Renault Triber : ಏಳು ಸೀಟಿನ ಎಂಪಿವಿ ಬಿಡುಗಡೆ ಮಾಡಲು ನಿಸ್ಸಾನ್ ತಯಾರಿ - Vistara News

ಆಟೋಮೊಬೈಲ್

Renault Triber : ಏಳು ಸೀಟಿನ ಎಂಪಿವಿ ಬಿಡುಗಡೆ ಮಾಡಲು ನಿಸ್ಸಾನ್ ತಯಾರಿ

ರಿನೋ ಕಂಪನಿಯ ಟ್ರೈಬರ್ (Renault Triber) ಮಾದರಿಯದ್ದೇ ಎಂಪಿವಿ ಕಾರನ್ನು ಭಾರತದ ಮಾರುಕಟ್ಟೆಗೆ ಇಳಿಸಲು ನಿಸ್ಸಾನ್​ ಕಂಪನಿ ಯೋಜನೆ ರೂಪಿಸಿಕೊಂಡಿದೆ.

VISTARANEWS.COM


on

Nissan motors
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಜಪಾನ್​ ಮೂಲದ ಆಟೋಮೊಬೈಲ್​ ಕಂಪನಿ ನಿಸ್ಸಾನ್​ ಮೋಟಾರ್ಸ್​ ಭಾರತದಲ್ಲಿ ಏಳು ಸೀಟ್​ ಸಾಮರ್ಥ್ಯದ ಎಂಪಿವಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ರಿನೊ ಕಂಪನಿ ಎಂಪಿವಿ ಟ್ರೈಬರ್​ (Renault Triber) ಫ್ಲಾಟ್​ಫಾರ್ಮ್​ ಅನ್ನು ಆಧರಿಸಿರುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಫ್ರಾನ್ಸ್​ ಮೂಲಕ ರಿನೋ ಹಾಗೂ ನಿಸ್ಸಾನ್​ ನಡುವಿನ ಭಾರತದ ಮಾರುಕಟ್ಟೆ ಸಹಭಾಗಿತ್ವ ಮುಂದುವರಿಯಲಿದೆ.

ರಿನೊ ಕಂಪನಿಯ ಟ್ರೈಬರ್​ ಕಡಿಮೆ ಬೆಲೆಗೆ ದೊರೆಯುವ ಎಮ್​ಪಿವಿ. ನಿಸ್ಸಾನ್​ ಕಂಪನಿಯ ಎಂಪಿವಿ ಇನ್ನೂ ಕಡಿಮೆ ಬೆಲೆಗೆ ದೊರೆಯಲಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಎಸ್​ಯುವಿ ಮಾರುಕಟ್ಟೆ ವಿಸ್ತರಿಸುತ್ತಿರುವ ಕಾರಣ ರಿನೊ ಕಂಪನಿ ತನ್ನ ಡಸ್ಟರ್​ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅದು 5 ಮತ್ತು 7 ಸೀಟರ್​ ಸಾಮರ್ಥ್ಯದೊಂದಿಗೆ ಭಾರತದಲ್ಲಿ ರಸ್ತೆಗಳಿಯಲಿದೆ. ಅದೇ ಫ್ಲಾಟ್​ಫಾರ್ಮ್​ ಅನ್ನು ನಿಸ್ಸಾನ್​ ಕೂಡ ಪಡೆದುಕೊಳ್ಳಲಿದೆ.

ರಿನೋ ಮತ್ತು ನಿಸ್ಸಾನ್ ಕಂಪನಿ ಜತೆಯಾಗಿ ಭಾರತದಲ್ಲಿ ಎಲೆಕ್ಟ್ರಿಕ್​ ಕಾರನ್ನು ರಸ್ತೆಗೆ ಇಳಿಸುವುದಕ್ಕೆ ಯೋಜನೆ ರೂಪಿಸಿಕೊಂಡಿದೆ. ಮೂಲಗಳ ಪ್ರಕಾರ ರಿನೋ ಕ್ವಿಡ್​ ಎಲೆಕ್ಟ್ರಿಕ್​ ಮಾರುಕಟ್ಟೆಗೆ ಇಳಿಯಲಿವೆ. ಕ್ವಿಡ್​-ಇ ಟೆಕ್​ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿದೆ.

ನಿಸ್ಸಾನ್ ಕಂಪನಿ ಭಾರತದಲ್ಲಿ ಸದ್ಯ ಎರಡು ಕಾರುಗಳನ್ನು ಹೊಂದಿದೆ. ಒಂದು ಕಿಕ್ಸ್​ ಮತ್ತು ಮತ್ತೊಂದು ಮ್ಯಾಗ್ನೈಟ್​. ಮ್ಯಾಗ್ನೈಟ್​ ಕಾರು ರಿನೊದ ಟ್ರೈಬರ್​ನ ಎಲ್ಲ ಲಕ್ಷಣಗಳನ್ನು ಹೊಂದಿವೆ.

ಇದನ್ನೂ ಓದಿ : Top 10 cars sold in January : 2023ರ ವರ್ಷಾರಂಭದಲ್ಲಿ ಮಾರಾಟವಾದ ಟಾಪ್​ 10 ಕಾರುಗಳ ಪಟ್ಟಿ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

Suzuki India: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ ಗ್ರಾಹಕರು ಈ ಸುದ್ದಿ ಓದಲೇಬೇಕು. ಕಂಪನಿ ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ ಎನ್ನುವುದನ್ನು ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ.

