Site icon Vistara News

Kia Seltos : ಕಿಯಾ ಸೆಲ್ಟೋಸ್ ಫೇಸ್​ಲಿಫ್ಟ್​ ಅನಾವರಣ; ಜುಲೈ14ರಂದು ಬುಕಿಂಗ್ ಆರಂಭ

KIA SELTOS

ಬೆಂಗಳೂರು: ಕಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಸೆಲ್ಟೋಸ್ (Kia Seltos) ಕಾರಿನ ಫೇಸ್​​ಲಿಫ್ಟ್ ಅನಾವರಣ ಮಾಡಿದೆ. ಬುಕಿಂಗ್ ಜುಲೈ 14ರಂದು ಪ್ರಾರಂಭವಾಗಲಿದ್ದು ಹಲವಾರು ಕಾಸ್ಮೆಟಿಕ್ ಹಾಗೂ ಫೀಚರಿಸ್ಟಿಕ್​ ಬದಲಾವಣೆಗಳನ್ನು ಮಾಡಲಾಗಿದೆ. ವಿಶೇಷ ಎಂದರೆ ಹಾಲಿ ಕಿಯಾ ಕಾರುಗಳ ಮಾಲೀಕರಿಗೆ ಆದ್ಯತೆಯ ಮೇರೆಗೆ ಹೊಸ ಸೆಲ್ಟೋಸ್​ ಡೆಲಿವರಿ ಸಿಗಲಿದ್ದು ಕಿಯಾ ವಿಶಿಷ್ಟ ಕೆ-ಕೋಡ್ ಪ್ರೋಗ್ರಾಮ್​ ಮೂಲಕ ಈ ಅನುಕೂಲವನ್ನು ನೀಡಲಿದೆ. ಸೆಲ್ಟೋಸ್ ಎಕ್ಟ್​ಟೀರಿಯರ್​ ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ, ಇದು ಗಾತ್ರದಲ್ಲಿ ದೊಡ್ಡದಾಗಿ ಕಾಣುವ ಗ್ರಿಲ್ ಅನ್ನು ಒಳಗೊಂಡಿದೆ. ಎಲ್ಇಡಿ ಹೆಡ್ ಲ್ಯಾಂಪ್​​ಗಳು ಡೇರನ್ನಿಂಗ್ ಲೈಟ್​ಗಳ ವರೆಗೆ ಮುಂದುವರಿದಿದೆ. ಮುಂಭಾಗದ ಬಂಪರ್ ಮರು ವಿನ್ಯಾಸಗೊಳಿಸಲಾಗಿದ್ದು, ಎಡಿಎಎಸ್ ಸೂಟ್​ನ (ಅಡಾಸ್​) ರೇಡಾರ್​​ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಫಾಗ್ ಲ್ಯಾಂಪ್​ ಪ್ರದೇಶವನ್ನೂ ನವೀಕರಿಸಲಾಗಿದೆ.

ಹೊಚ್ಚ ಹೊಸ 18 ಇಂಚಿನ ಅಲಾಯ್ ಚಕ್ರಗಳನ್ನು ಹೊರತುಪಡಿಸಿ, ಹೊಸ ಕಿಯಾ ಸೆಲ್ಟೋಸ್​​ನ ಸೈಡ್ ಪ್ರೊಫೈಲ್ ಬದಲಾಗಿಲ್ಲ. ಆದಾಗ್ಯೂ, ಹಿಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್​ನಿಂದ ಕನೆಕ್ಟ್​ ಮಾಡಿರುವ ಹೊಸ ಎಲ್ಇಡಿ ಟೈಲ್ ಲ್ಯಾಂಪ್​​ಗಳನ್ನು ಹೊಂದಿದೆ. ಹಿಂಭಾಗದ ಬಂಪರ್ ಮರುವಿನ್ಯಾಸಗೊಳಿಸಲಾಗಿದ್ದು, ಟೆಕ್-ಲೈನ್ ಮತ್ತು ಜಿಟಿ-ಲೈನ್ ರೂಪಾಂತರಗಳಿಗೆ ವಿಭಿನ್ನ ವಿನ್ಯಾಸಗಳನ್ನು ಕೊಡಲಾಗಿದೆ.

