಸಲಿದೆ. ಇದರಿಂದಾಗಿ ದೀರ್ಘ ಪ್ರಯಾಣಗಳಿಗೂ ಅನುಕೂಲ. ಅಲ್ಯೂಮೀನಿಯಂ ಬಾಡಿ ಹೊಂದಿರುವ ಬೈಕ್, ಸ್ಮಾರ್ಟ್ ಬ್ಯಾಟರಿ ಮ್ಯಾನೇಜ್‌‌‌ಮೆಂಟ್ ಸಿಸ್ಟಂ (ಬಿಎಂಎಸ್) ಮತ್ತು ಸುಧಾರಿತ ವೈರ್ ವೆಲ್ಡಿಂಗ್ ತಾಂತ್ರಿಕತೆಯ ಸಂಯೋಜನೆ ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತೆ ನೀಡುತ್ತದೆ. ಡ್ಯಾಶ್ ಬೋರ್ಡ್ ನಲ್ಲಿ ಜಿಪಿಎಸ್ ಸ್ಪೀಡ್, ಟ್ರಿಪ್ ಮೀಟರ್, ಜಿಪಿಎಸ್ ನ್ಯಾವಿಗೇಶನ್, ಡಾಕ್ಯುಮೆಂಟ್ ಮತ್ತು ಮೀಡಿಯಾ ವೀವರ್, ಟ್ರಾವೆಲ್ ಹಿಸ್ಟರಿ ಮತ್ತು ಇನ್ನಿತರೆ ಅತ್ಯಾಧುನಿಕ ವೈಶಿಷ್ಟ್ಯತೆಗಳನ್ನು ಹೊಂದಿವೆ.

ಭೀಮ್ ಎಲೆಕ್ಟ್ರಿಕ್​ ಬೈಕ್​ಗೆ 7 ವರ್ಷವರೆಗೆ ವಾರಂಟಿ ಇದೆ. ಗ್ರಾಹಕರು ನಿಶ್ಚಿಂತೆಯಿಂದ ವಾಹನ ಖರೀದಿಸಬಹುದು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೇವೆ ಪೂರೈಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಘಟಕಗಳನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿದ: Karnataka Election: ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಾದ ಇವಿಎಂ ಉಪಯೋಗಿಸಿಲ್ಲ: ಚುನಾವಣಾ ಆಯೋಗ

ಒಜೊಟೆಕ್ನ ಸ್ಥಾಪಕ ಮತ್ತು ಸಿಇಒ ಬರಥಾನ್ ಮಾತನಾಡಿ “ನಾವು ಉತ್ತಮ ಗುಣಮಟ್ಟದ ಎಂಜಿನ್​​ಗಳು, ಪಂಪ್​ಗಳು ಮತ್ತು ಜವಳಿಗಳನ್ನು ತಯಾರಿಸುವ ನಗರವಾದ ಕೊಯಮತ್ತೂರಿನಲ್ಲಿ ನೆಲೆಗೊಂಡಿದ್ದೇವೆ. ಸಾಮಾಜಿಕ ನಾವೀನ್ಯತೆಯನ್ನು ಜಗತ್ತಿಗೆ ತರಲು ಒಜೋಟೆಕ್ ಅನ್ನು ಸ್ಥಾಪಿಸಿದೆವು. 20 ವರ್ಷಗಳ ಅಭಿವೃದ್ಧಿ ಅನುಭವದೊಂದಿಗೆ, ನಿಯಂತ್ರಣ ವ್ಯವಸ್ಥೆಗಳು ಮತ್ತು ಮೋಟರ್ ಗಳ ವಿನ್ಯಾಸ ಮತ್ತು ತಯಾರಿಕೆಯ ಬಗ್ಗೆ ನಮಗೆ ವ್ಯಾಪಕ ಜ್ಞಾನವಿದೆ. ಈ ಜ್ಞಾನದೊಂದಿಗೆ, ನಾವು ನಮ್ಮ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಫ್ಲಿಯೊವನ್ನು ಎರಡು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಬಿಡುಗಡೆ ಮಾಡಿ, 6,000 ಕ್ಕೂ ಹೆಚ್ಚು ಗ್ರಾಹಕರಿಗೆ ಮಾರಾಟ ಮಾಡಿದ್ದೆವು. ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಇವಿ ತಯಾರಕರು ಅನೇಕ ಗ್ರಾಹಕರ ಅಗತ್ಯಗಳನ್ನು ಪೂರೈಸುವುದಿಲ್ಲ ಎಂದು ನಾವು ಅರಿತುಕೊಂಡಿದ್ದೇವೆ. ತಾಂತ್ರಿಕ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸುವಾಗ ಪ್ರಮುಖ ಘಟಕಗಳಿಗೆ ಆದ್ಯತೆ ನೀಡುವ ಮಹತ್ವವನ್ನು ನಾವು ಗುರುತಿಸಿದ್ದೇವೆ. ಬ್ಯಾಟರಿ, ಎಂಜಿನ್, ಚಾಸಿಸ್. ಈ ಅಗತ್ಯವನ್ನು ಪೂರೈಸಲು, ಎಲ್ಲಾ ಪ್ರಮುಖ ಘಟಕಗಳನ್ನು ಆಂತರಿಕವಾಗಿ ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಭಾರತದ ಏಕೈಕ ಕಂಪನಿ ನಮ್ಮದು ಎಂದು ಹೇಳಿದರು.

