ಬೆಂಗಳೂರು: ಹೋಂಡಾ ಕಂಪನಿಯು ಎಲಿವೇಟ್ ಎಸ್ ಯುವಿಯ ಬೆಲೆಯನ್ನು ಪ್ರಕಟಿಸಿದೆ. ಮೂಲ ಎಸ್ ವಿ ಎಂಟಿ ರೂಪಾಂತರಕ್ಕೆ 11 ಲಕ್ಷ ರೂಪಾಯಿ (ಇಂಟರಿಡಕ್ಟರಿ ಪ್ರೈಸ್ , ಎಕ್ಸ್ ಶೋರೂಂ, ದೆಹಲಿ) ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಟಾಪ್-ಸ್ಪೆಕ್ ಝಡ್ಎಕ್ಸ್ ಸಿವಿಟಿ ರೂಪಾಂತರಕ್ಕೆ 16 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಕಾರು ತಯಾರಕರು ಎಲಿವೇಟ್ ವಿತರಣೆಯನ್ನೂ ಆರಂಭಿಸಿದೆ. ಹೊಸ ಮಧ್ಯಮ ಗಾತ್ರದ ಎಸ್ ಯುವಿಯನ್ನು ಕೇವಲ 1.5-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ನೀಡಲಾಗತ್ತದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಕಾರನ್ನು ನೀಡಲಾಗಿದೆ.
ಇತರ ಮಧ್ಯಮ ಗಾತ್ರದ ಎಸ್ ಯುವಿಗಳಿಗೆ ಹೋಲಿಸಿದರೆ, ಟಾಪ್-ಸ್ಪೆಕ್ ಎಲಿವೇಟ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭಿಸುತ್ತಿದೆ. ಆದರೆ ಸ್ಕೋಡಾ ಕುಶಾಕ್ ಮತ್ತು ಫೋಕ್ಸ್ ವ್ಯಾಗನ್ ಟೈಗುನ್ಗಿಂತ ಅಧಿಕ ಆರಂಭಿಕ ಬೆಲೆಯನ್ನು ಹೊಂದಿವೆ.
ಹೋಂಡಾ ಎಲಿವೇಟ್ ವಿನ್ಯಾಸ
ಎಲಿವೇಟ್ ದೊಡ್ಡ ಗ್ರಿಲ್ ಅನ್ನು ಹೊಂದಿದೆ – ದೊಡ್ಡ ಹೋಂಡಾ ಲೋಗೊವನ್ನು ಹೊಂದಿದೆ. ತೆಳುವಾದ, ಎಲ್ಇಡಿ ಹೆಡ್ ಲೈಟ್ ಗಳಿಂದ ಸುತ್ತುವರಿದಿದೆ. ಹೆಡ್ಲೈಟ್ ಗಳನ್ನು ಗ್ರಿಲ್ ನ ಮೇಲ್ಭಾಗದಲ್ಲಿ ದಪ್ಪ ಕ್ರೋಮ್ ಬಾರ್ ನಿಂದ ಸಂಪರ್ಕಿಸಲಾಗಿದೆ. ಈ ಎಸ್ ಯುವಿಯು ಬಾಕ್ಸ್ ವಿನ್ಯಾಸವನ್ನು ಹೊಂದಿದ್ದು, ಸ್ವಲ್ಪ ಫ್ಲೇರ್ಡ್ ವೀಲ್ ಕಮಾನುಗಳು, ದಪ್ಪ ಪ್ಲಾಸ್ಟಿಕ್ ಕ್ಲಾಡಿಂಗ್ ಮತ್ತು ಚಂಕಿ ಸಿ-ಪಿಲ್ಲರ್ ನೀಡಲಾಗಿದೆ. 17-ಇಂಚಿನ ಅಲಾಯ್ ಚಕ್ರಗಳು ಫೇಸ್ ಲಿಫ್ಟೆಡ್ ಸಿಟಿಯಲ್ಲಿರುವ 16-ಇಂಚಿನ ಅಲಾಯ್ ವೀಲ್ನ ವಿನ್ಯಾಸ ಹೋಲುತ್ತವೆ.
ಹಿಂಭಾಗದಲ್ಲಿ ಎಲಿವೇಟ್ ಸ್ವಲ್ಪ ರೇಕ್ ಮಾಡಿದ ವಿಂಡ್ಶೀಲ್ಡ್ ಮತ್ತು ಟೈಲ್ ಲೈಟ್ಗಳನ್ನು ಪಡೆಯುತ್ತದೆ. ಇದನ್ನು ರಿಫ್ಲೆಕ್ಟರ್ ಬಾರ್ ಮೂಲಕ ಸಂಪರ್ಕಿಸಲಾಗಿದೆ. ಇದು ನಂಬರ್ ಪ್ಲೇಟ್ ಹೌಸಿಂಗ್ ಗಾಗಿ ಟೈಲ್ ಗೇಟ್ ನಲ್ಲಿ ದೊಡ್ಡ ಇಂಡೆಂಟೇಶನ್ ಅನ್ನು ಸಹ ನೀಡಲಾಗಿದೆ. ಫಾಕ್ಸ್ ಸ್ಕಿಡ್ ಪ್ಲೇಟ್ ಅನ್ನು ಸಹ ಪಡೆಯುತ್ತದೆ.
