ನವ ದೆಹಲಿ: ಅಮೆರಿಕ ಮೂಲದ ಮೋಟಾರ್ ಸೈಕಲ್ ಉತ್ಪಾದನಾ ಕಂಪನಿ ತನ್ನ ಬಹುನಿರೀಕ್ಷಿಎ ಎಕ್ಸ್ 440 ಬೈಕ್ (Harley-Davidson) ಅನ್ನು ಭಾರತದಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಇದರ ಬೇಸ್ ವೇರಿಯೆಂಟ್ ಡೆನಿಮ್ನ ಬೆಲೆ 2.29 ರೂಪಾಯಿ (ಎಕ್ಸ್ ಶೋರೂಮ್) ಆಗಿದ್ದು, ಟಾಪ್ ವೇರಿಯೆಂಟ್ ಆಗಿರುವ ಎಸ್ 2.69 ರೂಪಾಯಿಗೆ ಲಭ್ಯವಿದೆ. ಈ ಮೂಲಕ ಒಂದು ಕಾಲದಲ್ಲಿ ದುಬಾರಿ ಎನಿಸಿಕೊಂಡಿದ್ದ ಬೈಕ್ ಈಗ ಕಡಿಮೆ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಲಭ್ಯವಾಗಿದೆ. ಆದರೆ, ಈ ಹೊಸ ಬೈಕ್ ಸಂಪೂರ್ಣವಾಗಿ ಹಾರ್ಲೆ ಡೇವಿಡ್ಸನ್ ಕಂಪನಿ ನಿರ್ಮಿಸಿದ್ದಲ್ಲ. ಭಾರತದ ಜನಪ್ರಿಯ ಬ್ರಾಂಡ್ ಹೀರೋ ಮೋಟೊಕಾರ್ಪ್ ಜತೆ ವಿನ್ಯಾಸ ಮಾಡಿ ಇಲ್ಲೇ ಉತ್ಪಾದನೆ ಮಾಡಲಾಗಿದೆ. ಹೀಗಾಗಿ ಕಡಿಮೆ ಬೆಲೆಗೆ ದೊರೆಯುತ್ತಿದೆ.
ಕೊರೊನಾ ಲಾಕ್ಡೌನ್ ಬಳಿಕ ಹಾರ್ಲೆ ಡೇವಿಡ್ಸನ್ ಕಂಪನಿ ಭಾರತದ ಮಾರುಕಟ್ಟೆಯಿಂದ ಹಿಂದಕ್ಕೆ ಸರಿದಿತ್ತು. ಮಾರಾಟದಲ್ಲಿ ಹಿನ್ನಡೆ ಹಾಗೂ ಉತ್ಪಾದನಾ ವೆಚ್ಚಳದ ಏರಿಕೆಯಿಂದಾಗಿ ಕಂಪನಿ ನಿರ್ಗಮಿಸಿತ್ತು. ಮೂಲ ಕಂಪನಿಯು ನಿರ್ಮಿಸುತ್ತಿದ್ದ ಬೈಕ್ಗೆ ಆ ವೇಳೆಗೆ 10 ಲಕ್ಷದ ಸಮೀಪ ದರವಿತ್ತು. ಅಂತಾರಾಷ್ಟ್ರೀಯ ಬ್ರಾಂಡ್ ಆಗಿರುವ ಹಾರ್ಲೆಯನ್ನು ಎಲ್ಲರೂ ಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಹೀರೋ ಜತೆ ಒಪ್ಪಂದ ಮಾಡಿಕೊಂಡ ಹಾರ್ಲೆ ಡೇವಿಡ್ಸನ್ ಜತೆಯಾಗಿ ಬೈಕ್ ನಿರ್ಮಿಸಿದೆ. ಹೀರೊ ಕಂಪನಿಯ ಘಟಕದಲ್ಲೇ ಈ ಬೈಕ್ ಉತ್ಪಾದನೆಯಾಗಲಿದೆ.
ಎಂಜಿನ್ ಸಾಮರ್ಥ್ಯ ಏನು?
ಎಕ್ಸ್ 440 ಬೈಕಿನಲ್ಲಿ ಏರ್/ಆಯಿಲ್ ಕೂಲ್ಡ್ 440 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,000 ಆರ್ ಪಿಎಂನಲ್ಲಿ 27 ಬಿಎಚ್ಪಿ ಪವರ್ ಮತ್ತು 4,000 ಆರ್ಪಿಪಿಎಂನಲ್ಲಿ 38 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಅನ್ನು ಅಳವಡಿಸಲಾಗಿದ್ದು, 43 ಎಂಎಂ ಯುಎಸ್ ಡಿ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಇಡಲಾಗಿದೆ. ಬ್ರೇಕಿಂಗ್ ಸಿಸ್ಟಂ ಅನ್ನು ದೊಡ್ಡದಾದ 320 ಎಂಎಂ ಫ್ರಂಟ್ ರೋಟರ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.
As the dust settles, a new era beckons.
— Harley-Davidson Ind (@HarleyIndia) July 3, 2023
Presenting the all new Harley-Davidson X440.
