ನವ ದೆಹಲಿ: ಹ್ಯುಂಡೈ ಮೋಟಾರ್ಸ್ ಇಂಡಿಯಾ ಗ್ರ್ಯಾಂಡ್ ಐ10 ನಿಯೋಸ್(Hyunadi Grand i10) ಫೇಸ್ಲಿಫ್ಟ್ ಕಾರು ಜನವರಿ 20ರಂದು ಬಿಡುಗಡೆಯಾಗಿದೆ. ಆರಂಭಿಕ ಬೆಲೆ 5.28 ರೂಪಾಯಿಗಳಾಗಿದ್ದಾರೆ ಟಾಪ್ ಎಂಡ್ ವೇರಿಯೆಂಟ್ ಕಾರಿನ ಬೆಲೆ 8.46 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಇದು ಸೀಮಿತ ಅವಧಿಗೆ ನೀಡಿರುವ ವಿಶೇಷ ಬೆಲೆಯಾಗಿದ್ದು ಆರಂಭಿಕ ಹಂತದಲ್ಲಿ ಬುಕ್ ಆದ ಕಾರುಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಇದು ಹಾಲಿ ಮಾರುಕಟ್ಟೆಯಲ್ಲಿರುವ ಕಾರಿಗೆ ಕಾಸ್ಮೆಟಿಕ್ ಅಪ್ಡೇಟ್ ನೀಡಲಾಗಿದ್ದು. 30 ಹೊಸ ಫೀಚರ್ಗಳು ಹಾಗೂ 20 ಸೇಫ್ಟಿ ಫೀಚರ್ಗಳನ್ನು ನೀಡಲಾಗಿದೆ.
ಹ್ಯುಂಡೈ ಗ್ರ್ಯಾಂಡ್ ಐ10 ಫೇಸ್ಲಿಫ್ಟ್ ಕಾರಿನ ಮುಂದಿನ ಬದಿಯ ಡಿಸೈನ್ ಬದಲಾಯಿಸಲಾಗಿದೆ. ಹೊಸ ಬಂಪರ್ ಹಾಗೂ ದೊಡ್ಡ ಸೆಂಟ್ರಲ್ ಏರ್ ಇಂಟೇಕ್ ಹಾಗೂ ಸುಧಾರಿತ ಎಲ್ಇಡಿ ಡಿಆರ್ಇಎಲ್ ಬಳಸಲಾಗಿದೆ. ಉಳಿದಂತೆ 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ ಶಾರ್ಕ್ ಫಿನ್ ಆಂಟೆನಾ ಹಾಗೂ ಪರಿಷ್ಕೃತ ಟೇಲ್ ಲೈಟ್ ಬಳಸಲಾಗಿದೆ.
ಒಳಾಂಗಣದಲ್ಲಿ ಬ್ಲ್ಯಾಕ್ ಆಂಡ್ ಗ್ರೇ ಇಂಟೀರಿಯರ್, ಪುಶ್ ಬಟನ್ ಸ್ಟಾರ್ಟ್, ಇನ್ಸ್ಟ್ರುಮೆಂಟ್ ಕನ್ಸೋಲ್, 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಕನೆಕ್ಟಿವಿಟಿ, ಫೂಟ್ವೆಲ್ ಲೈಟಿಂಗ್, ವೈರ್ಲೆಸ್ ಫೋನ್ ಚಾರ್ಜಿಂಗ್, ಯುಎಸ್ಬಿ ಸಿ ಫಾಸ್ಟ್ ಚಾರ್ಜಿಂಗ್, ಕೂಲ್ಡ್ ಗ್ಲವ್ ಬಾಕ್ಸ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಸಿಗಲಿದೆ.
ಬೇಸಿಕ್ ವೇರಿಯೆಂಟ್ 20 ಸೇಫ್ಟಿ ಫೀಚರ್ಗಳನ್ನು ನೀಡಿದರೆ, ಟಾಪ್ ಎಂಡ್ ಕಾರು ಆರು ಏರ್ಬ್ಯಾಗ್ಗಳನ್ನು ನೀಡಿದೆ. ಅದೇ ರೀತಿ ಟೈರ್ ಮಾನಿಟರಿಂಗ್ ಸಿಸ್ಟಮ್, ಐಸೋಫಿಕ್ಸ್ ಆ್ಕಂಕರ್ ಮೌಂಟ್, ಆಟೋ ಹೆಡ್ಲ್ಯಾಂಪ್, ರಿಯರ್ ವ್ಯೂ ಕ್ಯಾಮೆರಾವನ್ನು ನೀಡಲಾಗಿದೆ.
ಎಂಜಿನ್ ಮತ್ತು ಪವರ್?
ಕಾರಿನಲ್ಲಿ 1.2 ಲೀಟರ್ ಸಾಮರ್ಥ್ಯದ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 82 ಬಿಎಚ್ಪಿ ಪವರ್, 114 ಎನ್ಎಮ್ ಟಾರ್ಕ್ಯೂ ನೀಡಲಾಗಿದೆ. ಇದರಲ್ಲಿ ಐದು ಸ್ಪೀಡ್ನ ಮ್ಯಾನುಯಲ್ ಹಾಗೂ ಎಎಮ್ಟಿ ಗೇರ್ ಬಾಕ್ಸ್ಗಳನ್ನು ನೀಡಲಾಗಿದೆ. ಕಾರಿನಲ್ಲಿ ಸಿಎನ್ಜಿ ಆಯ್ಕೆಯನ್ನೂ ನೀಡಲಾಗಿದೆ. 68 ಎನ್ಎಮ್ ಟಾರ್ಕ್ಯೂ, 95 ಎನ್ಎಮ್ ಪವರ್ ಬಿಡುಗಡೆ ಮಾಡುತ್ತದೆ. ಮ್ಯಾನುಯಲ್ ಗೇರ್ಬಾಕ್ಸ್ ಹೊಂದಿರುವ ಕಾರು ಲೀಟರ್ ಪೆಟ್ರೋಲ್ಗೆ 20.7 ಕಿಲೋ ಮೀಟರ್ ಮೈಲೇಜ್ ಕೊಟ್ಟರೆ, ಎಎಮ್ಟಿ ಗೇರ್ಬಾಕ್ಸ್ ಇರುವ ಕಾರು 20.1 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ.
ಇದನ್ನೂ ಓದಿ | Tata Nexon EV | ಟಾಟಾದ ನೆಕ್ಸಾನ್ ಇವಿಯ ಆರಂಭಿಕ ಬೆಲೆ ಇನ್ನಷ್ಟು ಅಗ್ಗ; ಕಿಲೋ ಮೀಟರ್ ರೇಂಜ್ ಕೂಡ ಏರಿಕೆ