New model Bajaj Pulsar bike launched in India, price also increasedBajaj Pulser : ಹೊಸ ಮಾಡೆಲ್​ನ ಬಜಾಜ್​ ಪಲ್ಸರ್​ ಬೈಕ್​ ಭಾರತದಲ್ಲಿ ಬಿಡುಗಡೆ, ಬೆಲೆಯೂ ಏರಿಕೆ Vistara News Bajaj Pulser : ಹೊಸ ಮಾಡೆಲ್​ನ ಬಜಾಜ್​ ಪಲ್ಸರ್​ ಬೈಕ್​ ಭಾರತದಲ್ಲಿ ಬಿಡುಗಡೆ, ಬೆಲೆಯೂ ಏರಿಕೆ
Connect with us

ಆಟೋಮೊಬೈಲ್

Bajaj Pulser : ಹೊಸ ಮಾಡೆಲ್​ನ ಬಜಾಜ್​ ಪಲ್ಸರ್​ ಬೈಕ್​ ಭಾರತದಲ್ಲಿ ಬಿಡುಗಡೆ, ಬೆಲೆಯೂ ಏರಿಕೆ

ಬಜಾರ್​ ಪಲ್ಸರ್ (Bajaj Pulser)​ ಬೈಕ್​ಗಳ ತೂಕ ಕಡಿಮೆಯಾಗಿವೆ ಹಾಗೂ ಭಾರತ್​ ಸ್ಟೇಜ್​6ರ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ.

VISTARANEWS.COM


on

New model Bajaj Pulsar bike launched in India price also increased
Koo

ನವ ದೆಹಲಿ: ಬಜಾಜ್​ ಆಟೋ ಕಂಪನಿಯ ಜನಪ್ರಿಯ ಬೈಕ್​ ಬಜಾಜ್​ ಪಲ್ಸರ್​ (Bajaj Pulser) ಎನ್​​ಎಸ್​160 ಹಾಗೂ ಎನ್​ಎಸ್​​200ನ 2023ರ ಆವೃತ್ತಿ ಭಾರತದಲ್ಲಿ ಬಿಡುಗಡೆಗೊಂಡಿದೆ. ಈ ಬೈಕ್​ಗಳು ಭಾರತ್​ ಸ್ಟೇಜ್​ 6ರ ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿವೆ. ಈ ಬೈಕ್​ಗಳ ಆರಂಭಿಕ ಬೆಲೆ ಕ್ರಮವಾಗಿ 1.35 ಲಕ್ಷ ರೂಪಾಯಿ ಹಾಗೂ 1.48 ಲಕ್ಷ ರೂಪಾಯಿಗಳಾಗಿವೆ. (ಎಕ್ಸ್ ಶೋರೂಮ್​ ಬೆಲೆ). ಬಜಾರ್​ ಡೀಲರ್​ಶಿಪ್​​ಗಳಲ್ಲಿ ಹೊಸ ಬೈಕ್​ಗಳು ಲಭ್ಯ ಇದೆ ಎಂದು ಕಂಪನಿ ತಿಳಿಸಿದೆ.

ಬಜಾಜ್​ ಎನ್​ಎಸ್​ 160 ಬೈಕ್​ಗೆ 10 ಸಾವಿರ ರೂಪಾಯಿ ದುಬಾರಿ ಎನಿಸಿದರೆ, ಎನ್​ಎಸ್​200 ಬೈಕ್​ಗೆ 7000 ರೂಪಾಯಿ ಹೆಚ್ಚಳವಾಗಿದೆ. ಗ್ಲಾಸಿ ಎಬೊನಿ ಬ್ಲ್ಯಾಕ್​, ಪ್ವೀಟರ್​ ಗ್ರೇ, ಸ್ಟೇನ್​ ರೆಡ್​ ಹಾಗೂ ಮೆಟಾಲಿಕ್​ ಪರ್ಲ್​ ವೈಟ್​ ಎಂಬ ನಾಲ್ಕು ಬಣ್ಣಗಳಲ್ಲಿ ಪಲ್ಸರ್​ ಬೈಕ್​ಗಳು ಲಭ್ಯವಿದೆ.

ಹೊಸತೇನಿದೆ?

ಹೊಸ ಬಜಾಜ್​ ಪಲ್ಸರ್​ ಎನ್​ಎಸ್ 160 ಹಾಗೂ 200 ಬೈಕ್​ಗಳಲ್ಲಿ ಅಪ್​ಸೈಡ್​-ಡೌನ್​ ಫೋರ್ಕ್​ ಮತ್ತು ಡ್ಯುಯಲ್​- ಚಾನೆಲ್​ ಎಬಿಎಸ್​ ಹೊಂದಿದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ತೂಕ ಇಳಿದಿದೆ. ಎನ್​ಎಸ್​​ 158 ಕೆ.ಜಿ ಇದ್ದರೆ, 200 ಬೈಕ್​ 159.5 ಕೆ.ಜಿ ಇದೆ. ಕಂಪನಿಯ ಹೇಳುವ ಪ್ರಕಾರ 160 ಬೈಕ್​ನಲ್ಲಿ ದೊಡ್ಡ ಗಾತ್ರದ ಡಿಸ್ಕ್​ ಬ್ರೇಕ್​ ಬಳಸಲಾಗಿದೆ. ಅದೇ ರೀತಿ ಟೈರ್​ನ ಗಾತ್ರವೂ ಹೆಚ್ಚಿಸಲಾಗಿದೆ. ಮುಂಬದಿ ಟಯರ್​ 100/80-17 ಗಾತ್ರದ್ದಾಗಿದ್ದರೆ, ಹಿಂಬದಿ ಟಯರ್​ 130, 70-17 ಗಾತ್ರವನ್ನು ಹೊಂದಿದೆ.

