ಬೆಂಗಳೂರು: ಸನ್ರೂಫ್ ಈಗ ಕಾರುಗಳ ಅತ್ಯಾಕರ್ಷಕ ಫೀಚರ್ ಆಗಿದೆ. ಜನರು ಸನ್ರೂಫ್ ಇರುವ ಕಾರುಗಳನ್ನೇ ಹುಡುಕಿ ಹೋಗುತ್ತಾರೆ. ಆದರೆ, ಸನ್ರೂಫ್ನ ಬಳಕೆ ಏನೆಂಬುದು ಮಾತ್ರ ಕೆಲವರಿಗೆ ಗೊತ್ತಿರಲಿಲ್ಲ. ಅದೂ ಅಲ್ಲದೆ ಕೆಲವರು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಹ್ಯುಂಡೈ ವೆರ್ನಾ (hyundai verna) ಕಾರಿನ ಸನ್ ರೂಫ್ನಲ್ಲಿ ವ್ಯಕ್ತಿಯೊಬ್ಬ ತನ್ನ ಶರ್ಟ್ ಬಿಚ್ಚಿ ಕ್ಯಾಮೆರಾಗೆ ಪೋಸ್ ವಿಡಿಯೊವೊಂದು ಹರಿದಾಡಿದ್ದು, (Viral Video) ಆತನ ವಿರುದ್ಧ ಪೊಲೀಸರು ಕೇಸ್ ಜಡಿದಿದ್ದಾರೆ.
ಹ್ಯುಂಡೈ ವರ್ನಾದ ಸನ್ ರೂಫ್ ನಿಂದ ವ್ಯಕ್ತಿಯೊಬ್ಬ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಕಾರಿನ ಹಿಂಭಾಗಕ್ಕೆ ಮುಖ ಮಾಡಿಕೊಂಡು ತನ್ನ ಶರ್ಟ್ ಬಿಚ್ಚಿ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ. ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದಕ್ಕೆ ರೀಲ್ಸ್ಗಳನ್ನು ಮಾಡಲು ಆ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಆದರೆ, ಆ ರೀತಿ ಮಾಡಿರುವುದು ಅಪಾಯಕಾರಿ ಎನ್ನಲಾಗಿದೆ. ಯಾಕೆಂದರೆ ಭಾರತೀಯ ಮೋಟಾರು ವಾಹನಗಳ ನಿಯಮದ ಪ್ರಕಾರ ಸನ್ ರೂಫ್ ಆಗಿರಲಿ, ಕಿಟಕಿ ಅಥವಾ ಇನ್ಯಾವುದೇ ಭಾಗಗಳಿಂದ ನೇತಾಡುವುದು ಅಥವಾ ತಲೆ ಹೊರಕ್ಕೆ ಹಾಕುವುದು ಅಪರಾಧ. ಹೀಗಾಗಿ ಅರೆ ನಗ್ನನಾದ ವ್ಯಕ್ತಿಯ ಮೇಲೂ ಕೇಸು ಹಾಕಲಾಗಿದೆ.
ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ಬಳಿಕ ಗಾಜಿಯಾಬಾದ್ ಪೊಲೀಸರು ಈ ಘಟನೆಯನ್ನು ಗಮನಿಸಿದ್ದಾರೆ. ಅವರು ದೂರನ್ನು ಸಂಬಂಧಿತ ಇಲಾಖೆಗಳಿಗೆ ರವಾನಿಸಿದ್ದಾರೆ. ಕೆಲವೇ ದಿನಗಳಲ್ಲಿ ಆ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.
