Site icon Vistara News

Hero Mavrick 440 : ಹೀರೋ ಮೋಟಾರ್ಸ್​ನ ಅತ್ಯಂತ ದುಬಾರಿ ಬೈಕ್​ ಅನಾವರಣ

Hero Mavrick 440

ಬೆಂಗಳೂರು: ಹೀರೋ ಮೋಟಾರ್ಸ್​​ ಇತ್ತೀಚೆಗೆ ಅನಾವರಣಗೊಳಿಸಿದ್ದ ಹೀರೋ ಮಾವ್ರಿಕ್ 440 ಅನ್ನು (Hero Mavrick 440) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್​ ಅನ್ನು ಇತ್ತೀಚೆಗೆ ಹೀರೋ ವರ್ಲ್ಡ್​​ನಲ್ಲಿ ಪ್ರದರ್ಶನ ಮಾಡಿತ್ತು. ಇದೀಗ ದೇಶದ ಗ್ರಾಹಕರಿಗೆ ಪರಿಚಯ ಮಾಡಿದ್ದು, 1.99 ಲಕ್ಷದಿಂದ 2.24 ಲಕ್ಷ ರೂ.ಗಳ ನಡುವೆ ಬೆಲೆಯನ್ನು ನಿಗದಿ ಮಾಡಲಾಗಿದೆ.

ಹೀರೋ ಮಾವ್ರಿಕ್ ಬೈಕ್ 440 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್​ 6,000 ಆರ್ ಪಿಎಂನಲ್ಲಿ 26 ಬಿಹೆಚ್ ಪಿ ಪವರ್ ಮತ್ತು 4,000 ಆರ್ ಪಿಎಂನಲ್ಲಿ 36 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಟಾರ್ಕ್​ನ ಶೇಕಡಾ 90 ರಷ್ಟು 2,000 ಆರ್ ಪಿಎಂನಿಂದ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮಾವ್ರಿಕ್ ಬೈಕಿನ ಗರಿಷ್ಠ ಟಾರ್ಕ್ ಹಾರ್ಲೆ ಡೇವಿಡ್ಸನ್ ಎಕ್ಸ್ 440 ಬೈಕಿಗಿಂತ ಸ್ವಲ್ಪ ಕಡಿಮೆ. ಬೇಬಿ ಹಾರ್ಲೆಯಂತೆಯೇ ಮಾವ್ರಿಕ್ ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಪಡೆಯುತ್ತದೆ.

ಬೈಕ್​ನ ಮುಖ್ಯ ಫ್ರೇಮ್ ಹಾರ್ಲೆ ಎಕ್ಸ್ 440 ನಂತೆಯೇ ಇದೆ. ಆದರೆ ಮಾವ್ರಿಕ್ ಮುಂಭಾಗದಲ್ಲಿ ಸರಳವಾದ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ನೀಡಲಾಗಿದೆ. ಗ್ರೌಂಡ್ ಕ್ಲಿಯರೆನ್ಸ್ 175 ಎಂಎಂ ಆಗಿದ್ದು, ಮಾವ್ರಿಕ್ ಎರಡೂ ತುದಿಗಳಲ್ಲಿ 17 ಇಂಚಿನ ವೀಲ್​ಗಳನ್ನು ಹೊಂದಿದೆ.

ಮೂರು ವೇರಿಯೆಂಟ್​ಗಳಲ್ಲಿ ಲಭ್ಯ

ಈ ಬೈಕ್ ಬೇಸ್ (ರೂ.1.99 ಲಕ್ಷ), ಮಿಡಲ್​ (ರೂ.2.14 ಲಕ್ಷ) ಮತ್ತು ಟಾಪ್ (ರೂ.2.24 ಲಕ್ಷ) ಎಂಬ ಮೂರು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಬೇಸ್ ವೇರಿಯೆಂಟ್​ ಬಿಳಿ ಬಣ್ಣದಲ್ಲಿ ಮಾತ್ರ ಲಭ್ಯವಿದೆ ಮತ್ತು ಸ್ಪೋಕ್ಡ್ ವೀಲ್​ ಪಡೆಯುತ್ತದೆ. ಮಿಡಲ್​ ವೇರಿಯೆಂಟ್​ ಅಲಾಯ್ ವಿಲ್​ ಮತ್ತು ಎರಡು ಕಲರ್ ಆಯ್ಕೆ ಪಡೆಯುತ್ತದೆ. ಟಾಪ್-ಸ್ಪೆಕ್ ವೇರಿಯೆಂಟ್​​ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಪಡೆಯುತ್ತದೆ.

ಇದನ್ನೂ ಓದಿ : Hero Bikes : ಹೀರೊ ಹೋಂಡಾದ ಹೊಸ ಬೈಕ್​ನ ಹೆಸರೇ ಸೂಪರ್​

ಹೀರೋ ಮಾವ್ರಿಕ್ ಬೈಕ್ ರಾಯಲ್ ಎನ್ ಫೀಲ್ಡ್ ಬುಲೆಟ್ 350 (ರೂ.1.74 ಲಕ್ಷ-ರೂ.2.16 ಲಕ್ಷ), ಕ್ಲಾಸಿಕ್ 350 (ರೂ.1.93 ಲಕ್ಷ-ರೂ.2.25 ಲಕ್ಷ), ಹೋಂಡಾ ಸಿಬಿ350 (ರೂ.2 ಲಕ್ಷ-ರೂ.2.18 ಲಕ್ಷ) ಮತ್ತು ಹೊಸದಾಗಿ ಬಿಡುಗಡೆಯಾದ ಜಾವಾ 350 (ರೂ.2.15 ಲಕ್ಷ) ಬೈಕುಗಳಿಗೆ ಪೈಪೋಟಿ ನೀಡಲಿದೆ. ಮಾವ್ರಿಕ್​ ಇದುವರೆಗಿನ ಅತ್ಯಂತ ದುಬಾರಿ ಹೀರೋ ಮೋಟಾರ್ ಸೈಕಲ್ ಆಗಿದ್ದರೂ, ಮಾವ್ರಿಕ್ 440 ಬೈಕ್ ಹಾರ್ಲೆ ಡೇವಿಡ್ಸನ್ ಎಕ್ಸ್ 440 (ರೂ.2.40 ಲಕ್ಷ-ರೂ.2.80 ಲಕ್ಷ) ಗಿಂತ ಅಗ್ಗದಲ್ಲಿ ಲಭ್ಯವಿದೆ.

5,000 ರೂ.ಗಳ ಟೋಕನ್ ಮೊತ್ತಕ್ಕೆ ಬುಕಿಂಗ್ ಮುಕ್ತವಾಗಿದೆ. ವಿತರಣೆಗಳು ಏಪ್ರಿಲ್ 15 ರಿಂದ ಪ್ರಾರಂಭವಾಗುತ್ತವೆ. ಮಾರ್ಚ್ 15, 2024 ರ ಮೊದಲು ಎಲ್ಲಾ ಬುಕಿಂಗ್​ಗಳಿಂದಾಗಿ ಗ್ರಾಹಕರು 10,000 ರೂ.ಗಳ ಮೌಲ್ಯದ ಬಿಡಿಭಾಗಗಳು ಮತ್ತು ಆಕ್ಸೆಸರಿ ಕಿಟ್ ಪಡೆಯುತ್ತಾರೆ ಎಂದು ತಯಾರಕರು ಹೇಳಿದ್ದಾರೆ.

Exit mobile version