ನವ ದೆಹಲಿ: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಮತ್ತು ಯೂಟ್ಯೂಬರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಲು ವಾಹನಗಳ ಮೇಲೆ ಸ್ಟಂಟ್ ಮಾಡುವುದು ಮಾಮೂಲಿ. ಆದರೆ, ಇದು ಅಪಾಯಕಾರಿ ಮತ್ತು ಕಾನೂನಿನ ಸೆರೆಗೆ ಸಿಗುವುದು ಗ್ಯಾರಂಟಿ ಎಂಬುದು ಪದೇಪದೇ ಸಾಬೀತಾಗುತ್ತಿದೆ. ಅಂಥದ್ದೇ ಒಂದು ಘಟನೆ ಪಂಜಾಬ್ನಲ್ಲಿ ನಡೆದಿದೆ. ಯುವತಿಯೊಬ್ಬಳು ತಮಗೆ ಸೋಶಿಯಲ್ ಮೀಡಿಯಾದಲ್ಲಿ 1 ಮಿಲಿಯನ್ (10 ಲಕ್ಷ ) ಫಾಲೋಯರ್ಸ್ಗಳು ಬಂದ ಖುಷಿಯಲ್ಲಿ ಥಾರ್ ಕಾರಿನ ಬಾನೆಟ್ ಮೇಲೆ ಕುಳಿತು ಸಂಭ್ರಮಿಸಿದ್ದಾರೆ. ಪೊಲೀಸರು ವಾಹನವನ್ನು ವಶಪಡಿಸಿ ದಂಡ ವಿಧಿಸಿದ್ದಾರೆ. ಈ ಸುದ್ದಿಯೂ ಸಿಕ್ಕಾಪಟ್ಟೆ ವೈಲರ್ (Viral News) ಆಗಿದೆ.
ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಇನ್ಸ್ಟಾಗ್ರಾಮರ್ ಗೌರಿ ವಿರ್ಡಿ ಇದೇ ರೀತಿಯ ಸ್ಟಂಟ್ಮಾಡಿದವರು. ಇದು ಪೊಲೀಸರ ಗಮನ ಬಂದು ಮಹೀಂದ್ರಾ ಥಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಮಹೀಂದ್ರಾ ಥಾರ್ ಕಾರಿನ ಬಾನೆಟ್ ಮೇಲೆ ಗೌರಿ ವಿರ್ಡಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ಓಡಿಸುವಾಗ ಅವಳು ಬಾನೆಟ್ ಮೇಲೆ ಕುಳಿತಿರುವುದು ದಂಡನಾರ್ಹ ಅಪರಾಧವಾಗಿದೆ.
ಈ ವೀಡಿಯೊ ವ್ಯಾಪಕ ಗಮನ ಸೆಳೆದ ನಂತರ, ಹೋಶಿಯಾರ್ಪುರದ ದಸುಯಾ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ನಂತರ ಅವರು ವಾಹನವನ್ನು ವಶಪಡಿಸಿಕೊಂಡರು. ನೋಂದಣಿ ಸಂಖ್ಯೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪೊಲೀಸರು ವಾಹನದ ಮಾಲೀಕರನ್ನು ಪತ್ತೆ ಹಚ್ಚಿದ್ದಾರೆ.
ಗೌರಿ ಮತ್ತು ಮಹೀಂದ್ರಾ ಥಾರ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ದಸುಯಾ ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ವಾಹನದಲ್ಲಿ ಇನ್ನೂ ಕೆಲವರು ಇದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ನಿರಂತರ ನಡೆಯುತ್ತಿವೆ ಘಟನೆಗಳು
ಮತ್ತೊಂದು ವೈರಲ್ ವೀಡಿಯೊದಲ್ಲಿ, ಮದುಮಗಳೊಬ್ಬಳು ಟಾಟಾ ಸಫಾರಿ ಸ್ಟಾರ್ಮ್ ಕಾರಿನ ಬಾನೆಟ್ ಮೇಲೆ ಕುಳಿತಿರುವುದು ವೈರಲ್ ಆಗಿತ್ತು/ ಅವರ ಮದುವೆಯ ಉಡುಪನ್ನು ಎಸ್ಯುವಿ ಕಾರನ ಬಾನೆಟ್ ಮೇಲೆ ಸುಂದರವಾಗಿ ಹರಡಲಾಗಿತ್ತು. ಕ್ಯಾಮೆರಾಮ್ಯಾನ್ಗಳಿಬ್ಬರು ಶೂಟ್ ಮಾಡಿದ್ದರು. ಇದೂ ಕೂಡ ಸಾರ್ವಜನಿಕ ರಸ್ತೆಯಲ್ಲಿ ಮಾಡಲಾಗಿತ್ತು. ಅವರ ವಿಡಿಯೊ ಶೂಟಿಂಗ್ ನೋಡಲು ಸಾವಿರಾರು ಮಂದಿ ವಾಹನ ನಿಲ್ಲಿಸಿದ ಕಾರಣ ಸಂಚಾರ ದಟ್ಟಣೆ ಉಂಟಾಗಿತ್ತು.
