Site icon Vistara News

Honda Activa : ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಸ್ಟಾರ್ಟ್​ ಮಾಡಲು ಕಿ ಬೇಕಾಗಿಲ್ಲ! ಏನಿದು ಹೊಸ ಫೀಚರ್​​?

Honda Activa Smart Ki Edition Released; Here is information about the new feature, price

#image_title

ಮುಂಬಯಿ: ಸಾಮಾನ್ಯ ರೀತಿಯ ಕಿ ಇಲ್ಲದ, ಕಾರಿನಂತೆಯೇ ಸ್ಮಾರ್ಟ್​ ಕಿ ಮೂಲಕ ಸ್ಟಾರ್ಟ್​​ ಮಾಡಬಹುದಾದ ಹೋಂಡಾ ಆಕ್ಟಿವಾ 125 ಸ್ಕೂಟರ್​ (Honda Activa) ಭಾರತದ ಮಾರುಕಟ್ಟೆಯಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಇದು ಈ ಹಿಂದಿನ 125 ಸಿಸಿ ಸ್ಕೂಟರ್​ನ ಅಪ್​ಗ್ರೇಡ್​ ಆಗಿದ್ದರೂ, ಸ್ಮಾರ್ಟ್​ ಕಿ ಆಯ್ಕೆ ಇದರ ವೇರಿಯೆಂಟ್​ಗಳಲ್ಲಿ ಹೊಸ ಸೇರ್ಪಡೆ. ಈ ಸ್ಮಾರ್ಟ್​ ಕಿ ಮೂಲಕ ಸವಾರರ ಹಲವು ಕೆಲಸಗಳು ಸರಳಗೊಂಡಿವೆ. ಜತೆಗೆ ರಾಶಿ ರಾಶಿ ಸ್ಕೂಟರ್​ಗಳ ನಡುವೆ ನಮ್ಮ ಸ್ಕೂಟರ್​ ಪತ್ತೆ ಮಾಡುವುದಕ್ಕೂ ಸಾಧ್ಯವಿದೆ. ಡ್ರಮ್​, ಡ್ರಮ್​ ಅಲಾಯ್​, ಡಿಸ್ಕ್​ ಈ ಹಿಂದೆ ಇದ್ದ ವೇರಿಯೆಂಟ್ ಆಗಿದ್ದು, ಎಚ್​ ಸ್ಮಾರ್ಟ್ ಹೊಸ ಆಕರ್ಷಣೆಯಾಗಿದೆ.

ಹೊಸ ಸ್ಕೂಟರ್​ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಇದೆ. ಜತೆಗೆ ಅದೇ ಪರ್ಲ್​ ನೈಟ್​ ಸ್ಟಾರ್ಟ್​​ ಬ್ಲ್ಯಾಕ್​, ಹೆವಿ ಗ್ರೇ ಮೆಟಾಲಿಕ್​, ರೆಬೆಲ್​ ರೆಡ್ ಮೆಟಾಲಿಕ್​, ಪರ್ಲ್​ ಪ್ರೀಶಿಯಸ್, ಮಿಡ್​ನೈಟ್​ ಬ್ಲ್ಯೂ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಅಪ್​​ಗ್ರೇಡ್ ಮಾಡಿರುವ ಸ್ಕೂಟರ್​ನ ಬೆಲೆ 78,920 ರೂಪಾಯಿಗಳಿಂದ ಆರಂಭಗೊಂಡು 88,093 ರೂಪಾಯಿಗಳ ತನಕ ಇದೆ. (ಎಕ್ಸ್​ ಶೋರೂಮ್​ ಬೆಲೆ).

