Site icon Vistara News

Hyundai Creta facelift : ಹೀಗಿದೆ ನೋಡಿ ಎಲ್ಲರ ಅಚ್ಚುಮೆಚ್ಚಿನ ಕ್ರೆಟಾ ಕಾರಿನ ಹೊಸ ವಿನ್ಯಾಸ

Hyundai Creta

ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್ ಕಾರಿನ (Hyundai Creta facelift ) ವಿನ್ಯಾಸ ಬಹಿರಂಗಗೊಂಡಿದೆ. ಆದಾಗ್ಯೂ ಕೊರಿಯಾ ಮೂಲದ ಆಟೋಮೊಬೈಲ್ ಕಂಪನಿ ಹ್ಯುಂಡೈ (Hyundai) ಗ್ರಾಹಕರ ಕೌತುಕವನ್ನು ಮುಂದುವರಿಸುವ ಉದ್ದೇಶದಿಂದ ಬೆಲೆಗಳನ್ನು ಜನವರಿ 16, 2024 ರಂದು ಬಹಿರಂಗಪಡಿಸಲಾಗುವುದು ಎಂದು ಹೇಳಿದೆ. ಅಪ್​ಡೇಟ್ ಆಗಿರವು ಮಧ್ಯಮ ಗಾತ್ರದ ಎಸ್ ಯುವಿಯ ಬೆಲೆಯು 11 ಲಕ್ಷ ರೂಪಾಯಿಂದ ಆರಂಭಗೊಂಡು 19.5 ಲಕ್ಷ (ಎಕ್ಸ್ ಶೋರೂಂ, ದೆಹಲಿ) ತನಕ ಸಾಗಲಿದೆ. ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗುನ್, ಎಂಜಿ ಆಸ್ಟರ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಇತರ ಮಧ್ಯಮ ಗಾತ್ರದ ಎಸ್ ಯುವಿಗಳಿಗೆ ಹೊಸ ಕ್ರೆಟಾ ಪೈಪೋಟಿ ನೀಡಲಿದೆ.

ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್: ಇಂಟೀರಿಯ್​​


ಹ್ಯುಂಡೈ ಫೇಸ್​ಲಿಫ್ಟ್​ ಕ್ರೆಟಾದಲ್ಲಿ ಡ್ರಿಪ್-ಫೀಡ್ ವಿನ್ಯಾಸಗಳನ್ನು ಮುಂದುವರಿಸಲಾಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಹಿಂದೆ ಬಿಡುಗಡೆ ಮಾಡಿರುವ ರೇಖಾಚಿತ್ರಗಳಿಗೆ ಪೂರಕ ವಿನ್ಯಾಸ ಕಂಡುಬಂದಿದೆ. ಕ್ರೆಟಾ ಫೇಸ್ ಲಿಫ್ಟ್ ಹ್ಯುಂಡೈನ ಹೊಸ ಮಾದರಿಗಳಿಗೆ ಅನುಗುಣವಾಗಿರುವ ಹೊಸ ರೀತಿಯ ಮುಂಭಾಗವನ್ನು ಪಡೆಯುತ್ತದೆ ಎಸ್ ಯುವಿಗೆ ಹೆಚ್ಚು ನೇರ ಮತ್ತು ಮಸ್ಕ್ಯುಲರ್​ ರೂಪ ನೀಡಲಾಗಿದೆ. ಸ್ವಾಭಾವಿಕವಾಗಿ ಸಾಕಷ್ಟು ಎಲ್-ಎಲ್ಇಡಿ ಲೈಟಿಂಗ್ ಕೊಡಲಾಗಿದೆ. ಮುಂಭಾಗದಲ್ಲಿ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಮತ್ತು ಬದಿಗಳಲ್ಲಿ ತಲೆಕೆಳಗಾದ ಎಲ್-ಆಕಾರದ ವಿನ್ಯಾಸವಿದೆ. ಎಲ್ಇಡಿ ಹಿಂಭಾಗದಲ್ಲಿ ಸ್ಪ್ಲಿಟ್ ಟೈಲ್-ಲ್ಯಾಂಪ್ ಸೆಟಪ್ ಅನ್ನು ಸಂಪರ್ಕಿಸುವ ಎಲ್ಇಡಿ ಲೈಟ್ ಬಾರ್ ಇದೆ. ಹೊಸ ಅಲಾಯ್ ವೀಲ್​ಗಳೊಂದಿಗೆ ಕ್ರೆಟಾ ಫೇಸ್ ಲಿಫ್ಟ್ ರಸ್ತೆಗಿಳಿಯುವುದು ಖಚಿತ. ವೀಲ್​ಗಳು 17 ಇಂಚು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್: ಇಂಟೀರಿಯರ್​

