Honda Activa Smart Ki Edition Released; Here is information about the new feature, price Honda Activa : ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಸ್ಟಾರ್ಟ್​ ಮಾಡಲು ಕಿ ಬೇಕಾಗಿಲ್ಲ! ಏನಿದು ಹೊಸ ಫೀಚರ್​​? - Vistara News

ಆಟೋಮೊಬೈಲ್

Honda Activa : ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಸ್ಟಾರ್ಟ್​ ಮಾಡಲು ಕಿ ಬೇಕಾಗಿಲ್ಲ! ಏನಿದು ಹೊಸ ಫೀಚರ್​​?

ಸ್ಮಾರ್ಟ್​ ಕಿ ಈ ವಿಭಾಗದಲ್ಲಿ ಹೊಸ ಸೇರ್ಪಡೆಯಾಗಿದ್ದು, ಕಾರಿನ ರೀತಿಯಲ್ಲೇ ಕಿ ಒತ್ತುವ ಮೂಲಕ ಪಾರ್ಕಿಂಗ್​ ಜಾಗದಲ್ಲಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ.

VISTARANEWS.COM


on

Honda Activa Smart Ki Edition Released; Here is information about the new feature, price
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಸಾಮಾನ್ಯ ರೀತಿಯ ಕಿ ಇಲ್ಲದ, ಕಾರಿನಂತೆಯೇ ಸ್ಮಾರ್ಟ್​ ಕಿ ಮೂಲಕ ಸ್ಟಾರ್ಟ್​​ ಮಾಡಬಹುದಾದ ಹೋಂಡಾ ಆಕ್ಟಿವಾ 125 ಸ್ಕೂಟರ್​ (Honda Activa) ಭಾರತದ ಮಾರುಕಟ್ಟೆಯಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಇದು ಈ ಹಿಂದಿನ 125 ಸಿಸಿ ಸ್ಕೂಟರ್​ನ ಅಪ್​ಗ್ರೇಡ್​ ಆಗಿದ್ದರೂ, ಸ್ಮಾರ್ಟ್​ ಕಿ ಆಯ್ಕೆ ಇದರ ವೇರಿಯೆಂಟ್​ಗಳಲ್ಲಿ ಹೊಸ ಸೇರ್ಪಡೆ. ಈ ಸ್ಮಾರ್ಟ್​ ಕಿ ಮೂಲಕ ಸವಾರರ ಹಲವು ಕೆಲಸಗಳು ಸರಳಗೊಂಡಿವೆ. ಜತೆಗೆ ರಾಶಿ ರಾಶಿ ಸ್ಕೂಟರ್​ಗಳ ನಡುವೆ ನಮ್ಮ ಸ್ಕೂಟರ್​ ಪತ್ತೆ ಮಾಡುವುದಕ್ಕೂ ಸಾಧ್ಯವಿದೆ. ಡ್ರಮ್​, ಡ್ರಮ್​ ಅಲಾಯ್​, ಡಿಸ್ಕ್​ ಈ ಹಿಂದೆ ಇದ್ದ ವೇರಿಯೆಂಟ್ ಆಗಿದ್ದು, ಎಚ್​ ಸ್ಮಾರ್ಟ್ ಹೊಸ ಆಕರ್ಷಣೆಯಾಗಿದೆ.

ಹೊಸ ಸ್ಕೂಟರ್​ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಇದೆ. ಜತೆಗೆ ಅದೇ ಪರ್ಲ್​ ನೈಟ್​ ಸ್ಟಾರ್ಟ್​​ ಬ್ಲ್ಯಾಕ್​, ಹೆವಿ ಗ್ರೇ ಮೆಟಾಲಿಕ್​, ರೆಬೆಲ್​ ರೆಡ್ ಮೆಟಾಲಿಕ್​, ಪರ್ಲ್​ ಪ್ರೀಶಿಯಸ್, ಮಿಡ್​ನೈಟ್​ ಬ್ಲ್ಯೂ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಅಪ್​​ಗ್ರೇಡ್ ಮಾಡಿರುವ ಸ್ಕೂಟರ್​ನ ಬೆಲೆ 78,920 ರೂಪಾಯಿಗಳಿಂದ ಆರಂಭಗೊಂಡು 88,093 ರೂಪಾಯಿಗಳ ತನಕ ಇದೆ. (ಎಕ್ಸ್​ ಶೋರೂಮ್​ ಬೆಲೆ).

ಹೊಸ ಹೋಂಡಾ ಆಕ್ಟಿವಾ ಸ್ಕೂಟರ್​ 125 ಸಿಸಿಯಲ್ಲಿ ಫ್ಯುಯಲ್​ ಇಂಜೆಕ್ಟರ್​ ಸಮೇತ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಇದು ಬಿಎಸ್​6ನ ಎರಡನೇ ಹಂತದ ಮಾನದಂಡವಾಗಿದ್ದು, ಏಪ್ರಿಲ್​ 1ರ ಒಳಗೆ ಕಡ್ಡಾಯವಾಗಿ ಅಳವಡಿಸುವಂತೆ ಕೇಂದ್ರ ಸರಕಾರ ಸೂಚನೆ ಕೊಟ್ಟಿದೆ. ಈ ಎಂಜಿನ್​ 6250 ಆರ್​ಪಿಎಮ್​ನಲ್ಲಿ 8.19 ಬಿಎಚ್​​ಪಿ ಪವರ್​ ಹಾಗೂ 5000 ಆರ್​ಪಿಎಮ್​ನಲ್ಲಿ 10.4 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐಡಲ್​ ಸ್ಟಾರ್ಟ್​-ಸ್ಟಾಪ್​ ಕೂಡ ಇದೆ. ಇದರಿಂದ ಸಿಟಿ ಸವಾರಿಯ ವೇಳೆ ಮೈಲೇಜ್​ ಕೂಡ ಜಾಸ್ತಿಯಾಗುತ್ತದೆ. ಹೋಂಡಾ ಕಂಪನಿಯ ಈ ಸ್ಕೂಟರ್​ ಹೆಚ್ಚು ಮೈಲೇಜ್​ ನೀಡುವ ಟಯರ್​​ಗಳನ್ನು ಬಳಸಿಕೊಂಡಿದೆ ಎಂಬುದು ಕಂಪನಿಯ ಹೇಳಿಕೆ. ಅದೇ ರೀತಿ ಎಸ್​ಪಿ ತಾಂತ್ರಿಕತೆಯನ್ನು ಹೊಂದಿದ್ದು ಸ್ಮೂತ್​ ಸ್ಟಾರ್ಟ್​ ಸೇರಿದಂತೆ ಹಲವು ಫೀಚರ್​ಗಳನ್ನು ಹೊಂದಿದೆ.

ಏನೇನು ಫೀಚರ್​ಗಳಿವೆ?

