ನವ ದೆಹಲಿ : ಕಾರು ಮಾರಾಟ ಕಂಪನಿಗಳಾದ ಮಾರುತಿ, ಹ್ಯುಂಡೈ ಸೇರಿದಂತೆ ಕೆಲವು ಕಂಪನಿಗಳು ಹಳೆಯ ಕಾರುಗಳನ್ನು ತಮ್ಮ ಹೊಸ ಕಾರುಗಳಿಗೆ ವಿನಿಮಯ ಮಾಡುವ ವ್ಯವಸ್ಥೆಯನ್ನು ಹೊಂದಿವೆ. ಆದರೆ ದ್ವಿ ಚಕ್ರ ವಾಹನ ತಯಾರಕರು ಈ ವ್ಯವಸ್ಥೆಯನ್ನು ಇದುವರೆಗೆ ಮಾಡಿರಲಿಲ್ಲ. ಇದೀಗ Hero MotoCorp ಮರು ಮಾರಾಟ ವೇದಿಕೆಯನ್ನು ಕಲ್ಪಿಸಿದ್ದು, Wheels of Trust ಎಂದು ಹೆಸರಿಟ್ಟಿದೆ.
ಆನ್‌ಲೈನ್ ಹಾಗೂ ಆನ್‌ಗ್ರೌಂಡ್ ರೀತಿಯಲ್ಲಿ ಈ ವಿನಿಮಯ ವ್ಯವಸ್ಥೆ ಕೆಲಸ ಮಾಡಲಿದ್ದು, ಹಳೆಯ ದ್ವಿ ಚಕ್ರ ವಾಹನಗಳಿಗೆ ಉತ್ತಮ ಬೆಲೆಯನ್ನು ನೀಡುವ ಭರವಸೆಯನ್ನು ಒದಗಿಸಿದೆ. ಮರು ಮಾರಾಟಕ್ಕಾಗಿ ಹೀರೊ ಮೋಟೊಕಾರ್ಪ್ “ಡು ಇಟ್ ಯುವರ್‌ಸೆಲ್ಫ್’ ಎಂಬ ವ್ಯವಸ್ಥೆಯನ್ನು ರೂಪಿಸಿದೆ. ಗ್ರಾಹಕರು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ಮೂಲಕ ವೆಬ್‌ಸೈಟ್‌ಗೆ ಎಂಟ್ರಿಯಾಗಿ ತಮ್ಮ ವಾಹನಗಳಿಗೆ ಎಷ್ಟು ಬೆಲೆ ದೊರೆಯಬಹುದು ಎಂಬುದನ್ನು ಕುಳಿತಲ್ಲಿಯೇ ನಿರ್ಧರಿಸಬಹುದು. ಅದಕ್ಕಾಗಿ ಹೀರೊ ಕಂಪನಿಯು ಸುಮಾರು ೯೦೦ಕ್ಕೂ ಅಧಿಕ ಕಂಪನಿಗಳ ಜತೆ ಸಹಭಾಗಿತ್ವ ಪಡೆದುಕೊಂಡಿದೆ.
ಗ್ರಾಹಕರು ತಾವಿರುವ ರಾಜ್ಯ, ನಗರ, ಯಾವ ಮಾದರಿಯ ಬೈಕ್, ಉತ್ಪಾದಕ ಕಂಪನಿಯ ಹೆಸರು ಸೇರಿದಂತೆ ಬೈಕ್‌ನ ಕುರಿತು ಸಂಪೂರ್ಣ ಮಾಹಿತಿ ನಮೂದು ಮಾಡಬೇಕು. ಈ ವೇಳೆ ವೆಬ್‌ಸೈಟ್‌ನಲ್ಲಿ ಕೇಳಲಾಗುವ ಕೆಲವ ಪ್ರಶ್ನೆಗಳಿಗೆ ಗ್ರಾಹಕರು ಉತ್ತರ ನೀಡಬೇಕಾಗುತ್ತದೆ.
ವೆಬ್‌ಸೈಟ್ ಲಿಂಕ್ ಇಲ್ಲಿದೆ- www.wheelsoftrust.com