VISTARANEWS.COM


on

Suzuki India
Koo

ನವದೆಹಲಿ: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ (Suzuki India) ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

2022ರ ಏಪ್ರಿಲ್ 30 ಮತ್ತು 2022ರ ಡಿಸೆಂಬರ್ 3ರ ನಡುವೆ ತಯಾರಿಸಲಾದ, ಬಹು ಬೇಡಿಕೆಯ ಆಕ್ಸೆಸ್ 125, ಅವೆನಿಸ್ 125 ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ 125 (Access 125, Avenis 125, and Burgman Street 125) ಅನ್ನು ಹಿಂಪಡೆಯಲು ಕಂಪನಿ ಮುಂದಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಬೈಕ್‌ಗಳ ಪೈಕಿ ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ (V-Strom 800 DE) ಮಾಡೆಲ್‌ನಲ್ಲಿ ಕೂಡ ಇದೇ ಸಮಸ್ಯೆ ಕಂಡು ಬಂದಿದೆ. ಜತೆಗೆ ಹಿಂದಿನ ಟೈರ್‌ ವಿಚಾರದಲ್ಲಿ ಸಮಸ್ಯೆ ಇರುವ ಬಗ್ಗೆಯೂ ಕಂಪನಿ ಗಮನಿಸಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಉಂಟು ಮಾಡಬಹುದು ಈ ಕಾರಣಕ್ಕೆ ವಿ-ಸ್ಟ್ರೋಮ್ 800 ಡಿಇ ಅನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಹೀಗೆ ಪರಿಶೀಲಿಸಿ

ಒಂದುವೇಳೆ ನೀವು ಖರೀದಿಸಿದ ವಾಹನ ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿದ್ದು ಅದನ್ನು ಹೇಗೆ ಕಂಡುಕೊಳ್ಳುವುದು ಎನ್ನುವ ಚಿಂತೆಯಲ್ಲಿದ್ದೀರಾ? ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನದ ವಿಐಎನ್‌ (VIN) ನಮೂದಿಸಿ ನಿಮ್ಮ ವಾಹನದಲ್ಲಿಯೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ವಾಹನವನ್ನು ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.suzukimotorcycle.co.in/service-campaign)

ಅಪಾರ ಬೇಡಿಕೆ

ಸುಜುಕಿ ಇಂಡಿಯಾ ಸದ್ಯ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ಭಾರತದ ಗ್ರಾಹಕರ ಮನಸ್ಸು ಗೆದ್ದಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದ್ದು ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದೆ. ಈ ಪಟ್ಟಿಯಲ್ಲಿ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್, ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್‌ಗೆ ಅಪಾರ ಬೇಡಿಕೆ ಇದೆ.

ಕಂಪನಿ ಹೇಳಿದ್ದೇನು?

ಎಂಜಿನ್ ಸ್ಥಗಿತ, ಸ್ಟಾರ್ಟ್ ಮಾಡುವಾಗ ಕಂಡುಬರುವ ತೊಂದರೆ, ದೋಷಪೂರಿತ ಸ್ಪೀಡೋಮೀಟರ್‌ಗಳ ಬಗ್ಗೆ ಗ್ರಹಾಕರು ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸುಜುಕಿ ಸೇವಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ದುರಸ್ತಿ ಪಡಿಸಬೇಕು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Continue Reading

ಆಟೋಮೊಬೈಲ್

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

Nissan SUV X-TRAIL : ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

VISTARANEWS.COM


on

Nissan SUV X-TRAIL
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಇಂದು ಹೊಚ್ಚ ಹೊಸ ಮೇಡ್ ಇನ್ ಜಪಾನ್ 4 ಜನರೇಷನ್ ಪ್ರೀಮಿಯಂ ಅರ್ಬನ್‌ ಎಸ್‌ಯುವಿ ನಿಸ್ಸಾನ್‌ ಎಕ್ಸ್-ಟ್ರಯಲ್ (Nissan SUV X-TRAIL) ಅನ್ನು ಬಿಡುಗಡೆ ಮಾಡಿದೆ. ಇದು 7 ಸೀಟರ್ ಎಸ್‌ಯುವಿ ಆಗಿದ್ದು, ಜುಲೈ 26ರಿಂದ ರೂ.1 ಲಕ್ಷ ನೀಡಿ ಬುಕ್ ಬುಕ್ ಮಾಡಬಹುದಾಗಿದೆ. ಆಗಸ್ಟ್ ನಲ್ಲಿ ಎಕ್ಸ್ ಟ್ರಯಲ್ ಡೆಲಿವರಿ ಆರಭವಾಗಲಿದೆ.

ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

ನಿಸಾನ್ ತನ್ನ ಜಾಗತಿಕ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವ ಉದ್ದೇಶವನ್ನು ಹೊಂದಿದ್ದು, ಅದರ ಆರಂಭಿಕ ಹೆಜ್ಜೆಯಾಗಿ ಎಕ್ಸ್ ಟ್ರಯಲ್ ಬಿಡುಗಡೆ ಆಗಿದೆ. ಈ ಮೂಲಕ ಕಂಪನಿಯು ತನ್ನ ಸಿಬಿಯು ಬಿಸಿನೆಸ್ ಅನ್ನು ಮರು ಆರಂಭಿಸುವುದಾಗಿ ಘೋಷಿಸಿದೆ.

ಎಂಜಿನ್ ಪವರ್​

ಈ ಮೇಡ್ ಇನ್ ಜಪಾನ್ 4ನೇ ಜನರೇಷನ್ ನ ನಿಸ್ಸಾನ್‌ಎಕ್ಸ್-ಟ್ರಯಲ್ ವಿಶ್ವದ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್-ಟರ್ಬೊ ಎಂಜಿನ್‌ ಅನ್ನು ಹೊಂದಿದೆ. ಇದರ ಅತ್ಯಾಧುನಿಕ ಡಿಎನ್ಎ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅದರಿಂದ ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್-ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಸುಧಾರಿತ ಮೈಲೇಜ್​ ಇತ್ಯಾದಿ ಸೌಕರ್ಯಗಳು ದೊರೆಯಲಿವೆ.

