Site icon Vistara News

Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು

Viral News

ವಾಷಿಂಗ್ಟನ್​: ಹೆತ್ತವರ ವಾಹನವನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರಿಗೆ ಸಿಕ್ಕಿ ಬೀಳುವ ಹಲವಾರು ಪ್ರಕರಣಗಳು ನಡೆಯುತ್ತಿರುತ್ತವೆ. ಬಹುತೇಕ ಪ್ರಕರಣಗಳು ಹದಿ ಹರೆಯದ ಮಕ್ಕಳ ಶೋಕಿಗೆ ನಡೆದಿರುತ್ತವೆ. ಆದರೆ, ಈ ಘಟನೆಯಲ್ಲಿ ಮಕ್ಕಳು ಅಮ್ಮನ ಮೇಲಿನ ಕೋಪಕ್ಕೆ ಅವರ ಕಾರನ್ನೇ ಎತ್ತಿಕೊಂಡು 300 ಕಿಲೋ ಮೀಟರ್​ ದೂರ ಸಾಗಿದ ಮೇಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಾರೆ. 11 ವರ್ಷದ ಅಕ್ಕ ಹಾಗೂ 10 ವರ್ಷದ ತಮ್ಮನನ್ನು ಪೊಲೀಸರು ಅಡ್ಡಗಟ್ಟಿ ಹಿಡಿದು ಅವರ ಪೋಷಕರ ಮೇಲೆ ಕೇಸ್​ ಜಡಿದು ಮನೆಗೆ ವಾಪಸ್​ ಕಳುಹಿಸಿದ್ದಾರೆ ಎಂಬುದಾಗಿ (Viral News) ವರದಿಯಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಭಾರತದಲ್ಲಿ ಅಲ್ಲ. ಅಮೆರಿಕದಲ್ಲಿ.

ಅಮೆರಿಕದ ಉತ್ತರ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಅಸಮಾಧಾನಗೊಂಡ ಇಬ್ಬರು ಮಕ್ಕಳು ತಮ್ಮ ತಾಯಿಯ ಕಾರನ್ನು ತೆಗೆದುಕೊಂಡು ಗಂಟೆಗಳ ಕಾಲ ಓಡಿಸಲು ನಿರ್ಧರಿಸಿದ್ದರು. ಮನೆಯಲ್ಲಿ ಗಲಾಟೆ ಮಾಡಿಕೊಂಡ ಮಕ್ಕಳು ಮನೆ ತೊರೆಯಲು ನಿರ್ಧರಿಸಿದ್ದರು.

ಉತ್ತರ ಫ್ಲೋರಿಡಾದ ಪೊಲೀಸರು ಗುರುವಾರ ಮುಂಜಾನೆ 3: 50 ರ ಸುಮಾರಿಗೆ ಅಲಚುವಾದಲ್ಲಿ ಮಕ್ಕಳಿಬ್ಬರು ವಾಹನ ಚಾಲನೆ ಮಾಡುತ್ತಿರುವುದನ್ನು ಗಮನಿಸಿ ಅವರನ್ನು ಬೆನ್ನಟ್ಟಿದ್ದಾರೆ. 10 ವರ್ಷದ ಬಾಲಕ ಮತ್ತು ಅವನ 11 ವರ್ಷದ ಸಹೋದರಿಯನ್ನು ತಡೆದಿದ್ದಾರೆ. ಅದಕ್ಕಿಂತ ಮೊದಲು ಮಕ್ಕಳ ತಾಯಿ ಪೊಲೀಸರಿ ಅವರಿಬ್ಬರೂ ಪರಾರಿಯಾಗಿರುವ ದೂರು ನೀಡಿದ್ದರು. 10 ವರ್ಷದ ಬಾಲಕ ಕಾರನ್ನು ಓಡಿಸಿದ್ದರೆ ಆತನ ಸಹೋದರೆ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಳು ಎಂದು ಪೊಲೀಸರ ತಿಳಿಸಿದ್ದಾರೆ.

ಮೊಬೈಲ್ ಕೊಡದಕ್ಕೆ ಕೋಪ

ಇಬ್ಬರೂ ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಬಿದಿದ್ದರು. ಹೀಗಾಗಿ ತಾಯಿ ಹೊರಗೆ ಹೋಗುವಾಗ ಎಲ್ಲ ಎಲೆಕ್ಟ್ರಾನಿಕ್​ ಸಾಧನಗಳನ್ನು ತೆಗೆದುಕೊಂಡು ಹೋಗಿದ್ದರು. ಇದಕ್ಕೆ ಕೋಪಗೊಂಡ ಅಕ್ಕ , ತಮ್ಮ ಅಮ್ಮನ ಕಾರನ್ನೇ ಎತ್ತಿಕೊಂಡು ಮನೆ ಬಿಟ್ಟು ಹೋಗಿದ್ದಾರೆ.

