ನವ ದೆಹಲಿ: ಜಪಾನ್ ಮೂಲದ ಆಟೋಮೊಬೈಲ್ ಕಂಪನಿ ನಿಸ್ಸಾನ್ ಮೋಟಾರ್ಸ್ ಭಾರತದಲ್ಲಿ ಏಳು ಸೀಟ್ ಸಾಮರ್ಥ್ಯದ ಎಂಪಿವಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ರಿನೊ ಕಂಪನಿ ಎಂಪಿವಿ ಟ್ರೈಬರ್ (Renault Triber) ಫ್ಲಾಟ್ಫಾರ್ಮ್ ಅನ್ನು ಆಧರಿಸಿರುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಫ್ರಾನ್ಸ್ ಮೂಲಕ ರಿನೋ ಹಾಗೂ ನಿಸ್ಸಾನ್ ನಡುವಿನ ಭಾರತದ ಮಾರುಕಟ್ಟೆ ಸಹಭಾಗಿತ್ವ ಮುಂದುವರಿಯಲಿದೆ.
ರಿನೊ ಕಂಪನಿಯ ಟ್ರೈಬರ್ ಕಡಿಮೆ ಬೆಲೆಗೆ ದೊರೆಯುವ ಎಮ್ಪಿವಿ. ನಿಸ್ಸಾನ್ ಕಂಪನಿಯ ಎಂಪಿವಿ ಇನ್ನೂ ಕಡಿಮೆ ಬೆಲೆಗೆ ದೊರೆಯಲಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಎಸ್ಯುವಿ ಮಾರುಕಟ್ಟೆ ವಿಸ್ತರಿಸುತ್ತಿರುವ ಕಾರಣ ರಿನೊ ಕಂಪನಿ ತನ್ನ ಡಸ್ಟರ್ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅದು 5 ಮತ್ತು 7 ಸೀಟರ್ ಸಾಮರ್ಥ್ಯದೊಂದಿಗೆ ಭಾರತದಲ್ಲಿ ರಸ್ತೆಗಳಿಯಲಿದೆ. ಅದೇ ಫ್ಲಾಟ್ಫಾರ್ಮ್ ಅನ್ನು ನಿಸ್ಸಾನ್ ಕೂಡ ಪಡೆದುಕೊಳ್ಳಲಿದೆ.
ರಿನೋ ಮತ್ತು ನಿಸ್ಸಾನ್ ಕಂಪನಿ ಜತೆಯಾಗಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರನ್ನು ರಸ್ತೆಗೆ ಇಳಿಸುವುದಕ್ಕೆ ಯೋಜನೆ ರೂಪಿಸಿಕೊಂಡಿದೆ. ಮೂಲಗಳ ಪ್ರಕಾರ ರಿನೋ ಕ್ವಿಡ್ ಎಲೆಕ್ಟ್ರಿಕ್ ಮಾರುಕಟ್ಟೆಗೆ ಇಳಿಯಲಿವೆ. ಕ್ವಿಡ್-ಇ ಟೆಕ್ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿದೆ.
ನಿಸ್ಸಾನ್ ಕಂಪನಿ ಭಾರತದಲ್ಲಿ ಸದ್ಯ ಎರಡು ಕಾರುಗಳನ್ನು ಹೊಂದಿದೆ. ಒಂದು ಕಿಕ್ಸ್ ಮತ್ತು ಮತ್ತೊಂದು ಮ್ಯಾಗ್ನೈಟ್. ಮ್ಯಾಗ್ನೈಟ್ ಕಾರು ರಿನೊದ ಟ್ರೈಬರ್ನ ಎಲ್ಲ ಲಕ್ಷಣಗಳನ್ನು ಹೊಂದಿವೆ.
ಇದನ್ನೂ ಓದಿ : Top 10 cars sold in January : 2023ರ ವರ್ಷಾರಂಭದಲ್ಲಿ ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