ಎಕ್ಸ್-ಟ್ರಯಲ್ 1.5ಲೀ ಪೆಟ್ರೋಲ್ ವೇರಿಯೇಬಲ್ ಕಂಪ್ರೆಷನ್- ಟರ್ಬೊ ಎಂಜಿನ್ ಹೊಂದಿದೆ. ಇದರ ಮೈಲ್ಡ್ ಹೈಬ್ರಿಡ್ 2ಡಬ್ಲ್ಯೂಡಿ ಎಂಜಿನ್‌ ಜೊತೆಗೆ 3 ಜೆನ್ ಎಕ್ಸ್‌ ಟ್ರಾನಿಕ್ ಸಿವಿಟಿ ಪವರ್‌ಟ್ರೇನ್‌ ಅನ್ನು ಸಂಯೋಜಿಸಲಾಗಿದೆ. ಈ ಎಂಜಿನ್ 163ಪಿಎಸ್ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ಸೀಟ್​​​ಗಳು

ಎಕ್ಸ್-ಟ್ರಯಲ್ ವಿಶಾಲವಾದ ಜಾಗ ಹೊಂದಿದೆ. 7- ಸೀಟರ್ ವಿನ್ಯಾಸದಲ್ಲಿ ಲಭ್ಯವಿರುವ ಈ ಕಾರಿನ 2ನೇ ಮತ್ತು 3 ನೇ ಸಾಲಿನ ಆಸನಗಳಿಗೆ ಸುಲಭವಾಗಿ ಪ್ರವೇಶಿಸಲು/ಅಲ್ಲಿಂದ ಹೊರಹೋಗಲು ವಿಶೇಷವಾದ 85-ಡಿಗ್ರಿ ರೇರ್ ಡೋರ್ ಓಪನಿಂಗ್ ಅನುಕೂಲ ಒದಗಿಸಲಾಗಿದೆ. ಜಪಾನಿ ಶೈಲಿಯ ವಿನ್ಯಾಸ ಹೊಂದಿರುವ ಈ ಕಾರು ಸುಂದರವಾದ ಎಕ್ಸ್ ಟೀರಿಯರ್ ಮತ್ತು ಇಂಟೀರಿಯರ್ ಅನ್ನು ಹೊಂದಿದೆ. ಇ-ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಟ್ವಿನ್ ಕಪ್ ಹೋಲ್ಡರ್‌ಗಳು, ಹಾಗೆಯೇ ಸ್ಮಾರ್ಟ್‌ಫೋನ್‌ಗಳಿಗಾಗಿ 15w ವೈರ್‌ಲೆಸ್ ಚಾರ್ಜ್ ಪ್ಯಾಡ್ ಅನ್ನು ಕಾರು ಒಳಗೊಂಡಿದೆ. ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಆರ್ಮ್​ರೆಸ್ಟ್​ ಇದೆ. ಬೆಲೆಬಾಳುವ ವಸ್ತುಗಳನ್ನು ಇಡಲು ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಸೈಡಿನಲ್ಲಿ ಹಿಂದಿನ ಸೀಟಿನ ಪ್ರಯಾಣಿಕರಿಗೆ ವಸ್ತು ಗಳನ್ನು ಇಡಬಹುದಾದ ಸ್ಥಳಗಳನ್ನು ನೀಡಲಾಗಿದೆ. ಪ್ಯಾನೋರಮಿಕ್ ಸನ್‌ರೂಫ್ ಸೌಕರ್ಯ ಹೊಂದಿದ್ದು, ಇದರ 3ನೇ ಸಾಲಿನ ಸೀಟನ್ನು ಮಡಿಸಿದರೆ ಒಟ್ಟು 585 ಲೀಟರ್‌ಗಳಷ್ಟು ಸಾಮರ್ಥ್ಯದ ಲಗೇಜ್ ಜಾಗ ಸಿಗುತ್ತದೆ. ಎಕ್ಸ್‌ಟ್ರಯಲ್‌ ಹೈ-ಡೆಫಿನಿಷನ್, ಸಂಪೂರ್ಣ ಎಲೆಕ್ಟ್ರಾನಿಕ್ 31.2ಸೆಂಮೀನ ಟಿ ಎಫ್ ಟಿ ಮಲ್ಟಿ-ಇನ್ಫರ್ಮೇಷನ್ ಸ್ಕ್ರೀನ್ ಹೊಂದಿದೆ.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

7 ಏರ್‌ಬ್ಯಾಗ್‌ಗಳು, ಅರೌಂಡ್ ವ್ಯೂ ಮಾನಿಟರ್ (ಎವಿಎಂ) ಜೊತೆಗೆ ಮೂವಿಂಗ್ ಆಬ್ಜೆಕ್ಟ್ ಡಿಟೆಕ್ಷನ್ (ಎಂಓಡಿ), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (ಬಿಎಲ್ಎಸ್ಡಿ(, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ (ಇ ಎಸ್ ಸಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ), ಎಬಿಡಿ ಜೊತೆಗೆ ಎಬಿಎಸ್, ಫ್ರಂಟ್ ಆಂಡ್ ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು 4 ವೀಲ್ ಡಿಸ್ಕ್ ಬ್ರೇಕ್ ಗಳು ಮುಂತಾದ ಹಲವಾರು ಸುರಕ್ಷತಾ ಫೀಚರ್ ಗಳಿವೆ.

