Site icon Vistara News

Citron C3 : ಮೂರು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಿದ ಫ್ರೆಂಚ್​ ಕಂಪನಿ ಸಿಟ್ರಾನ್​

French company Citron has increased the price twice in three months

#image_title

ಬೆಂಗಳೂರು: ಫ್ರಾನ್ಸ್​ ಮೂಲದ ಕಾರು ತಯಾರಿಕಾ ಕಂಪನಿ ಸಿಟ್ರಾನ್​ ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಸಿಟ್ರಾನ್​ ಸಿ3 (Citron C3) ಕಾರಿನ ಬೆಲೆಯನ್ನು ಏರಿಕೆ ಮಾಡಿದೆ. ಈ ಮೂಲಕ ಕಾರಿನ ಒಟ್ಟು ಬೆಲೆ 45 ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಜನವರಿ 2022ರಲ್ಲಿ ಸಿಟ್ರಾನ್​ ಕಾರು ಭಾರತದಲ್ಲಿ ಮಾರುಕಟ್ಟೆಗೆ ಇಳಿದಿತ್ತು. ಅಲ್ಲಿಂದ ಒಂದು ವರ್ಷ ಬೆಲೆಯಲ್ಲಿ ಏರಿಕೆ ಮಾಡಿರಲಿಲ್ಲ. ಇದೀಗ ಎರಡೆರಡು ಬಾರಿ ಹೆಚ್ಚಳ ಮಾಡಿದೆ. ಆದರೆ, ಈ ಬಾರಿ ಕೆಲವೊಂದು ಅಪ್​ಡೇಟ್​ಗಳನ್ನೂ ಕೊಟ್ಟಿದೆ.

ಸಿಟ್ರಾನ್ ಕಂಪನಿ ಸಿ3 ಕಾರಿನ ಎಂಜಿನ್​ ಅನ್ನು ಅಪ್​ಡೇಟ್​ ಮಾಡಿದೆ. ಇದು ಬಿಎಸ್​6 ಸೆಕೆಂಡ್​ ಸ್ಟೇಜ್​ನ ಮಾನದಂಡಗಳನ್ನು ಹೊಂದಿದೆ. ಏಪ್ರಿಲ್​ 1ರ ಮೊದಲು ಬಿಎಸ್6ನ ಹೊಸ ಮಾನದಂಡಗಳನ್ನು ಅಳವಡಿಕೆ ಮಾಡುವಂತೆ ಕೇಂದ್ರ ಸರಕಾರ ಹೇಳಿದೆ. ಆ ಕೆಲಸವನ್ನು ಮುಗಿಸಿರುವ ಸಿಟ್ರಾನ್​ ಬೆಲೆ ಏರಿಕೆ ಮಾಡಿದೆ. ಆದರೆ, ಮತ್ಯಾವುದೇ ಅಪ್​ಡೇಟ್​ಗಳನ್ನು ಕೊಟ್ಟಿಲ್ಲ.

ಇದನ್ನೂ ಓದಿ : Tata Motors : ಟಾಟಾ ಟಿಗೋರ್​ ಇವಿ ಹಾಗೂ ಸಿಟ್ರಾನ್​ ಇ- ಸಿ3 ಕಾರಿನ ನಡುವೆ ಯಾವುದು ಬೆಸ್ಟ್​?

ಸಿಟ್ರಾನ್​ ಸಿ3 ಕಾರು ಬಿಡುಗಡೆಗೊಳ್ಳುವಾಗ ಆರಂಭಿಕ ಬೆಲೆ 5.70 ಲಕ್ಷ ರೂಪಾಯಿಗಳು. ಟಾಪ್​ ವೇರಿಯೆಂಟ್​ನ ಬೆಲೆ 8.05 ಲಕ್ಷ ರೂಪಾಯಿಗಳಾಗಿತ್ತು. ಕಳೆದ ಜನವರಿಯಲ್ಲಿ 5.98 ಲಕ್ಷ ರೂಪಾಯಿಗಳಾಯಿತು. ಇದೀಗ 6.16 ಲಕ್ಷ ರೂಪಾಯಿಗಳಷ್ಟಾಗಿದೆ. ಟಾಪ್​ ಎಂಡ್ ಕಾರಿನ ಬೆಲೆ 8.25 ಲಕ್ಷ ರೂಪಾಯಿಗಳಾಗಿವೆ.

ಎಂಜಿನ್​ ಸಾಮರ್ಥ್ಯ?

ಸಿಟ್ರಾನ್​ ಸಿ3 ಕಾರಿನಲ್ಲಿ 1.2 ಲೀಟರ್​ನ ಪೆಟ್ರೋಲ್​ ಎಂಜಿನ್​ ಇದೆ. ಇದು 81 ಬಿಎಚ್​ಪಿ ಪವರ್​ ಹಾಗೂ 115 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಅದೇ ರೀತಿ ಟರ್ಬೊಚಾರ್ಜ್ಡ್​ 1.2 ಲೀಟರ್​ನ ಎಂಜಿನ್​ 109 ಬಿಎಚ್​ಪಿ ಪವರ್​ ಹಾಗೂ 190 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್​ನ ಮ್ಯಾನುಯಲ್​ ಹಾಗೂ ಆರು ಸ್ಪೀಡ್​ನ ಆಟೊಮ್ಯಾಟಿಕ್​ ಗೇರ್​ ಬಾಕ್ಸ್​ ಇದೆ.

Exit mobile version