ಮಕ್ಕಳನ್ನು ಹಿಡಿದ ಪೊಲೀಸರು ಅವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪೋಷಕರಿಗೆ ಪೊಲೀಸರು ಬುದ್ಧಿ ಹೇಳಿದ್ದಾರೆ. ಇವೆಲ್ಲದರ ನಡುವೆ ತಾಯಿ ಮಕ್ಕಳ ಮೇಲೆಯೂ ಕಾರು ಕಳ್ಳತನದ ದೂರು ದಾಖಲಿಸಿದ್ದರು. ಪೊಲೀಸರು ಮಧ್ಯಸ್ಥಿಕೆಯಲ್ಲಿ ಎಲ್ಲ ದೂರುಗಳನ್ನು ತೆಗೆದುಹಾಕಲಾಗಿದೆ.

ಇದನ್ನೂ ಓದಿ : Viral News: ಎಲ್​ಕೆಜಿ ಬಾಲಕನಿಗೆ ಕಾಲು ಮುರಿಯುವ ಹಾಗೆ ಬಡಿದ ಮೇಷ್ಟ್ರು ​, ಗಾಯಗಳನ್ನು ನೋಡಿ ಬೆಚ್ಚಿದ ಅಮ್ಮ

ಅಜಾಗರೂಕ ಚಾಲನೆಯ ಕೇಸನ್ನೂ ಮಕ್ಕಳ ಮೇಲೆ ಹಾಕಿಲ್ಲ. ತಾಯಿ ಎಲ್ಲ ದೂರುಗಳನ್ನು ವಾಪಸ್​ ಪಡೆದರೂ ಅಜಾಗರೂಕ ಚಾಲನೆಯ ಕೇಸ್​ ಮಕ್ಕಳ ಮೇಲೆ ಹಾಕಿದ್ದರು. ಆದರೆ ಅಲ್ಲಿನ ನ್ಯಾಯಾಲಯ ಮಕ್ಕಳ ಮೇಲಿನ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಾಗಿ ಪೊಲೀಸರೂ ಆ ಕೇಸನ್ನೂ ಕೈಬಿಟ್ಟಿದ್ದಾರೆ.

ಭಾರತದಲ್ಲಿ ಪೋಷಕರಿಗೆ ಜೈಲು ಶಿಕ್ಷೆ

ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವ ಪ್ರಕರಣಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಅಪ್ರಾಪ್ತ ವಯಸ್ಕರು ಲೈಸೆನ್ಸ್​ ಇಲ್ಲದೆ ವಾಹನ ಚಲಾಯಿಸುವುದು ಅಥವಾ ಸವಾರಿ ಮಾಡಿ ಸಿಕ್ಕಿಬಿದ್ದಾಗ, ಅವರನ್ನು ಬಂಧಿಸಿ ನಂತರ ಬಾಲಾಪರಾಧಿ ನ್ಯಾಯಾಲಯಗಳಿಗೆ ಕಳುಹಿಸಲಾಗುತ್ತದೆ. ಬಾಲಾಪರಾಧಿ ಕಸ್ಟಡಿಯಲ್ಲಿದ್ದಾಗ ಆಪ್ತ ಸಲಹೆಗಳನ್ನು ಪಡೆಯುತ್ತಾರೆ. ಆದರೆ ಅವರಿಗೆ ವಾಹನ ಓಡಿಸಲು ಬಿಟ್ಟ ಪೋಷಕರನ್ನು ಕಠಿಣ ಜೈಲು ಶಿಕ್ಷೆಗಳಿಗೆ ಒಳಪಡಿಸಲಾಗುತ್ತದೆ.

ಅಪರಾಧಗಳಲ್ಲಿ ಪದೇ ಪದೇ ತೊಡಗುವ ಅಪ್ರಾಪ್ತ ವಯಸ್ಕರು ದೀರ್ಘಾವಧಿಯ ಸೆರೆವಾಸ ಸೇರಿದಂತೆ ಹೆಚ್ಚು ಕಠಿಣ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ನ್ಯಾಯಾಲಯವು ಪೋಷಕರಿಗೆ ನಿರ್ದಿಷ್ಟ ಶಿಕ್ಷೆಗಳನ್ನು ನಿರ್ಧರಿಸುತ್ತದೆ. ಔಪಚಾರಿಕ ಮತ್ತು ಕಾನೂನುಬದ್ಧ ಪರವಾನಗಿ ಪಡೆಯುವವರೆಗೆ ತಮ್ಮ ಮಕ್ಕಳು ವಾಹನಗಳನ್ನು ಓಡಿಸುವುದಿಲ್ಲ ಎಂದು ಬುದ್ಧಿ ಹೇಳಲಾಗುತ್ತದೆ.

Exit mobile version