ಆಟೋಮೊಬೈಲ್
Citron C3 : ಮೂರು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಿದ ಫ್ರೆಂಚ್ ಕಂಪನಿ ಸಿಟ್ರಾನ್
ಸಿಟ್ರಾನ್ ಕಂಪನಿ ಸಿ3 (Citron C3) ಕಾರಿನ ಬೆಲೆಯನ್ನು ಕಳೆದ ಜನವರಿಯಲ್ಲಿ ಏರಿಕೆ ಮಾಡಿತ್ತು. ಇದೀಗ ಕಾರಿನ ಆರಂಭಿಕ ಬೆಲೆ 6.16 ಲಕ್ಷ ರೂಪಾಯಿ.
ಬೆಂಗಳೂರು: ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪನಿ ಸಿಟ್ರಾನ್ ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಸಿಟ್ರಾನ್ ಸಿ3 (Citron C3) ಕಾರಿನ ಬೆಲೆಯನ್ನು ಏರಿಕೆ ಮಾಡಿದೆ. ಈ ಮೂಲಕ ಕಾರಿನ ಒಟ್ಟು ಬೆಲೆ 45 ಸಾವಿರ ರೂಪಾಯಿಯಷ್ಟು ಏರಿಕೆಯಾಗಿದೆ. ಜನವರಿ 2022ರಲ್ಲಿ ಸಿಟ್ರಾನ್ ಕಾರು ಭಾರತದಲ್ಲಿ ಮಾರುಕಟ್ಟೆಗೆ ಇಳಿದಿತ್ತು. ಅಲ್ಲಿಂದ ಒಂದು ವರ್ಷ ಬೆಲೆಯಲ್ಲಿ ಏರಿಕೆ ಮಾಡಿರಲಿಲ್ಲ. ಇದೀಗ ಎರಡೆರಡು ಬಾರಿ ಹೆಚ್ಚಳ ಮಾಡಿದೆ. ಆದರೆ, ಈ ಬಾರಿ ಕೆಲವೊಂದು ಅಪ್ಡೇಟ್ಗಳನ್ನೂ ಕೊಟ್ಟಿದೆ.
ಸಿಟ್ರಾನ್ ಕಂಪನಿ ಸಿ3 ಕಾರಿನ ಎಂಜಿನ್ ಅನ್ನು ಅಪ್ಡೇಟ್ ಮಾಡಿದೆ. ಇದು ಬಿಎಸ್6 ಸೆಕೆಂಡ್ ಸ್ಟೇಜ್ನ ಮಾನದಂಡಗಳನ್ನು ಹೊಂದಿದೆ. ಏಪ್ರಿಲ್ 1ರ ಮೊದಲು ಬಿಎಸ್6ನ ಹೊಸ ಮಾನದಂಡಗಳನ್ನು ಅಳವಡಿಕೆ ಮಾಡುವಂತೆ ಕೇಂದ್ರ ಸರಕಾರ ಹೇಳಿದೆ. ಆ ಕೆಲಸವನ್ನು ಮುಗಿಸಿರುವ ಸಿಟ್ರಾನ್ ಬೆಲೆ ಏರಿಕೆ ಮಾಡಿದೆ. ಆದರೆ, ಮತ್ಯಾವುದೇ ಅಪ್ಡೇಟ್ಗಳನ್ನು ಕೊಟ್ಟಿಲ್ಲ.
ಇದನ್ನೂ ಓದಿ : Tata Motors : ಟಾಟಾ ಟಿಗೋರ್ ಇವಿ ಹಾಗೂ ಸಿಟ್ರಾನ್ ಇ- ಸಿ3 ಕಾರಿನ ನಡುವೆ ಯಾವುದು ಬೆಸ್ಟ್?
ಸಿಟ್ರಾನ್ ಸಿ3 ಕಾರು ಬಿಡುಗಡೆಗೊಳ್ಳುವಾಗ ಆರಂಭಿಕ ಬೆಲೆ 5.70 ಲಕ್ಷ ರೂಪಾಯಿಗಳು. ಟಾಪ್ ವೇರಿಯೆಂಟ್ನ ಬೆಲೆ 8.05 ಲಕ್ಷ ರೂಪಾಯಿಗಳಾಗಿತ್ತು. ಕಳೆದ ಜನವರಿಯಲ್ಲಿ 5.98 ಲಕ್ಷ ರೂಪಾಯಿಗಳಾಯಿತು. ಇದೀಗ 6.16 ಲಕ್ಷ ರೂಪಾಯಿಗಳಷ್ಟಾಗಿದೆ. ಟಾಪ್ ಎಂಡ್ ಕಾರಿನ ಬೆಲೆ 8.25 ಲಕ್ಷ ರೂಪಾಯಿಗಳಾಗಿವೆ.
ಎಂಜಿನ್ ಸಾಮರ್ಥ್ಯ?