ಸೈಡ್​ ಸ್ಟಾಂಡ್​ ಕಟ್​ಆಫ್​ ಸ್ವಿಚ್​, ಹೊರಗಡೆಯೇ ಇರುವ ಫ್ಯುಯಲ್​ ಕ್ಯಾಪ್​, ಓಪನ್​ ಗ್ಲವ್​ ಬಾಕ್ಸ್​, ಎಲ್​ಇಡಿ ಹೆಡ್​ಲ್ಯಾಂಪ್​ ಹೊಂದಿದೆ. ಇದರಲ್ಲಿರುವ ಸಣ್ಣ ಡಿಜಿಟಲ್​ ಸ್ಕ್ರೀನ್​ ಮೂಲಕ ರಿಯಲ್​ ಟೈಮ್​ ಮೈಲೇಜ್​ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ರೀತಿ ಡಿಸ್ಟನ್ಸ್ ಎಮ್ಟಿ, ಫ್ಯುಯಲ್​ ಗೇಜ್​, ಸರಾಸರಿ ಮೈಲೇಜ್​ ಮತ್ತಿತರ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಈ ಸ್ಕೂಟರ್​ನ ಟಾಪ್​ ಎಂಡ್ ವೇರಿಯೆಂಟ್​ ಸ್ಕೂಟರ್​ನಲ್ಲಿ ಸ್ಮಾರ್ಟ್​ ಕಿ ಆಯ್ಕೆಯೂ ಬಂದಿದೆ. ಇದು ಸ್ಮಾರ್ಟ್​ ಫೈಂಡ್​, ಸ್ಮಾರ್ಟ್​ ಸೇಫ್​, ಸ್ಮಾರ್ಟ್ಸ್​ ಅನ್​ಲಾಕ್​, ಸ್ಮಾರ್ಟ್​ ಸ್ಟಾರ್ಟ್​ ಎಂಬ ಆಯ್ಕೆ ನೀಡಲಾಗಿದೆ. ಸ್ಮಾರ್ಟ್​ ಕಿ ಮೂಲಕ 10 ಮೀಟರ್​ ದೂರದಲ್ಲಿ ಸ್ಕೂಟರ್​ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಬಟನ್ ಒತ್ತಿದರೆ ಅದರ ಇಂಟಿಕೇಟರ್ ಉರಿಯಲು ಆರಂಭವಾಗುತ್ತದೆ.

ಅದೇ ರೀತಿ ಇಮ್ಮೊಬಿಲೈಸರ್ ಫೀಚರ್​ ಕೂಡ ಇದ್ದು, ಕಿ 2 ಮೀಟರ್​ಗಿಂತ ದೂರ ಹೋದ ತಕ್ಷಣ ಇಮ್ಮೊಬಿಲೈಸರ್​ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕಿಹೋಲ್​ ಇರುವುದಿಲ್ಲ. ಬದಲಾಗಿ. ಇಗ್ನಿಶನ್​ ಆನ್​ ಮಾಡುವ ಬಟನ್​ ಇರುವ ನಾಬ್​ ತಿರುಗಿಬೇಕಾಗುತ್ತದೆ. ಈ ನಾಬ್​ ಮೂಲಕ ಸೀಟ್​, ಫ್ಯುಯಲ್​ ಕ್ಯಾಪ್​ ಹಾಗೂ ಹ್ಯಾಂಡಲ್​ ಲಾಕ್​ ತೆಗೆಯಬಹುದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Innova Hycross: ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಬಿಡುಗಡೆ; ದರ ಎಷ್ಟು?

Innova Hycross: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಅನ್ನು ಪರಿಚಯಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ GX (O) ಗ್ರೇಡ್ 10 ಕ್ಕೂ ಹೆಚ್ಚು ಅಡ್ವಾನ್ಸ್ ಟೆಕ್ನಾಲಜಿ ಮತ್ತು ಕಂಫರ್ಟ್ ಫೀಚರ್‌ಗಳನ್ನು ಹೊಂದಿರುವ ವಾಹನ ಇದಾಗಿದೆ.

VISTARANEWS.COM


on

Toyota Kirloskar Motor Launches New Innova Hicross Petrol GX (O) Grade
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ‘ಗ್ರಾಹಕ-ಮೊದಲು’ ತತ್ವಕ್ಕೆ ಅನುಗುಣವಾಗಿ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ಹೊಸ ಇನ್ನೋವಾ ಹೈಕ್ರಾಸ್ GX (O) ಗ್ರೇಡ್ ಅನ್ನು ಪೆಟ್ರೋಲ್ ರೂಪಾಂತರದಲ್ಲಿ ಪರಿಚಯಿಸುವುದಾಗಿ (Innova Hycross) ಘೋಷಿಸಿದೆ.

ಇನ್ನೋವಾ ಹೈಕ್ರಾಸ್ ಸರಣಿಗೆ ಇತ್ತೀಚಿನ ಸೇರ್ಪಡೆಯಾಗಿರುವ GX (O) ಗ್ರೇಡ್ 10 ಕ್ಕೂ ಹೆಚ್ಚು ಸುಧಾರಿತ ಆರಾಮದಾಯಕ ಮತ್ತು ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದ್ದು, ಇನ್ನೋವಾ ಹೈಕ್ರಾಸ್ ಪೆಟ್ರೋಲ್ ಜಿಎಕ್ಸ್ (ಒ) ಹೆಚ್ಚಿನ ಅಗತ್ಯತೆಗಳನ್ನು ಬಯಸುವ ಗ್ರಾಹಕರಿಗೆ ಮೌಲ್ಯಾಧಾರಿತವಾಗಿದೆ.

ಇದನ್ನೂ ಓದಿ: NEET PG-2024: ನೀಟ್‌ ಪಿಜಿ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ; ಇಲ್ಲಿದೆ ನೋಂದಣಿ ಮಾಹಿತಿ

ವಿಶೇಷತೆಗಳೇನು?

ಮುಂಭಾಗದ ಎಲ್ಇಡಿ ಫಾಗ್ ಲ್ಯಾಂಪ್ಸ್ , ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ಸ್, ರಿಯರ್ ಡೀಫಾಗರ್ ಫೀಚರ್‌ಗಳನ್ನು ಇದು ಒಳಗೊಂಡಿದೆ. ಸುಪೀರಿಯರ್ ಕಂಫರ್ಟ್ – ಚೆಸ್ಟ್ ನಟ್ ಥೀಮ್ ಇಂಟೀರಿಯರ್, ಸಾಫ್ಟ್ ಟಚ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾನಲ್, ಮಿಡ್-ಗ್ರೇಡ್ ಫ್ಯಾಬ್ರಿಲ್ ಸೀಟ್ಸ್, ರಿಯರ್ ಸನ್ ಶೇಡ್ ವೈಶಿಷ್ಟ್ಯವನ್ನು ಹೊಂದಿದ್ದು, ಆಟೋ ಎಸಿ, 10.1″ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಪನೋರಮಿಕ್ ವ್ಯೂ ಮಾನಿಟರ್‌ಗಳನ್ನು ಒಳಗೊಂಡಿದೆ.