ಹೋಂಡಾ ಎಲಿವೇಟ್ ಒಳಾಂಗಣ ಮತ್ತು ವೈಶಿಷ್ಟ್ಯಗಳು
ಎಲಿವೇಟ್ ವೈರ್ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಹೊಂದಿರುವ 10.25-ಇಂಚಿನ ಇನ್ಫೋಟೈನ್ ಮೆಂಟ್ ಟಚ್ ಸ್ಕ್ರೀನ್ ಮತ್ತು 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ. ಎಲಿವೇಟ್ ಸ್ಕೋಡಾ ಕುಶಾಕ್ ಮತ್ತು ಟೈಗುನ್ನಂತೆ ಸಿಂಗಲ್-ಪ್ಯಾನ್ ಸನ್ರೂಫ್ ಅನ್ನು ಮಾತ್ರ ಪಡೆಯುತ್ತದೆ,. ಆದರೆ ಇತರ ಎಲ್ಲಾ ಪ್ರತಿಸ್ಪರ್ಧಿಗಳು ಪನೋರಮಿಕ್ ಸನ್ರೂಫ್ ನೊಂದಿಗೆ ಬರುತ್ತಾರೆ.
ಇದನ್ನೂ ಓದಿ : Citroen C3 : ಸಿಟ್ರೋಯೆನ್ ಸಿ3 ಏರ್ ಕ್ರಾಸ್ ಮೈಲೇಜ್ ಎಷ್ಟಿದೆ ಗೊತ್ತಾ? ಇಲ್ಲಿದೆ ಪೂರ್ಣ ಮಾಹಿತಿ
ಎಲಿವೇಟ್ ನಲ್ಲಿರುವ ಇತರ ವೈಶಿಷ್ಟ್ಯಗಳಲ್ಲಿ ಲೇನ್-ವಾಚ್ ಕ್ಯಾಮೆರಾ, ವೈರ್ಲೆಸ್ ಚಾರ್ಜಿಂಗ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ. ಹೋಂಡಾ ತನ್ನ ಎಡಿಎಎಸ್ ಸೂಟ್ ಅನ್ನು ಎಲಿವೇಟ್ ನೊಂದಿಗೆ ನೀಡುತ್ತಿದೆ, ಘರ್ಷಣೆ ತಗ್ಗಿಸುವ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ರೋಡ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಹೈ ಬೀಮ್ ಅಸಿಸ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಎಂಜಿ ಆಸ್ಟರ್ ಮತ್ತು ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಮಾತ್ರ ಎಡಿಎಎಸ್ ಪಡೆಯುವ ಇತರ ಮಧ್ಯಮ ಗಾತ್ರದ ಎಸ್ ಯುವಿಗಳಾಗಿವೆ.
ಹೋಂಡಾ ಎಲಿವೇಟ್ ಪವರ್ ಟ್ರೇನ್, ಆಯಾಮಗಳು
ಎಲಿವೇಟ್ ಸಿಟಿಯಂತೆಯೇ 121 ಬಿಎಚ್ಪಿ 145 ಎನ್ಎಂ, 1.5-ಲೀಟರ್ನ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಟೆಪ್ ಸಿವಿಟಿ ಆಟೋಮ್ಯಾಟಿಕ್ ಮೂಲಕ ಮುಂಭಾಗದ ಚಕ್ರಗಳಿಗೆ ಶಕ್ತಿಯನ್ನು ಕಳುಹಿಸಲಾಗುತ್ತದೆ.
ಹೋಂಡಾದ ಗ್ಲೋಬಲ್ ಸ್ಮಾಲ್ ಕಾರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ ಇದು 4,312 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,650 ಎಂಎಂ ಎತ್ತರವನ್ನು ಹೊಂದಿದೆ, ವ್ಹೀಲ್ ಬೇಸ್, ಗ್ರೌಂಡ್ ಕ್ಲಿಯರೆನ್ಸ್ ಮತ್ತು ಬೂಟ್ ಸ್ಪೇಸ್ ಕ್ರಮವಾಗಿ 2,650 ಎಂಎಂ, 220 ಎಂಎಂ ಮತ್ತು 458 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಎಲಿವೇಟ್ ಅತ್ಯುತ್ತಮ ದರ್ಜೆಯ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ, ಅದರ ವ್ಹೀಲ್ ಬೇಸ್ ಮತ್ತು ಬೂಟ್ ಸ್ಪೇಸ್ ಸಹ ಅದರ ಪ್ರತಿಸ್ಪರ್ಧಿಗೆ ಹೋಲಿಸಿದರೆ ಹೆಚ್ಚಿನ ಭಾಗದಲ್ಲಿದೆ.