ಹೊಸ ಎಕ್ಸ್-ಟ್ರಯಲ್ ನಲ್ಲಿ ಲಭ್ಯವಿರುವ 12ವಿ ಎಎಲ್ಐಎಸ್ (ಸುಧಾರಿತ ಲೀಥಿಯಂ ಐಯಾನ್ ಬ್ಯಾಟರಿ ಸಿಸ್ಟಮ್) ಮೈಲ್ಡ್ ಹೈಬ್ರಿಡ್ ಸಿಸ್ಟಮ್, ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್ ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಕೋಸ್ಟಿಂಗ್ ಸ್ಟಾಪ್ ಫೀಚರ್ ಒದಗಿಸುತ್ತದೆ.

ಎಕ್ಸ್-ಟ್ರಯಲ್ ಷಾಂಪೇನ್ ಸಿಲ್ವರ್, ಪರ್ಲ್ ವೈಟ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ. ಬುಕಿಂಗ್‌ಗಳು ಜುಲೈ 26 ರಂದು ರಾಷ್ಟ್ರಾದ್ಯಂತ ಇರುವ ನಿಸ್ಸಾನ್ ಡೀಲರ್‌ಶಿಪ್‌ಗಳು ಮತ್ತು ನಿಸ್ಸಾನ್‌ನ ವೆಬ್‌ಸೈಟ್ ನಲ್ಲಿ https://book.Nissan.in/ ನಲ್ಲಿ ಪ್ರಾರಂಭವಾಗುತ್ತಿದೆ. ಎಕ್ಸ್-ಟ್ರಯಲ್ ಗಾಗಿ ಬುಕಿಂಗ್ ಮೊತ್ತ ರೂ. 100,000 ಆಗಿದೆ ಮತ್ತು ವಾಹನದ ಡೆಲಿವರಿ 2024ರ ಆಗಸ್ಟ್ ನಲ್ಲಿ ರಿಂದ ಪ್ರಾರಂಭವಾಗುತ್ತದೆ.

ನಿಸ್ಸಾನ್ ಇಂಡಿಯಾ ಆಪರೇಷನ್ಸ್ ಪ್ರೆಸಿಡೆಂಟ್ ಮತ್ತು ಎಎಂಐಇಓ ರೀಜನ್ ಬಿಸಿನೆಸ್ ಟ್ರಾನ್ಸ್‌ ಫಾರ್ಮೇಶನ್ ನ ಡಿವಿಷನಲ್ ವೈಸ್ ಪ್ರೆಸಿಡೆಂಟ್ ಫ್ರಾಂಕ್ ಟೊರೆಸ್, ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಹರ್ಷ ವ್ಯಕ್ತ ಪಡಿಸಿದ್ದಾರೆ.

Continue Reading

ಆಟೋಮೊಬೈಲ್

Tata Curvv : ಎಸ್​ಯುವಿ ವಿಭಾಗದಲ್ಲಿ ವಿಭಿನ್ನ ವಿನ್ಯಾಸದ ಕಾರನ್ನು ಪರಿಚಯಿಸಿದ ಮಾಡಿದ ಟಾಟಾ

Tata Curvv : ಹೊಸ ಕಾಲದ ಎಸ್‌ಯುವಿ ವಿನ್ಯಾಸವನ್ನು ಪ್ರದರ್ಶಿಸುವ ಕರ್ವ್ ನಲ್ಲಿ ಎಸ್‌ಯುವಿಯ ದೃಢತೆ ಮತ್ತು ನೈಜವಾದ ಕೂಪ್ ನ ಸೌಂದರ್ಯ ಮತ್ತು ಸ್ಪೋರ್ಟಿ ಸಿಲೂಯೆಟ್‌ ವಿನ್ಯಾಸವಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಬಿಡುಗಡೆಗೊಳ್ಳಲಿದೆ. ಮೊದಲು ಟಾಟಾ ಕರ್ವ್ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ರಸ್ತೆಗೆ ಇಳಿಯಲಿವೆ.

VISTARANEWS.COM


on

Tata Curvv
Koo

ಬೆಂಗಳೂರು,: ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors) ಸೋಮವಾರ ಎಸ್‌ಯುವಿ ವಿನ್ಯಾಸದಲ್ಲಿ ಹೊಸ ಭಾಷ್ಯ ಬರೆಯಲಿರುವ ಟಾಟಾ ಕರ್ವ್ (Tata Curvv) ಐಸಿಇ ಮತ್ತು ಇವಿಯನ್ನು ಅನಾವರಣಗೊಳಿಸಿದೆ. ಅತ್ಯಾಕರ್ಷಕ ಫಿಲಾಸಫಿ, ರೂಪ ಮತ್ತು ಕಾರ್ಯ ನಿರ್ವಹಣೆ ಹೊಂದಿರುವ ಟಾಟಾ ಕರ್ವ್ ಭಾರತದ ಮೊದಲ ಎಸ್‌ಯುವಿ ಕೂಪ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಹೊಸ ಕಾಲದ ಎಸ್‌ಯುವಿ ವಿನ್ಯಾಸವನ್ನು ಪ್ರದರ್ಶಿಸುವ ಕರ್ವ್ ನಲ್ಲಿ ಎಸ್‌ಯುವಿಯ ದೃಢತೆ ಮತ್ತು ನೈಜವಾದ ಕೂಪ್ ನ ಸೌಂದರ್ಯ ಮತ್ತು ಸ್ಪೋರ್ಟಿ ಸಿಲೂಯೆಟ್‌ ವಿನ್ಯಾಸವಿದೆ. ಆಗಸ್ಟ್ 7ರಂದು ಈ ಹೊಚ್ಚ ಹೊಸ ಟಾಟಾ ಕರ್ವ್ ಬಿಡುಗಡೆ ಆಗಲಿದ್ದು, ಟಾಟಾ ಮೋಟಾರ್ಸ್‌ನ ಮಲ್ಟಿ- ಪವರ್‌ಟ್ರೇನ್ ತಂತ್ರಕ್ಕೆ ಅನುಗುಣವಾಗಿ ಬಿಡುಗಡೆಗೊಳ್ಳಲಿದೆ. ಮೊದಲು ಟಾಟಾ ಕರ್ವ್ ಇವಿ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಬೆನ್ನಲ್ಲಿ ಶೀಘ್ರದಲ್ಲಿಯೇ ಐಸಿಐ ಆವೃತ್ತಿಗಳು ರಸ್ತೆಗೆ ಇಳಿಯಲಿವೆ.

