ಹೊಸ ವರ್ಷ ಬಂದು ಆರು ತಿಂಗಳಾದರೂ ಮಹೀಂದ್ರಾದ (Mahindra) 2023ರ ಕೆಲವು ಮಾದರಿಗಳು (2023 models) ಸ್ಟಾಕ್‌ನಲ್ಲಿ (stock) ಉಳಿದಿವೆ. ಈ ದಾಸ್ತಾನು ತೆರವುಗೊಳಿಸಲು ಬ್ರ್ಯಾಂಡ್ ಗಮನಾರ್ಹ ರಿಯಾಯಿತಿ ಮತ್ತು ವಿಶೇಷ ಪ್ರಯೋಜನಗಳನ್ನು (Mahindra Discount Offers) ನೀಡುವುದಾಗಿ ಘೋಷಿಸಿದೆ.
2023ರಲ್ಲಿ ತಯಾರಿಸಲಾದ ಎಕ್ಸ್ ಯುವಿ 400 ಇವಿ, ಎಕ್ಸ್ ಯುವಿ 700 ಮತ್ತು ಸ್ಕಾರ್ಪಿಯೋ ಎನ್‌ನಂತಹ ಮಾದರಿಗಳು ಕಳೆದ ತಿಂಗಳಂತೆಯೇ ಗಣನೀಯ ಉಳಿತಾಯದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮಹೀಂದ್ರ ಎಸ್‌ಯುವಿಗಳಲ್ಲಿ ಲಭ್ಯವಿರುವ ರಿಯಾಯಿತಿಗಳ ವಿವರ ಇಲ್ಲಿದೆ.
ಮಹೀಂದ್ರ ಎಕ್ಸ್ ಯುವಿ 700
ಮಹೀಂದ್ರಾ ಎಕ್ಸ್ ಯುವಿ 700 ಖರೀದಿಯ ಮೇಲೆ 1.5 ಲಕ್ಷ ರೂ.ವರೆಗೆ ರಿಯಾಯಿತಿಗಳನ್ನು ನೀಡುವುದನ್ನು ಮುಂದುವರೆಸಿದೆ. ಎಎಕ್ಸ್ 5 7-ಸೀಟರ್ ಡೀಸೆಲ್-ಎಂಟಿ, ಡೀಸೆಲ್-ಎಟಿ ಮತ್ತು ಪೆಟ್ರೋಲ್-ಎಂಟಿ ರೂಪಾಂತರಗಳನ್ನು ಹೊರತುಪಡಿಸಿ ಎಲ್ಲಾ ರೂಪಾಂತರಗಳು 1.5 ಲಕ್ಷ ರೂ. ವರೆಗೆ ಫ್ಲಾಟ್ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.
1.3 ಲಕ್ಷ ರಿಯಾಯಿತಿಯೊಂದಿಗೆ ಎಕ್ಸ್ ಯುವಿ 700 ಟಾಟಾ ಸಫಾರಿ ಮತ್ತು ಎಮ್ ಜಿ ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದರಲ್ಲಿ ಎಂಜಿನ್ ಆಯ್ಕೆಗಳೊಂದಿಗೆ ಹಲವು ವೈಶಿಷ್ಟ್ಯಗಳಿವೆ.
2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅಥವಾ 2.2 ಲೀಟರ್ ಟರ್ಬೊ- ಡೀಸೆಲ್ ಎಂಜಿನ್. ಎಕ್ಸ್ ಯುವಿ 700 ಎಕ್ಸ್ ಶೋ ರೂಂ ಬೆಲೆಗಳು 13.99 ಲಕ್ಷದಿಂದ ರೂ 27.14 ಲಕ್ಷ ರೂ. ವರೆಗೆ ಇದೆ.
ಮಹೀಂದ್ರ ಎಕ್ಸ್ ಯುವಿ 400
2023ರ ಹೆಚ್ಚಿನ ಮಹೀಂದ್ರಾ ಎಕ್ಸ್ ಯುವಿ 400 ಇವಿ ರೂಪಾಂತರಗಳಲ್ಲಿ 4.4 ಲಕ್ಷ ರೂ. ವರೆಗಿನ ರಿಯಾಯಿತಿಗಳು ಲಭ್ಯವಿದೆ. ಅದರ ದೊಡ್ಡ 39.4ಕೆ ಡಬ್ಲ್ಯೂ ಹೆಚ್ ಬ್ಯಾಟರಿ, 7.2ಕೆ ಡಬ್ಲ್ಯೂ ವೇಗದ ಚಾರ್ಜರ್ ಮತ್ತು ಇಎಸ್ ಸಿ ನೊಂದಿಗೆ ಹೆಚ್ಚಿನ-ಸ್ಪೆಕ್ ಇಎಲ್ ರೂಪಾಂತರವು 3.4 ಲಕ್ಷ ರೂ. ಗಳ ರಿಯಾಯಿತಿಯನ್ನು ಹೊಂದಿದೆ. ಎಕ್ಸ್ ಯುವಿ ಎಕ್ಸ್ ಯುವಿ 400 ಬೆಲೆಯು 15.49 ಲಕ್ಷ ಮತ್ತು 17.49 ಲಕ್ಷ ರೂ.ಗಳ ನಡುವೆ ಮತ್ತು ಇಸಿ ಮತ್ತು ಇಎಲ್ ಟ್ರಿಮ್‌ಗಳಲ್ಲಿ ಲಭ್ಯವಿದೆ.
ಮಹೀಂದ್ರ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೊ ಎನ್ ಉನ್ನತ-ಸ್ಪೆಕ್ ಝೆಡ್ 8 ಮತ್ತು ಟಾಪ್-ಸ್ಪೆಕ್ ಝೆಡ್ 8 ಎಲ್ ರೂಪಾಂತರಗಳಿಗೆ 1 ಲಕ್ಷ ರೂ. ವರೆಗೆ ರಿಯಾಯಿತಿಗಳನ್ನು ನೀಡುತ್ತದೆ. 4ಡಬ್ಲ್ಯೂ ಡಿ ಡೀಸೆಲ್ ರೂಪಾಂತರಗಳು 1 ಲಕ್ಷ ರೂ. ವರೆಗೆ ನಗದು ರಿಯಾಯಿತಿಯನ್ನು ಹೊಂದಿದ್ದರೆ, 2ಡಬ್ಲ್ಯೂ ಡಿ ಪೆಟ್ರೋಲ್ ಮತ್ತು ಡೀಸೆಲ್ ಟ್ರಿಮ್‌ಗಳು 60,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತವೆ.
ಇದನ್ನೂ ಓದಿ: Upcoming Vehicles: ಈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಕಾರು, ಬೈಕ್‌ಗಳಿವು!
ಟಾಟಾ ಸಫಾರಿ, ಮಹೀಂದ್ರಾ ಎಕ್ಸ್‌ಯುವಿ700, ಎಂಜಿ ಹೆಕ್ಟರ್ ಪ್ಲಸ್ ಮತ್ತು ಹ್ಯುಂಡೈ ಅಲ್ಕಾಜರ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುವ ಇದರ ಎಕ್ಸ್-ಶೋರೂಂ ಬೆಲೆಗಳು 13.60 ಲಕ್ಷದಿಂದ 24.54 ಲಕ್ಷ ರೂ. ವರೆಗೆ ಇರುತ್ತದೆ.