ಬರಥಾನ್ ಅವರು 2002ರಲ್ಲಿ ಸ್ಥಾಪಿಸಿದ ಒಜೋಟೆಕ್ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಮತ್ತು ತಯಾರಿಸುವ ಪ್ರಸಿದ್ಧ ಕಂಪನಿಯಾಗಿದೆ. ಒಜೋಟೆಕ್ ಫಿಕ್ಸೆಡ್ ಸೆಲ್ಯುಲಾರ್ ಟರ್ಮಿನಲ್ಸ್ (ಎಫ್ಸಿಟಿ) ಮತ್ತು ಕೈಗಾರಿಕಾ ಯಾಂತ್ರೀಕೃತ ಉತ್ಪನ್ನಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿದೆ ಮತ್ತು ತಯಾರಿಸಿದೆ. 150 ನುರಿತ ಉದ್ಯೋಗಿಗಳ ತಂಡ ಮತ್ತು 30,000 ಚದರ ಅಡಿ ಅತ್ಯಾಧುನಿಕ ಸ್ಥಳದೊಂದಿಗೆ, ಒಜೋಟೆಕ್ ನಮ್ಮ ಗ್ರಾಹಕರ ಜೀವನವನ್ನು ಸುಧಾರಿಸುವ ನವೀನ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ಆಟೋಮೊಬೈಲ್

Nissan Magnite : ನಿಸ್ಸಾನ್​ ಮ್ಯಾಗ್ನೈಟ್ ಗೆಜಾ ಬೆಲೆ 7.39 ಲಕ್ಷ ರೂ.ಗಳಿಂದ ಆರಂಭ

ಪ್ರೀಮಿಯಂ ಆಡಿಯೋ ಮತ್ತು ಇನ್ಫೋಟೈನ್ಮೆಂಟ್​ ಹೊಂದಿರುವ ಕಾರಿನ ಬುಕಿಂಗ್​ ಮೇ 19ರಿಂದ ಆರಂಭಗೊಂಡಿದೆ.

VISTARANEWS.COM


on

Nissan Magnite Geza Special Edition
Koo

ಬೆಂಗಳೂರು: ನಿಸಾನ್ ಮೋಟರ್ ಇಂಡಿಯಾ ತನ್ನ ಬಿಗ್, ಬೋಲ್ಡ್, ಬ್ಯೂಟಿಫುಲ್ ಎಸ್​​ಯುವಿ ನಿಸಾನ್ ಮ್ಯಾಗ್ನೈಟ್ GEZA ವಿಶೇಷ (Nissan Magnite) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅದರ ಬೆಲೆ 7,39,000 (ಎಕ್ಸ್ ಶೋರೂಂ ದೆಹಲಿ) ರೂಪಾಯಿಗಳಿಂದ ಆರಂಭವಾಗಲಿದೆ. ಈ ಮ್ಯಾಗ್ನೈಟ್ GEZA ದಲ್ಲಿ ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ ಪ್ಯಾಕ್ಡ್ ಪರ್ಮಾರ್ಫೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಸೌಲಭ್ಯಗಳಿವೆ. ಈ ಮೂಲಕ ಈ ಎಸ್​​ಯುವಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಪುನರ್ ವ್ಯಾಖ್ಯಾನಿಸಲಿದೆ. ಈ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಜಪಾನ್​​ನ ಥಿಯೇಟರ್ ಮತ್ತು ಅದರ ಅತ್ಯುತ್ತಮವಾದ ಮ್ಯೂಸಿಕಲ್ ಥೀಮ್ಸ್​​ನಿಂದ ಪ್ರೇರಣೆ ಪಡೆದುಕೊಂಡಿದೆ.

ಮ್ಯಾಗ್ನೈಟ್​ GEZA ವಿಶೇಷ ಆವೃತ್ತಿಯ ವಾಹನವು ಹತ್ತು ಹಲವಾರು ವಿಶೇಷ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಮುಖವಾದವು ಇಲ್ಲಿವೆ. ಹೈ ರೆಸಲ್ಯೂಶನ್​​ ನ 22.86 ಸೆಂ.ಮೀ(9 ಇಂಚು) ಅಳತೆಯ ಟಚ್ ಸ್ಕ್ರೀನ್. ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ್ ಕಾರ್ ಪ್ಲೇ, ಪ್ರೀಮಿಯಂ ಜೆಬಿಎಲ್ ಸ್ಪೀಕರ್​​ಗಳು, ಟ್ರಾಜೆಕ್ಟರಿ ರಿಯರ್ ಕ್ಯಾಮೆರಾ,  ಆ್ಯಪ್-ಆಧಾರಿತ ಕಂಟ್ರೋಲ್ಸ್ ನೊಂದಿಗೆ ಆಂಬಿಯೆಂಟ್ ಲೈಟಿಂಗ್, ಪ್ರೀಮಿಯಂ ಬ್ಯಾಗಿ ಕಲರ್ ಸೀಟ್, ಶಾರ್ಕ್ ಫಿನ್ ಆಂಟೆನಾ ಈ ಕಾರಿನ ಆಕರ್ಷಣೆಯಾಗಿದೆ.

ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ, “ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಪ್ರೀಮಿಯಂ ಆಡಿಯೋ ಮತ್ತು ಇನ್ಫೋಟೇನ್ಮೆಂಟ್ ಅನುಭವದೊಂದಿಗೆ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡುತ್ತದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದ್ದು, ಶಕ್ತಿಯುತವಾದ ಸುರಕ್ಷತೆ ಮತ್ತು ಕಾರ್ಯದಕ್ಷತೆಯ ವೈಶಿಷ್ಟ್ಯತೆಗಳನ್ನು ಹೊಂದಿದೆ’’ ಎಂದರು.

ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಎಲ್ಲಾ ನಿಸಾನ್ ಶೋರೂಂಗಳಲ್ಲಿ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಲು ಅವಕಾಶವಿದೆ. ಮೊನೊಟೋನ್ ಬಣ್ಣಗಳ ಶ್ರೇಣಿಯಲ್ಲಿ ಲಭ್ಯವಿದ್ದು, ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ವ್ಯಾಪಕವಾದ ಶ್ರೇಣಿಯ ಆಯ್ಕೆಯನ್ನು ನೀಡಲಾಗಿದೆ.

ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ, ಅತ್ಯಂತ ಕಡಿಮೆ ನಿರ್ಹವಣಾ ವೆಚ್ಚದೊಂದಿಗೆ ರಸ್ತೆಗೆ ಇಳಿದಿದೆ. ಪ್ರತಿ ಒಂದು ಕಿಲೋಮೀಟರ್ ಗೆ ಕೇವಲ 35 ಪೈಸೆ (50,000 ಕಿಲೋಮೀಟರ್ ಗೆ) ವೆಚ್ಚವಾಗಲಿದೆ. ಅದೇ ರೀತಿ 2 ವರ್ಷಗಳವರೆಗೆ ವಾರಂಟಿ (50,000 ಕಿಮೀ)ಇರುವುದರೊಂದಿಗೆ ಗ್ರಾಹಕರಿಗೆ ಯಾವುದೇ ಚಿಂತೆ ಇರುವುದಿಲ್ಲ ಮತ್ತು ಈ ವಾರಂಟಿಯನ್ನು ಸುಲಭ ದರದಲ್ಲಿ 5 ವರ್ಷಗಳವರೆಗೆ (ಅಥವಾ ಒಂದು ಲಕ್ಷ ಕಿಮೀ) ವಿಸ್ತರಣೆ ಮಾಡಿಕೊಳ್ಳಬಹುದು.

ಇದನ್ನೂ ಓದಿ : Nissan Magnite | ನಿಸ್ಸಾನ್‌ ಕಂಪನಿಯ ಮ್ಯಾಗ್ನೈಟ್‌ ಎಸ್‌ಯುವಿ ಟಿ20 ವಿಶ್ವ ಕಪ್‌ಗೆ ಅಧಿಕೃತ ಕಾರು

ನಿಸಾನ್ ಸರ್ವೀಸ್ ಹಬ್ ಅಥವಾ ನಿಸಾನ್ ಕನೆಕ್ಟ್ ಮೂಲಕ ಆನ್ ಲೈನ್ ನಲ್ಲಿ ನಿಸಾನ್ ಸರ್ವೀಸ್ ಕಾಸ್ಟ್ ಕ್ಯಾಲ್ಕ್ಯುಲೇಟರ್ ನಲ್ಲಿ ಸರ್ವೀಸ್ ಅನ್ನು ಬುಕ್ ಮಾಡಬಹುದು ಮತ್ತು ವೆಚ್ಚವನ್ನು ಪರಿಶೀಲಿಸಬಹುದಾಗಿದೆ.
ಗ್ಲೋಬಲ್ ಅನ್​ಕ್ಯಾಪ್​​ ನೀಡುವ ಅಡಲ್ಟ್ ಆಕ್ಯುಪೆಂಟ್ ಸೇಫ್ಟಿಯಲ್ಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿರುವ ನಿಸಾನ್ ಮ್ಯಾಗ್ನೈಟ್ ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಸುರಕ್ಷತಾ ಗುಣಮಟ್ಟಗಳನ್ನು ಹೊಂದಿರುವ ವಾಹನ ಎನಿಸಿದೆ. ಇತ್ತೀಚೆಗೆ ನಿಸಾನ್ ತನ್ನ ಮ್ಯಾಗ್ನೈಟ್ ನ ಎಲ್ಲಾ ಶ್ರೇಣಿಯ ವಾಹನಗಳಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸಲಾಗಿದೆ. ಇದಲ್ಲದೇ, ಬಿಎಸ್6 ಹಂತ 2 ನ್ನು ಪರಿಚಯಿಸಿದ್ದು, ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ನಿಸ್ಸಾನ್​ ಮ್ಯಾಗ್ನೈಟ್ ಕಾರನ್ನು ಡಿಸೆಂಬರ್ 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದನ್ನು ಜಪಾನ್ ನಲ್ಲಿ ವಿನ್ಯಾಸಗೊಳಿಸಿ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ನಿಸಾನ್ ಮೋಟರ್ ಇಂಡಿಯಾದ ಉತ್ಪಾದನಾ ತತ್ತ್ವವಾದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ಅನ್ನು ಅನುಸರಿಸಲಾಗುತ್ತಿದೆ.

Continue Reading

ಆಟೋಮೊಬೈಲ್

Simple One: ಒಂದು ಚಾರ್ಜ್​​ಗೆ 212 ಕಿ.ಮೀ ಓಡುವ ಸ್ಕೂಟರ್​ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?

ಸಿಂಪಲ್ ಒನ್ ಸ್ಕೂಟರ್​​ ಭಾರತದಲ್ಲಿ ಮಾರಾಟವಾಗುತ್ತಿರುವ ಇತರ ಭಾರತೀಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತ ದೊಡ್ಡ ಬ್ಯಾಟರಿಯನ್ನು ಹೊಂದಿದೆ.

VISTARANEWS.COM


on

new Simple One Scooter
Koo

ಬೆಂಗಳೂರು: ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಅಂತಿಮವಾಗಿ ತನ್ನ ಒನ್ ಎಲೆಕ್ಟ್ರಿಕ್ ಸ್ಕೂಟರ್​​ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯನ್ನು ಬಿಡಗಡೆ ಮಾಡಿದು. ಇದು ಭಾರತದಲ್ಲಿ ಬಿಡುಗಡೆಯಾಗಿರುವ ಅತ್ಯಂತ ದೊಡ್ಡ ಬ್ಯಾಟರಿ ಹೊಂದಿರುವ ಸ್ಕೂಟರ್​ ಆಗಿದೆ. ಈ ಸ್ಕೂಟರ್​ನ ಬೆಲೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಬೆಂಗಳೂರು) ಎಂದು ಕಂಪನಿಯು ಘೋಷಿಸಿದೆ.