ಟಾಟಾ ಕರ್ವ್ ಅನಾವರಣದ ಕುರಿತು ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶೈಲೇಶ್ ಚಂದ್ರ, “ಟಾಟಾ ಮೋಟಾರ್ಸ್ ಭಾರತೀಯ ಎಸ್‌ಯುವಿ ಕ್ಷೇತ್ರದ ಪರಿವರ್ತಕ ಸಂಸ್ಥೆಯಾಗಿದೆ. ನಾವು ಸದಾ ಆಕರ್ಷಕ ವಿನ್ಯಾಸ, ಅತ್ಯುತ್ತಮ ರೋಡ್ ಪ್ರೆಸೆನ್ಸ್ ಮತ್ತು ಅತ್ಯಪೂರ್ವ ಕಾರ್ಯಕ್ಷಮತೆ ಹೊಂದಿರುವ ಕೆಟಗರಿಯಲ್ಲೇ ಕಾರುಗಳನ್ನು ನೀಡುತ್ತಾ ಬಂದಿದ್ದೇವೆ. ಸಿಯೆರಾ, ಸಫಾರಿ, ನೆಕ್ಸಾನ್, ಪಂಚ್ ಮತ್ತು ಹ್ಯಾರಿಯರ್ ಮಾರುಕಟ್ಟೆಯಲ್ಲಿಯೇ ವಿಶೇಷ ವಿನ್ಯಾಸದ ಎಸ್‌ಯುವಿಗಳನ್ನು ಟಾಟಾ ತನ್ನ ಪೋರ್ಟ್​ಪೋಲಿಯೊದಲ್ಲಿ ಹೊಂದಿರುವುದೇ ಅದಕ್ಕೆ ಸಾಕ್ಷಿ. ಈ ಪರಂಪರೆಯನ್ನು ಮುಂದುವರಿಸಲು ಹಾಗೂ ಬಲಪಡಿಸಲು ನಾವು ಮಧ್ಯಮ ಎಸ್‌ಯುವಿ ಮಿಡ್​ವೇರಿಯೆಂಟ್​​ನಲ್ಲಿ ಮೊದಲ ಎಸ್‌ಯುವಿ ಕೂಪ್ ಆಗಿರುವ ಟಾಟಾ ಕರ್ವ್ ಅನ್ನು ಅನಾವರಣಗೊಳಿಸುತ್ತಿದ್ದೇವೆ. ಕೂಪ್ ದೇಹ ರಚನೆಯುಳ್ಳ ಇದರ ವಿಶಿಷ್ಟ ವಿನ್ಯಾಸವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲಿದೆ ಎಂದು ನುಡಿದರು.

ಮುಂದುವರಿ ಅವರು ಟಾಟಾ ಕರ್ವ್ ಮಲ್ಟಿ ಪವರ್ ಟ್ರೇನ್ ಗಳಲ್ಲಿ ಲಭ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಗಳಲ್ಲಿ ದೊರೆಯಲಿದೆ. ಕರ್ವ್ ಮೂಲಕ ನಾವು ಮಧ್ಯಮ ಎಸ್‌ಯುವಿ ಬಯಸುವ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದ್ದೇವೆ ಎಂದು ಹೇಳಿದರು.

ವಿಶೇಷತೆ ಏನು?

ಟಾಟಾ ಕರ್ವ್ ಆಕರ್ಷಕ ವಿನ್ಯಾಸ, ಉತ್ತಮ ಪ್ರಾಯೋಗಿಕತೆ ಮತ್ತು ಉಲ್ಲಾಸದಾಯಕ ಕಾರ್ಯಕ್ಷಮತೆ ಪರಿಪೂರ್ಣ ಮಿಶ್ರಣವಾಗಿದೆ. ಕರ್ವ್ ಎಸ್‌ಯುವಿ ಕೂಪ್ , ಮಿಡ್- ಎಸ್‌ಯುವಿ ಮಾರುಕಟ್ಟೆಯ ಸಾಂಪ್ರದಾಯಿಕ ಬಾಕ್ಸ್ ವಿನ್ಯಾಸಕ್ಕೆ ವ್ಯತಿರಿಕ್ತವಾಗಿದೆ. ಇದು ದೃಢವಾದ ಏರೋ ಡೈನಾಮಿಕ್ ಥೀಮ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಕರ್ವ್ ನ ಇಳಿಜಾರಾದ ಮೇಲ್ಛಾವಣಿಯು ವಿಂಡ್ ರೆಸಿಸ್ಟೆನ್ಸ್ ಗುಣ ಹೊಂದಿದೆ. ಅದರ ದೊಡ್ಡ ಚಕ್ರಗಳು, ದೃಢವಾದ ಶೈಲಿ, ಡಿಪಾರ್ಚರ್ ಆಂಗಲ್ ಮತ್ತು ಜಾಸ್ತಿ ಇರುವ ಗ್ರೌಂಡ್ ಕ್ಲಿಯರೆನ್ಸ್ ಟಾಟಾ ಕರ್ವ್ ಗೆ ಬ್ಯಾಲೆನ್ಸ್ ಡ್ ಲುಕ್ ಹೊಂದಿದೆ. ಈ ಎಸ್‌ಯುವಿ ಕೂಪ್ ಎರಡು ಹೊಸ ಬಣ್ಣದ ಶೇಡ್​ನಲ್ಲಿ ಬಿಡುಗಡೆ ಆಗಲಿದೆ. ಆ ಬಣ್ಣಗಳು ಹೀಗಿವೆ: ಕರ್ವ್.ಇವಿಯಲ್ಲಿ ವರ್ಚುವಲ್ ಸನ್‌ರೈಸ್ ಬಣ್ಣ ಮತ್ತು ಕರ್ವ್ ಇಸಿಇಯಲ್ಲಿ ಗೋಲ್ಡ್ ಎಸೆನ್ಸ್ ಬಣ್ಣ.