ಎಂಜಿನ್​ ಸಾಮರ್ಥ್ಯವೇನು?

ಎನ್​ಎಸ್​​160ಯಲ್ಲಿ 160.3 ಸಿಸಿಯ ಆಯಿಲ್​ ಕೂಲ್ಡ್​ ಎಂಜಿನ್​ ಬಳಸಲಾಗಿದೆ. ಇದು 17 ಬಿಎಚ್​ಪಿ ಪವರ್​ 9000 ಆರ್​ಪಿಎಮ್​ನಲ್ಲಿ ಬಿಡುಗಡೆ ಮಾಡಿದರೆ, 7250 ಆರ್​ಪಿಎಮ್​ನಲ್ಲಿ 14.6 ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್​ನ ಗೇರ್​ ಬಾಕ್ಸ್​ ಇದೆ. ಎನ್​ಎಸ್​200 ಬೈಕ್​​ 199.5 ಸಿಸಿಯ ಟ್ರಿಪಲ್​ ಸ್ಪಾರ್ಕ್​ ಎಂಜಿನ್ ಹೊಂದಿದೆ. ಇದು 9750 ಆರ್​ಪಿಎಮ್​ನಲ್ಲಿ 24.1 ಬಿಎಚ್​​ಪಿ ಪವರ್​ ಹೊಂದಿದ್ದರೆ 8000 ಆರ್​ಪಿಎಮ್​ನಲ್ಲಿ 18.74 ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಬೈಕ್​ನಲ್ಲಿ ಆರು ಸ್ಪೀಡ್​ನ ಗೇರ್​ ಬಾಕ್ಸ್ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ

ಆಟೋಮೊಬೈಲ್

Honda Activa : ಹೊಸ ಹೋಂಡಾ ಆ್ಯಕ್ಟಿವಾ ಸ್ಕೂಟರ್​ ಸ್ಟಾರ್ಟ್​ ಮಾಡಲು ಕಿ ಬೇಕಾಗಿಲ್ಲ! ಏನಿದು ಹೊಸ ಫೀಚರ್​​?

ಸ್ಮಾರ್ಟ್​ ಕಿ ಈ ವಿಭಾಗದಲ್ಲಿ ಹೊಸ ಸೇರ್ಪಡೆಯಾಗಿದ್ದು, ಕಾರಿನ ರೀತಿಯಲ್ಲೇ ಕಿ ಒತ್ತುವ ಮೂಲಕ ಪಾರ್ಕಿಂಗ್​ ಜಾಗದಲ್ಲಿ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ.

VISTARANEWS.COM


on

Honda Activa Smart Ki Edition Released Here is information about the new feature price
Koo

ಮುಂಬಯಿ: ಸಾಮಾನ್ಯ ರೀತಿಯ ಕಿ ಇಲ್ಲದ, ಕಾರಿನಂತೆಯೇ ಸ್ಮಾರ್ಟ್​ ಕಿ ಮೂಲಕ ಸ್ಟಾರ್ಟ್​​ ಮಾಡಬಹುದಾದ ಹೋಂಡಾ ಆಕ್ಟಿವಾ 125 ಸ್ಕೂಟರ್​ (Honda Activa) ಭಾರತದ ಮಾರುಕಟ್ಟೆಯಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಇದು ಈ ಹಿಂದಿನ 125 ಸಿಸಿ ಸ್ಕೂಟರ್​ನ ಅಪ್​ಗ್ರೇಡ್​ ಆಗಿದ್ದರೂ, ಸ್ಮಾರ್ಟ್​ ಕಿ ಆಯ್ಕೆ ಇದರ ವೇರಿಯೆಂಟ್​ಗಳಲ್ಲಿ ಹೊಸ ಸೇರ್ಪಡೆ. ಈ ಸ್ಮಾರ್ಟ್​ ಕಿ ಮೂಲಕ ಸವಾರರ ಹಲವು ಕೆಲಸಗಳು ಸರಳಗೊಂಡಿವೆ. ಜತೆಗೆ ರಾಶಿ ರಾಶಿ ಸ್ಕೂಟರ್​ಗಳ ನಡುವೆ ನಮ್ಮ ಸ್ಕೂಟರ್​ ಪತ್ತೆ ಮಾಡುವುದಕ್ಕೂ ಸಾಧ್ಯವಿದೆ. ಡ್ರಮ್​, ಡ್ರಮ್​ ಅಲಾಯ್​, ಡಿಸ್ಕ್​ ಈ ಹಿಂದೆ ಇದ್ದ ವೇರಿಯೆಂಟ್ ಆಗಿದ್ದು, ಎಚ್​ ಸ್ಮಾರ್ಟ್ ಹೊಸ ಆಕರ್ಷಣೆಯಾಗಿದೆ.