ವೀಡಿಯೊ ವೈರಲ್ ಆದ ನಂತರ, ಪೊಲೀಸರು ಕ್ರಮ ಕೈಗೊಂಡಿದ್ದರು. ನಾನಾ ನಿಯಮಗಳ ಉಲ್ಲಂಘನೆಗಳಿಗಾಗಿ ಕಾರು ಮಾಲೀಕರಿಗೆ 15,500 ರೂ.ಗಳ ದಂಡ ವಿಧಿಸಿದ್ದರು. ಸಂಚಾರಕ್ಕೆ ಅಡ್ಡಿಪಡಿಸುವುದು ಮತ್ತು ವಧುವಿನ ಜೀವಕ್ಕೆ ಮಾತ್ರವಲ್ಲದೆ ರಸ್ತೆಯಲ್ಲಿ ಇತರರ ಜೀವಕ್ಕೂ ಅಪಾಯವನ್ನುಂಟುಮಾಡಿರುವುದು ಪ್ರಮುಖ ಆರೋಪವಾಗಿತ್ತು.
ಮತ್ತೊಂದು ಘಟನೆಯಲ್ಲಿ, ಅಯೋಧ್ಯೆಯ ಮಹಿಳೆಯೊಬ್ಬರು ಮಾರುತಿ ಸುಜುಕಿ ಡಿಜೈರ್ ನಲ್ಲಿ ಇದೇ ರೀತಿಯ ಸ್ಟಂಟ್ ಮಾಡಿದ್ದರು. ಏಕ ಪಥದ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಅವಳು ಕಾರಿನ ಬಾನೆಟ್ ಮೇಲೆ ಕುಳಿತು ಪ್ರಯಾಣಿಸಿದ್ದರು. ಮತ್ತೊಬ್ಬಳು ಕಾರಿನ ಕಿಟಕಿಯಿಂದ ಹೊರಗೆ ಇಣುಕಿದ್ದರು. ಅವರಿಗೆ ಪೊಲೀಸರು 18,000 ರೂ.ಗಳ ದಂಡ ವಿಧಿಸಿದ್ದರು.
ಸಿಸಿಟಿವಿ ಕಣ್ಗಾವಲು
ಹೆಚ್ಚಿನ ಮೆಟ್ರೋಪಾಲಿಟನ್ ನಗರಗಳಲ್ಲಿ, ಬಲಿಷ್ಠ ಸಿಸಿಟಿವಿ ನೆಟ್ವರ್ಕ್ ಒದೆ, ಪೊಲೀಸ್ ಸಿಬ್ಬಂದಿಯ ತಂಡವು ಅದನ್ನು ಮೇಲ್ವಿಚಾರಣೆ ಮಾಡುತ್ತದೆ. ವಾಹನ ನೋಂದಣಿ ಸಂಖ್ಯೆಗಳನ್ನು ಸೆರೆಹಿಡಿಯುವ ಮೂಲಕ ಸಂಚಾರ ಉಲ್ಲಂಘನೆಗಳನ್ನು ಗುರುತಿಸುವಲ್ಲಿ ಈ ಕ್ಯಾಮೆರಾಗಳು ನಿರ್ಣಾಯಕ ಪಾತ್ರವಹಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ, ಸಂಚಾರ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಲು ಸರ್ಕಾರ ಮತ್ತು ಅಧಿಕಾರಿಗಳು ಗಮನಾರ್ಹ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಏರಿಕೆಯ ಹಿಂದಿನ ಪ್ರಾಥಮಿಕ ಉದ್ದೇಶವೆಂದರೆ ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ತಡೆಯುವುದು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು.