ನವ ದೆಹಲಿ: ಮಾರುತಿ ಸುಜುಕಿ ಇಂಡಿಯಾ (Maruti Suzuki WagonR) ಇದುವರೆಗೆ 30 ಲಕ್ಷ ವ್ಯಾಗನ್‌ಆರ್ ಕಾರುಗಳನ್ನು ಮಾರಾಟ ಮಾಡಿದೆ. ವ್ಯಾಗನ್‌ಆರ್ ಕಾರುಗಳ ಮಾರಾಟ 2008ರಲ್ಲಿ 5 ಲಕ್ಷ ಸೇಲ್ಸ್ ಮೈಲಿಗಲ್ಲನ್ನು ದಾಟಿತ್ತು. 2017ರಲ್ಲಿ 20 ಲಕ್ಷದ ಮೈಲಿಗಲ್ಲನ್ನು ಕ್ರಮಿಸಿತ್ತು. 2021ರಲ್ಲಿ 25 ಲಕ್ಷ ಹಾಗೂ 2023ರಲ್ಲಿ 30 ಲಕ್ಷದ ಮೈಲಿಗಲ್ಲನ್ನು ದಾಟಿದೆ.
ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ವ್ಯಾಗನ್‌ಆರ್ ಬಿಡುಗಡೆಯಾದಂದಿನಿಂದಲೂ ಉತ್ತಮ ವಹಿವಾಟು ನಡೆಸಿದೆ. ಗ್ರಾಹಕರ ಮನ ಗೆದ್ದಿದೆ. ಭಾರತೀಯ ಹ್ಯಾಚ್‌ಬ್ಯಾಕ್‌ಗಳ ಪೈಕಿ ಮುಂಚೂಣಿಯಲ್ಲಿದೆ ಎಂದು ಕಂಪನಿಯ ಸೀನಿಯರ್ ಎಕ್ಸಿಕ್ಯುಟಿವ್ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ. ಗ್ರಾಹಕರಲ್ಲಿ 24% ಮಂದಿ ವ್ಯಾಗನ್ ಆರ್ ಅನ್ನು ಅಪ್ ಗ್ರೇಡ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈಗಿನ ಜನರೇಶನ್‌ನ ವ್ಯಾಗನ್ ಆರ್ ಕಾರು ಮಾನ್ಯುಯಲ್ ಮತ್ತು ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ. Anti -lock Braking System (ABS) ಅನ್ನು ಒಳಗೊಂಡಿದೆ.
ಇದನ್ನೂ ಓದಿ: Maruti Suzuki : ತನ್ನ ಎಲ್ಲ ಕಾರುಗಳಿಗೆ ಇಎಸ್ಸಿ ಸೇಫ್ಟಿ ಫೀಚರ್ ನೀಡಿದ ಮಾರುತಿ ಸುಜುಕಿ, ಏನಿದರ ಲಾಭ?