7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯ

7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರುವ GX (O) ಗ್ರೇಡ್ 7 ಡೈನಾಮಿಕ್ ಬಣ್ಣಗಳಲ್ಲಿ ಲಭ್ಯವಿದೆ. ಬ್ಲ್ಯಾಕಿಶ್ ಅಗೆಹಾ ಗ್ಲಾಸ್ ಫ್ಲೇಕ್, ಪ್ಲಾಟಿನಂ ವೈಟ್ ಪರ್ಲ್ , ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್ ಮತ್ತು ಅವಂಟ್ ಗ್ರೇಡ್ ಬ್ರೋನ್ಜ್ ಮೆಟಾಲಿಕ್ ಕಲರ್ ಗಳಲ್ಲಿ ದೊರೆಯಲಿದೆ.

ಈ ಕುರಿತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ನಿರಂತರವಾಗಿ ಮಾರುಕಟ್ಟೆಯ ಅಗತ್ಯಗಳನ್ನು ಆಲಿಸುತ್ತೇವೆ. ಇದರಿಂದಾಗಿ ನಾವು ನೀಡುವ ಪ್ರತಿಯೊಂದು ವಾಹನವು ನಮ್ಮ ಗ್ರಾಹಕರ ವಿಕಸನಗೊಳ್ಳುವ ಅಗತ್ಯಗಳಿಗೆ ಹೊಂದಿಕೆಯಾಗುತ್ತದೆ. ಹೊಸ ಇನ್ನೋವಾ ಹೈಕ್ರಾಸ್ ಪೆಟ್ರೋಲ್ GX (O) ಗ್ರೇಡ್ ಈ ತತ್ವಕ್ಕೆ ನಿದರ್ಶನವಾಗಿದೆ.

ಇದನ್ನೂ ಓದಿ: Dinesh Karthik: ಕಾರ್ತಿಕ್​ಗೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ನೀಡಿ; ದಿಗ್ಗಜ ಕ್ರಿಕೆಟಿಗರ ಒತ್ತಾಯ

ಇದು ಹೆಚ್ಚಿನ ಆರಾಮದಾಯಕ ಮತ್ತು ಸುಧಾರಿತ ತಂತ್ರಜ್ಞಾನವನ್ನು ಐಷಾರಾಮಿ ಮತ್ತು ದಕ್ಷತೆಯೊಂದಿಗೆ ಎಚ್ಚರಿಕೆಯಿಂದ ಬೆರೆಸುತ್ತದೆ. ಕಾರ್ಯಕ್ಷಮತೆಯು ಉನ್ನತ ದರ್ಜೆಯದ್ದಾಗಿದ್ದು, 10ಕ್ಕೂ ಹೆಚ್ಚು ವೈಶಿಷ್ಟ್ಯಗಳು ತಮ್ಮ ವಿಕಸನಗೊಳ್ಳುತ್ತಿರುವ ಲೈಫ್‌ಸ್ಟೈಲ್ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಆಕರ್ಷಕ ಪ್ರಸ್ತಾಪದೊಂದಿಗೆ ಸಂಪೂರ್ಣವಾಗಿ ಲೋಡ್ ಮಾಡಲಾದ ಪೆಟ್ರೋಲ್ ಆವೃತ್ತಿಯನ್ನು ಹುಡುಕುತ್ತಿರುವ ಗ್ರಾಹಕರಿಂದ ಹೆಚ್ಚಿನ ಸ್ಪಂದನೆ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಎಕ್ಸ್‌ ಶೋರೂಂ ಬೆಲೆಗಳ ವಿವರಗಳು

Variant Ex Showroom Price (W.E.F 15th Apr 2024) Hycross Petrol GX (O) – 8-Seater 20.99 ಲಕ್ಷ ರೂ, ಮತ್ತು Hycross Petrol GX (O) – 7-Seater 21.13 ಲಕ್ಷ ರೂಗಳು ಆಗಿದೆ.

ಹೆಚ್ಚಿನ ಕಾರ್ಯಕ್ಷಮತೆ

ಇನ್ನೋವಾ ಹೈಕ್ರಾಸ್ 2 ಲೀ ಟಿಎನ್‌ಜಿಎ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು, 128 ಕಿಲೋವ್ಯಾಟ್ (174 ಪಿಎಸ್) ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಲಾಂಚ್ ಗೇರ್ ಕಾರ್ಯ ವಿಧಾನದೊಂದಿಗೆ ಡೈರೆಕ್ಟ್ ಶಿಫ್ಟ್ ಸಿವಿಟಿ ಮತ್ತು ಸುಗಮ ಹಾಗೂ ಸ್ಪಂದಿಸುವ ವೇಗವರ್ಧನೆಗಾಗಿ 10 ಸ್ಪೀಡ್ ಸೀಕ್ವೆನ್ಸಿಯಲ್ ಶಿಫ್ಟ್ ಜತೆಗೆ 16.13 ಕಿ.ಮೀ ಬೆಸ್ಕ್ ಇನ್‌ಕ್ಲಾಸ್‌ ಫ್ಯೂಯಲ್ ಎಕಾನಮಿಯನ್ನು ಹೊಂದಿದೆ.

ಇದನ್ನೂ ಓದಿ: Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

ಟಫ್ ಎಕ್ಸ್‌ಟೀರಿಯರ್

ಹೊಸ ಗ್ರೇಡ್ ಬೋಲ್ಡ್ ಮತ್ತು ಮಸ್ಕ್ಯುಲಾರ್ ಎಸ್‌ಯುವಿ ತರಹದ ಎಕ್ಸ್‌ಟೀರಿಯರ್ ಅನ್ನು ಹೊಂದಿದೆ. 16-ಇಂಚಿನ ಸಿಲ್ವರ್ ಅಲಾಯ್ ವೀಲ್ಸ್, ಎಲ್ಇಡಿ ಸ್ಟಾಪ್ ಲ್ಯಾಂಪ್‌ನೊಂದಿಗೆ ರೂಫ್ ಎಂಡ್ ಸ್ಪಾಯ್ಲರ್ ಮತ್ತು ಎಲ್‌ಇಡಿ ಸ್ಪಾಟ್ ಲ್ಯಾಂಪ್ ಜತೆಗೆ ರೂಫ್ ಎಂಡ್ ಸ್ಪಾಯ್ಲರ್, ಆಟೋ ಫೋಲ್ಡ್ ಓಆರ್‌ವಿಎಂ, ಎಲೆಕ್ಟ್ರಿಕ್ ಅಡ್ಜಸ್ಟ್ ಮತ್ತು ಟರ್ನ್ ಇಂಡಿಕೇಟರ್ ವೈಶಿಷ್ಟ್ಯಗಳನ್ನು ಹೊಂದಿದೆ.

ಐಷಾರಾಮಿ ಮತ್ತು ಆರಾಮದಾಯಕ ಇಂಟೀರಿಯರ್

ಇನ್ನೋವಾ ಹೈಕ್ರಾಸ್ GX (O) ಸುಧಾರಿತ ಕ್ಯಾಬಿನ್ ಸೌಂದರ್ಯವನ್ನು ಹೊಂದಿದೆ. ಡಾರ್ಕ್ ಚೆಸ್ಟ್ನಟ್ ಕ್ವಿಲ್ಟೆಡ್ ಲೆದರ್ ಸೀಟುಗಳೊಂದಿಗೆ ಸಾಫ್ಟ್‌ ಟಚ್ ಲೆದರ್ ಮತ್ತು ಮೆಟಾಲಿಕ್ ಡೆಕೋರೇಟೆಡ್ ಲೈನಿಂಗ್ ಅನ್ನು ಒಳಗೊಂಡಿದೆ.