ಸಿಂಪಲ್ ಒನ್ 5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್​ ಮಾಡಿದರೆ 212 ಕಿ.ಮೀ ದೂರ ಪ್ರಯಾಣ ಮಾಡಬಹುದು. ಬ್ಯಾಟರಿಗಳನ್ನು ಎರಡು ಪ್ಯಾಕ್​ಗಳಾಗಿ ವಿಂಗಡಿಸಲಾಗಿದ್ದು, ಒಂದು ಸ್ಥಿರ ಮತ್ತು ಒಂದು ತೆಗೆದಿಡುವ ಆಯ್ಕೆಯನ್ನು ನೀಡಲಾಗಿದೆ. ಈ ಬ್ಯಾಟರಿಗಳು ಮ್ಯಾಗ್ನೆಟ್ ಮೋಟರ್ ಗೆ ಶಕ್ತಿ ನೀಡುತ್ತದೆ. ಮೋಟಾರ್​ 8.5 ಕಿಲೋವ್ಯಾಟ್ ಗರಿಷ್ಠ ಶಕ್ತಿ (4.5 ಕಿಲೋವ್ಯಾಟ್ ನಿರಂತರ) ಮತ್ತು 72 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದು 2.77 ಸೆಕೆಂಡುಗಳಲ್ಲಿ 0ಯಿಂದ 40 ಕಿ.ಮೀ ವೇಗವನ್ನು ಪಡೆಯುತ್ತದೆ ಹಾಗೂ 105 ಕಿ.ಮೀ ಗರಿಷ್ಠ ವೇಗ ಪಡೆಯಲು ನೆರವಾಗುತ್ತದೆ.

ಪೋರ್ಟಬಲ್ ಮತ್ತು ಹೋಮ್ ಚಾರ್ಜರ್​ಗಳನ್ನು ಬಳಸಿಕೊಂಡು 5 ಗಂಟೆ 54 ನಿಮಿಷಗಳಲ್ಲಿ ಬ್ಯಾಟರಿಯನ್ನು 0ಯಿಂದ 80 ಶೇಕಡ ಚಾರ್ಜ್ ಮಾಡಬಹುದು ಎಂದು ಸಿಂಪಲ್ ಎನರ್ಜಿ ಹೇಳಿಕೊಂಡಿದೆ. ಫಾಸ್ಟ್ ಚಾರ್ಜರ್​ನೊಂದಿಗೆ ಸ್ಕೂಟರ್ ಅನ್ನು ನಿಮಿಷಕ್ಕೆ 1.5 ಕಿ.ಮೀ ದರದಲ್ಲಿ 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು. ಆದರೆ ಫಾಸ್ಟ್​ ಚಾರ್ಜಿಂಗ್​ ವ್ಯವಸ್ಥೆಯನ್ನು ಇನ್ನೂ ಸಿದ್ಧಪಡಿಸಿಲ್ಲ. ಫಾಸ್ಟ್​ ಚಾರ್ಜಿಂಗ್ ನೆಟ್ವರ್ಕ್​ ಆಗಸ್ಟ್​ ಬಳಿಕದಿಂದ ಕಾರ್ಯಾರಂಭಿಸಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : Tata Motors : ಆಲ್ಟ್ರೋಜ್​ ಐಸಿಎನ್​ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್​?

134 ಕೆ.ಜಿ ತೂಕದ ಸಿಂಪಲ್ ಒನ್ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಭಾರವಾದ ಇ-ಸ್ಕೂಟರ್ ಎನಿಸಿಕೊಂಡಿದೆ. (ಉತ್ಪಾದನೆಗೆ ಮೊದಲು ಸಿಂಪಲ್​ ಒನ್​ ಮಾದರಿಯು 20 ಕೆ.ಜಿ ಕಡಿಮೆಯಿತ್ತು). ಸೀಟ್ ಎತ್ತರ 796 ಎಂಎಂನಷ್ಟಿದೆ. 1,335 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಅಥೆರ್ 450 ಎಕ್ಸ್ ಗಿಂತ 40 ಎಂಎಂ ಉದ್ದವಿದೆ. ಇದು ಟ್ಯೂಬ್ ಆಕಾರದ ಸ್ಟೀಲ್ ಚಾಸಿಸ್ ಅನ್ನು ಹೊಂದಿದ್ದು, ಟೆಲಿಸ್ಕೋಪಿಕ್ ಫೋರ್ಕ್ / ಮೊನೊಶಾಕ್ ಸೆಟ್ಅಪ್​ ಮೂಲಕ ಜೋಡಿಸಲಾಗಿದೆ. 90 ಸೆಕ್ಷನ್ ರಬ್ಬರ್​ನೊಂದಿಗೆ 12 ಇಂಚಿನ ವೀಲ್​ಗಳನ್ನು ನೀಡಲಾಗಿದೆ. ಮುಂಭಾಗದಲ್ಲಿ ಮುಂಭಾಗದಲ್ಲಿ 200 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 190 ಎಂಎಂ ಡಿಸ್ಕ್ ಬ್ರೇಕ್​​ಗಳನ್ನು ಅಳವಡಿಸಲಾಗಿದೆ.

ಸಿಂಪಲ್ ಒನ್ ವಿಶೇಷತೆಗಳು

ಸಿಂಪಲ್ ಒನ್ 7 ಇಂಚಿನ ಟಿಎಫ್​​ಟಿ ಡ್ಯಾಶ್ ಹೊಂದಿದೆ. ಇದಕ್ಕೆ ಬ್ಲೂಟೂತ್ ಮೂಲಕ ಪೋನ್​ ಸಂಪರ್ಕ ಸಾಧಿಸಬಹುದು. ನ್ಯಾವಿಗೇಷನ್ ಮತ್ತು ಅದರ ಮೇಲಿನ ಮ್ಯೂಸಿಕ್​ ಕಂಟ್ರೋಲ್​ ಕೂಡ ಸಾಧ್ಯವಿದೆ. ಓವರ್ ದಿ ಏರ್ (ಒಟಿಎ) ಮೂಲಕ ಸಾಫ್ಟ್​ವೇರ್​ ಅಪ್​ಡೇಟ್​ ಮಾಡಬಹುದು. ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್ ಎಂಬ ನಾಲ್ಕು ರೈಡಿಂಗ್ ಮೋಡ್​​ಗಳನ್ನು ನೀಡಲಾಗಿದೆ. ಇದು ಆಲ್​ ಎಲ್ಇಡಿ ಲೈಟಿಂಗ್ ಮತ್ತು ಬೂಟ್​ಲೈಟ್ ಕೂಡ ಸ್ಕೂಟರ್​ನಲ್ಲಿದೆ. 30 ಲೀಟರ್ ಬೂಟ್ ಸಾಮರ್ಥ್ಯದ ಮೂಲಕ ಈ ಸೆಗ್ಮೆಂಟ್​ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಕಪ್ಪು, ಕೆಂಪು, ನೀಲಿ ಮತ್ತು ಬಿಳಿ ಎಂಬ ನಾಲ್ಕು ಸಿಂಗಲ್ ಟೋನ್ ಬಣ್ಣಗಳಲ್ಲಿ ಸಿಂಪಲ್​ ಒನ್​ ಲಭ್ಯವಿದೆ. ಅದೇ ರೀತಿ ಕೆಂಪು ಅಲಾಯ್ ಚಕ್ರಗಳು ಮತ್ತು ಹೈಲೈಟ್​​ಗಳೊಂದಿಗೆ ಬಿಳಿ ಮತ್ತು ಕಪ್ಪು ಎಂಬ ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿಯೂ ಇದೆ. ಡ್ಯುಯಲ್-ಟೋನ್ ಬಣ್ಣಗಳ ಬೆಲೆಯು ಸಿಂಗಲ್-ಟೋನ್ ಬಣ್ಣಗಳಿಗಿಂತ 5,000 ರೂ.ಗಳಷ್ಟು ಅಧಿಕ.

ಸಿಂಪಲ್ ಒನ್ ಬೆಲೆ, ಪ್ರತಿಸ್ಪರ್ಧಿ ಸ್ಕೂಟರ್​​ಗಳು

ಸಿಂಪಲ್ ಒನ್​ ಸ್ಕೂಟರ್​​ಗೆ 1.45 ಲಕ್ಷ ರೂ.ಗಳಿಂದ 1.50 ಲಕ್ಷ ರೂ.ಗಳವರೆಗೆ ( ಬೆಂಗಳೂರು ಎಕ್ಸ್ ಶೋರೂಂ) ಬೆಲೆ ನಿಗದಿ ಮಾಡಲಾಗಿದೆ. ಈ ಮೂಲಕವೂ ಭಾರತದ ದುಬಾರಿ ಇ-ಸ್ಕೂಟರ್ ಎನಿಸಿಕೊಂಡಿದೆ. ವೇಗದ 750 ವ್ಯಾಟ್ ಚಾರ್ಜರ್​ಗೆ 13,000 ರೂಪಾಯಿ ಪಾವತಿ ಮಾಡಬೇಕು. ಇದು ಸೆಪ್ಟೆಂಬರ್​ನಿಂದ ಲಭ್ಯ.

ಓಲಾ ಎಸ್ 1 ಪ್ರೊ, ಏಥರ್ 450 ಎಕ್ಸ್, ಟಿವಿಎಸ್ ಐಕ್ಯೂಬ್ ಎಸ್, ಬಜಾಜ್ ಚೇತಕ್ ಮತ್ತು ವಿಡಾ ವಿ 1 ಪ್ರೊ ಸ್ಕೂಟರ್​​ಗಳಿಗೆ ಪೈಪೋಟಿ ಒಡ್ಡಲಿದೆ. ಸ್ಕೂಟರ್​ನ ವಿತರಣೆ ಜೂನ್ 6 ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಶೀಘ್ರದಲ್ಲೇ ಇತರ ನಗರಗಳಲ್ಲಿ ವಿತರಣೆ ಶುರುವಾಗಲಿದೆ. ಮುಂದಿನ 8ರಿಂದ 10 ತಿಂಗಳಲ್ಲಿ ಭಾರತದಲ್ಲಿ ‘140 ರಿಂದ 150’ ಶೋರೂಂಗಳನ್ನು ಸ್ಥಾಪಿಸುವ ಗುರಿಯನ್ನು ಸಿಂಪಲ್ ಒನ್​ ಹೊಂದಿದೆ.

Continue Reading

ಆಟೋಮೊಬೈಲ್

Tata Motors : ಆಲ್ಟ್ರೋಜ್​ ಐಸಿಎನ್​ಜಿಯ ಬೆಲೆ ಪ್ರಕಟ; ಎಷ್ಟಿರಬಹುದು ರೇಟ್​?

ಆಲ್ಟ್ರೋಜ್​ ಐಸಿಎನ್​ಜಿ ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಅತ್ಯಾಧುನಿಕ ಸುರಕ್ಷತಾ ಫೀಚರ್​ಗಳನ್ನು ಕೊಡಲಾಗಿದೆ.

VISTARANEWS.COM


on

Tata Motors ICNG Car
Koo

ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಸಿಎನ್​​ಜಿ ಚಾಲಿತ ಪ್ಯಾಸೆಂಜರ್ ಕಾರಉ ಆಲ್ಟ್ರೋಜ್ ಐಸಿಎನ್​ಜಿಯ ಬೆಲೆಯನ್ನು ಇತ್ತೀಚೆಗೆ ಘೋಷಿಸಿದೆ. ಆಲ್ಟ್ರೋಜ್ ಐಸಿಎನ್ ಜಿ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.55 ಲಕ್ಷಗಳಿಂದ ಆರಂಭವಾಗಿ ರೂ.10.55 ಲಕ್ಷಗಳ ತನಕ ನಿಗದಿ ಮಾಡಲಾಗಿದೆ. ಆಲ್ಟ್ರೋಜ್ ಐಸಿಎನ್​​ಜಿ ಕಾರನ್ನು 2023ರ ಆಟೋ ಎಕ್ಸ್​ಪೋದಲ್ಲಿ ಬಿಡುಗಡೆ ಅನಾವರಣ ಮಾಡಲಾಗಿತ್ತು. ಇದು ಟಾಟಾ ಮೋಟಾರ್ಸ್​​ನ ಮೂರನೇ ಸಿಎನ್​​ಜಿ ಕಾರಾಗಿದೆ. ಆಲ್ಟ್ರೋಜ್​ ಕಾರು ಆರು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಎಕ್ಸ್ಇ, ಎಕ್ಸ್ಎಂ+, ಎಕ್ಸ್ಎಂ + (ಎಸ್), ಎಕ್ಸ್​ಜಡ್​, ಎಕ್ಸ್ಝಡ್ + (ಎಸ್), ಮತ್ತು ಎಕ್ಸ್ಝಡ್ + ಒ (ಎಸ್) ಎಂಬ ವೇರಿಯೆಂಟ್​​ಗಳಲ್ಲಿ ಸಿಗುತ್ತಿವೆ. ಒಪೆರಾ ಬ್ಲೂ, ಡೌನ್​ಟೌನ್​ ರೆಡ್, ಆರ್ಕೇಡ್ ಗ್ರೇ ಮತ್ತು ಅವೆನ್ಯೂ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಟಾಟಾ ಮೋಟಾರ್ಸ್ ಈ ಹಿಂದೆ ಆಲ್ಟ್ರೋಜ್ ಐಸಿಎನ್​​ಜಿ ಕಾರನ್ನು 21,000 ರೂಪಾಯಿ ಟೋಕನ್​ ಕೊಟ್ಟು ಬುಕಿಂಗ್​ ಮಾಡಬಹುದು ಎಂದು ಘೋಷಿಸಿತ್ತು. ಇದೀಗ ಅದರ ದರಪಟ್ಟಿಯನ್ನು ಪ್ರಕಟಿಸಿದೆ. 2020ರ ಜನವರಿಯಲ್ಲಿ ಆಲ್ಟ್ರೋಜ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಅಲ್ಲಿಂದ ಅದು ಯಶಸ್ಸಿನ ಹಾದಿಯಲ್ಲೇ ಸಾಗುತ್ತಿತ್ತು. ಇದೀಗ ಆಲ್ಟ್ರೋಜ್ ಐಸಿಎನ್​​ಜಿಯನ್ನು ಪರಿಚಯಿಸುವ ಮೂಲಕ ತನ್ನ ಗ್ರಾಹಕರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಆಲ್ಟ್ರೋಜ್​ ಜತೆ ಹೋಲಿಕೆ ಮಾಡುವುದಾದರೆ ಬಾಹ್ಯ ವಿನ್ಯಾಸವು ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. 7.0-ಇಂಚಿನ ಟಚ್ ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಆ್ಯಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆ,, ಆಟೋ ಕ್ಲೈಮೆಟ್​ ಕಂಟ್ರೋಲ್​ ಮತ್ತಿತರ ಫೀಚರ್​ಗಳನ್ನು ಹೊಂದಿದೆ . 16ಇಂಚಿನ ಅಲಾಯ್ ವೀಲ್​​ಗಳು ಈ ಕಾರಿನಲ್ಲಿವೆ. ಆಲ್ಟ್ರೋಜ್ ಐಸಿಎನ್​​ಜಿ ಆರು ಏರ್ ಬ್ಯಾಗ್ ಗಳು, ಎಬಿಎಸ್ ವಿತ್ ಇಬಿಡಿ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್​​​ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್​​ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್​​ಚಂದ್ರ ಮಾತನಾಡಿ, ಆರ್ಥಿಕ ಮತ್ತು ಪರಿಸರ ಸ್ನೇಹಿ ಚಾಲನೆಯ ಉದ್ದೇಶದಿಂದ ಗ್ರಾಹಕರು ಪರ್ಯಾಯ ಇಂಧನ ಆಯ್ಕೆಗಳನ್ನು ಬಯಸುತ್ತಿದ್ದಾರೆ. ಸಿಎನ್​​​ಜಿ ಇಂಧನದ ವ್ಯಾಪಕ ಲಭ್ಯತೆಯಿಂದಾಗಿ ಆ ಕಡೆಗೂ ಜನರು ಗಮನ ಹರಿಸುತ್ತಿದ್ದಾರೆ. ಆದರೆ, ಸಿಎನ್​​ಜಿಯನ್ನು ಆಯ್ಕೆ ಮಾಡಿಕೊಂಡರೆ ಬೂಟ್​ ಸ್ಪೇಸ್​ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಬೂಟ್​ ಸ್ಪೇಸ್​ ಕಡಿಮೆಯಾಗದಂತೆ ಸುಧಾರಿತ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದೇವೆ. 2022ರ ಜನವರಿಯಲ್ಲಿ ಟಿಯಾಗೊ ಮತ್ತು ಟಿಗೋರ್​ನಲ್ಲಿ ಈ ತಾಂತ್ರಿಕತೆಯನ್ನು ಅಳವಡಿಸಿಕೊಂಡೆವು. ಅದೇ ದಿಕ್ಕಿನಲ್ಲಿ ಆಲ್ಟ್ರೋಜ್​ ಕೂಡ ಮಾರುಕಟ್ಟೆಗೆ ಇಳಿದಿದೆ ಎಂಬುದಾಗಿ ಹೇಳಿದರು.

ಇದನ್ನೂ ಓದಿ : Altroz CNG : ಟಾಟಾ ಮೋಟಾರ್ಸ್​​ನ ಆಲ್ಟ್ರೋಜ್​ ಸಿಎನ್​ಜಿ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳಿವು

ಆಲ್ಟ್ರೋಜ್ ಐಸಿಎನ್​​ಜಿಯಲ್ಲಿ ಮೈಕ್ರೊ ಸ್ವಿಚ್ ಅಳವಡಿಸಲಾಗಿದ್ದು ಇಂಧನ ತುಂಬಿಸುವ ಸಮಯದಲ್ಲಿ ಕಾರು ಎಂಜಿನ್ ಆಫ್​ ಆಗುತ್ತದೆ. ಇದು ಅಪಾಯಕಾರಿ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳುತ್ತದೆ. ಅದೇ ರೀತಿ ಥರ್ಮಲ್ ಇನ್ಸಿಡೆಂಟ್ ಪ್ರೊಟೆಕ್ಷನ್ ಸಿಸ್ಟಮ್ ಕೂಡ ಸೇರಿಸಲಾಗಿದೆ. ಇದು ಅಪಘಾತ ಸಂಭವಿಸಿದ ವೇಳೆ ಸಿಎನ್​​ಜಿ ಸೋರಿಕೆಯನ್ನು ತಡೆಯುತ್ತದೆ. ಡಿಕ್ಕಿಯಲ್ಲಿ ಅವಳಿ ಸಿಲಿಂಡರ್​​ಗಳನ್ನು ಇಟ್ಟಿರುವ ಕಾರಣ ಜಾಗದ ಸಮಸ್ಯೆ ಪರಿಹಾರವಾಗಿದೆ. ಲೋಡ್ ಫ್ಲೋರ್ ಅಡಿಯಲ್ಲಿ ವಾಲ್ವ್​​ಗಳು ಹಾಘೂ ಪೈಪ್​​ಗಳನ್ನು ರಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗದೆ.

Continue Reading

ಆಟೋಮೊಬೈಲ್

Elon Musk: ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ‌ ಆರಂಭಿಸಲು ಸ್ಥಳ ಗುರುತು ಎಂದ ಉದ್ಯಮಿ ಎಲಾನ್ ಮಸ್ಕ್

Elon Musk:ಕಳೆದ ಕೆಲವು ದಿನಗಳಿಂದಲೂ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಫ್ಯಾಕ್ಟರಿ ಆರಂಭಿಸಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

VISTARANEWS.COM


on

Edited by

Tesla Factory will be open by year end says Elon musk
Koo

ಸ್ಯಾನ್‌ ಫ್ರಾನ್ಸಿಸ್ಕೋ, ಅಮೆರಿಕ: ಭಾರತದಲ್ಲಿ ಟೆಸ್ಲಾ (Tesla) ತನ್ನ ಘಟಕವನ್ನು ಆರಂಭಿಸಲಿದೆ ಎಂದು ಕೆಲವು ದಿನಗಳಿಂದ ವರದಿಯಾಗುತ್ತಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ ಘಟಕವನ್ನು ಆರಂಭಿಸುವ ಸ್ಥಳವನ್ನು ಗುರುತಿಸಲಾಗುವುದು ಎಂದು ಟೆಸ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO) ಎಲಾನ್ ಮಸ್ಕ್ (Elon Musk) ಅವರು ಹೇಳಿದ್ದಾರೆ.

ವಾಲ್‌ಸ್ಟ್ರೀಟ್ ಜರ್ನಲ್‌ನ ಥೋರಾಲ್ಡ್ ಬಾರ್ಕರ್ ಅವರು ಕಾರ್ಯಕ್ರಮವೊಂದರಲ್ಲಿ, ಟೆಸ್ಲಾ ಫ್ಯಾಕ್ಟರಿ ಆರಂಭಕ್ಕೆ ಭಾರತವು ಆಸಕ್ತಿ ಹೊಂದಿದೆಯೇ ಎಂದು ಎಲಾನ್ ಮಸ್ಕ್ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ಅವರು, ಸಂಪೂರ್ಣವಾಗಿ ಎಂದು ಉತ್ತರಿಸಿದ್ದಾರೆ.

ಭಾರತದಲ್ಲಿ ಟೆಸ್ಲಾ ತನ್ನ ಫ್ಯಾಕ್ಟರಿಯನ್ನು ಆರಂಭಿಸಲು ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದು ಭಾರತದ ತಂತ್ರಜ್ಞಾನ ಸಹಾಯಕ ಸಚಿವರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕಳೆದ ವಾರ ರಾಯ್ಟರ್ಸ್ ವರದಿ ಮಾಡಿತ್ತು.
ವಿಶ್ವದ ಅತ್ಯಂತ ಬೆಲೆಬಾಳುವ ವಾಹನ ತಯಾರಕ ಟೆಸ್ಲಾ ತನ್ನ ಜಾಗತಿಕ ಉತ್ಪಾದನೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ, ಈ ವರ್ಷದ ಆರಂಭದಲ್ಲಿ ಮೆಕ್ಸಿಕೋದಲ್ಲಿ ಗಿಗಾಫ್ಯಾಕ್ಟರಿಯನ್ನು ತೆರೆಯುವುದಾಗಿ ಘೋಷಿಸಿತ್ತು. ಟೆಸ್ಲಾ, ಸ್ಪೇಸ್‌ಎಕ್ಸ್, ಟ್ವಿಟರ್‌ನ ಸಿಇಒ ಮತ್ತು ಹಲವಾರು ಇತರ ಸಂಸ್ಥೆಗಳ ಸಂಸ್ಥಾಪಕ ಎಲಾನ್ ಮಸ್ಕ್ ಅವರು ಮಂಗಳವಾರ ವಿವರಗಳನ್ನು ನೀಡದೆ, ಶಿಕ್ಷಣ ಸಂಸ್ಥೆಯನ್ನು ರಚಿಸುವ ಆಲೋಚನೆಯನ್ನು ತೇಲಿ ಬಿಟ್ಟರು.

ಎಲಾನ್ ಮಸ್ಕ್ ಅವರು ತಮ್ಮ ಕಂಪನಿಗಳ ಉತ್ತರಾಧಿಕಾರಿಯನ್ನು ಗುರುತಿಸಿದ್ದಾರೆ. ಆ ವ್ಯಕ್ತಿಯು ಅತ್ಯಂತ ಕೆಟ್ಟ ಸನ್ನಿವೇಶದಲ್ಲಿ ಕಂಪನಿಯನ್ನು ನಡೆಸಬಹುದು ಎಂದು ಅವರು ಹೇಳಿದರು. ನೋಡಿ, ನನಗೆ ಏನಾದರೂ ಅನಿರೀಕ್ಷಿತವಾಗಿ ಸಂಭವಿಸಿದಲ್ಲಿ, ನನ್ನ ಅಧಿಕಾರ ವಹಿಸಿಕೊಳ್ಳಲು ಇದು ನನ್ನ ಶಿಫಾರಸು ಎಂದು ನಾನು ಮಂಡಳಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ದೇಶಿಯವಾಗಿ ಎಲೆಕ್ಟ್ರಿಕ್ ಕಾರ್ ಮಾರಾಟ, ರಫ್ತಿಗಾಗಿ ಭಾರತದಲ್ಲೇ ಘಟಕ ತೆರೆಯಲು ಮುಂದಾದ ಟೆಸ್ಲಾ?

