Site icon Vistara News

E20 Petrol : ಭಾರತದಲ್ಲಿ ಎಥೆನಾಲ್​ ಮಿಶ್ರಿತ ಪೆಟ್ರೋಲ್​ ಸ್ಟೇಷನ್​ ಸ್ಥಾಪಿಸಲಿದೆ ಜಿಯೊ- ಬಿಪಿ

E20 petrol

#image_title

ನವ ದೆಹಲಿ: ವಾರಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಇಂಧನ ಸಪ್ತಾಹದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇ20 ಪೆಟ್ರೋಲ್ (E20 Petrol)​ ಬಳಕೆಗೆ ಚಾಲನೆ ನೀಡಿದ್ದಾರೆ. ಇದು ಎಥೆನಾಲ್ ಮಿಶ್ರಿತ ಪೆಟ್ರೋಲ್​ ಆಗಿದ್ದು, ಭವಿಷ್ಯದ ಇಂಧನ ಎಂದೇ ಹೇಳಲಾಗುತ್ತಿದೆ. ಇದೇ ವೇಳೆ ಕೇಂದ್ರ ಸರಕಾರವೂ ವಾಹನಗಳ ಉತ್ಪಾದನೆ ವೇಳೆ ಪಾಲಿಸಬೇಕಾದ ಬಿಎಸ್​6 ಮಾನದಂಡದಲ್ಲಿ ಮಾರ್ಪಾಟು ಮಾಡಿದ್ದು, ಕಂಪನಿಗಳು ಇ20 ಪೆಟ್ರೋಲ್​ನಿಂದ ಕೆಲಸ ಮಾಡುವ ಎಂಜಿನ್​ಗಳನ್ನು ತಯಾರಿಸಬೇಕಾಗಿದೆ. ಹೀಗಾಗಿ ಭವಿಷ್ಯದಲ್ಲಿ ಎಥೆನಾಲ್​ ಮಿಶ್ರಿತ ಪೆಟ್ರೋಲ್​ಗೆ ಬೇಡಿಕೆ ಹೆಚ್ಚಾಗಲಿದೆ. ಈ ನಿರೀಕ್ಷೆಯೊಂದಿಗೆ ರಿಲಯನ್ಸ್​ ಒಡೆತನದ ಜಿಯೊ ಸಂಸ್ಥೆಯು ಇ20 ಪೆಟ್ರೋಲ್​ ಬಂಕ್​ಗಳನ್ನು ಸ್ಥಾಪಿಸಲು ಮುಂದಾಗಿದೆ.

ಭಾರತದಲ್ಲಿ ಇ20 ಪೆಟ್ರೋಲ್​ ವಿತರಣೆಗೆ ಮುಂದಾಗಿರುವ ಜಿಯೊ ಸಂಸ್ಥೆಯು ಬ್ರಿಟನ್ ಮೂಲದ ಬಿಪಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಜಿಯೊ-ಬಿಪಿ ಪೆಟ್ರೋಲ್​ ಬಂಕ್​ಗಳಲ್ಲಿ ಇ2ಒ ಪೆಟ್ರೋಲ್​ ಎಂಜಿನ್​ ಹೊಂದಿರುವ ವಾಹನಗಳಿಗೆ ಇಂಧನ ದೊರೆಯಲಿದೆ.

ಇ20 ಪೆಟ್ರೋಲ್​ನಲ್ಲಿ ಶೇಕಡಾ 20ರಷ್ಟು ಎಥೆನಾಲ್​ ಇದ್ದರೆ, ಶೇಕಡಾ 80 ಪೆಟ್ರೋಲ್​ ಇರುತ್ತದೆ. ಇದಕ್ಕೆ ಬೇಕಾಗಿರುವ ಎಥೆನಾಲ್​ ಅನ್ನು ಕಬ್ಬಿನ ತ್ಯಾಜ್ಯ ಅಂದರೆ ಸಕ್ಕರೆ ಕಾರ್ಖಾನೆ ಅಥವಾ ಆಹಾರ ಧಾನ್ಯಗಳಿಂದ ಪಡೆಯುವುದು ಕೇಂದ್ರ ಸರಕಾರದ ಯೋಜನೆಯಾಗಿದೆ. ಇದರಿಂದ ಪೆಟ್ರೋಲ್​ಗಾಗಿ ವಿದೇಶಗಳ ಅವಲಂಬನೆಯನ್ನು ಕಡಿಮೆಯಾಗುತ್ತದೆ ಹಾಗೂ ಪರಿಸರಕ್ಕೂ ಈ ಇಂಧನ ಪೂರಕವಾಗಿದೆ.

ಇದನ್ನೂ ಓದಿ : Union Budget 2023 : ಲೀಥಿಯಮ್​ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ

ರಿಲಯನ್ಸ್​ ಜಿಯೊ ಹಾಗೂ ಬಿಪಿ ಕಂಪನಿ ಈಗಾಗಲೇ ದೇಶಾದ್ಯಂತ 15,10 ಪೆಟ್ರೋಲ್​ ಸ್ಟೇಷನ್​ಗಳನ್ನು ಹೊಂದಿದೆ. ಇಲ್ಲೆಲ್ಲ ಇ20 ಪೆಟ್ರೋಲ್​ ದೊರೆಯಲಿದೆ. ಭವಿಷ್ಯದಲ್ಲಿ ಸ್ಟೇಷನ್​ಗಳ ಸಂಖ್ಯೆಯೂ ಹೆಚ್ಚಾಗಲಿದೆ.

Exit mobile version