ಸಿಟ್ರಾನ್ ಸಿ3 ಕಾರಿನಲ್ಲಿ 1.2 ಲೀಟರ್ನ ಪೆಟ್ರೋಲ್ ಎಂಜಿನ್ ಇದೆ. ಇದು 81 ಬಿಎಚ್ಪಿ ಪವರ್ ಹಾಗೂ 115 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಅದೇ ರೀತಿ ಟರ್ಬೊಚಾರ್ಜ್ಡ್ 1.2 ಲೀಟರ್ನ ಎಂಜಿನ್ 109 ಬಿಎಚ್ಪಿ ಪವರ್ ಹಾಗೂ 190 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ನ ಮ್ಯಾನುಯಲ್ ಹಾಗೂ ಆರು ಸ್ಪೀಡ್ನ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಇದೆ.
ಆಟೋಮೊಬೈಲ್
Renault Kwid : ಈ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಲ್ಲಿ ಇರುವುದಿಲ್ಲ
ಬಿಎಸ್6 ಮಾನದಂಡಗಳು ಕಠಿಣಗೊಂಡಿರುವ ಕಾರಣ ಕೆಲವೊಂದು ಕಾರುಗಳ ಉತ್ಪಾದನೆ ನಿಲ್ಲಲಿದೆ.
ಮುಂಬಯಿ: ಭಾರತ ಸರಕಾರ ವಾಹನಗಳು ಪಾಲಿಸಬೇಕಾದ ಪರಿಸರ ಮಾಲಿನ್ಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ. ಬಿಎಸ್6 ಎರಡನೇಹಂತದ ಮಾನದಂಡದ ಮೂಲಕ ವಾಹನಗಳು ಉಗುಳುವ ಹೊಗೆಯ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಭಾರತದ ಕಾರುಗಳ ಉತ್ಪಾದಕರು ಎಂಜಿನ್ನಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವೊಂದು ಮಾಡೆಲ್ಗಳನ್ನು ಹೊಸ ಮಾನದಂಡಕ್ಕೆ ಪೂರಕವಾಗಿ ಅಪ್ಗ್ರೇಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಇಂಥ ಕಾರುಗಳು ಏಪ್ರಿಲ್ 1ರಿಂದ ಭಾರತದ ಮಾರುಕಟ್ಟೆಯಿಂದ ಕಣ್ಮರೆಯಾಗಲಿವೆ. ಅಂಥ ಕೆಲವು ಕಾರುಗಳ ವಿವರ ಇಲ್ಲಿದೆ.
ಟಾಟಾ ಆಲ್ಟ್ರೊಜ್ (ಡೀಸೆಲ್) – Tata Alatroz
ಟಾಟಾ ಮೋಟಾರ್ಸ್ನ ಆಲ್ಟ್ರೊಜ್ ಪ್ರೀಮಿಯಮ್ ಹ್ಯಾಚ್ಬ್ಯಾಕ್. ಆದರೆ, ಇದರ 1497 ಸಿಸಿಯ ಡೀಸೆಲ್ ಎಂಜಿನ್ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಏಪ್ರಿಲ್ ಒಂದರಿಂದ ಮಾರುಕಟ್ಟೆಗೆ ಇಳಿಯುವ ಸಾಧ್ಯತೆಗಳು ಇಲ್ಲ. ಈ ಕಾರಿನ ಎಂಜಿನ್ 88.77 ಬಿಎಚ್ಪಿ ಪವರ್ ಹಾಗೂ 200 ಎನ್ಎಮ್ ಟಾರ್ಕ್ ಬಿಡಗಡೆ ಮಾಡುತ್ತಿತ್ತು.
ರಿನೋ ಕ್ವಿಡ್ – Renault Kwid
ರಿನೋ ಕಂಪನಿ ತನ್ನೆಲ್ಲ ಕಾರುಗಳನ್ನು ಬಿಎಸ್6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ಮೊದಲಾಗಿ ಅಪ್ಗ್ರೇಡ್ ಮಾಡಿದೆ. ಆದರೆ, ರಿನೋ ಕ್ವಿಡ್ ಕುರಿತು ಮಾಹಿತಿ ಇಲ್ಲ. ಕ್ವಿಡ್ನಲ್ಲಿ 1 ಲೀಟರ್ನ 3 ಸಿಲಿಂಡರ್ ಎಂಜಿನ್ ಇದ್ದು, ಇದು 68 ಬಿಎಚ್ಪಿ ಪವರ್ ಹಾಗೂ 91 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಕಾರು ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.