Priced at INR 2,29,000 (Ex-showroom). #EverythingWillChange#X440 #HDX440 #HarleyDavidson #HarleyDavidsonIndia #HDIndia #HD120 pic.twitter.com/44IX08l4OH
ಸೀಟ್ ಎತ್ತರ 805 ಎಂಎಂ ಮತ್ತು ಎಚ್ಡಿ ಎಕ್ಸ್ 440 190.5 ಕೆ.ಜಿ. ತೂಕವನ್ನು ಹೊಂದಿದೆ. 13.5-ಲೀಟರ್ ಫ್ಯೂಯಲ್ ಟ್ಯಾಂಕ್ ಹೊಂದಿದೆ. 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಈ ಬೈಕ್ ಹೊಸ ಎಂಆರ್ಎಫ್ ಜಾಪರ್ ಹೈಕ್ ರಬ್ಬರ್, 100/90-18 (ಮುಂಭಾಗ) ಮತ್ತು 140/70-17 (ಹಿಂಭಾಗ) ಗಾತ್ರದ ಟೈರ್ಗಳನ್ನು ನೀಡಲಾಗಿದೆ.
ವೇರಿಯೆಂಟ್ಗಳ ಕುರಿತು ಮಾಹಿತಿ
ಎಕ್ಸ್ 440 ನ ಬೇಸ್ ಡೆನಿಮ್ ವೇರಿಯೆಂಟ್ ವೈರ್-ಸ್ಪೋಕ್ ರಿಮ್ಗಳು ಮತ್ತು ಕನಿಷ್ಠ ಬ್ಯಾಡ್ಜಿಂಗ್ ನೊಂದಿಗೆ ಬರುತ್ತದೆ. ಮಧ್ಯಮ ಶ್ರೇಣಿಯ ವಿವಿಡ್ ವೇರಿಯೆಂಟ್ ಅಲಾಯ್ ಚಕ್ರಗಳು ಮತ್ತು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ. ಟಾಪ್-ಸ್ಪೆಕ್ ಎಸ್ ರೂಪಾಂತರವು ಡೈಮಂಡ್-ಕಟ್ ಅಲಾಯ್ ಚಕ್ರಗಳು, ಮೆಕ್ಯಾನಿಕಲ್ ಎಂಜಿನ್ ಕೂಲಿಂಗ್ ಫಿನ್ಗಳು3 ಡಿ ಬ್ಯಾಡ್ಜಿಂಗ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಟಿಎಫ್ ಟಿ ಡ್ಯಾಶ್ನೊಂದಿಗೆ ಬರುತ್ತದೆ. ಇದು ನ್ಯಾವಿಗೇಷನ್ ಮತ್ತು ನೋಟಿಫಿಕೇಶನ್ ಅಲರ್ಟ್ಗಳನ್ನು ಸಕ್ರಿಯಗೊಳಿಸುತ್ತದೆ.
ಇದನ್ನೂ ಓದಿ : ಫ್ಯಾಕ್ಟರಿ ಫಿಟೆಡ್ ಸಿಎನ್ಜಿ ಕಿಟ್ನೊಂದಿಗೆ ಬರುವ 10 ಕಾರುಗಳು ಇಲ್ಲಿವೆ
ಡೆನಿಮ್ ವೇರಿಯೆಂಟ್ ಸಾಸಿವೆ ಹಳದಿ ಬಣ್ಣದಲ್ಲಿ ಲಭ್ಯವಿದೆ. ಮುಖ್ಯವಾಗಿ ಕಪ್ಪು ಬೈಕಿನಲ್ಲಿ ಹಳದಿ ಟ್ಯಾಂಕ್ ಇದೆ. ವಿವಿಡ್ ವೇರಿಯೆಂಟ್ ಮೆಟಾಲಿಕ್ ದಪ್ಪ ಕೆಂಪು ಅಥವಾ ಮೆಟಾಲಿಕ್ ಡಾರ್ಕ್ ಸಿಲ್ವರ್ ಬಣ್ಣ ಹೊಂದಿದೆ. ಟಾಪ್-ಸ್ಪೆಕ್ ಎಸ್ ವೇರಿಯೆಂಟ್ ಸ್ಟೆಲ್ಥಿ ಮ್ಯಾಟ್ ಬ್ಲ್ಯಾಕ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಎಲ್ಲಾ ರೂಪಾಂತರಗಳು ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ.
ಎಕ್ಸ್ 440 ನ ಡೆನಿಮ್ ವೇರಿಯೆಂಟ್ ಬೆಲೆ 2.29 ಲಕ್ಷ ರೂ.ಗಳಾಗಿದ್ದು, ನಂತರದ ವೇಯೆಯೆಂಟ್ಗೆ 20,000 ರೂಪಾಯಿ ಹೆಚ್ಚಿದೆ. ಅಂದರೆ ವಿವಿಡ್ ನ ಬೆಲೆಯು ರೂ.2.49 ಲಕ್ಷಗಳಾದರೆ, ಟಾಪ್ ಸ್ಪೆಕ್ ಎಸ್ ಬೈಕ್ನ ಬೆಲೆಯು ರೂ.2.69 ಲಕ್ಷಗಳಾಗಿದೆ. ಈ ಬೆಲೆ ವಿಚಾರಕ್ಕೆ ಬಂದರೆ ಹಾರ್ಲೆ-ಡೇವಿಡ್ಸನ್ ಎಕ್ಸ್ 440 ರಾಯಲ್ ಎನ್ಫೀಲ್ಡ್ ಕ್ಲಾಸಿಕ್ಗೆ ಪೈಪೋಟಿ ನೀಡಲಿದೆ.