ಹೊಸ ಸ್ಕೂಟರ್​ನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಿಂದಿನಂತೆಯೇ ಇದೆ. ಜತೆಗೆ ಅದೇ ಪರ್ಲ್​ ನೈಟ್​ ಸ್ಟಾರ್ಟ್​​ ಬ್ಲ್ಯಾಕ್​, ಹೆವಿ ಗ್ರೇ ಮೆಟಾಲಿಕ್​, ರೆಬೆಲ್​ ರೆಡ್ ಮೆಟಾಲಿಕ್​, ಪರ್ಲ್​ ಪ್ರೀಶಿಯಸ್, ಮಿಡ್​ನೈಟ್​ ಬ್ಲ್ಯೂ ಮೆಟಾಲಿಕ್ ಎಂಬ ಐದು ಬಣ್ಣಗಳಲ್ಲಿ ಲಭ್ಯವಿದೆ. ಅಪ್​​ಗ್ರೇಡ್ ಮಾಡಿರುವ ಸ್ಕೂಟರ್​ನ ಬೆಲೆ 78,920 ರೂಪಾಯಿಗಳಿಂದ ಆರಂಭಗೊಂಡು 88,093 ರೂಪಾಯಿಗಳ ತನಕ ಇದೆ. (ಎಕ್ಸ್​ ಶೋರೂಮ್​ ಬೆಲೆ).

ಹೊಸ ಹೋಂಡಾ ಆಕ್ಟಿವಾ ಸ್ಕೂಟರ್​ 125 ಸಿಸಿಯಲ್ಲಿ ಫ್ಯುಯಲ್​ ಇಂಜೆಕ್ಟರ್​ ಸಮೇತ ಒಬಿಡಿ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಇದು ಬಿಎಸ್​6ನ ಎರಡನೇ ಹಂತದ ಮಾನದಂಡವಾಗಿದ್ದು, ಏಪ್ರಿಲ್​ 1ರ ಒಳಗೆ ಕಡ್ಡಾಯವಾಗಿ ಅಳವಡಿಸುವಂತೆ ಕೇಂದ್ರ ಸರಕಾರ ಸೂಚನೆ ಕೊಟ್ಟಿದೆ. ಈ ಎಂಜಿನ್​ 6250 ಆರ್​ಪಿಎಮ್​ನಲ್ಲಿ 8.19 ಬಿಎಚ್​​ಪಿ ಪವರ್​ ಹಾಗೂ 5000 ಆರ್​ಪಿಎಮ್​ನಲ್ಲಿ 10.4 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐಡಲ್​ ಸ್ಟಾರ್ಟ್​-ಸ್ಟಾಪ್​ ಕೂಡ ಇದೆ. ಇದರಿಂದ ಸಿಟಿ ಸವಾರಿಯ ವೇಳೆ ಮೈಲೇಜ್​ ಕೂಡ ಜಾಸ್ತಿಯಾಗುತ್ತದೆ. ಹೋಂಡಾ ಕಂಪನಿಯ ಈ ಸ್ಕೂಟರ್​ ಹೆಚ್ಚು ಮೈಲೇಜ್​ ನೀಡುವ ಟಯರ್​​ಗಳನ್ನು ಬಳಸಿಕೊಂಡಿದೆ ಎಂಬುದು ಕಂಪನಿಯ ಹೇಳಿಕೆ. ಅದೇ ರೀತಿ ಎಸ್​ಪಿ ತಾಂತ್ರಿಕತೆಯನ್ನು ಹೊಂದಿದ್ದು ಸ್ಮೂತ್​ ಸ್ಟಾರ್ಟ್​ ಸೇರಿದಂತೆ ಹಲವು ಫೀಚರ್​ಗಳನ್ನು ಹೊಂದಿದೆ.

ಏನೇನು ಫೀಚರ್​ಗಳಿವೆ?

ಸೈಡ್​ ಸ್ಟಾಂಡ್​ ಕಟ್​ಆಫ್​ ಸ್ವಿಚ್​, ಹೊರಗಡೆಯೇ ಇರುವ ಫ್ಯುಯಲ್​ ಕ್ಯಾಪ್​, ಓಪನ್​ ಗ್ಲವ್​ ಬಾಕ್ಸ್​, ಎಲ್​ಇಡಿ ಹೆಡ್​ಲ್ಯಾಂಪ್​ ಹೊಂದಿದೆ. ಇದರಲ್ಲಿರುವ ಸಣ್ಣ ಡಿಜಿಟಲ್​ ಸ್ಕ್ರೀನ್​ ಮೂಲಕ ರಿಯಲ್​ ಟೈಮ್​ ಮೈಲೇಜ್​ ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ಅದೇ ರೀತಿ ಡಿಸ್ಟನ್ಸ್ ಎಮ್ಟಿ, ಫ್ಯುಯಲ್​ ಗೇಜ್​, ಸರಾಸರಿ ಮೈಲೇಜ್​ ಮತ್ತಿತರ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ.

ಇದನ್ನೂ ಓದಿ : Maruti Suzuki : 25.51 ಕಿಲೋ ಮೀಟರ್​ ಮೈಲೇಜ್​ ಕೊಡುವ ಮಾರುತಿ ಸುಜುಕಿ ಬ್ರೆಜಾ ಬಿಡುಗಡೆ

ಈ ಸ್ಕೂಟರ್​ನ ಟಾಪ್​ ಎಂಡ್ ವೇರಿಯೆಂಟ್​ ಸ್ಕೂಟರ್​ನಲ್ಲಿ ಸ್ಮಾರ್ಟ್​ ಕಿ ಆಯ್ಕೆಯೂ ಬಂದಿದೆ. ಇದು ಸ್ಮಾರ್ಟ್​ ಫೈಂಡ್​, ಸ್ಮಾರ್ಟ್​ ಸೇಫ್​, ಸ್ಮಾರ್ಟ್ಸ್​ ಅನ್​ಲಾಕ್​, ಸ್ಮಾರ್ಟ್​ ಸ್ಟಾರ್ಟ್​ ಎಂಬ ಆಯ್ಕೆ ನೀಡಲಾಗಿದೆ. ಸ್ಮಾರ್ಟ್​ ಕಿ ಮೂಲಕ 10 ಮೀಟರ್​ ದೂರದಲ್ಲಿ ಸ್ಕೂಟರ್​ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿದೆ. ಬಟನ್ ಒತ್ತಿದರೆ ಅದರ ಇಂಟಿಕೇಟರ್ ಉರಿಯಲು ಆರಂಭವಾಗುತ್ತದೆ.

