ನವ ದೆಹಲಿ: ಬಜಾಜ್ ಆಟೋ ಕಂಪನಿಯ ಜನಪ್ರಿಯ ಬೈಕ್ ಬಜಾಜ್ ಪಲ್ಸರ್ (Bajaj Pulser) ಎನ್ಎಸ್160 ಹಾಗೂ ಎನ್ಎಸ್200ನ 2023ರ ಆವೃತ್ತಿ ಭಾರತದಲ್ಲಿ ಬಿಡುಗಡೆಗೊಂಡಿದೆ. ಈ ಬೈಕ್ಗಳು ಭಾರತ್ ಸ್ಟೇಜ್ 6ರ ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿವೆ. ಈ ಬೈಕ್ಗಳ ಆರಂಭಿಕ ಬೆಲೆ ಕ್ರಮವಾಗಿ 1.35 ಲಕ್ಷ ರೂಪಾಯಿ ಹಾಗೂ 1.48 ಲಕ್ಷ ರೂಪಾಯಿಗಳಾಗಿವೆ. (ಎಕ್ಸ್ ಶೋರೂಮ್ ಬೆಲೆ). ಬಜಾರ್ ಡೀಲರ್ಶಿಪ್ಗಳಲ್ಲಿ ಹೊಸ ಬೈಕ್ಗಳು ಲಭ್ಯ ಇದೆ ಎಂದು ಕಂಪನಿ ತಿಳಿಸಿದೆ.
ಬಜಾಜ್ ಎನ್ಎಸ್ 160 ಬೈಕ್ಗೆ 10 ಸಾವಿರ ರೂಪಾಯಿ ದುಬಾರಿ ಎನಿಸಿದರೆ, ಎನ್ಎಸ್200 ಬೈಕ್ಗೆ 7000 ರೂಪಾಯಿ ಹೆಚ್ಚಳವಾಗಿದೆ. ಗ್ಲಾಸಿ ಎಬೊನಿ ಬ್ಲ್ಯಾಕ್, ಪ್ವೀಟರ್ ಗ್ರೇ, ಸ್ಟೇನ್ ರೆಡ್ ಹಾಗೂ ಮೆಟಾಲಿಕ್ ಪರ್ಲ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಪಲ್ಸರ್ ಬೈಕ್ಗಳು ಲಭ್ಯವಿದೆ.
ಹೊಸತೇನಿದೆ?
ಹೊಸ ಬಜಾಜ್ ಪಲ್ಸರ್ ಎನ್ಎಸ್ 160 ಹಾಗೂ 200 ಬೈಕ್ಗಳಲ್ಲಿ ಅಪ್ಸೈಡ್-ಡೌನ್ ಫೋರ್ಕ್ ಮತ್ತು ಡ್ಯುಯಲ್- ಚಾನೆಲ್ ಎಬಿಎಸ್ ಹೊಂದಿದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ತೂಕ ಇಳಿದಿದೆ. ಎನ್ಎಸ್ 158 ಕೆ.ಜಿ ಇದ್ದರೆ, 200 ಬೈಕ್ 159.5 ಕೆ.ಜಿ ಇದೆ. ಕಂಪನಿಯ ಹೇಳುವ ಪ್ರಕಾರ 160 ಬೈಕ್ನಲ್ಲಿ ದೊಡ್ಡ ಗಾತ್ರದ ಡಿಸ್ಕ್ ಬ್ರೇಕ್ ಬಳಸಲಾಗಿದೆ. ಅದೇ ರೀತಿ ಟೈರ್ನ ಗಾತ್ರವೂ ಹೆಚ್ಚಿಸಲಾಗಿದೆ. ಮುಂಬದಿ ಟಯರ್ 100/80-17 ಗಾತ್ರದ್ದಾಗಿದ್ದರೆ, ಹಿಂಬದಿ ಟಯರ್ 130, 70-17 ಗಾತ್ರವನ್ನು ಹೊಂದಿದೆ.
ಎಂಜಿನ್ ಸಾಮರ್ಥ್ಯವೇನು?
ಎನ್ಎಸ್160ಯಲ್ಲಿ 160.3 ಸಿಸಿಯ ಆಯಿಲ್ ಕೂಲ್ಡ್ ಎಂಜಿನ್ ಬಳಸಲಾಗಿದೆ. ಇದು 17 ಬಿಎಚ್ಪಿ ಪವರ್ 9000 ಆರ್ಪಿಎಮ್ನಲ್ಲಿ ಬಿಡುಗಡೆ ಮಾಡಿದರೆ, 7250 ಆರ್ಪಿಎಮ್ನಲ್ಲಿ 14.6 ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ನ ಗೇರ್ ಬಾಕ್ಸ್ ಇದೆ. ಎನ್ಎಸ್200 ಬೈಕ್ 199.5 ಸಿಸಿಯ ಟ್ರಿಪಲ್ ಸ್ಪಾರ್ಕ್ ಎಂಜಿನ್ ಹೊಂದಿದೆ. ಇದು 9750 ಆರ್ಪಿಎಮ್ನಲ್ಲಿ 24.1 ಬಿಎಚ್ಪಿ ಪವರ್ ಹೊಂದಿದ್ದರೆ 8000 ಆರ್ಪಿಎಮ್ನಲ್ಲಿ 18.74 ಟಾರ್ಕ್ ಬಿಡುಗಡೆ ಮಾಡುತ್ತದೆ. ಈ ಬೈಕ್ನಲ್ಲಿ ಆರು ಸ್ಪೀಡ್ನ ಗೇರ್ ಬಾಕ್ಸ್ ಇದೆ.