ಕ್ಯಾಬಿನ್ ಹೇಗಿದೆ

ಹೊಸ ಸೆಲ್ಟೋಸ್​​ನ ಕ್ಯಾಬಿನ್ ವಿನ್ಯಾಸವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಇದರಲ್ಲಿ ನವೀಕರಿಸಿದ ಡ್ಯಾಶ್ ಬೋರ್ಡ್ ಮತ್ತು ಹಲವಾರು ಹೊಸ ಆರಾಮದಾಯಕ ಮತ್ತು ಅನುಕೂಲಕರ ಫೀಚರ್​ಗಳು ಸೇರಿಕೊಂಡಿವೆ ಡ್ಯಾಶ್​​ಬೋರ್ಡ್​ ಈಗ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್​ಗಾಗಿ ಎರಡು 10.25 ಇಂಚಿನ ಟಚ್​ ಸ್ಕ್ರೀನ್​​ಗಳಿರುವ ಸಂಪೂರ್ಣ ಡಿಜಿಟಲ್ ಕಾಕ್​ಪಿಟ್​ ಎನಿಸಿದೆ. ಡ್ಯುಯಲ್-ಜೋನ್ ಆಟೋಮ್ಯಾಟಿಕ್​ ಕ್ಲೈಮೇಟ್​ ಕಂಟ್ರೋಲ್​ ಬಟನ್​ಗಳನ್ನು ಸೇರಿಸಲು ಲೋವರ್ ಸೆಂಟರ್ ಕನ್ಸೋಲ್ ಪರಿಷ್ಕರಿಸಲಾಗಿದೆ. ಇದು ಈ ಸೆಗ್ಮೆಂಟ್​ನಲ್ಲೇ ವಿಶೇಷ ಎನಿಸಿಕೊಂಡಿದೆ.

ಇದನ್ನೂ ಓದಿ : ಪ್ರಯಾಣಿಕರಿಗೆ ಅತಿ ಹೆಚ್ಚು ಸುರಕ್ಷತೆ ಕೊಡುವ ಭಾರತದ ಕಾರುಗಳಿವು

ಡ್ಯುಯಲ್ ಝೋನ್ ಆಟೋ ಎಸಿ, ಮಲ್ಟಿ ಡಿಸ್​ಪ್ಲೇ ಮೋಡ್​ಗಳಿರುವಪೂರ್ಣ-ಟಿಎಫ್​ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಪ್ಯಾನೋರಮಿಕ್ ಸನ್​ರೂಫ್​, ವೈರ್​ಲೆಸ್​ ಆ್ಯಪಲ್​ ಕಾರ್​ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೇರಿದಂತೆ ಸೆಲ್ಟೋಸ್ ಕ್ಯಾಬಿನ್​ನಲ್ಲಿ ಹಲವಾರು ಹೊಸ ಫೀಚರ್​​ಗಳನ್ನು ಪರಿಚಯಿಸಲಾಗಿದೆ. ಆರು ಏರ್​ಬ್ಯಾಗ್​ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್​​ಗಳು, ಏರ್ ಪ್ಯೂರಿಫೈಯರ್ ಮತ್ತು ವೈರ್ಲೆಸ್ ಚಾರ್ಜರ್​ಗಳಿವೆ. ಎಡಿಎಎಸ್ ಸೂಟ್ ಹೊಸ ಸುರಕ್ಷತಾ ಫೀಚರ್​ ಆಗಿದೆ. ಕಾರು ಎಂಟು ಮೊನೊಟೋನ್ ಬಣ್ಣಗಳು, ಎರಡು ಡ್ಯುಯಲ್-ಟೋನ್ ಬಣ್ಣಗಳು ಮತ್ತು ಎಕ್ಸ್-ಲೈನ್ ರೂಪಾಂತರಕ್ಕೆ ವಿಶೇಷ ಮ್ಯಾಟ್ ಫಿನಿಶ್​ ಆಯ್ಕೆಯಲ್ಲಿ ಲಭ್ಯವಿದೆ.

ಯಾಂತ್ರಿಕ ಬದಲಾವಣೆ ಇಲ್ಲ

ಹೊಸ ಕಿಯಾ ಸೆಲ್ಟೋಸ್ ಈಗ ಎರಡು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡುತ್ತದೆ. 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 115 ಬಿಎಚ್​ಪಿ ಪವರ್ ಮತ್ತು 144 ಎನ್ಎಂ ಟಾರ್ಕ್ ಉತ್ಪಾದಿಸಿದರೆ, 1.5 ಲೀಟರ್ ಡೀಸೆಲ್ ಎಂಜಿನ್ 115 ಬಿಹೆಚ್ ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಹೊಸ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 160 ಬಿಎಚ್​​ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. ಟ್ರಾನ್ಸ್ ಮಿಷನ್​​ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಐಎಂಟಿ, 6-ಸ್ಪೀಡ್ ಟಾರ್ಕ್ ಕನ್ವರ್ಟರ್, ಸಿವಿಟಿ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಆಯ್ಕೆಗಳಿವೆ.

ಹೊಸ ಕಿಯಾ ಸೆಲ್ಟೋಸ್ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್ ಮತ್ತು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರನ್ ಸಿ 3 ಏರ್ ಕ್ರಾಸ್ ಗಳಿಗೆ ಪೈಪೋಟಿ ನೀಡಲಿದೆ.

Exit mobile version