ಹೋಂಡಾ ಅಮೇಜ್ (ಡೀಸೆಲ್)- Honda Amaze
ಹೋಂಡಾ ಕಂಪನಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಮೇಜ್ ಕಾರಿನ ಡೀಸೆಲ್ ಮಾಡೆಲ್ ತೆಗೆದು ಹಾಕಿದೆ. ಕಂಪನಿ ಪ್ರಕಾರ ಅದರ 1.5 ಲೀಟರ್ ಡೀಸೆಲ್ ಎಂಜಿನ್ ಬಿಎಸ್6 ಮಾನದಂಡಗಳನ್ನು ಪೂರೈಸಲು ಪೂರಕವಾಗಿಲ್ಲ. ಅದೇ ರೀತಿ ಡೀಸೆಲ್ ವೇರಿಯೆಂಟ್ಗೆ ಡಿಮ್ಯಾಂಡ್ ಕೂಡ ಕಡಿಮೆಯಾಗಿದೆ ಎಂದು ಹೇಳಿದೆ. ಹೀಗಾಗಿ ಈ ಮಾಡೆಲ್ ಏಪ್ರಿಲ್ 1ರಿಂದ ಇರುವುದಿಲ್ಲ.
ಹೋಂಡಾ ಡಬ್ಲ್ಯುಆರ್ವಿ- Honda WRV
ಹೋಂಡಾ ಕಂಪನಿಯು ತನ್ನ ಕ್ರಾಸ್ ಓವರ್ ಹ್ಯಾಚ್ಬ್ಯಾಕ್ ಡಬ್ಲ್ಯುಆರ್ವಿ ಉತ್ಪಾದನೆ ಕೂಡ ನಿಲ್ಲಿಸಲಿದೆ. ಇದು 1.2 ಲೀಟರ್ನ ಪೆಟ್ರೋಲ್ ಹಾಗೂ 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿತ್ತು. ಈ ಕಾರು ಇನ್ನು ಮುಂದೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.
ಹೋಂಡಾ ಜಾಜ್- Honda Jazz
ಹೋಂಡಾ ಜಾಜ್ ಕಾರು ಕೂಡ ಏಪ್ರಿಲ್ 2023ರಿಂದ ಸಿಗುವುದಿಲ್ಲ. ಇದು 1.2 ಲೀಟರ್ ಐವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು 88.7 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ.
ಮಹೀಂದ್ರಾ ಮೊರಾಜೊ- Mahindra Marazzo
ಮಹೀಂದ್ರಾ ಕಂಪನಿಯು ತನ್ನ ಮೊರೊಜಾ ಎಮ್ಪಿವಿ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಏಪ್ರಿಲ್ 2023ರಿಂದ ಮಾರುವ ಸಾಧ್ಯತೆಗಳಿಲ್ಲ. ಈ ಕಾರು 1.5 ಲೀಟರ್ನ ಡೀಸೆಲ್ ಎಂಜಿನ್ ಹೊಂದಿದ್ದು 121 ಬಿಎಚ್ಪಿ ಪವರ್ ಹಾಗೂ 300 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ.
ಆಟೋಮೊಬೈಲ್
BMW Bike : ಬಿಎಮ್ಡಬ್ಲ್ಯು ಕಂಪನಿಯ ಈ ಬೈಕ್ಗೆ 35 ಲಕ್ಷ ರೂಪಾಯಿ; ಯಾಕೆ ಅಷ್ಟು ಬೆಲೆ?
ಆರ್18 ಬೈಕ್ 1800 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಹಲವಾರು ಸೇಫ್ಟಿ ಫೀಚರ್ಗಳೂ ಇವೆ.
ಮುಂಬಯಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಜರ್ಮನಿ ಮೂಲದ ಕಂಪನಿ ಬಿಎಮ್ಡಬ್ಲ್ಯು ದುಬಾರಿ ಬೆಲೆಯ ಬೈಕ್ಗಳನ್ನೂ (BMW Bike) ಉತ್ಪಾದಿಸುತ್ತದೆ. ಈ ಕಂಪನಿ ತಯಾರಿಸಿರುವ ಆರ್ 18 ಟ್ರಾನ್ಸ್ಕಾಂಟಿನೆಂಟ್ನ ಬೈಕ್ 35 ಲಕ್ಷ ರೂಪಾಯಿ ಬೆಲೆಯೊಂದಿಗೆ ಭಾರತದಲ್ಲೂ ಬಿಡುಗಡೆಯಾಗಿದೆ. ಬೈಕ್ ಸಂಪೂರ್ಣವಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗಲಿದೆ. ಇದರ ಎಕ್ಸ್ಶೋ ರೂಮ್ ಬೆಲೆ 31.50 ಲಕ್ಷ ರೂಪಾಯಿ. ತೆರಿಗೆ ಹಾಗೂ ಇನ್ಸ್ಯುರೆನ್ಸ್ ಸೇರಿಕೊಂಡು 35 ಲಕ್ಷ ರೂಪಾಯಿ ದಾಟುತ್ತದೆ. ಹಲವಾರು ವಿಶೇಷ ಫೀಚರ್ಗಳನ್ನು ಹೊಂದಿರುವ ಈ ಬೈಕ್ಗೆ ದೊಡ್ಡ ಅಭಿಮಾನಿ ವರ್ಗವೇ ಇದೆ. ಇದು ಆರ್18 ಸೆಗ್ಮೆಂಟ್ನ ಮೂರನೇ ಬೈಕ್. ಈ ಹಿಂದೆ ಆರ್18, ಆರ್18 ಕ್ಲಾಸಿಕ್ ಎಂಬ ಬೈಕ್ಗಳನ್ನು ಬಿಎಂಡಬ್ಲ್ಯು ಬಿಡುಗಡೆ ಮಾಡಿತ್ತು.
ಬಿಎಂಡಬ್ಲ್ಯು ಆರ್18 ಟ್ರಾನ್ಕಾಂಟಿನೆಂಟನ್ 1802 ಸಿಸಿಯ ಎಂಜಿನ್ನಲ್ಲಿ ಎರಡು ಸಿಲಿಂಡರ್ಗಳಿವೆ ಹಾಗೂ ಏರ್ಕೂಲ್ಡ್ ತಾಂತ್ರಿಕತೆ ಹೊಂದಿದೆ. ಇದು 4750 ಆರ್ಪಿಎಮ್ನಲ್ಲಿ 89 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತದೆ. ಅದೇ ರೀತಿ 2000ರಿಂದ 4000 ಆರ್ಪಿಎಮ್ ಒಳಗೆ 150 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್ನ ಗೇರ್ಬಾಕ್ಸ್ ಇದು ಹೊಂದಿದ್ದು, ಆ್ಯಂಟಿ ಹೋಪಿಂಗ್ ಕ್ಲಚ್ ಕೂಡ ಇದೆ. ಹೆಚ್ಚುವರಿಯಾಗಿ ರಿವರ್ಸ್ ಗೇರ್ ಆಯ್ಕೆಯನ್ನೂ ನೀಡಲಾಗಿದೆ. ಇದು 427 ಕೆ.ಜಿ ಭಾರವಿದ್ದು, 24 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ನೀಡಲಾಗಿದೆ. ನಾಲ್ಕು ಲೀಟರ್ ಪೆಟ್ರೊಲ್ನ ರಿಸರ್ವ್ ಕೆಪಾಸಿಟಿಯೂ ಇದೆ.
ಇದನ್ನೂ ಓದಿ : Hero MotoCorp : ಹೀರೋ ಸೂಪರ್ ಸ್ಪ್ಲೆಂಡರ್ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?
ರೇನ್, ರೋಲ್ ಆ್ಯಂಡ್ ರಾಕ್ ಎಂಬ ಮೂರು ರೈಡಿಂಗ್ ಮೋಡ್ಗಳಿವೆ. ರೋಲ್ ಮೋಡ್ನಲ್ಲಿ ಸೆಫ್ಟಿ ಫೀಚರ್ಗಳು ಹೆಚ್ಚು ಕೆಲಸ ಮಾಡುತ್ತವೆ. ರಾಕ್ ಮೋಡ್ನಲ್ಲಿ ಆಟೋಮ್ಯಾಟಿಕ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಯಿದೆ. ಕ್ರೂಸ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕೀ ಲೆಸ್ ರೈಡ್ ಮತ್ತಿತರ ಫೀಚರ್ಗಳಿವೆ. ಮುಂಭಾಗದಲ್ಲಿ ಟ್ವಿನ್ ಡಿಸ್ಕ್ ಬ್ರೇಕ್ ಇದ್ದರೆ, ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಇದೆ.
ಆರ್18 ಟ್ರಾನ್ಸ್ಕಾಂಟಿನೆಂಟಲ್ ಬೈಕ್ ಅನ್ನು ರಸ್ತೆಗೆ ಇಳಿಸುವ ಮೂಲಕ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ಐಷಾರಾಮಿ ಬೈಕ್ಗಳ ಹೊಸ ಯುಗವನ್ನು ಆರಂಭಿಸಿದೆ. ಹೊಸ ತಾಂತ್ರಿಕತೆ, ಆಕರ್ಷಕ ವಿನ್ಯಾಸ ಹಾಗೂ ಅನುಕೂಲಕರ ಸವಾರಿ ಅನುಭವ ನೀಡುವ ಈ ಬೈಕ್ಗಳು ಭಾರತದ ಬೈಕ್ ಪ್ರಿಯರನ್ನು ಸೆಳೆಯಲಿದೆ ಎಂದು ಬಿಎಂಡಬ್ಲ್ಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಲೆ ಏಕೆ ಜಾಸ್ತಿ?