ಅದೇ ರೀತಿ ಇಮ್ಮೊಬಿಲೈಸರ್ ಫೀಚರ್​ ಕೂಡ ಇದ್ದು, ಕಿ 2 ಮೀಟರ್​ಗಿಂತ ದೂರ ಹೋದ ತಕ್ಷಣ ಇಮ್ಮೊಬಿಲೈಸರ್​ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕಿಹೋಲ್​ ಇರುವುದಿಲ್ಲ. ಬದಲಾಗಿ. ಇಗ್ನಿಶನ್​ ಆನ್​ ಮಾಡುವ ಬಟನ್​ ಇರುವ ನಾಬ್​ ತಿರುಗಿಬೇಕಾಗುತ್ತದೆ. ಈ ನಾಬ್​ ಮೂಲಕ ಸೀಟ್​, ಫ್ಯುಯಲ್​ ಕ್ಯಾಪ್​ ಹಾಗೂ ಹ್ಯಾಂಡಲ್​ ಲಾಕ್​ ತೆಗೆಯಬಹುದಾಗಿದೆ.

Continue Reading

ಆಟೋಮೊಬೈಲ್

Shah Rukh Khan : ಶಾರುಖ್ ಖಾನ್​ ಮನೆ ಸೇರಿತು 10 ಕೋಟಿ ರೂಪಾಯಿಯ ಕಾರು; ಯಾವ ಬ್ರಾಂಡ್ ಗೊತ್ತೇ?

ಶಾರುಖ್​ ಖಾನ್ ಅವರ ಮನೆ ಮನ್ನತ್​ ಒಳಗೆ ಕಾರು ಹೋಗುತ್ತಿರುವ ವಿಡಿಯೊವನ್ನು ತೆಗೆದ ಅಭಿಮಾನಿಗಳು ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿದ್ದಾರೆ.

VISTARANEWS.COM


on

10 crore rupees car arrived at Shahrukh Khans house Do you know which brand
Koo

ಮುಂಬಯಿ: ಭಾರತದ ಸಿನಿಮಾ ರಂಗದ ಸೂಪರ್​ ಸ್ಟಾರ್​ ಶಾರುಖ್​ ಖಾನ್ (Shah Rukh Khan)ಪಠಾಣ್​ ಸಿನಿಮಾದ ಯಶಸ್ಸಿನ ಬಳಿಕ ಹೊಸ ಕಾರನ್ನು ಖರೀದಿಸಿದ್ದಾರೆ. ಭಾನುವಾರ ರಾತ್ರಿ ಆ ಕಾರಿನಲ್ಲೇ ಅವರು ಪ್ರಯಾಣ ಮಾಡುತ್ತಿದ್ದ ಚಿತ್ರ ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡಿದೆ. ಅಂದ ಹಾಗೆ ಆ ಕಾರಿನ ಬೆಲೆ ಎಷ್ಟು ಗೊತ್ತೇ? ಬರೊಬ್ಬರಿ 10 ಕೋಟಿ ರೂಪಾಯಿ. ಅದು ವಿಶ್ವದ ಅತ್ಯಂತ ದುಬಾರಿ ಹಾಗೂ ಪ್ರತಿಷ್ಠಿತರಿಗೆ ಮಾತ್ರ ಮಾರಾಟ ಮಾಡಲಾಗುವ ರೋಲ್ಸ್​ ರಾಯ್ಸ್​ ಕಾರು. ಬಿಳಿ ಬಣ್ಣದ ಈ ದುಬಾರಿ ವಾಹನದ ಬಗ್ಗೆ ಶಾರುಖ್​ ಖಾನ್​ ಅಭಿಮಾನಿಗಳು ಸಿಕ್ಕಾಪಟ್ಟೆ ಕುತೂಹಲ ವ್ಯಕ್ತಪಡಿಸಿದ್ದಾರೆ.

ಫ್ಯಾನ್​ ಪೇಜ್​ನಲ್ಲಿ ಹಾಕಿದ ವಿಡಿಯೊ

ಶಾರುಖ್ ಖಾನ್​ ಅವರ ಬಳಿ ದುಬಾರಿ ಬೆಲೆಯ ಹಲವಾರು ಕಾರುಗಳಿವೆ ಎಂದು ಹೇಳಲಾಗುತ್ತಿದೆ. ಆ ಸಾಲಿಗೆ ಇದೀಗ ರೋಲ್ಸ್​ ರಾಯ್ಸ್​​ನ ಕಲಿನನ್​​ ಬ್ಲ್ಯಾಕ್​ ಬ್ಯಾಜ್​ ಕಾರು ಕೂಡ ಸೇರಿಕೊಂಡಿದೆ. ಶಾರುಖ್​ ಖಾನ್​ ಫ್ಯಾನ್​ ಪೇಜ್ ಎಂಬ ಟ್ವಿಟರ್ ಖಾತೆಯಲ್ಲಿ ಕಾರಿನ ವಿಡಿಯೊವನ್ನು ಪ್ರಕಟಿಸಲಾಗಿದೆ. ಕಾರಿಗೆ ಶಾರುಖ್​ ಅವರ ಸಿಗ್ನೇಚರ್​ ಸಂಖ್ಯೆ 555 ಕೂಡ ಇದೆ. ಅದು ಶಾರುಖ್​ ಅವರ ನಿವಾಸವಾದ ಮನ್ನತ್ ಒಳಗೆ ಪ್ರವೇಶ ಮಾಡುವುದನ್ನು ಅಭಿಮಾನಿಗಳು ವಿಡಿಯೊ ಮಾಡಿದ್ದಾರೆ.