ಕಾಕ್‌ ಪಿಟ್ ಅನ್ನು ಸಮತಲ ಟೋನ್‌ಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಲಿದೆ. ಶಕ್ತಿಯುತ ಎಕ್ಸ್‌ಟೀರಿಯರ್ ಅನ್ನು ಪ್ರತಿಬಿಂಬಿಸಲು ಸೆಂಟ್ರಲ್ ಕ್ಲಸ್ಟರ್ ಮತ್ತು ಡೋರ್ ಡೆಕೋರ್‌ಗಾಗಿ ವರ್ಟಿಕಲ್ ಟೋನ್‌ಅನ್ನು ಬಳಸಲಾಗಿದೆ.

ಸುಧಾರಿತ ಸುರಕ್ಷತಾ ಕೊಡುಗೆ

ಇನ್ನೋವಾ ಹೈಕ್ರಾಸ್ ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಆಲ್-ವೀಲ್ ಡಿಸ್ಕ್ ಬ್ರೇಕ್ 6 ಎಸ್‌ಆರ್‌ಎಸ್ ಏರ್ ಬ್ಯಾಗ್ ಮತ್ತು ಐಎಸ್ ಒಫಿಕ್ಸ್ ಆಂಕರ್‌ಗಳು ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಸಾಟಿಯಿಲ್ಲದ ಆರಾಮದೊಂದಿಗೆ ನೀಡುತ್ತಿದೆ. ವೈಯಕ್ತಿಕ ಐಷಾರಾಮಕ್ಕಾಗಿ ಕ್ಯಾಪ್ಟನ್ ಸೀಟುಗಳನ್ನು ನೀಡುತ್ತದೆ, ಹೆಚ್ಚಿದ ಬೂಟ್ ಸ್ಪೇಸ್ ಗಾಗಿ 3ನೇ ಸಾಲಿನ ಫೋಲ್ಡ್-ಫ್ಲಾಟ್ ಸೀಟ್, ರೀಕ್ಲೈನ್ ಮೂರನೇ ಸಾಲಿನ ಸೀಟ್‌ಗಳು ಎಲ್ಲಾ ಪ್ರಯಾಣಿಕರಿಗೆ ಪ್ರತಿ ಪ್ರಯಾಣವು ಆನಂದದಾಯಕವಾಗಿರಲಿದೆ ಎಂಬುದನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Auto Fare : ಮೆಜೆಸ್ಟಿಕ್‌ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್‌ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ

ಮೌಲ್ಯವರ್ಧಿತ ಸೇವೆಗಳು

ಹೊಸ ಜಿಎಕ್ಸ್ (ಒ) ಗ್ರೇಡ್ ಐದು ವರ್ಷಗಳ ಕಾಂಪ್ಲಿಮೆಂಟರಿ ರೋಡ್ ಸೈಡ್ ಅಸಿಸ್ಟೆನ್ಸ್ , ಮೂರು ವರ್ಷ ಅಥವಾ 1,00,000 ಕಿಲೋಮೀಟರ್ ಸ್ಟ್ಯಾಂಡರ್ಡ್ ವಾರಂಟಿ, ಪ್ರಮಾಣೀಕೃತ ವಿನಿಮಯ ಕಾರ್ಯಕ್ರಮದ ಜತೆಗೆ ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಸ್ತರಿತ ವಾರಂಟಿ ಕಾರ್ಯಕ್ರಮದಂತಹ ಮೌಲ್ಯವರ್ಧಿತ ಸೇವೆಗಳ ಈ ಶ್ರೇಣಿಯಲ್ಲಿ ದೊರೆಯಲಿವೆ.

Continue Reading

ಪ್ರಮುಖ ಸುದ್ದಿ

Nita Ambani : 12 ಕೋಟಿ ರೂಪಾಯಿಯ ರೋಲ್ಸ್​ ರಾಯ್ಸ್​ ಕಾರು ಖರೀದಿಸಿದ ಅಂಬಾನಿ ಪತ್ನಿ ನೀತಾ, ಇಲ್ಲಿದೆ ವಿಡಿಯೊ

Nita Ambani: ನೀತಾ ಅಂಬಾನಿ ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿಯ ರೋಸ್ ಕ್ವಾರ್ಟ್ಜ್ ಶೇಡ್​ ಹೊಂದಿದೆ. ಇದು ಕಾರುಗಳಲ್ಲಿ ಬಳಸಲು ಅತ್ಯಂತ ವಿರಳ ಬಣ್ಣವಾಗಿದೆ. ಇಂಟೀರಿಯರ್​ ಆರ್ಕಿಡ್ ವೆಲ್ವೆಟ್ ಬಣ್ಣವನ್ನು ಹೊಂದಿದೆ ಹಾಗೂ ಹೆಚ್ಚು ಆಕರ್ಷಣೀಯವಾಗಿದೆ.

VISTARANEWS.COM


on

Nita ambani
Koo

ಮುಂಬಯಿ: ಬಿಲೇನಿಯರ್ ನೀತಾ ಅಂಬಾನಿ (Nita Ambani) ಕಾರುಗಳ ಪ್ರೇಮಿ ಎಂಬುದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಅವರ ಕಾರು ಗ್ಯಾರೇಜ್​ನಲ್ಲಿ ಹಲವಾರು ಐಷಾರಾಮಿ ಕಾರುಗಳಿವೆ ಆ ಪಟ್ಟಿಗೆ ಇದೀಗ ಹೊಚ್ಚ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಸೆಡಾನ್ ಸೇರಿಕೊಂಡಿದೆ. ಅಂಬಾನಿ ಕುಟುಂಬದ ಆಕರ್ಷಕ ಕಾರುಗಳ ಸಂಗ್ರಹಕ್ಕೆ ಈ ಆಕರ್ಷಕ ರೋಸ್ ಕ್ವಾರ್ಟ್ಜ್ ಶೇಡ್ ವಾಹನ ಸೇರ್ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲ ಹುಟ್ಟುಹಾಕಿದೆ. ವಿಶೇಷ ಬಣ್ಣಗಳು ಸೇರಿದಂತೆ ನಾನಾ ರೀತಿಯ 168 ಕ್ಕೂ ಹೆಚ್ಚು ಕಾರುಗಳು ಮುಖೇಶ್ ಅಂಬಾನಿ ಕಾರು ಗ್ಯಾರೇಜಿನಲ್ಲಿದೆ. ಈ ಸಂಗ್ರಹವು ದುಬಾರಿ ಮತ್ತು ವಿಶೇಷ ವಾಹನಗಳ ಶ್ರೇಣಿಯನ್ನು ಹೊಂದಿದೆ/ ಇದು ಐಷಾರಾಮಿ ಜೀವನ ಶೈಲಿಯ ಭಾಗವಾಗಿದೆ.