ಈ ಬೈಕ್ಗಳು ಜಾಗತಿಕ ಮಟ್ಟದಲ್ಲಿ ಹೊಂದಿರುವ ಅತ್ಯಂತ ದಕ್ಷ ಸೇಫ್ಟಿ ಫೀಚರ್ಗಳನ್ನು ಹೊಂದಿದೆ. ಅದೇ ರೀತಿ ಬಿಎಂಡಬ್ಲ್ಯು ಬೈಕ್ಗಳು ಕಾರುಗಳಂತೆಯೇ ದುಬಾರಿ. ಅದಕ್ಕಿಂತ ಹೆಚ್ಚಾಗಿ ವಿದೇಶದಲ್ಲಿಯೇ ತಯಾರಾಗಿ ಭಾರತದಲ್ಲಿ ಮಾರಾಟವಾಗುವ ಬೈಕ್ಗಳಿಗೆ ಅದರ ಮೂಲ ಬೆಲೆಯಷ್ಟೇ ತೆರಿಗೆಯನ್ನೂ ಕಟ್ಟಬೇಕಾಗುತ್ತದೆ. ಹೀಗಾಗಿ ಬೆಲೆ ದುಬಾರಿಯಾಗುತ್ತದೆ.
ಆಟೋಮೊಬೈಲ್
Hero MotoCorp : ಏಪ್ರಿಲ್ 1ರಿಂದ ಹೀರೊ ಕಂಪನಿಯ ಬೈಕ್ಗಳ ಬೆಲೆ ಏಕಕಾಲಕ್ಕೆ ಏರಿಕೆ; ಕಾರಣ ಇಲ್ಲಿದೆ ಕೇಳಿ
ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಬೆಲೆಯಲ್ಲಿ ಏರಿಕೆ ಮಾಡಲಿದೆ ಹೀರೊ ಮೋಟೊಕಾರ್ಪ್ (Hero MotoCorp).
ಮುಂಬಯಿ: ಭಾರತದ ಹೆಮ್ಮೆಯ ದ್ವಿಚಕ್ರ ವಾಹನ ಕಂಪನಿ ಹೀರೊ ಮೋಟೊಕಾರ್ಪ್(Hero MotoCorp) ತನ್ನೆಲ್ಲ ಬೈಕ್ಗಳ ಬೆಲೆಯನ್ನು ಏಪ್ರಿಲ್ 1ರಿಂದ ಏರಿಕೆ ಮಾಡಲಿದೆ. ಹೀಗಾಗಿ ಹೀರೊ ಬೈಕ್ ಪ್ರೇಮಿಗಳಿಗೆ ಅದರ ಬಿಸಿ ತಟ್ಟಲಿದೆ. ಯಾಕೆಂದರೆ ಕನಿಷ್ಠ ಪಕ್ಷ ಶೇಕಡಾ 2ರಷ್ಟು ಬೆಲೆ ಏರಿಕೆಯಾಗಿದೆ. ಅದೇ ರೀತಿ ಬೆಲೆ ಏರಿಕೆ ಮಾಡೆಲ್ಗಳಿಗೆ ತಕ್ಕಂತೆ ವ್ಯತ್ಯಾಸವೂ ಆಗಲಿದೆ. ಯಾಕೆ ಗೊತ್ತೇ, ಕೇಂದ್ರ ಸರಕಾರ ವಾಹನಗಳ ಮಾಲಿನ್ಯ ಮಾನದಂಡವನ್ನು ಇನ್ನಷ್ಟು ಬಿಗಿಗೊಳಿಸಿದ್ದು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಅದಕ್ಕಾಗಿ ಹೀರೊ ಸೇರಿದಂತೆ ಎಲ್ಲ ವಾಹನ ಕಂಪನಿಗಳು ಎಂಜಿನ್ನಲ್ಲಿ ಬದಲಾವಣೆ ಮಾಡಿಕೊಂಡಿವೆ. ಅದರ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲು ಮುಂದಾಗಿದೆ ಕಂಪನಿಗಳು. ಅಂತೆಯೇ ಹೀರೊ ಕೂಡ ತನ್ನ ಬೈಕ್ಗಳ ಬೆಲೆ ಏರಿಕೆ ಮಾಡಲಿದೆ.
ಭಾರತದ ಆಟೋಮೊಬೈಲ್ ಕ್ಷೇತ್ರವು ಬಿಎಸ್6 ಎರಡನೇ ಹಂತದ ಮಾನದಂಡವನ್ನು ಪೂರೈಸುವ ಕೆಲಸದಲ್ಲಿ ಬ್ಯುಸಿಯಾಗಿದೆ. ಪ್ರಮುಖವಾಗಿ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗುತ್ತದೆ (ಆನ್ ಬೋರ್ಡ್ ಡಯಾಗ್ನಾಸ್ಟಿಕ್) . ಈ ಸಾಧನವು ವಾಹನ ಉಗುಳುವ ಹೊಗೆಯ ಪ್ರಮಾಣವನ್ನು ನಿರಂತರವಾಗಿ ಮಾಪನ ಮಾಡುತ್ತದೆ. ಇದಕ್ಕಾಗಿ ಎಂಜಿನ್ನಲ್ಲಿ ಕ್ಯಾಟಲಿಟಿಕ್ ಕನ್ವರ್ಟರ್ ಮತ್ತು ಆಕ್ಸಿಜನ್ ಸೆನ್ಸರ್ಗಳನ್ನು ಅಳವಡಿಸಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಬೈಕ್ಗಳ ಬೆಲೆ ಏರಿಸುವ ಮೂಲಕ ನಿಭಾಯಿಸಲು ಹೀರೊ ಕಂಪನಿ ಮುಂದಾಗಿದೆ.