ಶಾರುಖ್​ ಖಾನ್ ಬಳಿಕ ಏಳು ಕೋಟಿ ರೂಪಾಯಿ ಬೆಲೆಯ ರೋಲ್ಸ್​ ರಾಯಲ್ಸ್​ ಕೋಪ್​ ಕಾರು ಕೂಡ ಎಂದು ಹೇಳಲಾಗುತ್ತಿದೆ. ಅದೇ ರೀತಿ ತಾವು ಆರಂಭದಿಂದ ಬಳಸುತ್ತಿದ್ದ ಅಷ್ಟೂ ಕಾರನ್ನು ಬಳಸುತ್ತಾರೆ ಎಂದೂ ಹೇಳಲಾಗಿದೆ. ಅವರ ಕಾರು ಗ್ಯಾರೇಜ್​ನಲ್ಲಿ ಹಳೆಯ ಸ್ಯಾಂಟ್ರೊ ಕೂಡ ನಿಂತಿದೆ ಎಂದು ಹೇಳಲಾಗುತ್ತಿದೆ.

ಶಾರುಖ್ ಖಾನ್​ ನಟನೆಯ ಪಠಾಣ್ ಸಿನಿಮಾ ಒಟಿಟಿಯಲ್ಲಿ ಇದೀಗ ಲಭ್ಯವಿದೆ. ಈ ಸಿನಿಮಾವು 1000 ಕೋಟಿ ರೂಪಾಯಿಗಿಂತಲೂ ಅಧಿಕ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡಿದೆ. ಅಟ್ಲೀ ಅವರ ಜವಾನ್ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆಗೆ ಶಾರುಖ್​ ಕಾಣಿಸಿಕೊಳ್ಳಲಿದ್ದಾರೆ.

ಯಾವುದು ರೋಲ್ಸ್​​ ರಾಯಲ್ಸ್​ ಕಲಿನನ್​ ಕಾರು:

ರೋಲ್ಸ್​​ ರಾಯ್ಸ್​ ಕಂಪನಿಯ ಕಲಿನನ್​ ಬ್ಲ್ಯಾಕ್​ ಬ್ಯಾಜ್​ ಕಾರು 6750 ಸಿಸಿಯ 12 ಸಿಲಿಂಡರ್​ನ ಎಂಜಿನ್​ ಹೊಂದಿದೆ. ಇದು 5341 ಉದ್ದವಿದ್ದು,  2000 ಅಗಲವಾಗಿದೆ. ಇದು ಜಗತ್ತಿನ ಅತ್ಯಾಧುನಿಕ ಫೀಚರ್​ ಹಾಗೂ ತಾಂತ್ರಿಕತೆಯನ್ನು ಹೊಂದಿದೆ.

Continue Reading

ಆಟೋಮೊಬೈಲ್

Mahindra Thar : ವಿಶ್ವ ಚಾಂಪಿಯನ್​ನಿಖತ್​ಗೆ ಥಾರ್​ ಕಾರು ಗಿಫ್ಟ್​ ಕೊಟ್ಟ ಮಹೀಂದ್ರಾ

ಥಾರ್​ ಕಾರು ಸಿಗುತ್ತಿದ್ದಂತೆ ನಿಖತ್​ ಜರೀನ್​ ಮರ್ಸಿಡಿಸ್​ ಕಾರು ಕೊಳ್ಳುವ ತಮ್ಮ ಯೋಜನೆಯನ್ನು ಕೈಬಿಟ್ಟಿದ್ದಾರೆ.

VISTARANEWS.COM


on

Mahindra gifted a car to world champion Nikhat
Koo

ನವ ದೆಹಲಿ: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Women’s Boxing Championship) ಭಾರತದ ನಿಖತ್ ಜರೀನ್(Nikhat Zareen) ಅವರು ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ​ ಚಾಂಪಿಯನ್ ಪಟ್ಟವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅವರು ಕಳೆದ ಆವೃತ್ತಿಯಲ್ಲೂ ಬಂಗಾರ ಗೆದ್ದಿದ್ದರು. ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ. ಅವರಿಗೆ ಮಹೀಂದ್ರಾ&ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್​ ಮಹೀಂದ್ರಾ ಅವರ ಜನಪ್ರಿಯ ಎಸ್​ಯುವಿ ಥಾರ್ (Mahindra Thar) ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅದರ ಜತೆ ಜರೀನ್​ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟಿದ್ದಾರೆ.