ಲಾಂಗ್ ಡ್ರೈವ್‌ಗಳಿಗೆ ಹೋಗಲು ಇಷ್ಟಪಡುವ ಭಾರತೀಯ ಕುಟುಂಬಗಳಿಗಾಗಿ ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ಎಸ್‌ಯುವಿ ಕೂಪ್ ವಿನ್ಯಾಸ ಹೊಂದಿರುವ ಟಾಟಾ ಕರ್ವ್ ಆಧುನಿಕ ಮತ್ತು ಅತ್ಯುತ್ತ ಇಂಟೀರಿಯರ್ ಅನ್ನು ಹೊಂದಿದೆ. ವಿಶಾಲವಾದ ಕ್ಯಾಬಿನ್ ಸ್ಪೇಸ್ ಲಭ್ಯವಿದೆ ಮತ್ತು ಎಸ್‌ಯುವಿ ಕೂಪ್ ದೇಹ ರಚನೆ ಇರುವುದರಿಂದ ಸ್ಟೋರೇಜ್ ಗೆ ಜಾಸ್ತಿ ಸ್ಥಳ ಇಲ್ಲ ಎಂದು ಭಾವಿಸಬೇಕಾಗಿಲ್ಲ. ಇದರ ಪ್ಯಾನೋರಾಮಿಕ್ ಗ್ಲಾಸ್ ರೂಫ್ ಕ್ಯಾಬಿನ್‌ಗೆ ನೈಸರ್ಗಿಕ ಬೆಳಕು ಬೀಳಲು ಅನುವು ಮಾಡಿಕೊಡುತ್ತದೆ. ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬೂಟ್ ಸ್ಪೇಸ್ ಅಥವಾ ಸ್ಟೋರೇಜ್ ಜಾಗ ನೀಡಲಾಗಿದೆ.

ಇದನ್ನು ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

ಟಾಟಾ ಕರ್ವ್ ಶಕ್ತಿಯುತ ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್ ಆಯ್ಕೆಗಳಲ್ಲಿ ದೊರೆಯುತ್ತದೆ. ಅವುಗಳ ಜೊತೆಗೆ ಕೆಟಗರಿಯಲ್ಲಿಯೇ ಉತ್ತಮ ಅನ್ನಿಸುವ ಲಾಂಗ್ ಡ್ರೈವಿಂಗ್ ರೇಂಜ್ ಒದಗಿಸುವ ಎಲೆಕ್ಟ್ರಿಕ್ ವೇರಿಯಂಟ್ ಗಳು ಲಭ್ಯವಾಗಲಿದೆ. ಸುಧಾರಿತ ಇನ್ಫೋಟೇನ್ ಮೆಂಟ್, ದೊಡ್ಡ ಸ್ಕ್ರೀನ್ ಗಳು ಮತ್ತು ಕನೆಕ್ಟೆಡ್ ಕಾರ್ ಟೆಕ್ನಾಲನಜಿ ಹೊಂದಿರುವ ಟಾಟಾ ಕರ್ವ್ ಈ ವಿಭಾಗದಲ್ಲಿಯೇ ಹೊಚ್ಚ ಹೊಸತಾಗಿ ಪರಿಚಯಿಸಲಾಗಿರುವ ಹಲವಾರು ಫೀಚರ್ ಗಳನ್ನು ಹೊಂದಿದೆ.

Continue Reading

ಆಟೋಮೊಬೈಲ್

Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

ಯುವಪೀಳಿಗೆಯನ್ನು ಆಕರ್ಷಿಸಲು ಹೊಸ ಮಾದರಿ, ಕ್ಲಾಸಿಕ್ ಮೋಡಿಯೊಂದಿಗೆ ಬಂದಿರುವ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಖರೀದಿ ಮಾಡಲೇಬೇಕು ಎಂದೆನಿಸಲು ಐದು ಪ್ರಮುಖ ಕಾರಣಗಳಿವೆ. ಎನ್‌ಫೀಲ್ಡ್ ನ ಈ ಹೊಸ ಮಾದರಿಯು ರೋಮಾಂಚಕವಾದ ಪ್ರಯಾಣದ ಭರವಸೆಯನ್ನು ಕೊಡುತ್ತದೆ.