ಕೆಲವು ದಿನಗಳಿಂದ ಭಾರತದ ಕಾರು ತಯಾರಿಕಾ ಕಂಪನಿಗಳಾದ ಮಾರುತಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮರ್ಸಿಡೀಸ್ ಬೆಂಜ್, ಆಡಿ ತನ್ನ ಕಾರುಗಳ ಬೆಲೆಯನ್ನು ಏರಿಕೆ ಮಾಡಿದ್ದವು. ಆ ಕಂಪನಿಗಳು ಕೂಡ ಇದೇ ಕಾರಣವನ್ನು ಕೊಟ್ಟಿದ್ದವು.
ಇದನ್ನೂ ಓದಿ : Honda Shine : ಸ್ಪ್ಲೆಂಡರ್ಗೆ ಪೈಪೋಟಿ ಕೊಡಲು ಬಂದಿದೆ 100 ಸಿಸಿಯ ಹೋಂಡಾ ಶೈನ್
ಬೆಲೆ ಏರಿಕೆಯಾದರೂ ನಮ್ಮ ಗ್ರಾಹಕರಿಗೆ ನಿರಾಸೆಯಾಗದು ಎಂದು ಹೀರೊ ಮೋಟೊಕಾರ್ಪ್ ಹೇಳಿದೆ. ಹೀರೊ ಮೋಟಾರ್ಸೈಕಲ್ಗಳಿಗೆ ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ. ಅಲ್ಲಿನ ಗ್ರಾಹಕರಿಗೆ ಹಣಕಾಸು ನೆರವು ಕೂಡ ಕೊಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಕೆಲವು ದಿನಗಳ ಹಿಂದೆ ಹೀರೊ ಕಂಪನಿಯು ಹೀರೋ ಕ್ಸೂಮ್ ಸ್ಕೂಟರ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಈ ಸ್ಕೂಟರ್ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. 68,599, 71,799 ಹಾಗೂ 76,699 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಕ್ಸೂಮ್ ಸ್ಕೂಟರ್ ಸಿಂಗಲ್ ಸಿಲಿಂಡರ್ 110.9 ಸಿಸಿ ಸಾಮರ್ಥ್ಯ ಹೊಂದಿದೆ. ಇದು 8 ಬಿಎಚ್ಪಿ ಪವರ್ ಹಾಗೂ 8.7 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಇ3 ಸ್ಟಾರ್ಟ್-ಸ್ಟಾಪ್ ಆಯ್ಕೆಯೂ ಇದೆ.
ಆಟೋಮೊಬೈಲ್
Hyundai Motor : ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಬಿಡುಗಡೆ; ಬೆಲೆ, ಫೀಚರ್ಗಳ ಬಗ್ಗೆ ಇಲ್ಲಿದ ಮಾಹಿತಿ
ಹೊಸ ಪೀಳಿಗೆಯ ಹ್ಯುಂಡೈ ವೆರ್ನಾ ಭಾರತದ ರಸ್ತೆಗೆ ಇಳಿದಿದ್ದು ಹಲವಾರು ಹೊಸ ಫೀಚರ್ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.
ನವ ದೆಹಲಿ: ದಕ್ಷಿಣ ಕೊರಿಯಾ ಮೂಲದ ಕಂಪನಿಯ ಹ್ಯುಂಡೈ ಮೋಟಾರ್ (Hyundai Motor) ತನ್ನ ಜನಪ್ರಿಯ ಸೆಡಾನ್ ಕಾರು ವೆರ್ನಾದ ನೂತನ ಆವೃತ್ತಿಯನ್ನು ಮಂಗಳವಾರ (ಮಾರ್ಚ್ 21ರಂದು) ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 10.89 ಲಕ್ಷ ರೂಪಾಯಿಗಳಾಗಿದ್ದು, ಟಾಪ್ ಎಂಡ್ ವೇರಿಯೆಂಟ್ಗೆ 17.38 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ಕಾರಿನಲ್ಲಿ ಎಡಿಎಎಸ್ ಫೀಚರ್ ಸೇರ್ಪಡೆಯಾಗಿದೆ. ಆದರೆ ಡೀಸೆಲ್ ವೇರಿಯೆಂಟ್ ಕಾರನ್ನು ಬಿಡುಗಡೆ ಮಾಡಿಲ್ಲ. ಬಿಡುಗಡೆಗೆ ಮೊದಲೇ ಕಂಪನಿ ಬುಕಿಂಗ್ ಆರಂಭ ಮಾಡಿತ್ತು. ಅಂತೆಯೇ ಮಂಗಳವಾರಕ್ಕೆ 8000 ಮಂದಿ ಆಸಕ್ತಿ ತೋರಿದ್ದಾರೆ. ಗ್ರಾಹಕರು 25 ಸಾವಿರ ರೂಪಾಯಿ ಪಾವತಿ ಮಾಡಿ ಅನ್ಲೈನ್ ಅಥವಾ ಶೋ ರೂಮ್ಗೆ ತೆರಳಿ ಕಾರನ್ನು ಬುಕ್ ಮಾಡಬಹುದು ಎಂದು ಹ್ಯುಂಡೈ ಮೋಟಾರ್ ಹೇಳಿದೆ.
