ಬೆಂಗಳೂರು: ಭಾರತದ ಪ್ರಮುಖ ಸಣ್ಣ ವಾಣಿಜ್ಯ ವಾಹನ (ಎಲ್ ಸಿವಿ)-2 ರಿಂದ 3.5 ಟನ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ (ಎಂ ಆ್ಯಂಡ್ ಎಂ) ಹೊಚ್ಚ ಹೊಸ New Bolero MaXX Pik-Up ಅನ್ನು ಬುಧವಾರ ಬಿಡುಗಡೆ ಮಾಡಿದೆ. ಆಧುನಿಕ ಸಾರಿಗೆ ಹಾಗೂ ಲಾಜಿಸ್ಟಿಕ್ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಬಿಡುಗಡೆಯಾಗಿರುವ ಈ ವಾಹನಕ್ಕೆ 7.68 ಲಕ್ಷ ರೂಪಾಯಿ (ಎಕ್ಸ್ ಶೋರೂಮ್) ಬೆಲೆ ನಿಗದಿ ಮಾಡಿದ್ದು, ೨೫ ಸಾವಿರ ರೂಪಾಯಿ ಡೌನ್‌ಪೇಮೆಂಟ್ ಮಾಡಿ ಬುಕ್ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿದೆ.
New Bolero MaXX Pik-Up ಸುಧಾರಿತ ತಂತ್ರಜ್ಞಾನ ಹೊಂದಿದ್ದು, iMaXX telematics ತಂತ್ರಜ್ಞಾನವನ್ನು ಹೊಂದಿದೆ. ಅಂತೆಯೇ ಆರಾಮದಾಯಕತೆ ಹಾಗೂ ಸುರಕ್ಸತಾ ತಂತ್ರಜ್ಞಾನವನ್ನೂ ಹೆಚ್ಚಿಸಲಾಗಿದೆ. ದೀರ್ಘ ಕಾಲದ ಪ್ರಯಾಣಕ್ಕೆ ಅನುಕೂಲಕರವಾಗಿರುವ ಸೀಟ್‌ಗಳು, ಹೊಸ ಹೆಡ್ ಲ್ಯಾಂಪ್‌ಗಳು, ಡಿಜಿಟಲ್ ಕ್ಲಸ್ಟರ್ , ಹೊಸ ಮಾದರಿಯ ಡ್ಯಾಶ್ ಬೋರ್ಡ್ ಹೊಂದಿದೆ.
iMaXX telematics solution ಬಿಡುಗಡೆ ಬಗ್ಗೆ ಮಾತನಾಡಿದ ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ನಕ್ರಾ ಮಾತನಾಡಿ, “ಮಹೀಂದ್ರಾದ ಮೂಲಕ ನಾವು ಗ್ರಾಹಕರ ಜೀವನವನ್ನು ಧನಾತ್ಮಕವಾಗಿ ವೃದ್ಧಿಸಲು ಶ್ರಮಿಸುತ್ತೇವೆ. iMaXX telematics solution ಆಲ್-ನ್ಯೂ ಬೊಲೆರೊ ಮ್ಯಾಕ್ಸ್ ಎಕ್ಸ್ ಪಿಕ್-ಅಪ್ ಒಂದು ಫ್ಯೂಚರಿಸ್ಟಿಕ್ ಬ್ರಾಂಡ್ ಆಗಿದ್ದು, ಸುಧಾರಿತ ಐಮ್ಯಾಕ್ಸ್ಎಕ್ಸ್ ತಂತ್ರಜ್ಞಾನ, ಟರ್ನ್ ಸೇಫ್ ಲೈಟ್‌ಗಳು, ಹೈಟ್ ಅಡ್ಜಸ್ಟಬಲ್ ಸೀಟುಗಳು, ಶಕ್ತಿಶಾಲಿ ಮತ್ತು ಕ್ಲಾಸ್-ಲೀಡಿಂಗ್ ಪೇಲೋಡ್ ಸಾಮರ್ಥ್ಯದಂಥ ನಾನಾ ವೈಶಿಷ್ಟ್ಯಗಳನ್ನು ಹೊಂದಿದೆ,” ಎಂದು ಹೇಳಿದರು.
ಎಂ ಆ್ಯಂಡ್ ಎಂ ಲಿಮಿಟೆಡ್‌ನ ಆಟೋಮೋಟಿವ್ ಟೆಕ್ನಾಲಜಿ ಮತ್ತು ಉತ್ಪನ್ನ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಆರ್. ವೇಲುಸಾಮಿ ಮಾತನಾಡಿ “ಆಲ್-ನ್ಯೂ ಬೊಲೆರೊ ಮ್ಯಾಕ್ಸ್ ಎಕ್ಸ್ ಪಿಕ್-ಅಪ್, ಪಿಕಪ್ ಮಾರುಕಟ್ಟೆಯ ಹೆಚ್ಚಿನ ಬೇಡಿಕೆಯ, ಯಾವಾಗಲೂ ವಿಕಸನಗೊಳ್ಳುವ ಅಗತ್ಯತೆಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಲಾಗಿದೆ. ಮ್ಯಾಕ್ಸ್ ಎಕ್ಸ್ ಪಿಕ್-ಅಪ್ ಸಿಟಿ 1300 ಕೆಜಿಗೂ ಹೆಚ್ಚಿನ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಲೀಟರ್ ಡೀಸೆಲ್‌ಗೆ 17.2 ಕಿ.ಮೀ ಮೈಲೇಜ್ ನೀಡುತ್ತದೆ,” ಎಂದರು.
ವಿಶೇಷತೆಗಳೇನು?
ಎತ್ತರ ಹೊಂದಾಣಿಕೆಯ ಚಾಲಕ ಸೀಟುಗಳನ್ನು ನೀಡಿರುವ ಭಾರತದಲ್ಲಿ ಮೊದಲ ಪಿಕಪ್ ಎನಿಸಿಕೊಂಡಿದೆ. ಹೆಡ್ರೆಸ್ಟ್ ಮತ್ತು ಹೆಚ್ಚಿನ ಲೆಗ್ ರೂಮ್ ಹೆಚ್ಚಿಸಲಾಗಿದೆ. 5.5-ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿರುವ ಬೊಲೆರೊ ಮ್ಯಾಕ್ಸ್ ಎಕ್ಸ್ ಪಿಕ್-ಅಪ್ ಕಿರಿದಾದ ರಸ್ತೆಗಳ ಚಾಲನೆಗೂ ಅನುಕೂಲಕರವಾಗಿದೆ. ನೂತನ ಎಂ2ಡಿಐ ಎಂಜಿನ್ ಎಂಜಿನ್ 195 ಎನ್ಎಂ ಮತ್ತು 48.5ಕೆ ಪವರ್ ಬಿಡುಗಡೆ ಮಾಡುತ್ತದೆ.
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ ಚಿನ್ನ, ಬೆಳ್ಳಿ ಮತ್ತು ಬಿಳಿ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಮೂರು ವರ್ಷ ಅಥವಾ ಒಂದು ಲಕ್ಷ ಕಿ.ಮೀ ತನಕ ವಾರಂಟಿ ಹೊಂದಿರುತ್ತದೆ.
ಇದನ್ನೂ ಓದಿ | Tata Motors | ಟಿಯಾಗೊ NRG ಕಾರಿನ XT ವೇರಿಯೆಂಟ್ ಬಿಡುಗಡೆ