VISTARANEWS.COM


on

By

Royal Enfield Guerrilla 450
Koo

ಬೆಂಗಳೂರು: ಹಲವಾರು ದಿನಗಳ ಊಹಾಪೋಹಗಳು, ಸೋಶಿಯಲ್​ ಮೀಡಿಯಾಗಳಲ್ಲಿ ಹರಿ ಬಿಡಲಾಗಿದ್ದ ರೀಲ್ಸ್​ಗಳ ಬಳಿಕ ಅಂತಿಮವಾಗಿ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಬೈಕ್​ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಈ ಬೈಕ್​ ಸಾಕಷ್ಟು ಕುತೂಹಲ ಮೂಡಿಸಿತ್ತು. ಈ ಹೊಸ ಮಾದರಿಯು (new model Royal Enfield) ರೋಮಾಂಚಕ ಪ್ರಯಾಣದ ಭರವಸೆಯನ್ನು ನೀಡುವ ಜತೆಗೆ ಹಲವಾರು ವಿಶೇಷ ಫೀಚರ್​ಗಳನ್ನು ನೀಡಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ವಿನ್ಯಾಸ ಮತ್ತು ನೋಟದಲ್ಲಿ ಸಂಪೂರ್ಣ ಹೊಸತನವನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ಸಬ್-500ಸಿಸಿ ರೋಡ್‌ಸ್ಟರ್ ಆಗಿ ರಾಯಲ್ ಎನ್‌ಫೀಲ್ಡ್ ಮಾರುಕಟ್ಟೆಯಲ್ಲಿ ಸೂಕ್ತವಾದ ಆಯ್ಕೆ ಎಂಬಂತೆ ರಸ್ತೆಗೆ ಇಳಿದಿದೆ.

Royal Enfield Guerrilla 450
Royal Enfield Guerrilla 450


ವಿನ್ಯಾಸ ಹೇಗಿದೆ?

ಸಾಂಪ್ರದಾಯಿಕ ರಾಯಲ್ ಎನ್‌ಫೀಲ್ಡ್ ಮಾದರಿಯ ಬದಲಿಗೆ ಗೆರಿಲ್ಲಾ 450 ಸಂಪೂರ್ಣವಾಗಿ ಹೊಸ ವಿನ್ಯಾಸದೊದಿಗೆ ಬಂದಿದೆ. ಆಕ್ರಮಣಕಾರಿ ಸ್ಟೈಲಿಂಗ್​ನೊಂದಿಗೆ ನಯವಾದ, ಆಧುನಿಕ ನೋಟವನ್ನು ಹೊಂದಿತ್ತು. ವಿಶಿಷ್ಟವಾದ ರೌಂಡ್ ಹೆಡ್‌ಲ್ಯಾಂಪ್, ಅತ್ಯಾಕರ್ಷಕ ಪೆಟ್ರೋಲ್​ ಟ್ಯಾಂಕ್ ಮತ್ತು ಮಿನಿಮಮ್​ ಬಾಡಿವರ್ಕ್ ಒಳಗೊಂಡಿದೆ. ಈ ವಿನ್ಯಾಸವು ಯುವ ಪೀಳಿಗೆಯನ್ನು ಆಕರ್ಷಿಸುವ ಗುರಿ ಹೊಂದಿದೆ.

ಬೆಲೆ ಮತ್ತು ಬಣ್ಣ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಅನಲಾಗ್ 2.39 ಲಕ್ಷ ರೂ., ಡ್ಯಾಶ್ 2.49 ಲಕ್ಷ ರೂ. ಮತ್ತು ಫ್ಲ್ಯಾಶ್ 2.54 ಲಕ್ಷ ರೂ. ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಿದೆ. ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಅದರ ಮೂರು ರೂಪಾಂತರಗಳಲ್ಲಿ ಐದು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಅನಲಾಗ್​ ವೇರಿಯೆಂಟ್​ ಸ್ಮೋಕ್ ಮತ್ತು ಪ್ಲಾಯಾ ಬ್ಲ್ಯಾಕ್‌ನಲ್ಲಿ, ಡ್ಯಾಶ್ ರೂಪಾಂತರವು ಪ್ಲಾಯಾ ಬ್ಲಾಕ್ ಮತ್ತು ಗೋಲ್ಡ್ ಡಿಪ್ ಅನ್ನು ನೀಡುತ್ತದೆ ಮತ್ತು ಫ್ಲ್ಯಾಶ್ ರೂಪಾಂತರವು ಹಳದಿ ರಿಬ್ಬನ್ ಮತ್ತು ಬ್ರಾವಾ ಬ್ಲೂನಲ್ಲಿ ಲಭ್ಯವಿದೆ.

Royal Enfield Guerrilla 450
Royal Enfield Guerrilla 450


ಎಂಜಿನ್ ಮತ್ತು ಯಂತ್ರ

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಹಿಮಾಲಯದಲ್ಲಿ ಇರುವ 452ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಶೆರ್ಪಾ ಎಂಜಿನ್‌ ಹೊಂದಿದೆ. ಈ ಎಂಜಿನ್ 39.5 ಬಿಹೆಚ್ ಪಿ ಮತ್ತು 40ಎನ್ ಪಿ ಟಾರ್ಕ್ ಬಿಡುಗಡೆ ಮಾಡುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್, ನಗರ ಪ್ರಯಾಣ ಮತ್ತು ದೂರದ ಸವಾರಿಗಳಿಗೆ ಸೂಕ್ತವಾಗಿದೆ.

ಬೈಕು ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಮತ್ತು ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ನೀಡಲಾಗಿದೆ. 2,090 ಮಿಮೀ ಉದ್ದ, 833 ಎಂಎಂ ಅಗಲ ಮತ್ತು 1,125 ಎಂಎಂ ಎತ್ತರದ ಬೈಕ್ ಇದು. 1,440 ಎಂಎಂ ವ್ಹೀಲ್‌ಬೇಸ್, 780 ಎಂಎಂ ಸೀಟ್ ಎತ್ತರ, ಹಿಮಾಲಯಕ್ಕಿಂತ 45 ಎಂಎಂ ಕಡಿಮೆ ಮತ್ತು ಗ್ರೌಂಡ್ ಕ್ಲಿಯರೆನ್ಸ್ 169 ಎಂಎಂ ಇದೆ.

ಇದನ್ನೂ ಓದಿ: Bajaj Freedom 125 CNG Bike: ಬಜಾಜ್ ಸಿಎನ್‌ಜಿ ಬೈಕ್ ಬುಕ್‌ ಮಾಡಿದರೆ 3 ತಿಂಗಳು ಕಾಯಬೇಕು!