ಚಲಿಸುವ ಕಾರಿನ ಸನ್ ರೂಫ್ ಅಥವಾ ಯಾವುದೇ ಕಿಟಕಿಯಿಂದ ಹೊರಬರುವುದು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಎಂದು ಪರಿಗಣಿಸಲಾಗುತ್ತದೆ. ಇದು ಕಾನೂನುಬಾಹಿರವಾಗಿದೆ. ವಾಸ್ತವವಾಗಿ, ಚಲಿಸುವ ಕಾರಿನಲ್ಲಿದ್ದಾಗ ಭಾರತದ ಎಲ್ಲಾ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಹಾಗೆ ಮಾಡಲು ವಿಫಲವಾದರೆ ಪೊಲೀಸರಿಂದ ಭಾರಿ ದಂಡ ವಿಧಿಸಬಹುದು. ಈ ಹಿಂದೆ, ಸಾರ್ವಜನಿಕ ರಸ್ತೆಗಳಲ್ಲಿ ಸನ್ ರೂಫ್ ನಿಂದ ಹೊರಬಂದ ವಾಹನ ಚಾಲಕರಿಗೆ ಪೊಲೀಸರು ದಂಡ ಹಾಕಿದ ಉದಾಹರಣೆಗಳಿವೆ.
ಇದನ್ನೂ ಓದಿ: Viral News : ಕಾರು ನನ್ನಪ್ಪಂದು, ರೋಡ್ ಅಲ್ಲ; ಸ್ಟಂಟ್ ಮಾಡಿದ ಯುವಕನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಪೊಲೀಸರು!
ದುರ್ಬಳಕೆ ಬೇಡ
ಸನ್ ರೂಫ್ ಗಳನ್ನು ಮೊದಲಾಗಿ ಗಾಳಿಯ ಪರಿಚಲನೆಗಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ನಗರಗಳು ಹೆಚ್ಚು ಕಲುಷಿತವಾಗಿರುವ ಭಾರತದಲ್ಲಿ,ಸನ್ ರೂಫ್ ಗಳ ಬಳಕೆಯು ಹೆಚ್ಚಿನ ಅರ್ಥ ಹೊಂದಿಲ್ಲ, ಅದಕ್ಕಾಗಿಯೇ ಜನರು ಇವುಗಳನ್ನು ಗಾಳಿ ತಮ್ಮ ಮುಖಗಳಿಗೆ ಬರಲು ಅಥವಾ ಎದ್ದು ನಿಂತು ತಲೆ ಹೊರಕ್ಕೆ ಹಾಕಲು ಎಂದು ಭಾವಿಸಿರುತ್ತಾರೆ. ಹೀಗಾಗಿ ಅನವಶ್ಯಕ ಸ್ಟಂಟ್ಗಳನ್ನು ಮಾಡುತ್ತಾರೆ.
ಹೆಚ್ಚಿನ ವೇಗದಲ್ಲಿ ಕಿಟಕಿಗಳನ್ನು ತೆರೆದಿಡುವುದರಿಂದ ಗಾಳಿಯು ನೇರವಾಗಿ ಕಣ್ಣುಗಳಿಗೆ ಅಪ್ಪಳಿಸಬಹುದು. ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚು ಗಾಳಿಯ ತೊಂದರೆಯಿಲ್ಲದೆ ಗಾಳಿಯ ಚಲನೆಗಾಗಿ ಸನ್ ರೂಫ್ ವಿನ್ಯಾಸಗೊಳಿಸಲಾಗಿದೆ. ಅದೇನೇ ಇದ್ದರೂ, ಇದರ ಮೂಲಕ ಎದ್ದು ನಿಲ್ಲುವುದು ಅಪಾಯಕಾರಿ. ಅದರಲ್ಲೂ ಮಕ್ಕಳು ಹಠಾತ್ ಬ್ರೇಕ್ ಹಾಕಿದಾಗ ಹೊರಗೆ ಬೀಳುವ ಸಾಧ್ಯತೆಗಳಿವೆ. ಸಣ್ಣ ಕಲ್ಲುಗಳಂತಹ ಅವಶೇಷಗಳು ಅವರಿಗೆ ಡಿಕ್ಕಿ ಹೊಡೆದು ಗಾಯಗಳಾಗಬಹುದು.