ಚಾಂಪಿಯನ್​ಷಿಪ್​ ಗೆದ್ದಿರುವ ನಿಖತ್​ ಅವರು 82,27,985 ರೂಪಾಯಿ ಬಹುಮಾನ ಕೂಡ ಗೆದ್ದಿದ್ದಾರೆ. ಬಹುಮಾನ ಸಿಕ್ಕ ತಕ್ಷಣ ಅವರು ಆ ಹಣದಲ್ಲಿ ಮರ್ಸಿಡಿಸ್​ ಬೆಂಜ್​ ಕಾರೊಂದನ್ನು ಖರೀದಿ ಮಾಡುವ ಯೋಜನೆ ರೂಪಿಸಿಕೊಂಡಿದ್ದರಂತೆ. ಆದರೆ, ಮಹೀಂದ್ರಾ ಥಾರ್​ ಸಿಕ್ಕಿದ ತಕ್ಷಣ ಅವರು ಮರ್ಸಿಡಿಸ್​ ಖರೀದಿ ಮಾಡುವ ತಮ್ಮ ಯೋಜನೆಯನ್ನು ಬದಲಿಸಿದ್ದಾರೆ. ಸಿಕ್ಕಿರುವ ಹಣದಲ್ಲಿ ತಮ್ಮ ಪೋಷಕರನ್ನು ಉಮ್ರಾ ಧಾರ್ಮಿಕ ಯಾತ್ರೆಗೆ ಕಳುಹಿಸಲು ಮುಂದಾಗಿದ್ದಾರೆ.

ಮಹೀಂದ್ರಾ ಕಂಪನಿಯು ಕ್ರೀಡಾ ಸಾಧಕರಿಗೆ ತನ್ನ ಕಾರುಗಳನ್ನು ಉಡುಗೊರೆಯಾಗಿ ನೀಡುವುದು ಇದೇ ಮೊದಲಲ್ಲ. ಈ ಹಿಂದೆ ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಅವರಿಗೂ ಥಾರ್ ನೀಡಿದ್ದರು. ಎಕ್ಸ್​ಯುವಿ 700 ಕಾರನ್ನು ಕೂಡ ಪ್ಯಾರಾ ಜಾವೆಲಿನ್​ ಎಸೆತಗಾರ ಸುಮಿತ್ ಅಂಟಿಲ್​ಗೆ ಕೊಟ್ಟಿದ್ದರು.

ಮಿಂಚಿದ ಜರೀನ್​

ಭಾನುವಾರ ಇಲ್ಲಿ ನಡೆದ 50 ಕೆಜಿ ವಿಭಾಗದ ಫೈನಲ್​ ಕಾದಾಟದಲ್ಲಿ ನಿಖತ್ ಜರೀನ್​ ಅವರು ವಿಯೆಟ್ನಾಂನ ಗುಯೆನ್‌ ಥಿ ಟಾಮ್‌(Nguyen Thi Tam) ಸವಾಲನ್ನು ಮಟ್ಟಿನಿಲ್ಲುವಲ್ಲಿ ಯಶಸ್ಸು ಸಾಧಿಸಿದರು. ಬಲಿಷ್ಠ ಪಂಚ್​ಗಳ ಮೂಲಕ ಮೆರೆದಾಡಿದ ನಿಖತ್ ಜರೀನ್ 5-0 ಅಂತರದ ಗೆಲುವು ಸಾಧಿಸಿದರು. ಅವರ ಸತತ ಪಂಚ್​ಗಳಿಗೆ ಬೆದರಿದ ಎದುರಾಳಿ ಗುಯೆನ್‌ ಥಿ ಟಾಮ್‌ ಒಂದೂ ಬೌಟ್​ನಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ಸು ಕಾಣಲಿಲ್ಲ.

ಇದನ್ನೂ ಓದಿ Women’s Boxing: ಚಿನ್ನಕ್ಕೆ ಸಿಹಿ ಮುತ್ತು ನೀಡಿದ ಸ್ವೀಟಿ ಬೂರಾ

ಒಟ್ಟಾರೆ ಭಾರತಕ್ಕೆ ಈ ಟೂರ್ನಿಯಲ್ಲಿ ಸಿಕ್ಕ ಮೂರನೇ ಚಿನ್ನದ ಪದಕ ಇದಾಗಿದೆ. ಶನಿವಾರ ನಡೆದ 48 ಕೆಜಿ ವಿಭಾಗದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತೆ ನೀತು ಗಂಗಾಸ್​ ಅವರು ಮಂಗೋಲಿಯಾದ ಲುತ್ಸಾಯಿಖಾನ್‌ ಅಲ್ಟಂಟ್‌ಸೆಟ್‌ಸೆಗ್‌ ವಿರುದ್ಧ ಚಿನ್ನ ಗೆದ್ದು ಭಾರತಕ್ಕೆ ಮೊದಲ ಪದಕದ ಖಾತೆ ತೆರೆದಿದ್ದರು. ಇದರ ಬೆನ್ನಲ್ಲೇ 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಚೀನಾದ ವಾಂಗ್‌ ಲೀನಾ ಅವರನ್ನು ಮಣಿಸಿದ್ದರು.

Continue Reading

ಆಟೋಮೊಬೈಲ್

Renault Kwid : ಈ ಕಾರುಗಳು ಏಪ್ರಿಲ್​ 1ರಿಂದ ಭಾರತದ ಮಾರುಕಟ್ಟೆಯಲ್ಲಿ ಇರುವುದಿಲ್ಲ

ಬಿಎಸ್​6 ಮಾನದಂಡಗಳು ಕಠಿಣಗೊಂಡಿರುವ ಕಾರಣ ಕೆಲವೊಂದು ಕಾರುಗಳ ಉತ್ಪಾದನೆ ನಿಲ್ಲಲಿದೆ.