ನೀತಾ ಅಂಬಾನಿ ಅವರ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿಯ ರೋಸ್ ಕ್ವಾರ್ಟ್ಜ್ ಶೇಡ್​ ಹೊಂದಿದೆ. ಇದು ಕಾರುಗಳಲ್ಲಿ ಬಳಸಲು ಅತ್ಯಂತ ವಿರಳ ಬಣ್ಣವಾಗಿದೆ. ಇಂಟೀರಿಯರ್​ ಆರ್ಕಿಡ್ ವೆಲ್ವೆಟ್ ಬಣ್ಣವನ್ನು ಹೊಂದಿದೆ ಹಾಗೂ ಹೆಚ್ಚು ಆಕರ್ಷಣೀಯವಾಗಿದೆ.

ರೋಲ್ಸ್ ರಾಯ್ಸ್ ಕಸ್ಟಮೈಸ್ಡ್​ ಆಯ್ಕೆಯನ್ನು ನೀಡುತ್ತದೆ. ಖರೀದಿದಾರ ಆದ್ಯತೆಗಳಿಗೆ ತಕ್ಕಂತೆ ಸಿದ್ಧಪಡಿಸಿಕೊಡುತ್ತದೆ. ಸ್ಟ್ಯಾಂಡರ್ಡ್ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಕಾರಿನ ಬೆಲೆಯು ರೂ.12 ಕೋಟಿಗಳಾಗಿದ್ದರೆ, ನೀತಾ ಅಂಬಾನಿಯ ರೋಸ್ ಕ್ವಾರ್ಟ್ಜ್ ಆರ್ಕಿಡ್ ವೆಲ್ವೆಟ್ ಇಂಟೀರಿಯರ್​ ಹೊಂದಿರುವ ಕಾರಣ ಬೆಲೆ ಇನ್ನಷ್ಟು ಹೆಚ್ಚಾಗಿರಬಹುದು.

ಇದನ್ನೂ ಓದಿ: Rishabh Pant : ವಿಶ್ವ ಕಪ್​ ತಂಡದಲ್ಲಿ ರಿಷಭ್ ಪಂತ್​ಗೆ ಚಾನ್ಸ್​ ಖಚಿತ, ಇಲ್ಲಿದೆ ವಿವರ

ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಇಡಬ್ಲ್ಯೂಬಿ ಐಷಾರಾಮಿ ಸೆಡಾನ್ 6.75-ಲೀಟರ್ ಟ್ವಿನ್-ಟರ್ಬೊ ವಿ 12 ಎಂಜಿನ್ ಹೊಂದಿದ್ದು, 571 ಬಿಹೆಚ್ ಪಿ ಮತ್ತು 900 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂಭಾಗದ ಚಕ್ರಗಳಿಗೆ ಶಕ್ತಿ ನೀಡುವ ಸ್ವಯಂಚಾಲಿತ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾದ ಇದು ರೋಲ್ಸ್ ರಾಯ್ಸ್ ಬ್ರಾಂಡ್ ನ ವಿಶಿಷ್ಟ ಚಾಲನಾ ಅನುಭವ ನೀಡುತ್ತದೆ.

117 ಬಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿರುವ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು ವ್ಯಾಪಕವಾದ ಕಾರು ಸಂಗ್ರಹಕ್ಕೆ ಹೆಸರುವಾಸಿಯಾಗಿದೆ. ಮುಖೇಶ್ ಅಂಬಾನಿ ಅವರ ಕುಟುಂಬ ಈ ಹಿಂದೆ ರೋಲ್ಸ್ ರಾಯ್ಸ್ ಕಲಿನನ್​ ಬ್ಲ್ಯಾಕ್ ಬ್ಯಾಡ್ಜ್ ಎಸ್ ಯುವಿ ಕಾರನ್ನು ಖರೀದಿ ಮಾಡಿತ್ತು.

Continue Reading

Latest

Maruti Suzuki: ಮಾರುತಿ ಸುಜುಕಿಯ ಈ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌!

Maruti Suzuki: ಕಾರು ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಒಮ್ಮೆ ಮಾರುತಿ ಸುಜುಕಿ ಕಾರುಗಳನ್ನು ನೋಡಬಹುದು. ಯಾಕೆಂದರೆ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಮಾರುತಿ ಸುಜುಕಿಯು ತನ್ನ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಪ್ರಕಟಿಸಿದೆ.

VISTARANEWS.COM


on

By

Maruti Suzuki
Koo

ಬೆಂಗಳೂರು: ಕಾರು ಖರೀದಿಸಬೇಕು ಎನ್ನುವ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಮಾರುತಿ ಸುಜುಕಿಯ (Maruti Suzuki) ಕಾರುಗಳನ್ನೊಮ್ಮೆ ನೋಡಿ. ಯಾಕೆಂದರೆ ಮಾರುತಿ ಸುಜುಕಿಯು ತನ್ನ ಕೆಲವು ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ (discount) ಘೋಷಿಸಿದೆ. ಮಾರುತಿ ಸುಜುಕಿಯು ತನ್ನ ನೆಕ್ಸಾ ಶ್ರೇಣಿಯ (Nexa range) ಕಾರುಗಳ ಮೇಲೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಹೊಸ ಆರ್ಥಿಕ ವರ್ಷವನ್ನು ಪ್ರಾರಂಭಿಸಿದೆ. ಬಲೆನೊ (Baleno), ಫ್ರಾಂಕ್ಸ್ (Fronx) ಮತ್ತು ಜಿಮ್ನಿಯಂತಹ ( Jimny) ಮಾದರಿಯ ಕಾರುಗಳಿಗೆ ಸುಮಾರು 1.5 ಲಕ್ಷ ರೂ.ವರೆಗೆ ರಿಯಾಯಿತಿ ಘೋಷಿಸಿದೆ.

ಮಾರುತಿ ಸುಜುಕಿಯು ಘೋಷಿಸಿರುವ ಈ ರಿಯಾಯತಿಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್‌ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ.

ಕಂಪೆನಿಯು ನೀಡಿರುವ ಈ ರಿಯಾಯತಿಯು ಎಕ್ಸ್ ಎಲ್ 6 ಮತ್ತು ಪ್ರಮುಖ ಇನ್ವಿಕ್ಟೋ ಎಂಪಿವಿ ಮಾದರಿಗಳಿಗೆ ಅನ್ವಯವಾಗುವುದಿಲ್ಲ. ಅಲ್ಲದೇ ಈ ಈ ರಿಯಾಯಿತಿಯಲ್ಲಿ ಸ್ಥಳ ಮತ್ತು ರೂಪಾಂತರದ ಲಭ್ಯತೆಯ ಆಧಾರದ ಮೇಲೆ ಬದಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ: Share Market today: ಷೇರುದಾರರಿಗೆ ಯುಗಾದಿ ಬೆಲ್ಲ; ಸೆನ್ಸೆಕ್ಸ್ 75,000ಕ್ಕೆ ಐತಿಹಾಸಿಕ ಜಿಗಿತ

ಕಾರುಗಳ ಮೇಲಿನ ರಿಯಾಯಿತಿಗಳ ಲಭ್ಯತೆಯನ್ನು ಗ್ರಾಹಕರು ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಿ ಪರಿಶೀಲಿಸುವಂತೆ ಕಂಪೆನಿ ಹೇಳಿದೆ.