ಹ್ಯುಂಡೈ ಕ್ರೆಟಾದ ಇಂಟೀರಿಯರ್​ನಲ್ಲಿ ಗಮನಾರ್ಹ ಅಪ್​ಡೇಟ್​ಗಳನ್ನು ಕೊಡಲಾಗಿದೆ. ಟ್ವಿನ್ 10.25-ಇಂಚಿನ ಕನೆಕ್ಟೆಡ್ ಸ್ಕ್ರೀನ್ ಗಳು, ಡ್ಯಾಶ್ ಮತ್ತು ಎಸಿ ವೆಂಟ್ ವಿನ್ಯಾಸದಲ್ಲಿ ಬದಲಾವಣೆಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಕ್ರೆಟಾ ಫೇಸ್ ಲಿಫ್ಟ್ ನ ಹೆಚ್ಚಿನ ಟ್ರಿಮ್ ಗಳಲ್ಲಿ ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್ ರೂಫ್, ಎಂಟು ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, 8-ವೇ ಚಾಲಿತ ಡ್ರೈವರ್ ಸೀಟ್, 19 ಕೆಲಸ ಮಾಡಬಹುದಅದ ಲೆವೆಲ್ 2 ಎಡಿಎಎಸ್ ಸೂಟ್, 360-ಡಿಗ್ರಿ ಕ್ಯಾಮೆರಾಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್ ಸೇರಿಕೊಂಡಿವೆ.

ಇದನ್ನೂ ಓದಿ : Maruti Suzuki Jimny : ಈ ರೀತಿಯ ಜನರಿಗೆ ಮಹೀಂದ್ರಾ ಥಾರ್​ಗಿಂತ ಮಾರುತಿ ಜಿಮ್ನಿಯೇ ಬೆಸ್ಟ್​​

ಹ್ಯುಂಡೈ ಕ್ರೆಟಾ ಫೇಸ್ ಲಿಫ್ಟ್: ಎಂಜಿನ್ ಗಳು

ಕ್ರೆಟಾ ಫೇಸ್ ಲಿಫ್ಟ್ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳನ್ನು ಹೊಂದಿದೆ. ಇದು 115 ಬಿಹೆಚ್ ಪವರ್​ ಬಿಡುಗಡೆ ಮಾಡುತ್ತದೆ. ಆಟೋಮ್ಯಾಟಿಕ್​ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಹೊಸ ಎಸ್ ಯುವಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಕೂಡ ಪಡೆಯುತ್ತದೆ. ಇದು 160 ಬಿಹೆಚ್​ಪಿ ಪವರ್ ಬಿಡುಗಡೆ ಮಾಡುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಬುಕಿಂಗ್ ಪ್ರಾರಂಭವಾದ ಸಮಯದಲ್ಲಿ, ನವೀಕರಿಸಿದ ಕ್ರೆಟಾ ಏಳು ಟ್ರಿಮ್ ಗಳಲ್ಲಿ ಲಭ್ಯವಿರುತ್ತದೆ. ವಿತರಣೆಗಳು ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.

Exit mobile version