Royal Enfield Guerrilla 450
Royal Enfield Guerrilla 450


ವೈಶಿಷ್ಟ್ಯಗಳು

ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ರೈಡ್-ಬೈ-ವೈರ್ ಥ್ರೊಟಲ್ ಮತ್ತು ಎರಡು ಆಯ್ಕೆ ಮಾಡಬಹುದಾದ ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಡ್ಯುಯಲ್-ಚಾನೆಲ್ ಎಬಿಎಸ್ ನೊಂದಿಗೆ ಬಂದಿರುವ ಇದು ಜಾರುವಿಕೆಯನ್ನು ತಡೆಯುತ್ತದೆ.

ಟಾಪ್​ ವೇರಿಯೆಂಟ್​ಗಳ ಗೂಗಲ್ ಮ್ಯಾಪ್​, ಮೀಡಿಯಾ ಕಂಟ್ರೋಲ್​, ಮತ್ತು ಬೈಕ್ ಸೆಟ್ಟಿಂಗ್ ವ್ಯವಸ್ಥೇ ಹೊಂದಿದೆ, ನ್ಯಾವಿಗೇಷನ್‌ಗಾಗಿ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟ್​ ಮಾಡಬಹುದಾದ ನಾಲ್ಕು-ಇಂಚಿನ ರೌಂಡ್ ಸ್ಕ್ರೀನ್​ ಇದರಲ್ಲದಿಎ. ಬೇಸ್​ ವೇರಿಯೆಂಟ್​ ಡಿಜಿಟಲ್-ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Continue Reading
Advertisement
Kerala Cyclist Reaches Paris
ಕ್ರೀಡೆ20 mins ago

Kerala Cyclist Reaches Paris: ನೀರಜ್​ ಚೋಪ್ರಾಗೆ ಬೆಂಬಲ ಸೂಚಿಸಲು ಬರೋಬ್ಬರಿ 22 ಸಾವಿರ ಕಿ.ಮೀ ಸೈಕಲ್​ ತುಳಿದು ಪ್ಯಾರಿಸ್​ ತಲುಪಿದ ಕೇರಳದ ಅಭಿಮಾನಿ

Gold Rate Today
ಚಿನ್ನದ ದರ21 mins ago

Gold Rate Today: ಆಭರಣ ಖರೀದಿಗೆ ಗೋಲ್ಡನ್‌ ಟೈಮ್‌; ಮತ್ತೆ ಇಳಿಮುಖವಾದ ಚಿನ್ನದ ದರ

murder case
ತುಮಕೂರು46 mins ago

Murder Case : ಇನ್‌ಸ್ಟಾಗ್ರಾಮ್‌ ಗೆಳೆಯನಿಗಾಗಿ ಗಂಡನನ್ನೇ ಕೊಲೆ ಮಾಡಿಸಿದ ಐನಾತಿ ಹೆಂಡತಿ

ITR Filing
ವಾಣಿಜ್ಯ51 mins ago

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ದಿನಾಂಕ 1 ತಿಂಗಳು ವಿಸ್ತರಣೆಗೆ ಮನವಿ

Brutal Murder
ದೇಶ58 mins ago

Brutal Murder: ಎದೆ, ಗುಪ್ತಾಂಗಕ್ಕೆ ಚಾಕು ಇರಿದು ಹತ್ಯೆ; ಬೀದಿಯಲ್ಲಿ ಬಿದ್ದಿದ್ದ ಯುವತಿಯ ಶವವನ್ನುಕಚ್ಚಿ ಎಳೆದಾಡಿದ ಶ್ವಾನಗಳು; ಕರ್ನಾಟಕ ಮೂಲದ ದಾವೂದ್‌ ಎಸ್ಕೇಪ್‌

Actor Darshan
ಪ್ರಮುಖ ಸುದ್ದಿ1 hour ago

Actor Darshan: ದರ್ಶನ್‌ ಸೆಲ್‌ ಭದ್ರತೆಗೆ 7 ಜನ ಸಿಬ್ಬಂದಿ ನಿಯೋಜನೆ! ಕಾರಣ ಇದು

Train Accident
ದೇಶ1 hour ago

Train Accident: ಹೌರಾ-ಮುಂಬೈ ಮೇಲ್​ ಎಕ್ಸ್​ಪ್ರೆಸ್​​ ರೈಲು ಹಳಿ ತಪ್ಪಿ ದುರಂತ; ಸಾವಿನ ಸಂಖ್ಯೆ 2ಕ್ಕೆ ಏರಿಕೆ

Manu Bhaker
ಕ್ರೀಡೆ1 hour ago

Manu Bhaker: ವಯಲಿನ್‌ ಮೂಲಕ ರಾಷ್ಟ್ರಗೀತೆ ನುಡಿಸಿದ ಮನು ಭಾಕರ್; ವಿಡಿಯೊ ವೈರಲ್​

SL vs IND 3rd T20I
ಕ್ರೀಡೆ2 hours ago

SL vs IND 3rd T20I: ಇಂದು ಅಂತಿಮ ಟಿ20; ವೈಟ್‌ವಾಶ್‌ ಭೀತಿಯಿಂದ ಪಾರಾದೀತೇ ಶ್ರೀಲಂಕಾ?

Liquor Price Karnataka
ಪ್ರಮುಖ ಸುದ್ದಿ2 hours ago

Liquor Price Karnataka: ನೊರೆ ನೊರೆ ಬಿಯರ್‌ ಮದ್ಯಪ್ರಿಯರ ಜೇಬಿಗೆ ಇನ್ನಷ್ಟು ಹೊರೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ18 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ19 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ22 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ2 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ2 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ2 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ3 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ3 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