ಎಷ್ಟು ದೊಡ್ಡದಿದೆ ಹೊಸ ಸೆಡಾನ್?
ಹೊಸ ಹ್ಯುಂಡೈ ವೆರ್ನಾ 1765 ಎಮ್ಎಮ್ (mili meter) ಅಗಲವಿದ್ದು, 2670 ಎಮ್ಎಮ್ ವೀಲ್ ಬೇಸ್ ಹೊಂದಿದೆ. ಕಾರಿನ ಒಟ್ಟಾರೆ ಉದ್ದ 4535 ಎಮ್ಎಮ್ ಹಾಗೂ 1, 475 ಎಮ್ಎಮ್ ಎತ್ತರವಿದೆ. ಹೊಸ ವೆರ್ನಾದಲ್ಲಿ 528 ಲೀಟರ್ ಬೂಟ್ ಸ್ಪೇಸ್ (ಡಿಕ್ಕಿ ಜಾಗ) ನೀಡಲಾಗಿದೆ.
ಬಣ್ಣಗಳು ಯಾವುದು?
ಇಎಕ್ಸ್, ಎಸ್, ಎಸ್ಎಕ್ಸ್, ಹಾಗೂ ಎಸ್ಎಕ್ (ಓ) ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಕಾರು ಲಭ್ಯವಿದೆ. ಅದೇ ರೀತಿ 7 ಸಿಂಗಲ್ ಟೋನ್, ಎರಡು ಡ್ಯುಯಲ್ ಟೋನ್ ಕಲರ್ ಆಯ್ಕೆ ನೀಡಲಾಗಿದೆ. ಬ್ಲ್ಯಾಕ್ ಆ್ಯಂಡ್ ಬೀಗ್ ಹಾಗೂ ಬ್ಲ್ಯಾಕ್ ಆ್ಯಂಡ್ ರೆಡ್ ಎಂಬ ಎರಡು ಬಣ್ಣಗಳ ಇಂಟೀರಿಯರ್ ಹೊಂದಿದೆ.
ವಿನ್ಯಾಸ ಹೇಗಿದೆ?
ಹ್ಯುಂಡೈ ಕಂಪನಿಯ ಸೆನ್ಸ್ಯುಯಸ್ ಸ್ಪೋರ್ಟಿ ಲುಕ್ ಅನ್ನು ವೆರ್ನಾ ಕಾರು ಕೂಡ ಹೊಂದಿದೆ. ಸ್ಪ್ಲಿಟ್ ಹೆಡ್ ಲ್ಯಾಂಪ್ ಸೆಟ್ಅಪ್, ಪ್ಯಾರಾಮೆಟ್ರಿಕ್ ಜ್ಯುಯೆಲ್ ಗ್ರಿಲ್, ಫುಲ್ ವಿಡ್ತ್ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ ಬಾನೆಟ್ ಹಾಗೂ ಬಂಪರ್ ಅನ್ನು ಪ್ರತ್ಯೇಕಿಸುತ್ತದೆ. ಸ್ಟ್ರಾಂಗ್ ಕ್ಯಾರೆಕ್ಟರ್ ಲೈನ್ನೊಂದಿಗೆ ಸೈಡ್ಪ್ರೊಫೈಲ್ ಅತ್ಯಾಕರ್ಷಕವಾಗಿ ಕಾಣುತ್ತದೆ ಹಾಗೂ 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಹೊಂದಿದೆ.
ಹಿಂಭಾಗದಲ್ಲಿ ಎಚ್ ಆಕೃತಿಯ ಕನೆಕ್ಟೆಡ್ ಟೈಲ್ ಲ್ಯಾಂಪ್, ಎಲ್ಇಡಿ ಲೈಟ್ ಬಾರ್ ಹಿಂಭಾಗವನ್ನು ಪೂರ್ತಿ ಆವರಿಸಿಕೊಂಡಿದೆ. ಅದೇ ರೀತಿ ಡ್ಯುಯಲ್ ಟೋನ್ ಬಂಪರ್ ಕೂಡ ಇದೆ.
ಹೊಸ ವೆರ್ನಾದ ಕ್ಯಾಬಿನ್ನಲ್ಲಿ ಎರಡು ಟಚ್ ಸ್ಕ್ರೀನ್ ಸೆಟ್ಅಪ್ ಹೊಂದಿದೆ. 10.25 ಇಂಚಿನ ಎಚ್ಡಿ ಟಚ್ ಸ್ಕ್ರೀನ್ ಹಾಗೂ 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. 64 ಆಂಬಿಯೆಂಟ್ ಕಲರ್ ಲೈಟ್, ಪವರ್ ಅಡ್ಜೆಸ್ಟೆಬಲ್ ಡ್ರೈವಿಂಗ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಹೊಂದಿದೆ.
ಇದನ್ನೂ ಓದಿ : Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
10.25 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಮ್ನಲ್ಲಿ ಆಂಡ್ರಾಯ್ಡ್ ಅಟೋ ಹಾಗೂ ಆ್ಯಪಲ್ ಕಾರ್ ಪ್ಲೇ, ಬ್ಲೂ ಟೂತ್ ಕನೆಕ್ಟಿವಿಟಿ ಸಿಸ್ಟಮ್ ಹೊಂದಿದೆ. ಹಿಂದಿ ಹಾಗೂ ಇಂಗ್ಲಿಷ್ ವಾಯ್ಸ್ ಕಮಾಂಡ್ ಮೂಲಕ ಸನ್ರೂಫ್, ವೆಂಟಿಲೇಟೆಡ್ ಸೀಟ್, ಎಸಿ ಆನ್ ಮತ್ತಿತರ ಕೆಲಸಗಳನ್ನು ಮಾಡಲು ಸಾಧ್ಯವಿದೆ.
ಸೇಫ್ಟಿ ಎಷ್ಟಿದೆ?
ಹೊಸ ವೆರ್ನಾ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ ಹೊಂದಿದೆ. ಆಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸೇಫ್ ಎಕ್ಸಿಟ್ ವಾರ್ನಿಂಗ್ ಇತ್ಯಾದಿ ಫೀಚ್ಗಳನ್ನು ಇದು ಹೊಂದಿದೆ. ಆರು ಏರ್ ಬ್ಯಾಗ್, ಎಬಿಎಸ್ ವಿತ್ ಇಬಿಡಿ, ಟ್ರ್ಯಾಕ್ಷನ್ ಕಂಟ್ರೋಲ್, ಟಿಪಿಎಮ್ಎಸ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್ ಹೊಂದಿದೆ.
ಎಂಜಿನ್ ಸಾಮರ್ಥ್ಯ?
ಹೊಸ ಹ್ಯುಂಡೈ ಎಂಜಿನ್ ಬಿಎಸ್2 ಫೇಸ್ 2ನ ಮಾನದಂಡಗಳಾದ ಆರ್ಡಿಇ ಹಾಗೂ ಎ20 ಪೆಟ್ರೋಲ್ ಆಯ್ಕೆಗಳನ್ನು ಹೊಂದಿದೆ. 1.5 ಲೀಟರ್ನ ಪೆಟ್ರೋಲ್ ಎಂಜಿನ್ 115 ಪಿಎಸ್ ಪವರ್ ಹಾಗೂ 144 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. 1.5 ಲೀಟರ್ನ ಟರ್ಬೊ ಪೆಟ್ರೋಲ್ ಎಂಜಿನ್ 160 ಪಿಎಸ್ ಪವರ್ ಹಾಗೂ 253 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಆರು ಸ್ಪೀಡ್ನ ಮ್ಯಾನುಯಲ್ ಗೇರ್ ಬಾಕ್ಸ್ ಹಾಗೂ 7 ಸ್ಪೀಡ್ನ ಡಿಸಿಟಿ ಗೇರ್ ಬಾಕ್ಸ್ಗಳನ್ನು ಹೊಸ ವೆರ್ನಾ ಹೊಂದಿದೆ. ಡೀಸೆಲ್ ಎಂಜಿನ್ನ ಕಾರುಗಳನ್ನು ಹ್ಯುಂಡೈ ಬಿಡುಗಡೆ ಮಾಡಿಲ್ಲ.
ಮೈಲೇಜ್ ಎಷ್ಟು?
1.5 ಲೀಟರ್ನ ಎಮ್ಪಿಐ ಪೆಟ್ರೋಲ್ ಎಂಜಿನ್ 18.60 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಐವಿಟಿ ಗೇರ್ ಬಾಕ್ಸ್ ಹೊಂದಿರುವ ಕಾರುಗಳು 19.60 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ. ಜಿಡಿಐ ಎಂಜಿನ್ ಹಾಗೂ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರು ಕಾರು 20 ಕಿಲೋ ಮೀಟರ್ ಹಾಗೂ ಡಿಸಿಟಿ ಗೇರ್ ಬಾಕ್ಸ್ ಹೊಂದಿರುವ ಕಾರು 20.60 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳುತ್ತದೆ.
-
ಅಂಕಣ21 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ21 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ21 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ22 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ15 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಅಂಕಣ16 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!