ಟೆಸ್ಲಾ ಮಂಡಳಿಯ ನಿರ್ದೇಶಕರಾದ ಜೇಮ್ಸ್ ಮುರ್ಡೋಕ್ ಅವರು ಕಳೆದ ವರ್ಷ ನ್ಯಾಯಾಲಯದಲ್ಲಿ ಟ್ವಿಟ್ಟರ್‌ಗೆ ಸಂಬಂಧಿಸಿದಂತೆ ಹೂಡಿಕೆದಾರರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ ಸಮಯದಲ್ಲಿ ಎಲೆಕ್ಟ್ರಿಕ್ ಕಾರು ತಯಾರಕರ ಮುಖ್ಯಸ್ಥರಾಗಲು ಸಂಭಾವ್ಯ ಉತ್ತರಾಧಿಕಾರಿ ಯಾರಾಗಬೇಕು ಎಂಬುದನ್ನು ಎಲಾನ್ ಮಸ್ಕ್ ಅವರು ಗುರುತಿಸಿದ್ದಾರೆ ಎಂದು ಸಾಕ್ಷ್ಯ ನುಡಿದಿದ್ದರು. ಇತ್ತೀಚೆಗಷ್ಟೇ ಟ್ವಿಟರ್‌ಗೆ ಸಿಇಒ ಅವರನ್ನು ಘೋಷಿಸಿರುವ ಮಸ್ಕ್ ಈಗ ತಮ್ಮ ಗಮನವನ್ನು ಟೆಸ್ಲಾ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದಾರೆ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
Prime minister Modi in 101th Mann ki Baat
ದೇಶ7 mins ago

Mann Ki Baat : 101ನೇ ಮನ್‌ ಕಿ ಬಾತ್‌ನಲ್ಲಿ ಮೋದಿಯವರು ವೀರ ಸಾವರ್ಕರ್‌ ವಿಚಾರಗಳ ಬಗ್ಗೆ ಹೇಳಿದ್ದೇನು?

Vinayak damodar savarkar
ಅಂಕಣ8 mins ago

Savarkar Jayanti: ಭಾರತೀಯರನ್ನು ಸ್ವಸ್ವರೂಪದ ಅರಿವಿನೆಡೆಗೆ ನಡೆಸಿದ ವೀರ ಸಾವರ್ಕರ್‌

kapil dev 1983 world cup captain
ಕ್ರಿಕೆಟ್23 mins ago

IPL 2023: ಗಿಲ್​ ಕ್ರಿಕೆಟ್​ ಭವಿಷ್ಯ ನುಡಿದ ಕಪಿಲ್ ದೇವ್​

daredevil mustafa Running successful
South Cinema24 mins ago

Kannada New Movie: ʻಡೇರ್‌ಡೆವಿಲ್‌ ಮುಸ್ತಾಫಾ‌ʼ ಅಮೋಘ ಪ್ರದರ್ಶನ; ಹೊರದೇಶದಲ್ಲಿ ತೆರೆಕಾಣಲಿದೆ ಸಿನಿಮಾ

somana kunitha
ಕಲೆ/ಸಾಹಿತ್ಯ25 mins ago

ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

Ram Charan presents The India House Film
South Cinema25 mins ago

Ram Charan: ವೀರ್ ಸಾವರ್ಕರ್ ಜನುಮದಿನದಂದೇ ʻವಿ ಮೆಗಾ ಪಿಕ್ಚರ್ಸ್ʼ ಹೊಸ ಸಿನಿಮಾ ಅನೌನ್ಸ್‌; ವಿಡಿಯೊ ಹಂಚಿಕೊಂಡ ರಾಮ್‌ಚರಣ್‌!

PM Modi Tweet After inaugurates new Parliament building
ದೇಶ29 mins ago

ಹೊಸ ಸಂಸತ್​ ಭವನ ಉದ್ಘಾಟನೆ; ಈ ಕಟ್ಟಡ ಸಬಲೀಕರಣಕ್ಕೆ ತೊಟ್ಟಿಲಾಗಲಿ ಎಂದ ಪ್ರಧಾನಿ ಮೋದಿ

Bandipur National Park PM Narendra modi visit
ಕರ್ನಾಟಕ30 mins ago

Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

CM Siddaramaiah and B Nagendra and DK Shivakumar
ಕರ್ನಾಟಕ35 mins ago

Karnataka Cabinet: 34 ಸಚಿವರ ಪೈಕಿ 16 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್, ನಂ.1 ಸ್ಥಾನದಲ್ಲಿ ಯಾರಿದ್ದಾರೆ?

Rain alert
ಉಡುಪಿ50 mins ago

Weather Report: ಭಾನುವಾರ ಈ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಗಾಳಿ ವೇಗವೂ ಹೆಚ್ಚಲಿದೆ ಎಂದ ಹವಾಮಾನ ಇಲಾಖೆ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Land Surveyor Recruitment
ಉದ್ಯೋಗ4 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

New Parliament building inauguration Live Video Here
ದೇಶ2 hours ago

New Parliament Building: ನೂತನ ಸಂಸತ್​ ಭವನದ ಉದ್ಘಾಟನೆ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

horoscope today
ಪ್ರಮುಖ ಸುದ್ದಿ8 hours ago

Horoscope Today : ವಾರದ ರಜೆಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ನೋಡೋಣ

Laxmi Hebbalkar oath taking as a minister
ಕರ್ನಾಟಕ19 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ2 days ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ2 days ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ2 days ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ3 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ3 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ4 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

ಟ್ರೆಂಡಿಂಗ್‌

error: Content is protected !!