ಮಾರುತಿ ರಿಯಾಯಿತಿ ಎಷ್ಟಿದೆ?

ಮಾರುತಿ ಸುಜುಕಿ ಇಗ್ನಿಸ್‌ನ ಶ್ರೇಣಿಗಳಲ್ಲಿ ಮಾರುತಿ ಸುಜುಕಿ ಇಗ್ನಿಸ್ 58,000 ರೂ.ವರೆಗಿನ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ 40,000 ರೂ. ನಗದು ರಿಯಾಯಿತಿ, 15,000 ರೂ. ವಿನಿಮಯ ಬೋನಸ್ ಹಾಗೂ 3,000 ರೂ. ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿದೆ. ಇದು ಸ್ವಯಂಚಾಲಿತ ಮತ್ತು ಹಸ್ತಚಾಲಿತ ರೂಪಾಂತರಗಳಿಗೆ ಅನ್ವಯಿಸುತ್ತದೆ.

ಮಾರುತಿ ಸುಜುಕಿ ಬಲೆನೊ:

ಮಾರುತಿ ಸುಜುಕಿ ಬಲೆನೊ ಶ್ರೇಣಿಯಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ಗೆ ಮಾರುತಿ ಸುಜುಕಿ 35,000 ರೂ. ನಗದು ರಿಯಾಯಿತಿ, 15,000 ವಿನಿಮಯ ಬೋನಸ್ ಮತ್ತು 3,000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು ನೀಡುತ್ತಿದೆ. ಸಿಎನ್ ಜಿ ರೂಪಾಂತರಗಳು ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಯನ್ನು ಇದು ಒಳಗೊಂಡಿದೆ. ಆದರೆ ಇದಕ್ಕೆ ಅತೀ ಕಡಿಮೆ ನಗದು ರಿಯಾಯಿತಿ 15,000 ರೂ. ನೀಡಲಾಗುತ್ತದೆ.

ಮಾರುತಿ ಸುಜುಕಿ ಸಿಯಾಜ್:

ಮಾರುತಿ ಸುಜುಕಿ ಸಿಯಾಜ್ ಶ್ರೇಣಿಯಲ್ಲಿ ಮಾರುತಿ ಸುಜುಕಿ 53,000 ವರೆಗಿನ ರಿಯಾಯಿತಿಗಳನ್ನು ನೀಡುತ್ತಿದೆ. ಇದರಲ್ಲಿ ಸ್ಟಿಕ್ಕರ್ ಬೆಲೆಯಲ್ಲಿ 25,000 ರೂ. ರಿಯಾಯಿತಿ, 25,000 ಎಕ್ಸ್‌ಚೇಂಜ್ ಬೋನಸ್ ಮತ್ತು 3,000 ಕಾರ್ಪೊರೇಟ್ ರಿಯಾಯಿತಿಯನ್ನು ಇದು ಒಳಗೊಂಡಿದೆ.


ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಶ್ರೇಣಿಯಲ್ಲಿ ಗ್ರಾಂಡ್ ವಿಟಾರಾ ಮೈಲ್ಡ್ ಹೈಬ್ರಿಡ್‌ಗಾಗಿ 58,000 ರೂ. ವರೆಗಿನ ರಿಯಾಯಿತಿ ಘೋಷಿಸಲಾಗಿದೆ. ಇದರಲ್ಲಿ 25,000 ರೂ. ನಗದು ರಿಯಾಯಿತಿ, 30,000 ರೂ. ವಿನಿಮಯ ಬೋನಸ್ ಮತ್ತು 3,000 ರೂ. ವರೆಗಿನ ಕಾರ್ಪೊರೇಟ್ ಕೊಡುಗೆಗಳು ಸೇರಿವೆ. ಹೈಬ್ರಿಡ್ ರೂಪಾಂತರಗಳು 84,000 ರೂ. ವರೆಗೆ ರಿಯಾಯಿಯನ್ನು ಘೋಷಿಸಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ :

ಮಾರುತಿ ಸುಜುಕಿ ಫ್ರಾಂಕ್ಸ್ ದಲ್ಲಿ ಫ್ರಾಂಕ್ಸ್‌ನ ಟರ್ಬೊ ಪೆಟ್ರೋಲ್ ಕಾರುಗಳಿಗೆ ನಗದು ರಿಯಾಯಿತಿ, ಪರಿಕರ ಕಿಟ್, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಒಳಗೊಂಡಂತೆ 68,000 ರೂ. ವರೆಗೆ ರಿಯಾಯಿತಿ ಪಡೆಯಬಹುದು.

Maruti suzuki


ಮಾರುತಿ ಸುಜುಕಿ ಜಿಮ್ನಿ:

ಮಾರುತಿ ಸುಜುಕಿ ಜಿಮ್ನಿಯ ಆಲ್ಫಾ ಟ್ರಿಮ್‌ನ ಎಂವೈ 2023 ಯುನಿಟ್‌ಗಳು 1.50 ಲಕ್ಷ ರೂ. ವರೆಗೆ ರಿಯಾಯಿತಿಯನ್ನು ಹೊಂದಿದ್ದರೆ, ಜಿಮ್ನಿಯ ಹೊಸ ಎಂವೈ 2024 ಮಾದರಿಗಳು ನಗದು ರಿಯಾಯಿತಿ ಒಳಗೊಂಡಿದೆ

Continue Reading

ಪ್ರಮುಖ ಸುದ್ದಿ

Ather Halo Helmet : ಈ ಸ್ಮಾರ್ಟ್​ ಹೆಲ್ಮೆಟ್​ ಹಾಕೊಂಡ್ರೆ ಮ್ಯೂಸಿಕ್ ಕೇಳಬಹುದು; ಅದರಲ್ಲೇ ಮಾತನಾಡಬಹುದು

Ather Halo Helmet: ಅಥೆರ್ ಎನರ್ಜಿ ತನ್ನ ಹೊಸ ಸರಣಿಯ ಸ್ಮಾರ್ಟ್ ಹೆಲ್ಮೆಟ್ ಗಳಿಗೆ ‘ಹ್ಯಾಲೋ’ ಎಂದು ಹೆಸರಿಟ್ಟಿದೆ. ತೆರೆದ ಮತ್ತು ಮುಚ್ಚಿದ ಸೇರಿದಂತೆ ಎರಡು ಮಾದರಿಯಲ್ಲಿ ಈ ಹೆಲ್ಮೆಟ್ ಲಭ್ಯವಿದೆ. ಹ್ಯಾಲೋ ಹೆಲ್ಮೆಟ್ ಪ್ರಯಾಣಿಕರನ್ನು ಕೇವಲ ಸುರಕ್ಷಿತವಾಗಿರಿಸುವ ಬದಲು ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಹಾಡು ಕೇಳಿಕೊಂಡು, ಅಗತ್ಯ ಸಂದರ್ಭದಲ್ಲಿ ಮಾತನಾಡಿಕೊಂಡು ಹೋಗಬಹುದಾದ ಈ ಹೆಲ್ಮೆಟ್ ಅನ್ನು ಭವಿಷ್ಯದ ಹೆಲ್ಮೆಟ್ ಎಂದೇ ಕಂಪನಿ ಹೇಳಿಕೊಂಡಿದೆ.

VISTARANEWS.COM


on

Ather Halo Helmet
Koo

ಬೆಂಗಳೂರು: ಟೆಕ್ ಕಂಪನಿ ಅಥೆರ್ ಎನರ್ಜಿ ಹಲವಾರು ದಿನಗಳಿಂದ ಹೊಚ್ಚ ಹೊಸ ಟೆಕ್​ ಆಧಾರಿತ ಹೆಲ್ಮೆಟ್ (Ather Halo Helmet) ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಹಲವಾರು ಟೀಸರ್ ಗಳು ಮತ್ತು ಜಾಹೀರಾತುಗಳನ್ನು ಪ್ರಕಟಿಸಿತ್ತು. ಇದೀಗ ಆ ಹೆಲ್ಮೆಟ್ ಅನ್ನು ಮಾರಕಟ್ಟೆಗೆ ಇಳಿಸಿದೆ. ಬೆಂಗಳೂರಿನಲ್ಲಿ ನಡೆದ ಅಥೆರ್​ ಕಮ್ಯುನಿಟಿ ಡೇ ಕಾರ್ಯಕ್ರಮದಲ್ಲಿ ಈ ಹೆಲ್ಮೆಟ್​ ಬಿಡುಗಡೆಗೊಂಡಿದೆ.

ಅಥೆರ್ ಎನರ್ಜಿ ತನ್ನ ಹೊಸ ಸರಣಿಯ ಸ್ಮಾರ್ಟ್ ಹೆಲ್ಮೆಟ್ ಗಳಿಗೆ ‘ಹ್ಯಾಲೋ’ ಎಂದು ಹೆಸರಿಟ್ಟಿದೆ. ತೆರೆದ ಮತ್ತು ಮುಚ್ಚಿದ ಸೇರಿದಂತೆ ಎರಡು ಮಾದರಿಯಲ್ಲಿ ಈ ಹೆಲ್ಮೆಟ್ ಲಭ್ಯವಿದೆ. ಹ್ಯಾಲೋ ಹೆಲ್ಮೆಟ್ ಪ್ರಯಾಣಿಕರನ್ನು ಕೇವಲ ಸುರಕ್ಷಿತವಾಗಿರಿಸುವ ಬದಲು ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಹಾಡು ಕೇಳಿಕೊಂಡು, ಅಗತ್ಯ ಸಂದರ್ಭದಲ್ಲಿ ಮಾತನಾಡಿಕೊಂಡು ಹೋಗಬಹುದಾದ ಈ ಹೆಲ್ಮೆಟ್ ಅನ್ನು ಭವಿಷ್ಯದ ಹೆಲ್ಮೆಟ್ ಎಂದೇ ಕಂಪನಿ ಹೇಳಿಕೊಂಡಿದೆ.

ಡಾಟ್ 2 ಮತ್ತು ಐಎಸ್ಐ ಸುರಕ್ಷತಾ ರೇಟಿಂಗ್ಸ್​ಗಳೊಂದಿಎ ಫುಲ್-ಫೇಸ್ ಅಥೆರ್ ಹ್ಯಾಲೋ ಹೆಲ್ಮೆಟ್ 14,999 ರೂ. ಬೆಲೆಗೆ ಮಾರಾಟ‘ವಾಗಲಿದೆ. ಅದೇ ರೀತಿ ಮೊದಲ 1000 ಯುನಿಟ್​ಗಳು ರಿಯಾಯಿತಿಯೊಂದಿಗೆ 12,999 ರೂ.ಗೆ ಲಭ್ಯವಿರುತ್ತವೆ. ಅಂದ ಹಾಗೆ ಇದೇ ಹೆಲ್ಮೆಟ್ ಅನ್ನು ಕಮ್ಯುನಿಟಿ ಡೇ ಈವೆಂಟ್​ನಲ್ಲಿ ಶೇಕಡಾ 50ರ ರಿಯಾಯಿತಿಯೊಂದಿಗೂ ನೀಡಿದೆ. ಓಪನ್-ಫೇಸ್ ಹೆಲ್ಮೆಟ್​​ಗಳಿಗೆ ಹ್ಯಾಲೋ ಬಿಟ್ ಎಂದು ಕರೆಯಲಾಗಿದ್ದು. 4,999 ರೂ.ಗಳಿಗೆ ಲಭ್ಯವಿದೆ.

ಹ್ಯಾಲೋ ಎಂದರೇನು?

ಅಥೆರ್ ಹ್ಯಾಲೋ ಹೆಲ್ಮೆಟ್ ಬೇರೆ ಯಾವುದೇ ಹೆಲ್ಮೆಟ್​ಗಳ ಮಾದರಿಯನ್ನು ಆಧರಿಸಿಲ್ಲ ಅಥವಾ ಬೇರೆ ಯಾವುದೇ ಕಂಪನಿಯಿಂದ ವಿನ್ಯಾಸಗೊಳಿಸಲಾಗಿಲ್ಲ. ಇದನ್ನು ಸಂಪೂರ್ಣವಾಗಿ ಅಥೆರ್ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ. ಪ್ಯಾಡಿಂಗ್ ನಿಂದ ಚಿಪ್​ನವರೆಗೆ ಇಲ್ಲೇ ತಯಾರಾಗಿದೆ. ಇದನ್ನು ಹೆಚ್ಚು ಆಧುನಿಕ ಮತ್ತು ಭವಿಷ್ಯದ ಹೆಲ್ಮೆಟ್​ ಎಂದು ಹೇಳಿದೆ. ಅದರಲ್ಲಿ ಹ್ಯಾಲೋ ತಂತ್ರಜ್ಞಾನವಾಗಿರುವ ಕಾರಣ ಅದಕ್ಕೆ ಅದೇ ಹೆಸರು ಇಡಲಾಗಿದೆ. ಆಡಿಯೊ ಹರ್ಮನ್ ಕಾರ್ಡನ್ ತಾಂತ್ರಿಕತೆಯನ್ನು ಬಳಸಲಾಗಿದೆ.

