Site icon Vistara News

Mahindra Scorpio | 1470 ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್​ ಕಾರುಗಳನ್ನು ಬುಕ್​ ಮಾಡಿದ ಭಾರತೀಯ ಸೇನೆ

scorpio classic

ನವ ದೆಹಲಿ: ಭಾರತೀಯ ಸೇನೆ ಖರೀದಿಸಲು ಬಯಸುವ ವಾಹನಗಳು ಹೆಚ್ಚು ಗಟ್ಟಿಮುಟ್ಟಾಗಿರಬೇಕು ಹಾಗೂ ಎಂಥದ್ದೇ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿರಬೇಕಾಗುತ್ತದೆ. ಟಾಟಾ ಸಫಾರಿ, ಮಾರುತಿ ಸುಜುಕಿ ಜಿಪ್ಸಿ, ಫೋರ್ಸ್​ ಗೂರ್ಕಾ, ಟಾಟಾ ಕ್ಸೆನಾನ್​ನಂಥ ವಾಹನಗಳು ಸೇನೆಯಲ್ಲಿವೆ. ಅದಕ್ಕೀಗ ಹೊಸ ಸೇರ್ಪಡೆ ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್​. ಸೇನೆಯಿಂದ ತಮಗೆ 1,740 ಕಾರುಗಳಿಗೆ ಬೇಡಿಕೆ ಬಂದಿದೆ ಎಂಬುದಾಗಿ ಕಂಪನಿಯು ಮಾಹಿತಿ ನೀಡಿದೆ.

ಸೇನೆಗೆ ಕೊಡುವ ಕಾರುಗಳಲ್ಲಿ ಯಾವೆಲ್ಲ ಫೀಚರ್​ಗಳು ಇರುತ್ತವೆ ಎಂಬುದನ್ನು ಮಹೀಂದ್ರಾ ಕಂಪನಿಯು ಹೇಳಿಲ್ಲ. ಭದ್ರತೆಯ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಆದರೆ, ಗ್ರಾಹಕರ ಮೆಚ್ಚುಗೆ ಗಳಿಸಿರುವ ಮಹೀಂದ್ರಾ ಸ್ಕಾರ್ಪಿಯೊ 2.2 ಲೀಟರ್​ ಎಂಜಿನ್​ ಹೊಂದಿದ್ದು, 130 ಬಿಎಚ್​ಪಿ ಪವರ್​ ಹಾಗೂ 300 ಎನ್​ಎಮ್ ಟಾರ್ಕ್ಯೂ ಬಿಡುಗಡೆ ಮಾಡುತ್ತದೆ. ಇದರಲ್ಲಿ ಆಟೋಮ್ಯಾಟಿಕ್​ ಗೇರ್​ಬಾಕ್ಸ್​ಗಳ ಆಯ್ಕೆಯಿಲ್ಲ. ಇದರ ಕೆಲವು ಆಯ್ದ ವೇರಿಯೆಂಟ್​ಗಳಲ್ಲಿ 4×4 ಡ್ರೈವ್​ ಆಯ್ಕೆಯೂ ಇದೆ.

ಸ್ಕಾರ್ಪಿಯೊ ಹಾಗೂ ಬೊಲೆರೊ ಮಹೀಂದ್ರಾ ಕಂಪನಿ ಆರಂಭದಿಂದಲೂ ಬೇಡಿಕೆ ಉಳಿಸಿಕೊಂಡು ಬಂದಿರುವ ಎಸ್​ಯುವಿಗಳಾಗಿವೆ. ದಕ್ಷಿಣ ಆಫ್ರಿಕಾ, ಭೂತಾನ್​, ನೇಪಾಳಕ್ಕೆ ಸ್ಕಾರ್ಪಿಯೊ ಕಾರುಗಳನ್ನು ರಫ್ತು ಮಾಡಲಾಗಿದೆ. ಅದೇ ರೀತಿ ಇತ್ತೀಚೆಗೆ ಶ್ರೀಲಂಕಾದ ಪೊಲೀಸ್​ ಇಲಾಖೆಗೂ 175 ಸ್ಕಾರ್ಪಿಯೊಗಳನ್ನು ತಯಾರಿಸಿಕೊಟ್ಟಿತ್ತು.

ಇದನ್ನೂ ಓದಿ | Mahindra Thar 4×2 | ಹೊಸ ಮಹೀಂದ್ರಾ ಥಾರ್​ನ ಬೆಲೆ ಎಷ್ಟು ಗೊತ್ತಾ? ಏನಿದು 4X2?

Exit mobile version