VISTARANEWS.COM


on

These cars will not be available in the Indian market from April 1
Koo

ಮುಂಬಯಿ: ಭಾರತ ಸರಕಾರ ವಾಹನಗಳು ಪಾಲಿಸಬೇಕಾದ ಪರಿಸರ ಮಾಲಿನ್ಯ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿವೆ. ಬಿಎಸ್​6 ಎರಡನೇಹಂತದ ಮಾನದಂಡದ ಮೂಲಕ ವಾಹನಗಳು ಉಗುಳುವ ಹೊಗೆಯ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕಾಗಿ ಭಾರತದ ಕಾರುಗಳ ಉತ್ಪಾದಕರು ಎಂಜಿನ್​ನಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿದ್ದಾರೆ. ಆದಾಗ್ಯೂ ಕೆಲವೊಂದು ಮಾಡೆಲ್​ಗಳನ್ನು ಹೊಸ ಮಾನದಂಡಕ್ಕೆ ಪೂರಕವಾಗಿ ಅಪ್​ಗ್ರೇಡ್​ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಇಂಥ ಕಾರುಗಳು ಏಪ್ರಿಲ್​ 1ರಿಂದ ಭಾರತದ ಮಾರುಕಟ್ಟೆಯಿಂದ ಕಣ್ಮರೆಯಾಗಲಿವೆ. ಅಂಥ ಕೆಲವು ಕಾರುಗಳ ವಿವರ ಇಲ್ಲಿದೆ.

ಟಾಟಾ ಆಲ್ಟ್ರೊಜ್​ (ಡೀಸೆಲ್​) – Tata Alatroz

ಟಾಟಾ ಮೋಟಾರ್ಸ್​ನ ಆಲ್ಟ್ರೊಜ್​ ಪ್ರೀಮಿಯಮ್​ ಹ್ಯಾಚ್​ಬ್ಯಾಕ್​. ಆದರೆ, ಇದರ 1497 ಸಿಸಿಯ ಡೀಸೆಲ್​ ಎಂಜಿನ್​ ಬಿಎಸ್​6 ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಏಪ್ರಿಲ್​ ಒಂದರಿಂದ ಮಾರುಕಟ್ಟೆಗೆ ಇಳಿಯುವ ಸಾಧ್ಯತೆಗಳು ಇಲ್ಲ. ಈ ಕಾರಿನ ಎಂಜಿನ್​ 88.77 ಬಿಎಚ್​​ಪಿ ಪವರ್​ ಹಾಗೂ 200 ಎನ್​ಎಮ್​ ಟಾರ್ಕ್​ ಬಿಡಗಡೆ ಮಾಡುತ್ತಿತ್ತು.

ರಿನೋ ಕ್ವಿಡ್​ – Renault Kwid

ರಿನೋ ಕಂಪನಿ ತನ್ನೆಲ್ಲ ಕಾರುಗಳನ್ನು ಬಿಎಸ್​6 ಎರಡನೇ ಹಂತದ ಮಾನದಂಡಗಳಿಗೆ ಪೂರಕವಾಗಿ ಮೊದಲಾಗಿ ಅಪ್​ಗ್ರೇಡ್​ ಮಾಡಿದೆ. ಆದರೆ, ರಿನೋ ಕ್ವಿಡ್​ ಕುರಿತು ಮಾಹಿತಿ ಇಲ್ಲ. ಕ್ವಿಡ್​ನಲ್ಲಿ 1 ಲೀಟರ್​ನ 3 ಸಿಲಿಂಡರ್​ ಎಂಜಿನ್​ ಇದ್ದು, ಇದು 68 ಬಿಎಚ್​ಪಿ ಪವರ್​ ಹಾಗೂ 91 ಎನ್​ಎಮ್ ಟಾರ್ಕ್​ ಬಿಡುಗಡೆ ಮಾಡುತ್ತದೆ. ಈ ಕಾರು ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.

ಹೋಂಡಾ ಅಮೇಜ್​ (ಡೀಸೆಲ್​)- Honda Amaze

ಹೋಂಡಾ ಕಂಪನಿ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಅಮೇಜ್​ ಕಾರಿನ ಡೀಸೆಲ್​ ಮಾಡೆಲ್​ ತೆಗೆದು ಹಾಕಿದೆ. ಕಂಪನಿ ಪ್ರಕಾರ ಅದರ 1.5 ಲೀಟರ್​ ಡೀಸೆಲ್​ ಎಂಜಿನ್​ ಬಿಎಸ್​6 ಮಾನದಂಡಗಳನ್ನು ಪೂರೈಸಲು ಪೂರಕವಾಗಿಲ್ಲ. ಅದೇ ರೀತಿ ಡೀಸೆಲ್​ ವೇರಿಯೆಂಟ್​ಗೆ ಡಿಮ್ಯಾಂಡ್​ ಕೂಡ ಕಡಿಮೆಯಾಗಿದೆ ಎಂದು ಹೇಳಿದೆ. ಹೀಗಾಗಿ ಈ ಮಾಡೆಲ್​ ಏಪ್ರಿಲ್​ 1ರಿಂದ ಇರುವುದಿಲ್ಲ.

ಹೋಂಡಾ ಡಬ್ಲ್ಯುಆರ್​ವಿ- Honda WRV

ಹೋಂಡಾ ಕಂಪನಿಯು ತನ್ನ ಕ್ರಾಸ್​ ಓವರ್ ಹ್ಯಾಚ್​ಬ್ಯಾಕ್​ ಡಬ್ಲ್ಯುಆರ್​ವಿ ಉತ್ಪಾದನೆ ಕೂಡ ನಿಲ್ಲಿಸಲಿದೆ. ಇದು 1.2 ಲೀಟರ್​ನ ಪೆಟ್ರೋಲ್​ ಹಾಗೂ 1.5 ಲೀಟರ್​ನ ಡೀಸೆಲ್​ ಎಂಜಿನ್​ ಹೊಂದಿತ್ತು. ಈ ಕಾರು ಇನ್ನು ಮುಂದೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.