ಇದನ್ನೂ ಓದಿ: Ather Rizta : ದೊಡ್ಡ ಸ್ಟೋರೇಜ್​, ಕಡಿಮೆ ಬೆಲೆ; ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಹೊಸ ಅಥೆರ್​ ರಿಶ್ತಾ

ಆಧುನಿಕ ಸ್ಮಾರ್ಟ್ಫೋನ್ ಯುಗವನ್ನು ಪರಿಗಣಿಸಿ, ಹ್ಯಾಲೋ ಟೆಕ್ ಅನ್ನು ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ. ಅದನ್ನು ಧರಿಸಿದ ಕ್ಷಣದಿಂದಲೇ ಹ್ಯಾಲೋ ಹೆಲ್ಮೆಟ್ ಸ್ವಯಂಚಾಲಿತವಾಗಿ ಸ್ವಿಚ್ ಆನ್ ಆಗುತ್ತದೆ ಮತ್ತು ಬ್ಲೂಟೂತ್ ಮೂಲಕ ಅಥೆರ್ ಸ್ಕೂಟರ್ ಮತ್ತು ನಿಮ್ಮ ಫೋನ್ ಗೆ ಸಂಪರ್ಕ ಸಾಧಿಸುತ್ತದೆ. ಸ್ಪೀಕರ್​ಗಳು ಮತ್ತು ಸಂವೇದಕಗಳನ್ನು ಬಳಸಿ ನಾಯ್ಸ್​ ಕ್ಯಾನ್ಸಲೇಷನ್​ ವ್ಯವಸ್ಥೆ ಮಾಡಲಾಗಿದೆ. ಸಂಗೀತ ಪ್ಲೇಬ್ಯಾಕ್ ಮತ್ತು ವಾಯ್ಸ್​ ರಿಟರ್ನ್​​ ಕಾಲ್​​ಗಳನ್ನು ಮಾಡಬಹುದು.

ಅಥೆರ್ ಹ್ಯಾಲೋವನ್ನು ತಂತ್ರಜ್ಞಾನದ ಆವೃತ್ತಿಯಾಗಿ ಇರಿಸುತ್ತಿದೆ, ಇದು ಕಾರಿನಂತಹ ಅನುಭವವನ್ನು ನೀಡುತ್ತದೆ, ವಿಶೇಷವಾಗಿ ಅದರ ಅಥೆರ್ ಚಿಟ್ಚಾಟ್ ಕಾರ್ಯದೊಂದಿಗೆ. ಇದು ಸವಾರ ಮತ್ತು ಹಿಂಬದಿ ಸವಾರನಿಗೆ ಸುತ್ತಮುತ್ತಲಿನ ಶಬ್ದದಿಂದ ಯಾವುದೇ ಹಸ್ತಕ್ಷೇಪವಿಲ್ಲದೆ ಹೆಲ್ಮೆಟ್ ಮೂಲಕ ಪರಸ್ಪರ ಮಾತನಾಡಲು ಅನುವು ಮಾಡಿಕೊಡುತ್ತದೆ.

ಹ್ಯಾಲೋ ಹೆಲ್ಮೆಟ್ ಒಂದೇ ಚಾರ್ಜ್​ನಲ್ಲಿ ಸರಿಸುಮಾರು 10 ದಿನಗಳ ಬ್ಯಾಟರಿ ಬಾಳಿಕೆ ಪಡೆಯುತ್ತದೆ. ಹ್ಯಾಲೋ ಹೆಲ್ಮೆಟ್​​ಗಳನ್ನು ಧರಿಸಿದ್ದರೆ ಸವಾರ ಮತ್ತು ಹಿಂಬದಿ ಸವಾರ ಒಂದೇ ಸಂಗೀತವನ್ನು ಕೇಳಬಹುದು ಎಂದು ಅಥೆರ್ ಹೇಳಿಕೊಂಡಿದೆ.

ಅಥೆರ್ ನ ಹೊಸ ಹ್ಯಾಲೋ ಸರಣಿಯ ಹೆಲ್ಮೆಟ್ ಗಳನ್ನು ಮೊದಲು ಬೆಂಗಳೂರಿನಲ್ಲಿ ನಡೆದ ಅಥೆರ್ ಕಮ್ಯುನಿಟಿ ಡೇ 2024 ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಗಿದೆ. ಅದಕ್ಕಿಂತ ಮೊದಲು ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ರಿಶ್ತಾ ಬಿಡುಗಡೆ ಮಾಡಿತು. ತನ್ನ ಹೊಸ ಅಥೆರ್ ಸ್ಟಾಕ್ 6 ಸಾಫ್ಟ್ ವೇರ್ ಅನ್ನು ಬಿಡುಗಡೆ ಮಾಡಿದೆ.

Continue Reading
Advertisement
Lok sabha election-2024
Latest4 mins ago

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Nenapirali Prem New Movie announced
ಸ್ಯಾಂಡಲ್ ವುಡ್13 mins ago

Nenapirali Prem: ಪೊಲೀಸ್ ಖದರ್‌ನಲ್ಲಿ `ನೆನಪಿರಲಿ ಪ್ರೇಮ್’: ಹೊಸ ಸಿನಿಮಾ ಅನೌನ್ಸ್‌!

Neha murder case Karnataka is becoming another Bihar says Basavaraj Bommai
ಕರ್ನಾಟಕ16 mins ago

Neha Murder Case: ನೇಹಾ ಕೊಲೆ ಕೇಸ್; ಕರ್ನಾಟಕ ಮತ್ತೊಂದು ಬಿಹಾರವಾಗುತ್ತಿದೆ: ಬಸವರಾಜ ಬೊಮ್ಮಾಯಿ

Assault Case
ಬೆಂಗಳೂರು17 mins ago

Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

India’s Russian oil imports hit record high in February
ಪ್ರಮುಖ ಸುದ್ದಿ24 mins ago

Israel- Iran war: ಇರಾನ್‌ ವಾಯುನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭ; ಕಚ್ಚಾ ತೈಲ ಬೆಲೆ 4% ಏರಿಕೆ

Teja Sajja Hanuman Movie Feme Mirai announce
ಟಾಲಿವುಡ್34 mins ago

Teja Sajja: ಹೊಸ ಸಿನಿಮಾ ಅನೌನ್ಸ್‌ ಮಾಡಿದ ʻಹನುಮಾನ್ʼ ಹೀರೊ ತೇಜ್ ಸಜ್ಜಾ

Murder case Man stabbed to death 9 times for refusing to love
ಪ್ರಮುಖ ಸುದ್ದಿ42 mins ago

Neha Murder Case: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ʼಲವ್‌ ಜಿಹಾದ್‌ ಕೊಲೆʼ ವಿರೋಧಿಸಿ ಮೂರು ದಿನ ಮುನವಳ್ಳಿ ಬಂದ್

Viral Video
ವೈರಲ್ ನ್ಯೂಸ್43 mins ago

Viral Video: ಶಾಲೆಯಲ್ಲಿ ಪಾಠ ಮಾಡುವ ಬದಲು ಫೇಶಿಯಲ್ ಮಾಡಿಕೊಂಡು ಸಿಕ್ಕಿಬಿದ್ದ ಪ್ರಿನ್ಸಿಪಾಲ್!

IPL 2024
ಕ್ರೀಡೆ44 mins ago

IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ

Murder Case
ಬೆಂಗಳೂರು1 hour ago

Murder case : ಬೆಂಗಳೂರಲ್ಲಿ ರಕ್ತದೋಕುಳಿ; ಪ್ರತ್ಯೇಕ ಕಡೆಗಳಲ್ಲಿ ಯುವಕರಿಬ್ಬರ ಬರ್ಬರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ7 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