Site icon Vistara News

Ram Mandir : ರಾಮಮಯವಾದ ಗುಜರಾತ್​ ಉದ್ಯಮಿಯ ಐಷಾರಾಮಿ ಕಾರು

Ram themed car

ಸೂರತ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ (Ram Mandir) ಪ್ರತಿಷ್ಠಾಪನೆ ಮಾಡಲು ದೇಶವೇ ಕಾಯುತ್ತಿದೆ. ದೇಶದ ನಾನಾ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅಂತೆಯೇ ಸೂರತ್ ನ ಜವಳಿ ಉದ್ಯಮಿ ಸಿದ್ಧಾರ್ಥ್ ದೋಶಿ ವಿಶಿಷ್ಟ ರೀತಿಯಲ್ಲಿ ಅಯೋಧ್ಯೆಗೆ ತೀರ್ಥಯಾತ್ರೆ ಆರಂಭಿಸಿದ್ದಾರೆ. ಅವರು ಸಾಂಪ್ರದಾಯಿಕ ರೀತಿಯಲ್ಲಿ ಯಾತ್ರೆ ಆರಂಭಿಸಿಲ್ಲ. ಬದಲಾಗಿ ಅವರು ಐಷಾರಾಮಿ ಜಾಗ್ವಾರ್ ಮೂಲಕ ಯಾತ್ರೆ ಹೊರಟಿದ್ದಾರೆ. ಇದೇನು ವಿಶೇಷ ಎನ್ನಬೇಡಿ. ಅವರು ತಮ್ಮ ಕಾರಿಗೆ ಕೇಸರಿ ಬಣ್ಣ ಬಳಿದು ಅದರಲ್ಲಿ ರಾಮನ ಚಿತ್ರ ಬಿಡಿಸಿ ಹೊರಟಿದ್ದಾರೆ.

ದೇಶಭಕ್ತಿ ಮತ್ತು ಭಕ್ತಿಯ ಪ್ರದರ್ಶನಗಳಿಗೆ ಹೆಸರುವಾಸಿಯಾದ ದೋಶಿ ತಮ್ಮ ಪ್ರೀತಿಯ ಕಾರನ್ನು ಹೊಳೆಯುವ ಕೇಸರಿ ಬಣ್ಣದಲ್ಲಿ ಚಿತ್ರಿಸಿದ್ದಾರೆ. ಕಾರಿನ ಬದಿಯಲ್ಲಿ ಭಗವಾನ್ ರಾಮನ ಮಹಾಕಾವ್ಯವಾದ ರಾಮಾಯಣದ ದೃಶ್ಯಗಳನ್ನು ಚಿತ್ರಿಸಿದ್ದಾರೆ. ಚಕ್ರಗಳ ಮೇಲೆ ಉರುಳುತ್ತಿರುವ ದೇವಾಲಯವಾದ ಈ ರಥವು ಅಪ್ರತಿಮ ರಾಮ್ ದರ್ಬಾರದಂರೆ ಕಾಣುತ್ತದೆ.

ದೋಷಿ ಅವರ ಹಿಂದಿನ ಉಪಕ್ರಮಗಳು

ಇದು ದೋಶಿ ಅವರ ನಂಬಿಕೆಯ ಮೊದಲ ಕಲಾತ್ಮಕ ಅಭಿವ್ಯಕ್ತಿಯಲ್ಲ. ಅವರು ಈ ಹಿಂದೆ ಜಿ -20 ಶೃಂಗಸಭೆ ಮತ್ತು ಭಾರತದ ಚಂದ್ರಯಾನ ಮಿಷನ್ ಅನ್ನು ಆಚರಿಸಲು ತಮ್ಮ ಜಾಗ್ವಾರ್ ಕಾರಿಗೆ ವಿಭಿನ್ನ ಪೇಟಿಂಗ್​ ಮಾಡಿದ್ದರು. ಆದರೆ ರಾಮ ಮಂದಿರ ಪ್ರತಿಷ್ಠಾಪನೆ ಅವರಿಗೆ ಮಹತ್ವದ್ದಾಗಿದೆ. ಇದು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದೆ. ನನ್ನ ನಂಬಿಕೆಯೊಂದಿಗೆ ಅನುರಣಿಸುವ ಮತ್ತು ಇತರರಲ್ಲಿ ಸಂತೋಷವನ್ನು ಹುಟ್ಟುಹಾಕುವ ರೀತಿಯಲ್ಲಿ ಇದನ್ನು ಆಚರಿಸಲು ನಾನು ಬಯಸುತ್ತೇನೆ ಎಂದು ದೋಶಿ ಹೇಳಿದ್ದಾರೆ.

ಸೂರತ್ ನಿಂದ ಅಯೋಧ್ಯೆಗೆ ದೋಶಿ ಅವರ ಪ್ರಯಾಣವು ಕೇವಲ ರಮಣೀಯ ಡ್ರೈವ್ ಆಗಿರುವುದಿಲ್ಲ. ಅವರು 1,400 ಕಿಲೋಮೀಟರ್ ಮಾರ್ಗದಲ್ಲಿನ ಗ್ರಾಮಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಜನರು ಮತ್ತು ದೇವರ ಆಶೀರ್ವಾದ ಪಡೆಯಲಿದ್ದಾರೆ. ಇದು ಕೇವಲ ದೇವಾಲಯವನ್ನು ತಲುಪುವ ಯಾತ್ರೆಯಲ್ಲ. ಇದು ನಂಬಿಕೆ ಮತ್ತು ಏಕತೆಯ ಸಂದೇಶವನ್ನು ಹರಡುವ ಯಾತ್ರೆ. ನಾನು ಈ ಅನುಭವವನ್ನು ಜನರೊಂದಿಗೆ ಹಂಚಿಕೊಳ್ಳಲು, ಅವರೊಂದಿಗೆ ಆಚರಿಸಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Ram Mandir: ‘ಪ್ರಾಣ ಪ್ರತಿಷ್ಠಾ’ ಆಹ್ವಾನ ಪಡೆದ ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್

ದೋಶಿ ಅವರ ಕೇಸರಿ ಜಾಗ್ವಾರ್ ದೇಶಾದ್ಯಂತ ತಿರುಗುತ್ತಿದ್ದಂತೆ ಆಕರ್ಷಣೆ ಖಚಿತ. ಇದು ನಂಬಿಕೆಯ ಶಕ್ತಿ ಮತ್ತು ಭಾರತದ ಆಧ್ಯಾತ್ಮಿಕ ದೃಶ್ಯಕ್ಕೆ ಸಾಕ್ಷಿ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. “ಭಕ್ತಿಯು ಅನೇಕ ರೂಪಗಳನ್ನು ಪಡೆಯಬಹುದು. ಆಧುನಿಕ ಕಾರು ಸಹ ಒಬ್ಬರ ಆಳವಾದ ನಂಬಿಕೆಗಳನ್ನು ವ್ಯಕ್ತಪಡಿಸಲು ನೆರವಾಗಬಹುದು ಎಂದು ಹೇಳಿದ್ದಾರೆ.

Exit mobile version