ಹೊಸ ಹೋಂಡಾ ಆಕ್ಟಿವಾ ಸ್ಕೂಟರ್​ 125 ಸಿಸಿಯಲ್ಲಿ ಫ್ಯುಯಲ್​ ಇಂಜೆಕ್ಟರ್​ ಸಮೇತ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಇದು ಬಿಎಸ್​6ನ ಎರಡನೇ ಹಂತದ ಮಾನದಂಡವಾಗಿದ್ದು, ಏಪ್ರಿಲ್​ 1ರ ಒಳಗೆ ಕಡ್ಡಾಯವಾಗಿ ಅಳವಡಿಸುವಂತೆ ಕೇಂದ್ರ ಸರಕಾರ ಸೂಚನೆ ಕೊಟ್ಟಿದೆ. ಈ ಎಂಜಿನ್​ 6250 ಆರ್​ಪಿಎಮ್​ನಲ್ಲಿ 8.19 ಬಿಎಚ್​​ಪಿ ಪವರ್​ ಹಾಗೂ 5000 ಆರ್​ಪಿಎಮ್​ನಲ್ಲಿ 10.4 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐಡಲ್​ ಸ್ಟಾರ್ಟ್​-ಸ್ಟಾಪ್​ ಕೂಡ ಇದೆ. ಇದರಿಂದ ಸಿಟಿ ಸವಾರಿಯ ವೇಳೆ ಮೈಲೇಜ್​ ಕೂಡ ಜಾಸ್ತಿಯಾಗುತ್ತದೆ. ಹೋಂಡಾ ಕಂಪನಿಯ ಈ ಸ್ಕೂಟರ್​ ಹೆಚ್ಚು ಮೈಲೇಜ್​ ನೀಡುವ ಟಯರ್​​ಗಳನ್ನು ಬಳಸಿಕೊಂಡಿದೆ ಎಂಬುದು ಕಂಪನಿಯ ಹೇಳಿಕೆ. ಅದೇ ರೀತಿ ಎಸ್​ಪಿ ತಾಂತ್ರಿಕತೆಯನ್ನು ಹೊಂದಿದ್ದು ಸ್ಮೂತ್​ ಸ್ಟಾರ್ಟ್​ ಸೇರಿದಂತೆ ಹಲವು ಫೀಚರ್​ಗಳನ್ನು ಹೊಂದಿದೆ.

ಏನೇನು ಫೀಚರ್​ಗಳಿವೆ?

ಸೈಡ್​ ಸ್ಟಾಂಡ್​ ಕಟ್​ಆಫ್​ ಸ್ವಿಚ್​, ಹೊರಗಡೆಯೇ ಇರುವ ಫ್ಯುಯಲ್​ ಕ್ಯಾಪ್​, ಓಪನ್​ ಗ್ಲವ್​ ಬಾಕ್ಸ್​, ಎಲ್​ಇಡಿ ಹೆಡ್​ಲ್ಯಾಂಪ್​ ಹೊಂದಿದೆ. ಇದರಲ್ಲಿರುವ ಸಣ್ಣ ಡಿಜಿಟಲ್​ ಸ್ಕ್ರೀನ್​ ಮೂಲಕ ರಿಯಲ್​ ಟೈಮ್​ ಮೈಲೇಜ್​ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ರೀತಿ ಡಿಸ್ಟನ್ಸ್ ಎಮ್ಟಿ, ಫ್ಯುಯಲ್​ ಗೇಜ್​, ಸರಾಸರಿ ಮೈಲೇಜ್​ ಮತ್ತಿತರ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಈ ಸ್ಕೂಟರ್​ನ ಟಾಪ್​ ಎಂಡ್ ವೇರಿಯೆಂಟ್​ ಸ್ಕೂಟರ್​ನಲ್ಲಿ ಸ್ಮಾರ್ಟ್​ ಕಿ ಆಯ್ಕೆಯೂ ಬಂದಿದೆ. ಇದು ಸ್ಮಾರ್ಟ್​ ಫೈಂಡ್​, ಸ್ಮಾರ್ಟ್​ ಸೇಫ್​, ಸ್ಮಾರ್ಟ್ಸ್​ ಅನ್​ಲಾಕ್​, ಸ್ಮಾರ್ಟ್​ ಸ್ಟಾರ್ಟ್​ ಎಂಬ ಆಯ್ಕೆ ನೀಡಲಾಗಿದೆ. ಸ್ಮಾರ್ಟ್​ ಕಿ ಮೂಲಕ 10 ಮೀಟರ್​ ದೂರದಲ್ಲಿ ಸ್ಕೂಟರ್​ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಬಟನ್ ಒತ್ತಿದರೆ ಅದರ ಇಂಟಿಕೇಟರ್ ಉರಿಯಲು ಆರಂಭವಾಗುತ್ತದೆ.

ಅದೇ ರೀತಿ ಇಮ್ಮೊಬಿಲೈಸರ್ ಫೀಚರ್​ ಕೂಡ ಇದ್ದು, ಕಿ 2 ಮೀಟರ್​ಗಿಂತ ದೂರ ಹೋದ ತಕ್ಷಣ ಇಮ್ಮೊಬಿಲೈಸರ್​ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕಿಹೋಲ್​ ಇರುವುದಿಲ್ಲ. ಬದಲಾಗಿ. ಇಗ್ನಿಶನ್​ ಆನ್​ ಮಾಡುವ ಬಟನ್​ ಇರುವ ನಾಬ್​ ತಿರುಗಿಬೇಕಾಗುತ್ತದೆ. ಈ ನಾಬ್​ ಮೂಲಕ ಸೀಟ್​, ಫ್ಯುಯಲ್​ ಕ್ಯಾಪ್​ ಹಾಗೂ ಹ್ಯಾಂಡಲ್​ ಲಾಕ್​ ತೆಗೆಯಬಹುದಾಗಿದೆ.

Exit mobile version