ಬೆಂಗಳೂರು: ಹಾರ್ಲೆ ಡೇವಿಡ್ಸನ್ ನೊಂದಿಗೆ ಸಹ-ಅಭಿವೃದ್ಧಿಪಡಿಸಿದ 440 ಸಿಸಿ ಪ್ಲಾಟ್ ಫಾರ್ಮ್ ನಲ್ಲಿ ಹೀರೋ (Hero Bikes) ತನ್ನದೇ ಆದ ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಲಿದೆ. ವಾಸ್ತವವಾಗಿ, ಈ ಬೈಕ್ ಜನವರಿಯಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡಲಿದೆ ಎಂದು ಹೇಳಲಾಗಿತ್ತು. ಆದರೀಗ ಫೆ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳುವುದು ಖಚಿತ.
EXCLUSIVE details of Hero’s 440cc bike based on Harley-Davidson X440https://t.co/ymkHPh9Y6a
— Pratheek Kunder (@pratheekkunder) July 13, 2023
ಈಗ, ಬೈಕ್ ಅನ್ನು ಏನೆಂದು ಕರೆಯಬಹುದು ಎಂಬುದರ ಬಗ್ಗೆ ಕುತೂಹಲವಿದೆ. ಕಳೆದ ವರ್ಷ, ಹೀರೋ ಈ ಬೈಕ್ ಗೆ ಬಳಸಬಹುದಾದ ಎರಡು ಹೆಸರುಗಳನ್ನು ಟ್ರೇಡ್ ಮಾರ್ಕ್ ಮಾಡಿದೆ. ಮೊದಲನೆಯದು ಹರಿಕನ್ 440 ಹೆಸರು, ಆದಾಗ್ಯೂ, ಮಾರ್ಚ್ 2023ರಲ್ಲಿ, ಹೀರೋ ಮಾವ್ರಿಕ್ 440 ಎಂಬ ಮತ್ತೊಂದು ಹೆಸರಿಗಾಗಿ ಅರ್ಜಿ ಸಲ್ಲಿಸಿತು, ಮತ್ತು ಈಗ ಕಂಪನಿಯು ಅಂತಿಮವಾಗಿ ಈ ಹೆಸರು ಇರಬಹುದು ಎಂದು ಹೇಳಲಾಗಿದೆ.
ಕಂಪನಿಯು ವಿವಿಧ ಪ್ರಕಟಣೆಗಳಿಗೆ ನೀಡಿದ ಟೀಸರ್ ಹಲವಾರು ಕುತೂಹಗಳನ್ನು ಸೃಷ್ಟಿಸಿದೆ. ಬೈಕ್ ತಯಾರಕರು ಹೊಸ ವಾಹನ ಬಿಡುಗಡೆಯೊಂದಿಗೆ ಸ್ವಲ್ಪ ವಿಶೇಷ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ಹೀರೋ ತನ್ನ ಮುಂಬರುವ 440 ಬೈಕ್ ನ ಹೆಸರಿನ ಕೆಲವು ಅಕ್ಷಗಳ ಕುರಿತು ಮಾಹಿತಿ ನೀಡಿದೆ. ವರ್ಣಮಾಲೆಗಳಲ್ಲಿ I, R ಮತ್ತು V ಸೇರಿಕೊಂಡಿವೆ. ಹೀಗಾಗಿ ಮೇವ್ರಿಕ್ ಎಂಬ ಹೆಸರಿನ ಬಗ್ಗೆ ಹೆಚ್ಚು ಖಾತರಿ ಸಿಕ್ಕಿದೆ.
Say hello to the Harley-Davidson X-440, a huge moment for #MakeInIndia
— Tech Brainiac (@TechBrainiac) May 25, 2023
Designed, engineered and made in India by Hero MotoCorp. Debuts their new 440cc single.
Launches on July 🥉 rd#harelydavidson #harleydavidsonx440 #harley #thrillofriding #heromotocorp pic.twitter.com/Bklizecmqg
ಮೊದಲ ಎರಡು ಅಕ್ಷರಗಳು ಎರಡೂ ಹೆಸರುಗಳಿಗೆ ಸೂಕ್ತವಾಗಿದೆ. ಅಂದರೆ ಹರಿಕನ್ ಮತ್ತು ಮಾವ್ರಿಕ್ನ ಅಕ್ಷರಗಳು ಇಲ್ಲಿ ಅಡಗವಿ. V ಮಾವ್ರಿಕ್ ನಲ್ಲಿ ಮಾತ್ರ ಮೆವ್ರಿಕ್ನಲ್ಲಿ ಸ್ಥಾನ ಕಂಡುಕೊಳ್ಳುತ್ತದೆ, ಇದು ಹೀರೋ ಬಳಸುವ ಹೆಸರು ಎಂದು ಸುಲಭವಾಗಿ ಊಹಿಸಬಹುದು
ಇದನ್ನೂ ಓದಿ : SUV Cars : ಜನವರಿಯಲ್ಲಿ ಮಾರುಕಟ್ಟೆಗೆ ಇಳಿಯಲಿವೆ ಈ ಎಲ್ಲ ಕಾರುಗಳು
.ಹೀರೋ ಬೈಕ್ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕಿನ ಅದೇ 440 ಸಿಸಿ ಮೋಟರ್ ಅನ್ನು ಬಳಸಲಿದ್ದು, ಇದು ಗಮನಾರ್ಹವಾಗಿ ವಿಭಿನ್ನ ಶೈಲಿಯನ್ನು ಹೊಂದಿರುತ್ತದೆ. ಬಹುಶಃ ವಿಭಿನ್ನ ಚಾಸಿಸ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು. ಈ ಬೈಕ್ ವಿಭಿನ್ನ ಅನುಭವವನ್ನು ನೀಡುವ ಸಾಧ್ಯತೆಯಿದೆ ಮತ್ತು ಒಂದು ರೀತಿಯ ರೋಡ್ ಸ್ಟರ್ ಆಗಿ ಹೆಚ್ಚು ಸ್ಥಾನ ಪಡೆಯುತ್ತದೆ.