ಹೋಂಡಾ ಜಾಜ್​- Honda Jazz

ಹೋಂಡಾ ಜಾಜ್​ ಕಾರು ಕೂಡ ಏಪ್ರಿಲ್​ 2023ರಿಂದ ಸಿಗುವುದಿಲ್ಲ. ಇದು 1.2 ಲೀಟರ್​ ಐವಿಟೆಕ್​ ಪೆಟ್ರೋಲ್​ ಎಂಜಿನ್​ ಹೊಂದಿದೆ. ಈ ಕಾರು 88.7 ಬಿಎಚ್​ಪಿ ಪವರ್​ ಬಿಡುಗಡೆ ಮಾಡುತ್ತದೆ.

ಮಹೀಂದ್ರಾ ಮೊರಾಜೊ- Mahindra Marazzo

ಮಹೀಂದ್ರಾ ಕಂಪನಿಯು ತನ್ನ ಮೊರೊಜಾ ಎಮ್​ಪಿವಿ ಕಾರನ್ನು ಭಾರತದ ಮಾರುಕಟ್ಟೆಯಲ್ಲಿ ಏಪ್ರಿಲ್​ 2023ರಿಂದ ಮಾರುವ ಸಾಧ್ಯತೆಗಳಿಲ್ಲ. ಈ ಕಾರು 1.5 ಲೀಟರ್​ನ ಡೀಸೆಲ್​ ಎಂಜಿನ್​ ಹೊಂದಿದ್ದು 121 ಬಿಎಚ್​​ಪಿ ಪವರ್​ ಹಾಗೂ 300 ಎನ್​ಎಮ್​ ಟಾರ್ಕ್ ಬಿಡುಗಡೆ ಮಾಡುತ್ತದೆ.

Continue Reading
Advertisement
Two riders killed on the spot after bike collides with truck
ಕರ್ನಾಟಕ2 mins ago

Bengaluru Murder Case: ಬೆಂಗಳೂರಲ್ಲಿ ನೇಪಾಳಿ ಯುವಕನ ಕೊಲೆಗೆ ಕಾರಣವಾಯ್ತು ಗಾಂಜಾ ನಶೆ; ಹಂತಕರ ಸೆರೆ

Suicide Case updates 21 year old woman commits suicide by hanging herself
ಕರ್ನಾಟಕ7 mins ago

Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ

IPL 2023: IPL fan park after three years; Opportunity in Karnataka too
ಕ್ರಿಕೆಟ್18 mins ago

IPL 2023: ಮೂರು ವರ್ಷಗಳ ಬಳಿಕ ಐಪಿಎಲ್​ ಫ್ಯಾನ್​ ಪಾರ್ಕ್​; ಕರ್ನಾಟಕದಲ್ಲಿಯೂ ಇರಲಿದೆ ಜೋಶ್​

Mallikarjun khuba joins JDS
ಕರ್ನಾಟಕ21 mins ago

JDS Karnataka: ಬಿಜೆಪಿಯಿಂದ ಜೆಡಿಎಸ್‌ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

Navjot Sidhu to be released from Jail
ದೇಶ27 mins ago

ಏ.1ರಂದು ಜೈಲಿಂದ ಬಿಡುಗಡೆಯಾಗಲಿದ್ದಾರೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು; ಪತ್ನಿ ಟ್ವೀಟ್ ಬೆನ್ನಲ್ಲೇ ಸಿಧು ಟ್ವೀಟ್​

Release Rs 17.42 crore dues to MySugar factory says Dinesh Gooligowda
ಕರ್ನಾಟಕ27 mins ago

MySugar Factory: ಮೈಶುಗರ್ ಕಾರ್ಖಾನೆಗೆ ಬಾಕಿ ಇರುವ 17.42 ಕೋಟಿ ರೂ. ಬಿಡುಗಡೆ ಮಾಡಿ: ದಿನೇಶ್‌ ಗೂಳಿಗೌಡ

Modi With Kharge
ಅಂಕಣ32 mins ago

ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ಆರೋಗ್ಯ33 mins ago

New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್!‌ ಭಾರತದಲ್ಲೇ ಮೊದಲ ಕೇಸ್‌!

ವೈರಲ್ ನ್ಯೂಸ್36 mins ago

Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್‌ ಆಗ್ತಿದೆ ಈತನ ಕೆಲಸ

Boys death
ಕರ್ನಾಟಕ42 mins ago

Mysterious death : ನಿರ್ಜನ ಪ್ರದೇಶದಲ್ಲಿ 8 ವರ್ಷದ ಬಾಲಕನ ಶವ ಪತ್ತೆ; ದುಷ್ಕರ್ಮಿಗಳು ಕೊಲೆ ಮಾಡಿ ಎಸೆದ ಶಂಕೆ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Sphoorti Salu
ಸುವಚನ11 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ3 hours ago

SSLC Exam 2023: ಹಾಲ್ ಟಿಕೆಟ್ ಕೊಡದೆ ಕೈ ಎತ್ತಿದ ಶಾಲೆಗಳು; ವಿಸ್ತಾರ ಎಂಟ್ರಿಯಿಂದ ಪರೀಕ್ಷೆ ಬರೆದ ಮಕ್ಕಳು

ಕರ್ನಾಟಕ21 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ1 day ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ4 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

ಟ್ರೆಂಡಿಂಗ್‌

error: Content is protected !!